D.K.ಇನ್ನೂ ಆರಂಭಗೊಳ್ಳದ ಡೇ ಕೇರ್ ಸೆಂಟರ್! ಟೆಂಡರ್ ಹಂತದಲ್ಲಿ ಎನ್‌ಜಿಒ ಆಯ್ಕೆ
ದ.ಕ. ಜಿಲ್ಲೆಯ 4 ಪಾಲನ ಕೇಂದ್ರಗಳು ಸಿದ್ಧ
Team Udayavani, Nov 22, 2023, 6:30 AM IST
ಬಂಟ್ವಾಳ: ಎಂಡೋ ಸಲ್ಫಾನ್ ಸಂತ್ರಸ್ತರ ಆರೈಕೆಯ ದೃಷ್ಟಿಯಿಂದ ದ.ಕ.ಜಿಲ್ಲೆಗೆ ಮಂಜೂರಾಗಿರುವ 4 ಹೆಚ್ಚುವರಿ ಪಾಲನಾ ಕೇಂದ್ರ (ಡೇ ಕೇರ್ ಸೆಂಟರ್)ಗಳು ಸಿದ್ಧಗೊಂಡು ಹಲವು ಸಮಯಗಳೇ ಕಳೆದರೂ ಇನ್ನೂ ಕೂಡ ಕೇಂದ್ರವು ಕಾರ್ಯಾರಂಭಗೊಂಡಿಲ್ಲ. ಕೇಂದ್ರದ ನಿರ್ವಹಣೆಗೆ ಎನ್‌ಜಿಒ ಸಂಸ್ಥೆಯ ಆಯ್ಕೆ ಪ್ರಕ್ರಿಯೆಯು ಟೆಂಡರ್ ಹಂತದಲ್ಲಿದ್ದು, ಮುನ್ನಡೆಸಲು ಅನುದಾನ ಬಿಡುಗಡೆಗೊಂಡ ತತ್‌ಕ್ಷಣ ಕೇಂದ್ರಗಳು ಕಾರ್ಯಾರಂಭ ಗೊಳ್ಳುತ್ತವೆ ಎನ್ನಲಾಗಿದೆ.
ದ.ಕ.ಜಿಲ್ಲೆಯಲ್ಲಿ ಪ್ರಸ್ತುತ ಕಡಬದ ಕೊಯಿಲ ಹಾಗೂ ಬೆಳ್ತಂಗಡಿಯ ಕೊಕ್ಕಡದಲ್ಲಿ 2 ಪಾಲನಾ ಕೇಂದ್ರಗಳು ಕಾರ್ಯಾಚರಿಸುತ್ತಿದ್ದು, ಪ್ರಸ್ತುತ ಬಂಟ್ವಾಳ ತಾಲೂಕಿನ ವಿಟ್ಲ, ಬೆಳ್ತಂಗಡಿಯ ಕಣಿಯೂರು, ಪುತ್ತೂರಿನ ಪಾಣಾಜೆ ಹಾಗೂ ಸುಳ್ಯದ ಬೆಳ್ಳಾರೆಯಲ್ಲಿ ಎಂಡೋ ಪಾಲನಾ ಕೇಂದ್ರಗಳು ಸಿದ್ಧಗೊಂಡಿವೆ.
ದ.ಕ.ಜಿಲ್ಲೆಯಲ್ಲಿ ಎಂಡೋ ಸಂತ್ರಸ್ತರಿಗಾಗಿ ಶಾಶ್ವತ ಪುನರ್ವಸತಿ ಕೇಂದ್ರ ಅನುಷ್ಠಾನವು ಹಲವು ವರ್ಷಗಳ ಬೇಡಿಕೆಯಾಗಿದ್ದು, ಈಗಾಗಲೇ ಜಿಲ್ಲಾಧಿ ಕಾರಿಗಳ ಮೂಲಕ ಸರಕಾರಕ್ಕೆ ಪ್ರಸ್ತಾವನೆಯೂ ಸಲ್ಲಿಕೆ ಯಾಗಿದೆ. ಆಲಂಕಾರು ಹಾಗೂ ಕೊಕ್ಕಡದಲ್ಲಿ ಜಾಗವನ್ನೂ ಗುರುತಿಸಿದ್ದು, ಆದರೆ ಅದು ಇನ್ನೂ ಕೂಡ ಮಂಜೂರಾಗಿಲ್ಲ.
ಕೇಂದ್ರಗಳು
ಹಿಂದೆಯೇ ಮಂಜೂರು
ಕಳೆಡೆರಡು ವರ್ಷಗಳ ಹಿಂದೆಯೇ ಜಿಲ್ಲೆಗೆ ಹೆಚ್ಚುವರಿ 4 ಡೇ ಕೇರ್ ಕೇಂದ್ರಗಳು ಮಂಜೂರಾಗಿದ್ದರೂ, ಕಟ್ಟಡದ ಕಾಮಗಾರಿ, ನಿರ್ವಹಣೆಗಾಗಿ ಎನ್‌ಜಿಒ ಆಯ್ಕೆ, ನಿರ್ವಹಣ ಅನುದಾನ ಬಿಡುಗಡೆ ವಿಳಂಬವಾದ ಕಾರಣಕ್ಕೆ ಕೇಂದ್ರಗಳು ಎಂಡೋ ಸಂತ್ರಸ್ತರ ಆರೈಕೆಗೆ ತೆರೆದುಕೊಂಡಿರಲಿಲ್ಲ.
ಸರಕಾರದ ಲೆಕ್ಕಾ ಚಾರದ ಪ್ರಕಾರ ಜಿಲ್ಲೆಯಲ್ಲಿ ಪ್ರಸ್ತುತ ಸುಮಾರು 4 ಸಾವಿರ ಎಂಡೋ ಸಂತ್ರಸ್ತರಿದ್ದು, ಪುತ್ತೂರು, ಸುಳ್ಯ, ಬೆಳ್ತಂಗಡಿ ತಾಲೂಕಿನ ಹೆಚ್ಚಿನ ಗ್ರಾಮಗಳು ಹಾಗೂ ಬಂಟ್ವಾಳದ ವಿಟ್ಲ ಭಾಗ ಮತ್ತು ಮಂಗಳೂರಿನ ಮೂಡುಬಿದಿರೆ ಭಾಗಗಳಲ್ಲಿ ಎಂಡೋ ಸಂತ್ರಸ್ತರ ಸಂಖ್ಯೆ ಹೆಚ್ಚಿವೆ. ಹೀಗಾಗಿ ಈ ಪ್ರದೇಶಗಳನ್ನು ಕೇಂದ್ರೀಕರಿಸಿ ಡೇ ಕೇರ್ ಕೇಂದ್ರಗಳನ್ನು ಮಂಜೂರು ಮಾಡಲಾಗಿದೆ. ಹಗಲು ಹೊತ್ತಿನಲ್ಲಿ ಸಂತ್ರಸ್ತರನ್ನು ಈ ಕೇಂದ್ರಕ್ಕೆ ಕರೆತಂದು ಆರೈಕೆ ಮಾಡಿ ರಾತ್ರಿ ಮತ್ತೆ ಮನೆಗೆ ಕರೆದುಕೊಂಡು ಹೋಗಬೇಕಾಗುತ್ತದೆ. ಸಂತ್ರಸ್ತರನ್ನು ಕೇಂದ್ರದ ವಾಹನದ ಮೂಲಕವೇ ಕರೆತರುವ ವ್ಯವಸ್ಥೆ ಇರುತ್ತದೆ.
ನಿರ್ವಹಣೆಗೆ ಬೇಕಿದೆ ಅನುದಾನ
ಆರೋಗ್ಯ ಇಲಾಖೆಯ ಎಂಜಿನಿಯರಿಂಗ್ ವಿಭಾಗದ ಮೂಲಕ ಸುಮಾರು 1.77 ಕೋ.ರೂ.ಗಳಲ್ಲಿ 4 ಕಟ್ಟಡಗಳನ್ನು ನಿರ್ಮಿಸಲಾಗಿದ್ದು, ಕೇಂದ್ರದ ಕಟ್ಟಡಕ್ಕಾಗಿ ವಿಟ್ಲಕ್ಕೆ 47 ಲಕ್ಷ ರೂ., ಕಣಿಯೂರಿಗೆ 20.91 ಲಕ್ಷ ರೂ., ಪಾಣಾಜೆಗೆ 47.20 ಲಕ್ಷ ರೂ. ಹಾಗೂ ಬೆಳ್ಳಾರೆಗೆ 62 ಲಕ್ಷ ರೂ. ಅನುದಾನ ಒದಗಿಸಲಾಗಿದೆ. ವೈದ್ಯಕೀಯ ವ್ಯವಸ್ಥೆಯ ಅನುಕೂಲದ ದೃಷ್ಟಿಯಿಂದ ಸ್ಥಳೀಯ ಆರೋಗ್ಯ ಕೇಂದ್ರಗಳ ಆವರಣದಲ್ಲೇ ಕಟ್ಟಡ ನಿರ್ಮಾಣ ಮಾಡಲಾಗಿದೆ.
ಕಟ್ಟಡದ ಕೆಲಸಗಳು ಪೂರ್ಣಗೊಂಡ ಬಳಿಕ ಎಲ್ಲ ಕೇಂದ್ರಗಳಿಗೂ ಬೇಕಾದ ಅಗತ್ಯ ಮೂಲಸೌಕರ್ಯಗಳನ್ನು ಕೂಡ ಒದಗಿಸಲಾಗಿದೆ. ಕೇಂದ್ರಕ್ಕೆ ಸಿಬಂದಿಯನ್ನು ನಿಯೋಜಿಸಿ ಮುನ್ನಡೆಸಿಕೊಂಡು ಹೋಗುವ ದೃಷ್ಟಿಯಿಂದ ಈಗಾಗಲೇ ಎನ್‌ಜಿಒ ಸಂಸ್ಥೆಯನ್ನು ಆಯ್ಕೆ ಮಾಡುವ ದೃಷ್ಟಿಯಿಂದ ಟೆಂಡರ್ ಪ್ರಕ್ರಿಯೆ ಪ್ರಗತಿಯಲ್ಲಿದೆ. ಜತೆಗೆ ಕೇಂದ್ರಗಳ ನಿರ್ವಹಣೆಗೆ ತಿಂಗಳಿಗೆ 2 ರಿಂದ 3 ಲಕ್ಷ ರೂ. ಮೊತ್ತ ಬೇಕಿರುವುದರಿಂದ ಸರಕಾರ ಅದನ್ನು ಕೂಡ ಬಿಡುಗಡೆ ಮಾಡಬೇಕಿದೆ.
ಎನ್‌ಜಿಒ ಆಯ್ಕೆ ಟೆಂಡರ್ ಹಂತ
ದ.ಕ.ಜಿಲ್ಲೆಯ 4 ಹೆಚ್ಚುವರಿ ಕೇಂದ್ರಗಳ ಕಟ್ಟಡ ಹಾಗೂ ಮೂಲ ಸೌಕರ್ಯ ಒದಗಿಸುವ ಕಾರ್ಯ ಈಗಾಗಲೇ ಪೂರ್ಣಗೊಂಡಿದ್ದು, ಕೇಂದ್ರವನ್ನು ನಿರ್ವಹಿಸಿಕೊಂಡು ಹೋಗುವುದಕ್ಕೆ ಎನ್‌ಜಿಒ ಆಯ್ಕೆ ಟೆಂಡರ್ ಹಂತದಲ್ಲಿದೆ. ನಿರ್ವಹಣೆಗೆ ಸರಕಾರದಿಂದ ಅನುದಾನ ಬಿಡುಗಡೆಯಾದ ತತ್‌ಕ್ಷಣ ಕೇಂದ್ರಗಳು ಕಾರ್ಯಾಚರಣೆಗೊಳ್ಳುತ್ತದೆ.
-ಸಾಜುದ್ದೀನ್, ಜಿಲ್ಲಾ ಸಂಯೋಜಕರು, ಎಂಡೋಸಲ್ಫಾನ್ ಕೋಶ, ದ.ಕ.ಜಿಲ್ಲೆ
-ಕಿರಣ್ ಸರಪಾಡಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Vitla:ಮಾಣಿ -ಮೈಸೂರು ರಾಜ್ಯ ಹೆದ್ದಾರಿಯಲ್ಲಿ ಲಾರಿ ಮೇಲೆ ಮರ ಬಿದ್ದು ರಸ್ತೆ ಸಂಪೂರ್ಣ ಬ್ಲಾಕ್
Aranthodu ಕಲ್ಲುಗುಂಡಿ: ಕಾರು ಪಲ್ಟಿ, ನಾಲ್ವರಿಗೆ ಗಾಯ
Vitla: ಉದ್ಘಾಟನೆಯಾದ ನಾಡಕಚೇರಿ ತೆರೆದಿಲ್ಲ !
Vitla: ಶಾಲಾ ವಿದ್ಯಾರ್ಥಿಗಳನ್ನು ಕರೆದೊಯ್ಯುತ್ತಿದ್ದ ಕಾರಿನ ಬ್ರೇಕ್ ಫೇಲ್ ಆಗಿ ಪಲ್ಟಿ
Dharmasthala: ಸರಕಾರಿ ಶಾಲೆಗಳ ಶಿಕ್ಷಕರ ಹುದ್ದೆ ಭರ್ತಿ ಮಾಡಿ: ಡಾ.ವೀರೇಂದ್ರ ಹೆಗ್ಗಡೆ
MUST WATCH
ಹೊಸ ಸೇರ್ಪಡೆ
T20: ತಿಲಕ್ ವರ್ಮ ಸ್ಫೋಟಕ ಶತಕ… ಭಾರತ ಆರು ವಿಕೆಟಿಗೆ 219
Ranaji Trophy: ಉತ್ತರ ಪ್ರದೇಶ ವಿರುದ್ಧ ಕರ್ನಾಟಕಕ್ಕೆ ಮುನ್ನಡೆ
Alert: ವಾಟ್ಸ್‌ಆ್ಯಪ್‌ನಲ್ಲಿ ಬರುವ ಮದುವೆ ಆಮಂತ್ರಣ ಆ್ಯಪ್ ತೆರೆದೀರಿ ಜೋಕೆ!
Vitla:ಮಾಣಿ -ಮೈಸೂರು ರಾಜ್ಯ ಹೆದ್ದಾರಿಯಲ್ಲಿ ಲಾರಿ ಮೇಲೆ ಮರ ಬಿದ್ದು ರಸ್ತೆ ಸಂಪೂರ್ಣ ಬ್ಲಾಕ್
Self Treatment!: ಸ್ವಯಂ ಚಿಕಿತ್ಸೆಯ ಮೂಲಕ ಸ್ತನ ಕ್ಯಾನ್ಸರ್ ಗೆದ್ದ ವಿಜ್ಞಾನಿ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.