Dasara: ಅತಿಥಿ ಶಿಕ್ಷಕರಿಗಿಲ್ಲ ಸಂಭ್ರಮ; “ನಿಧಿ’ ಬಿಡುಗಡೆಯಾಗಿದ್ದರೂ ಸಿಗದ ಸಂಬಳ

Team Udayavani, Oct 9, 2024, 7:45 AM IST

Dasara: ಅತಿಥಿ ಶಿಕ್ಷಕರಿಗಿಲ್ಲ ಸಂಭ್ರಮ; “ನಿಧಿ’ ಬಿಡುಗಡೆಯಾಗಿದ್ದರೂ ಸಿಗದ ಸಂಬಳ

ಪುತ್ತೂರು: ನಾಡಿನೆಲ್ಲೆಡೆ ದಸರಾ ಸಂಭ್ರಮ ಮನೆ ಮಾಡಿದ್ದರೂ ಇತ್ತ ಸರಕಾರಿ ಪ್ರಾಥಮಿಕ, ಪ್ರೌಢಶಾಲೆಯ ಅತಿಥಿ ಶಿಕ್ಷಕರು ಮಾತ್ರ ಸಂಭ್ರಮಿಸುವ ಸ್ಥಿತಿಯಲ್ಲಿಲ್ಲ. ನಾಲ್ಕು ತಿಂಗಳಿನಿಂದ ಸರಕಾರ ಸಂಬಳವನ್ನೇ ನೀಡದ ಕಾರಣ ದೈನಂದಿನ ಜೀವನ ನಿರ್ವಹಣೆಯೇ ದುಸ್ತರವಾಗಿದೆ.

ರಾಜ್ಯದ ಪ್ರಾಥಮಿಕ ಮತ್ತು ಪ್ರೌಢಶಾಲೆಗಳಲ್ಲಿ ಕೆಲಸ ನಿರ್ವಹಿಸುತ್ತಿರುವ ಅತಿಥಿ ಶಿಕ್ಷಕರ ಕಥೆ ಪ್ರತಿ ಬಾರಿಯೂ ಹೀಗೆಯೇ. ದುಡಿದ ಕೆಲಸಕ್ಕೆ ಸಿಗುವ ವೇತನ ಅಲ್ಪ ಮೊತ್ತ. ಅದಕ್ಕೂ ಅಂಗಲಾಚುವ ಸ್ಥಿತಿ. ತಿಂಗಳೂ ತಿಂಗಳೂ ಪಾವತಿ ಮಾಡಿ ಎಂಬ ಶಿಕ್ಷಕರ ಬೇಡಿಕೆಗೆ ಅಸ್ತು ಸಿಕ್ಕಿಲ್ಲ. ಪ್ರತಿ ಬಾರಿ ಹಬ್ಬ ಹರಿದಿನ ವೇಳೆ ಸಂಬಳ ಇಲ್ಲದ ಸ್ಥಿತಿ ಇದ್ದು ಈ ಬಾರಿಯ ನವರಾತ್ರಿಯಲ್ಲಿಯೂ ಸಂಬಳಕ್ಕಾಗಿ ಕಾಯುವ ಸ್ಥಿತಿ ಉಂಟಾಗಿದೆ.

ಅತಿಥಿ ಶಿಕ್ಷಕರು: ಪ್ರಸಕ್ತ ಶೈಕ್ಷಣಿಕ ವರ್ಷದಲ್ಲಿ ಪ್ರಾಥಮಿಕ ಶಾಲೆಗಳಲ್ಲಿ 33,863 ಹಾಗೂ ಪ್ರೌಢಶಾಲೆಯಲ್ಲಿ 8,954 ಅತಿಥಿ ಶಿಕ್ಷಕರು ಕಾರ್ಯ ನಿರ್ವಹಿಸುತ್ತಿದ್ದಾರೆ. ಒಟ್ಟಾರೆ ರಾಜ್ಯದಲ್ಲಿ 42,817 ಅತಿಥಿ ಶಿಕ್ಷಕರು ಕಾರ್ಯ ನಿರ್ವಹಿಸುತ್ತಿದ್ದಾರೆ ಎನ್ನುತ್ತಿದೆ ಅಂಕಿ-ಅಂಶ. ಸರಕಾರಿ ಪ್ರಾಥಮಿಕ ಮತ್ತು ಪ್ರೌಢಶಾಲೆ ವಿಭಾಗದಲ್ಲಿ ಪೂರ್ಣಕಾಲಿಕ ಶಿಕ್ಷಕರ ಕೊರತೆ ಇದೆ. ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ರಾಜ್ಯದ ಪ್ರಾಥಮಿಕ ಮತ್ತು ಪ್ರೌಢಶಾಲೆಗಳಲ್ಲಿ ಅತಿಥಿ ಶಿಕ್ಷಕರನ್ನು ನೇಮಕ ಮಾಡಿಕೊಳ್ಳಲಾಯಿತು. ಆದರೆ ಇವರಿಗೆ ನಾಲ್ಕು ತಿಂಗಳಿಂದ ಸಂಬಳ ಮಾತ್ರ ಬಿಡುಗಡೆಯಾಗಿಲ್ಲ. ಈ ಬಗ್ಗೆ ಕೇಳಿದರೆ ಸಮರ್ಪಕ ಉತ್ತರವೂ ದೊರೆಯುತ್ತಿಲ್ಲ ಎಂದು ಅತಿಥಿ ಶಿಕ್ಷಕರು ಅಳಲು ತೋಡಿಕೊಂಡರು.

ಸಂಬಳಪಾವತಿಸುವಂತೆ ಅತಿಥಿ ಶಿಕ್ಷಕರು ತಾ., ಜಿಲ್ಲಾ ಮಟ್ಟದ ಅಧಿಕಾರಿಗಳಿಗೆ ಪ್ರತಿ ತಿಂಗಳು ಮನವಿ ಸಲ್ಲಿಸುತ್ತಿದ್ದರೂ ಪ್ರಯೋಜನ ಮಾತ್ರ ಶೂನ್ಯ.

ನಿಧಿ ಬಿಡುಗಡೆ ಅನುಮಾನ ?
ಪ್ರತಿ ತಿಂಗಳು ಪ್ರಾಥಮಿಕ ಶಾಲೆ ಅತಿಥಿ ಶಿಕ್ಷಕರಿಗೆ 10,000 ರೂ. ಮತ್ತು ಪ್ರೌಢಶಾಲೆ ವಿಭಾಗದ ಅತಿಥಿ ಶಿಕ್ಷಕರಿಗೆ 10,500 ರೂ. ವರೆಗೆ ವೇತನ ನಿಗದಿಪಡಿಸಲಾಗಿದೆ. ಈ ವೇತನ ಆಧರಿಸಿ, ರಾಜ್ಯ ಸರಕಾರ ಅನುದಾನ ಬಿಡುಗಡೆ ಮಾಡಲಾಗುತ್ತದೆ. ತಾಲೂಕುವಾರು ಶಿಕ್ಷಕರ ಸಂಖ್ಯೆ ಆಧರಿಸಿ ತಾ.ಪಂ. ನಿಧಿಗೆ ಈ ಹಣವನ್ನು ಜಮಾ ಮಾಡಿ ಶಿಕ್ಷಣ ಇಲಾಖೆ ಜಿಲ್ಲಾ ಉಪನಿರ್ದೇಶಕರ ಅನುಮತಿ ಮತ್ತು ಶಿಕ್ಷಕರ ವಿವರ ಪಡೆದು ಅನಂತರ ಅವರ ಖಾತೆಗೆ ವೇತನ ಪಾವತಿ ಮಾಡಲಾಗುತ್ತಿದೆ. ಸಂಬಳದ ಬಗ್ಗೆ ರಾಜ್ಯ, ಜಿಲ್ಲೆಯ ಅಧಿಕಾರಿಗಳನ್ನು ವಿಚಾರಿಸಿದರೆ ಎಂಟು ದಿನಗಳ ಹಿಂದೆಯೇ ಸರಕಾರದಿಂದ ನಿಧಿ ಬಿಡುಗಡೆಯಾಗಿದ್ದು ತಾ.ಪಂ.ನಲ್ಲಿ ವಿಚಾರಿಸುವಂತೆ ಹೇಳುತ್ತಾರೆ. ಆದರೆ ಅಲ್ಲಿಂದ ಯಾವುದೇ ರೀತಿಯ ಮಾಹಿತಿ ಸಿಗುತ್ತಿಲ್ಲ. ಅಂದರೆ ನಿಧಿ ಬಿಡುಗಡೆ ಆಗಿರುವುದೇ ಅನುಮಾನ ಎಂದೆನಿಸಿದೆ. ಒಂದು ವೇಳೆ ತಾ.ಪಂ. ನಿಧಿಗೆ ವೇತನ ಅನುದಾನ ಬಿಡುಗಡೆ ಆಗಿದ್ದರೆ ಅದು ಶಿಕ್ಷಕರ ಖಾತೆಗೆ ಏಕೆ ಜಮೆ ಆಗುತ್ತಿಲ್ಲ ಅನ್ನುವ ಪ್ರಶ್ನೆ ಮೂಡಿದೆ.

ಶಾಲೆ ಪ್ರಾರಂಭಗೊಂಡು ನಾಲ್ಕು ತಿಂಗಳು ಕಳೆದಿದೆ. ಈ ತನಕವೂ ಅತಿಥಿ ಶಿಕ್ಷಕರಿಗೆ ವೇತನ ಸಿಕ್ಕಿಲ್ಲ. ಅಂದರೆ ನಾಲ್ಕು ತಿಂಗಳಿನಿಂದ ಉಚಿತವಾಗಿಯೇ ಸರಕಾರ ದುಡಿಸಿಕೊಳ್ಳುತ್ತಿದೆ.

ಸರಕಾರದಿಂದ ಹಣ ಬಿಡುಗಡೆಗೊಂಡು ತಾ.ಪಂ.ಗೆ ಬಂದಿದ್ದು ಅಲ್ಲಿಂದ ಟ್ರೇಜರಿ ಮೂಲಕ ಶಿಕ್ಷಕರ ಖಾತೆಗೆ ಜಮೆ ಮಾಡುವ ಪ್ರಕ್ರಿಯೆ ಪ್ರಗತಿಯಲ್ಲಿದೆ. ಜಮೆ ಪ್ರಕ್ರಿಯೆ ಆನ್‌ಲೈನ್‌ ಆಗಿರುವ ಕಾರಣ ಯಾವಾಗ ಖಾತೆಗೆ ಬರಲಿದೆ ಅನ್ನುವುದನ್ನು ನಿರ್ದಿಷ್ಟವಾಗಿ ಹೇಳಲಾಗದು.
– ವೆಂಕಟೇಶ ಸುಬ್ಯಾಯ ಪಾಟಗಾರ, ಡಿಡಿಪಿಐ, ದ.ಕ.

– ಕಿರಣ್‌ ಕುಂಡಡ್ಕ

ಟಾಪ್ ನ್ಯೂಸ್

1-aaaaa

Tunga River; ಬಂಡೆ ಮೇಲೆ ಸಿಲುಕಿ ಪರದಾಡುತ್ತಿದ್ದ ವ್ಯಕ್ತಿ ರಕ್ಷಣೆ

Arif Khan

Anti-national activities ವಿರುದ್ಧ ಕ್ರಮಕ್ಕೆ ಸಿಎಂ ವಿಜಯನ್ ಮೌನ: ಕೇರಳ ರಾಜ್ಯಪಾಲ

Omar Abdulla

Federalism..; ಒಮರ್ ಅಬ್ದುಲ್ಲಾಗೆ ಅಭಿನಂದನೆ ಸಲ್ಲಿಸಿದ ಪ್ರಧಾನಿ ಮೋದಿ

brij Bhushan

Power…; ವಿನೇಶ್ ಫೋಗಾಟ್ ಗೆಲುವಿನ ಬಗ್ಗೆ ಪ್ರತಿಕ್ರಿಯಿಸಿದ ಬ್ರಜ್ ಭೂಷಣ್!

Navratri special: ಹೆಣ್ಣು ಅಬಲೆಯೇ? ಹಾಗೆಂದು ನಿರ್ಧರಿಸಿದ್ಯಾರು? ಹೆಣ್ಣಾ ಅಥವಾ..

Navratri special: ಹೆಣ್ಣು ಅಬಲೆಯೇ? ಹಾಗೆಂದು ನಿರ್ಧರಿಸಿದ್ಯಾರು? ಹೆಣ್ಣಾ ಅಥವಾ..

Dakshineswar-kali-temple-kolkatha

Famous Godesess Temple: ಹಿಂದೂ ನವರತ್ನ ದೇವಾಲಯ ದಕ್ಷಿಣೇಶ್ವರ ಕಾಳಿ ಮಂದಿರ

h-kantaraju

Cast Census: ಕಾಯ್ದೆ ಪ್ರಕಾರ ಸರಕಾರ ಜಾತಿಗಣತಿ ವರದಿ ಒಪ್ಪಬೇಕು

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Kukke Shri Subrahmanya Temple: ಅನ್ನ ಪ್ರಸಾದಕ್ಕೆ ವೈವಿಧ್ಯಮಯ ಪಾಯಸ

Kukke Shri Subrahmanya Temple: ಅನ್ನ ಪ್ರಸಾದಕ್ಕೆ ವೈವಿಧ್ಯಮಯ ಪಾಯಸ

Subrahmanya: ಕುಮಾರ ಪರ್ವತ ಚಾರಣ ಆರಂಭಿಸಿದ ಚಾರಣಿಗರು

Subrahmanya: ಕುಮಾರ ಪರ್ವತ ಚಾರಣ ಆರಂಭಿಸಿದ ಚಾರಣಿಗರು

Puttur: ಹೊಸ ಅಡಿಕೆ ಧಾರಣೆ ಜಿಗಿತ

Puttur: ಹೊಸ ಅಡಿಕೆ ಧಾರಣೆ ಜಿಗಿತ; ಬೆಳೆಗಾರರ ಸಂಭ್ರಮ

Polali Temple: ನವರಾತ್ರಿ ಮಹೋತ್ಸವ; ಲಲಿತಾ ಪಂಚಮಿ: ಭಕ್ತರಿಗೆ ಸೀರೆಗಳ ವಿತರಣೆ

Polali Temple: ನವರಾತ್ರಿ ಮಹೋತ್ಸವ; ಲಲಿತಾ ಪಂಚಮಿ: ಭಕ್ತರಿಗೆ ಸೀರೆಗಳ ವಿತರಣೆ

Belthangady: ವಿವಿಧೆಡೆ ಮಳೆ ಅಬ್ಬರ;ಘಾಟಿ ಪ್ರದೇಶದಲ್ಲಿ ಹೆಚ್ಚಿದ ಮಳೆ; ಉಕ್ಕಿ ಹರಿದ ನದಿಗಳು

Belthangady: ವಿವಿಧೆಡೆ ಮಳೆ ಅಬ್ಬರ;ಘಾಟಿ ಪ್ರದೇಶದಲ್ಲಿ ಹೆಚ್ಚಿದ ಮಳೆ; ಉಕ್ಕಿ ಹರಿದ ನದಿಗಳು

MUST WATCH

udayavani youtube

ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್

udayavani youtube

ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

ಹೊಸ ಸೇರ್ಪಡೆ

1-aaaaa

Tunga River; ಬಂಡೆ ಮೇಲೆ ಸಿಲುಕಿ ಪರದಾಡುತ್ತಿದ್ದ ವ್ಯಕ್ತಿ ರಕ್ಷಣೆ

Arif Khan

Anti-national activities ವಿರುದ್ಧ ಕ್ರಮಕ್ಕೆ ಸಿಎಂ ವಿಜಯನ್ ಮೌನ: ಕೇರಳ ರಾಜ್ಯಪಾಲ

Omar Abdulla

Federalism..; ಒಮರ್ ಅಬ್ದುಲ್ಲಾಗೆ ಅಭಿನಂದನೆ ಸಲ್ಲಿಸಿದ ಪ್ರಧಾನಿ ಮೋದಿ

brij Bhushan

Power…; ವಿನೇಶ್ ಫೋಗಾಟ್ ಗೆಲುವಿನ ಬಗ್ಗೆ ಪ್ರತಿಕ್ರಿಯಿಸಿದ ಬ್ರಜ್ ಭೂಷಣ್!

Navratri special: ಹೆಣ್ಣು ಅಬಲೆಯೇ? ಹಾಗೆಂದು ನಿರ್ಧರಿಸಿದ್ಯಾರು? ಹೆಣ್ಣಾ ಅಥವಾ..

Navratri special: ಹೆಣ್ಣು ಅಬಲೆಯೇ? ಹಾಗೆಂದು ನಿರ್ಧರಿಸಿದ್ಯಾರು? ಹೆಣ್ಣಾ ಅಥವಾ..

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.