ಇಂದು ಶಿಶಿಲದಲ್ಲಿ ದ.ಕ. ಜಿಲ್ಲಾಧಿಕಾರಿ ಗ್ರಾಮ ವಾಸ್ತವ್ಯ

ಕಾಲೇಜು ಕೊಡಿ; ಉಳಿದದ್ದೂ ಮರೆಯಬೇಡಿ

Team Udayavani, Feb 20, 2021, 2:20 AM IST

ಇಂದು ಶಿಶಿಲದಲ್ಲಿ ದ.ಕ. ಜಿಲ್ಲಾಧಿಕಾರಿ ಗ್ರಾಮ ವಾಸ್ತವ್ಯ

ಶಿಶಿಲ: ಪದವಿ ಶಿಕ್ಷಣ ಪಡೆಯಲು ಶಿಶಿಲದ ವಿದ್ಯಾರ್ಥಿಗಳು ಬೆಳ್ತಂಗಡಿ ತಾಲೂಕು ಕೇಂದ್ರಕ್ಕೆ ಬರಬೇಕಿದೆ. ಇದು ಬಗೆಹರಿಯಲೇ ಬೇಕಾದ ಸಮಸ್ಯೆ.

ಶಿಶಿಲದಿಂದ 8 ಕಿ.ಮೀ. ದೂರದಲ್ಲಿ ಪ್ರೌಢಶಾಲೆ ಇದ್ದು,  ಪದವಿ ಕಾಲೇಜಿಗೆ ತೆರಳು ವವರು ಉಪ್ಪಿನಂಗಡಿ (45 ಕಿ.ಮೀ.) ಮತ್ತು ಬೆಳ್ತಂಗಡಿ (48 ಕಿ.ಮೀ.)  ಗೇ  ಹೋಗಬೇಕು. ಉಳಿದಂತೆ ಖಾಸಗಿ ಕಾಲೇಜಿಗೆ ಉಜಿರೆ ಅಥವಾ ನೆಲ್ಯಾಡಿ ಜೂನಿಯರ್‌ ಕಾಲೇಜೇ ಆಶ್ರಯ. ಶಿಶಿಲದಲ್ಲಿ 1ರಿಂದ ಪದವಿವರೆಗೆ ಸುಮಾರು 350ಕ್ಕೂ ಅಧಿಕ ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿ¨ªಾರೆ.

ಬಸ್‌ ಸೌಕರ್ಯ :

ಶಿಶಿಲ ಬಸ್‌ ನಿಲ್ದಾಣದಿಂದ ಪೇರಿಕೆ 7 ಕಿ.ಮೀ. ಸಾಗಲು ಸೂಕ್ತ ಬಸ್‌ ಇಲ್ಲ. ಶಿಶಿಲದಿಂದ ದೇನೋಡಿಗೆ (7 ಕಿ.ಮೀ.) ತೆರಳಲು ಇರುವುದು ಎರಡೇ ಟ್ರಿಪ್‌ (ಬೆಳಗ್ಗೆ ಮತ್ತು ಸಾಯಂಕಾಲ)ಬಸ್‌. ತಾಲೂಕು ಕೇಂದ್ರದಿಂದ ಶಿಶಿಲಕ್ಕೆ ಕೆಲಸಕ್ಕೆ ಬರುವ ಸರಕಾರಿ ಇಲಾಖೆ, ಸೊಸೈಟಿ, ಬ್ಯಾಂಕ್‌ ಉದ್ಯೋಗಿಗಳಿಗೆ, ಪಂಚಾಯತ್‌ ಸಿಬಂದಿಗೆ ವಾಪಸು ತೆರಳಲು ಸಂಜೆ ಬಸ್‌ ಇಲ್ಲ.  ಹೀಗಾಗಿ ಕೆಎಸ್‌ಆರ್‌ಟಿಸಿ ಹೆಚ್ಚುವರಿ ಬಸ್‌ ಅಗತ್ಯವಿದೆ.

ಉತ್ತಮ ಬಸ್‌ ತಂಗುದಾಣ ಇರದಿರುವುದು ಮತ್ತೂಂದು ಸಮಸ್ಯೆ. ಈಗಿರುವ  ತಂಗು ದಾಣ ಸೋರುತ್ತಿದೆ.   ಜತೆಗೆ ಶೌಚಾಲಯ ಸುಸಜ್ಜಿತವಾಗಿಲ್ಲ. ಇದನ್ನು ತೆರವು ಗೊಳಿಸಿ ಸುಸಜ್ಜಿತ ಬಸ್‌ ನಿಲ್ದಾಣ ನಿರ್ಮಿಸ ಬೇಕೆಂಬುದು ಜನರ ಬೇಡಿಕೆ.

3 ಕಿ.ಮೀ. ರಸ್ತೆ ಬಾಕಿ :

ರಸ್ತೆಯಾದಲ್ಲಿ ಪೇರಿಕೆ, ಕಾಲನಿ ಗ್ರಾಮದ 60 ಮನೆಗಳಿಗೆ ಅನುಕೂಲ ವಾಗಲಿದೆ. ಕಾಲನಿಯಿಂದ ಶಿಶಿಲ ದೇವಸ್ಥಾನಕ್ಕೆ 4 ಕಿ.ಮೀ., ರಸ್ತೆಯಾದಲ್ಲಿ ದೇವಸ್ಥಾನಕ್ಕೆ ಬರುವ ಭಕ್ತರಿಗೆ, ಊರಿನವರಿಗೆ ಪರ್ಯಾಯ ರಸ್ತೆಯಾಗಲಿದೆ. ಮಳೆಗಾಲದಲ್ಲಿ ತೂಗು ಸೇತುವೆ, ಡ್ಯಾಮ್‌ ಮುಳುಗಡೆಯಾದರೆ ಸುತ್ತಿ ಬಳಸಿ ಬರುವ ಸಮಸ್ಯೆ ತಪ್ಪಲಿದೆ. ಪ್ರಸ್ತಾವನೆ ಹಂತದಲ್ಲಿದ್ದು, ಮಂಜೂರಿಗೆ ಕಾಯುವಂತಾಗಿದೆ. ಶಿಶಿಲ ದೇವಸ್ಥಾನದಿಂದ ಒಟ್ಟು 4 ಕಿ.ಮೀ. ರಸ್ತೆ ಮತ್ತು ಹೊಸ ಮೋರಿ ಅಳವಡಿಸಿದಲ್ಲಿ ಪರ್ಯಾಯವಾಗಿ ಸುದೆ ಪರಂಬೋಕಿನಲ್ಲಿ ಸಾಗುತ್ತಿರುವ ಮಂದಿಗೆ ಶಾಶ್ವತ ರಸ್ತೆಯಾಗಲಿದೆ. ಈಗಾಗಲೇ ಹೊಳೆದಂಡೆ ಕಾಮಗಾರಿ ನಡೆಯುತ್ತಿದ್ದು, ಅದೇ ದಾರಿಯಾಗಿ ಮಾಡಿದರೆ ಅನುಕೂಲವಾಗಲಿದೆ ಎಂಬುದು ಇಲ್ಲಿನವರ ಬೇಡಿಕೆಯಾಗಿದೆ.

ಇತ್ತ ಗಮನ ಹರಿಸಿ :

ಬಸವಕಲ್ಯಾಣ ಯೋಜನೆ :

ಬಸವಕಲ್ಯಾಣ ಯೋಜನೆಯಡಿ ಅರ್ಜಿ ಸಲ್ಲಿಸಿದ ಮಂದಿಯ ಮನೆ ನಿರ್ಮಾಣ ಅನುದಾನ ಬಾರದ್ದರಿಂದ ಅಪೂರ್ಣವಾಗಿದೆ. ಫ‌ಲಾನುಭವಿಗಳು ಆ್ಯಪ್‌ ಮೂಲಕ ಪರಿಶೀಲಿಸಿದಾಗ ಅವರ ಹೆಸರು ಇದ್ದು, ಗ್ರಾ.ಪಂ.ಗೆ ಅನುದಾನ ಬಂದಿದೆ ಎನ್ನಲಾಗುತ್ತದೆ. ಆದರೆ ಗ್ರಾ.ಪಂ. ನಲ್ಲಿ ವಿವರ ಇಲ್ಲ. ಹಣ ಎಲ್ಲಿ ಹೋಯಿತೋ ತಿಳಿಯುತ್ತಿಲ್ಲ.

ಬಂಗ್ಲೆಗುಡ್ಡೆ ಮಂದಿಗೆ ನೀರಿನ ಬರ :

ಶಿಶಿಲ ಬಂಗ್ಲೆಗುಡ್ಡೆಯ 30 ಮನೆಗಳಿಗೆ ಬೇನೋಡಿ ಬಳಿಯ ಟ್ಯಾಂಕಿಯಿಂದ ಕುಡಿಯುವ ನೀರು ಸರಬರಾಜಾಗುತ್ತಿತ್ತು. ಆದರೆ ಪೈಪ್‌ ಹಾಳಾಯಿತು. ಬಳಿಕ ಪ್ರತಿಭಟನೆ ನಡೆಸಿದ್ದರಿಂದ ಬೇರೆ ಕಡೆಯಿಂದ ನೀರು ಕಲ್ಪಿಸಲಾಗಿತ್ತು. ಮತ್ತೆ ಪೈಪ್‌ ಒಡೆದು ಹೋಗಿದ್ದು, ದುರಸ್ತಿಯಾಗಬೇಕು. ಜತೆಗೆ ಶಾಶ್ವತವಾಗಿ ಸಮಸ್ಯೆ ಬಗೆಹರಿಸಬೇಕು.

ಮಲೆಕುಡಿಯ ಕಾಲನಿ ಭೂ ಹಂಚಿಕೆ  :

ವೈಕುಂಠಪುರ ಮಲೆಕುಡಿಯ ವ್ಯಾವಸಾಯಿಕ ಕಾಲನಿಯಲ್ಲಿ ಆಗಿನ ವಿ.ಸಭಾ ಅಧ್ಯಕ್ಷರು, ಬೆಳ್ತಂಗಡಿ ತಾಲೂಕಿನ ಶಾಸಕರಾಗಿದ್ದ ವೈಕುಂಠ ಬಾಳಿಗ ಅವರು 1960ಕ್ಕೂ ಹಿಂದೆ 24 ಕುಟುಂಬಗಳಿಗೆ 4 ಎಕ್ರೆಯಂತೆ ಹಂಚಲಾಗಿತ್ತು. ಅಂದು ಅಂದಾಜು ಪ್ರಕಾರ ಜಮೀನು ಹಂಚಿದ್ದರಿಂದ ಈಗ ಸಮಸ್ಯೆಯಾಗಿದೆ. ಅದನ್ನು ಪರಿಹರಿಸಬೇಕು.

ಬೆಳೆ ರಕ್ಷಣೆಗೆ ಬೇಕಿದೆ ಕೋವಿ :

ಶಿಶಿಲ ಪ್ರದೇಶ ಅತ್ತ ಅರಣ್ಯದಂಚು ಇತ್ತ ತಾಲೂಕು ಕೆಂದ್ರದಿಂದಲೂ ದೂರ ಉಳಿದಿದ್ದರಿಂದ ಕಾಡು ಪ್ರಾಣಿಗಳ ಉಪಟಳ ಹೇಳತೀರದಂತಿದೆ. ಬೆಳೆದ ಬೆಳೆ ಕೈ ಸೇರುತ್ತಿಲ್ಲ. ಕಳ್ಳಕಾಕರು ಅದೇ ಸಮಯದಲ್ಲಿ ಹೆಚ್ಚಾಗುತ್ತಿ¨ªಾರೆ. ಈ ಹಿನ್ನೆಲೆಯಲ್ಲಿ ಕೋವಿಯನ್ನು ಇಟ್ಟುಕೊಳ್ಳಲು ರೈತರಿಗೆ ಅನುಮತಿ ನೀಡಬೇಕು.

 ಗಜಪಡೆ ನಿಯಂತ್ರಣಕ್ಕೆ ಬೇಕಿದೆ ಆನೆ ಕಂದಕ  ;

ಕುದುರೆಮುಖದಿಂದ ವಯನಾಡಿನವರೆಗೆ ಸವಾರಿ ಬೆಳೆಸುವ ಗಜಪಡೆಗಳು ಕೃಷಿ ಭೂಮಿಯನ್ನು ಹಾಳು ಮಾಡುತ್ತಿವೆ. . ಯಾವುದೇ ಬೆದರಿಕೆಗೂ ಜಗ್ಗದ ಆನೆಗಳ ಉಪಟಳದಿಂದ ವರ್ಷಂಪ್ರತಿ ಕೃಷಿಕರು ನಷ್ಟ ಮಾಡಿಕೊಳ್ಳುತ್ತಿದ್ದಾರೆ. ಇದಕ್ಕಾಗಿ ಅರಣ್ಯ ಇಲಾಖೆ ಆನೆ ಕಂದಕ ರಚಿಸಬೇಕು ಎಂಬ ಬೇಡಿಕೆಯೂ ಜನರದ್ದು.

ಉದ್ಯೋಗ ತರಬೇತಿ ಕೇಂದ್ರವಾಗಲಿ ;

ಸಮಾಜ ಕಲ್ಯಾಣ ಇಲಾಖೆಯ ಗಿರಿಜನರ ಕೈಗಾರಿಕಾ ತರಬೇತಿ ಕೇಂದ್ರ ಪಾಳು ಬಿದ್ದಿದೆ.  ಹಲವು ವರ್ಷಗಳ ಹಿಂದೆ ಆರು ತಿಂಗಳ ಅವಧಿಯ 2 ತರಬೇತಿ ಶಿಬಿರಗಳು ನಡೆದಿದ್ದವು. ಈಗ ಮುಚ್ಚಿದ್ದು, ಯಂತ್ರೋ ಪಕರಣಗಳು ಕಾಣೆಯಾಗಿವೆ. ಈಗಲಾದರೂ ಡಿಸಿ ಗಮನಹರಿಸಿ ಸ್ಥಳೀಯರಿಗೆ ಉದ್ಯೋಗ ತರಬೇತಿ ಕೇಂದ್ರವನ್ನಾಗಿಸಬೇಕು.

ಇಂದು ಏನೇನು ? :

  • ದ.ಕ. ಡಿ.ಸಿ. ಡಾ| ರಾಜೇಂದ್ರ ಕೆ.ವಿ. ಶಿಶಿಲದಲ್ಲಿ ವಾಸ್ತವ್ಯ.
  • ಪರಿಶಿಷ್ಟ ಕಾಲನಿಯ ಆಶ್ರಮ ಶಾಲೆಯಲ್ಲಿ ವಾಸ್ತವ್ಯ.
  • ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸಭೆ.
  • 200 ಮಂದಿ ಗ್ರಾಮಸ್ಥರು ಸೇರುವ ನಿರೀಕ್ಷೆ
  • ವಿವಿಧ ಇಲಾಖೆಯ 50 ಮಂದಿ ಅಧಿಕಾರಿಗಳು ಭಾಗಿ

ಜಿಲ್ಲಾಧಿಕಾರಿಗಳ ವಾಸ್ತವ್ಯ ಇಂದು :

ಶಿಶಿಲ ಗ್ರಾಮಕ್ಕೆ ಫೆ. 20ರಂದು ದ.ಕ. ಜಿಲ್ಲಾಧಿಕಾರಿ ಭೇಟಿ ನೀಡಲಿದ್ದು, ಈಗಾಗಲೆ ಗ್ರಾಮದ ಮಂದಿಯಿಂದ   ವಿವಿಧ ಇಲಾಖೆಗೆ ಸಂಬಂಧಿಸಿ 94ಸಿ, ಅಕ್ರಮಸಕ್ರಮ, ದಾರಿ ತಕರಾರು, ಭೂ ವಿಭಜನೆಗೆ ಸೇರಿ 80 ಅರ್ಜಿಗಳು ಬಂದಿವೆ. ಕಳೆದ 2 ವರ್ಷಗಳಿಂದ ಬಾಕಿ ಉಳಿದಿರುವ ಆಶ್ರಯ ಯೋಜನೆಗೆ ಮನೆಗಳ ಸಮಸ್ಯೆ ಬಗೆಹರಿವ ನಿಟ್ಟಿನಲ್ಲಿ ಗ್ರಾಮಸ್ಥರು ಕಾದುನೋಡುತ್ತಿದ್ದಾರೆ.

ವಿವಿಧ ವೇತನ ಅರ್ಜಿ ಬಾಕಿ :

ವೃದ್ಧಾಪ್ಯ, ಸಂಧ್ಯಾ ಸುರಕ್ಷಾ ಸಹಿತ ವಿವಿಧ ವೇತನಗಳ ಮಂಜೂರಿಗೆ 35 ಅರ್ಜಿಗಳು ಬಂದಿವೆ. ಬಾಕಿ ಉಳಿದಿರುವ ಅರ್ಜಿಗೆ ಜಿಲ್ಲಾಧಿಕಾರಿಗಳು ಅಗತ್ಯ ಕ್ರಮ ವಹಿಸಬೇಕಿದೆ.

ಪ್ರಸ್ತುತ ಸರಕಾರಿ ಸೌಲಭ್ಯ ಪಡೆಯುತ್ತಿರುವವರ ಸಂಖ್ಯೆ  :

ಸಂಧ್ಯಾ ಸುರಕ್ಷಾ     113

ವೃದ್ಧಾಪ್ಯ ವೇತನ      5

ವಿಧವಾ ವೇತನ       32

ಅಂಗವಿಕಲ ವೇತನ  15

ಎಂಡೋ ಸಲ್ಫಾನ್‌     6

ಮನಸ್ವಿನಿ                16

ಒಟ್ಟು       187

ಕಸ್ತೂರಿ ರಂಗನ್‌ ವರದಿ ಕುರಿತಾಗಿಯೂ ಚರ್ಚೆ :

ವಿವಾದಿತವಾಗಿ ಉಳಿದಿದೆ. ಹೀಗಾಗಿ ಶಿಶಿಲ ಗ್ರಾಮವನ್ನು ಕಸ್ತೂರಿ ರಂಗನ್‌ ವರದಿಯಿಂದ ಕೈಬಿಡಬೇಕೆನ್ನುವ ಹೋರಾಟಗಳು ಸಾಗಿದ್ದ ರಿಂದ ಜಿಲ್ಲಾಧಿಕಾರಿಗಳಿಗೆ ಮನವಿಯೂ ಕೈಸೇರಲಿದೆ.

ಟಾಪ್ ನ್ಯೂಸ್

8-book

Karnataka Rajyotsava: ಮನೆ ತುಂಬಾ 5 ಲಕ್ಷ ಕನ್ನಡ ಪುಸ್ತಕ: ಹರಿಹರಪ್ರಿಯರ ಪ್ರಪಂಚ!

Dhananjay: ಮದುವೆಗೆ ಸಿದ್ದವಾದ್ರು ಡಾಲಿ; ದುರ್ಗದ ಹುಡುಗಿಯ ಕೈ ಹಿಡಿಯಲಿದ್ದಾರೆ ಧನಂಜಯ

ಹೆಸರಾಯಿತು ಕರ್ನಾಟಕ: ಮರು ನಾಮಕರಣ ಹೋರಾಟದ ಆ ದಿನಗಳು…

ಹೆಸರಾಯಿತು ಕರ್ನಾಟಕ: ಮರು ನಾಮಕರಣ ಹೋರಾಟದ ಆ ದಿನಗಳು…

6-shivaraja

Special Interview: ಪ್ರತ್ಯೇಕ ನಾಡಧ್ವಜಕ್ಕಾಗಿ ಕೇಂದ್ರಕ್ಕೆ ಮತ್ತೂಮ್ಮೆ ಪತ್ರ: ತಂಗಡಗಿ

11

Kannada Rajyotsava: ನಿಂತ ನೆಲವೇ ಕರ್ನಾಟಕ!

5-ullala

Kinya: ಬಾಡಿಗೆ ಮನೆಯಲ್ಲಿ ಅಕ್ರಮ ಗಾಂಜಾ ಮಾರಾಟ ಮಾಡುತ್ತಿದ್ದ ಜೋಡಿ ಬಂಧನ

ಎಲ್ಲಿಂದಲೋ ಬಂದು ಇಲ್ಲಿನವರೇ ಆದರು!: ಪುಸ್ತಕ ಸೇವೆಯ ಕನಸು, ಸಪ್ನದ ಮೂಲಕ ನನಸು

ಎಲ್ಲಿಂದಲೋ ಬಂದು ಇಲ್ಲಿನವರೇ ಆದರು!: ಪುಸ್ತಕ ಸೇವೆಯ ಕನಸು, ಸಪ್ನದ ಮೂಲಕ ನನಸು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Coastal-Rain

Heavy Rain: ಕರಾವಳಿಯಲ್ಲಿ ಸಂಜೆಯಾಗುತ್ತಲೇ ಮಳೆ; ಬೆಳ್ತಂಗಡಿಯಲ್ಲಿ ಮನೆ ಕುಸಿತ

4

Puttur: ಅಮ್ಚಿನಡ್ಕದಲ್ಲಿ ಮತ್ತೆ ಕಾಡಾನೆ ಹಾವಳಿ

accident2

Belthangady: ಟ್ಯಾಂಕರ್‌ ಪಲ್ಟಿ; ಪ್ರಾಣಾಪಾಯದಿಂದ ಪಾರು

1(1)

Puttur: ಎಲ್ಲೆಡೆ ಬೆಳಕಿನ ಹಬ್ಬದ ಝಗಮಗ

POLICE-5

Vitla ಪೊಲೀಸರಿಂದ ಕಳ್ಳರಿಬ್ಬರ ಬಂಧನ; 2.85 ಲಕ್ಷ ರೂ. ಸೊತ್ತುಗಳ ವಶ

MUST WATCH

udayavani youtube

ಗೋವಿನ ಪೂಜೆ ಯಾಕಾಗಿ ಮಾಡಬೇಕು?

udayavani youtube

ಮೇಲುಕೋಟೆಯಲ್ಲಿ ದೀಪಾವಳಿ ಆಚರಿಸುವುದಿಲ್ಲ ಎಂಬ ಮಾತು ನಿಜವೋ ಸುಳ್ಳೋ

udayavani youtube

ಗಣಪತಿ ಸಹಕಾರಿ ವ್ಯವಸಾಯಕ ಸಂಘ ‘ನಿ.’ ಕೆಮ್ಮಣ್ಣು ಶತಾಭಿವಂದನಂ ಸಮಾರೋಪ ಸಂಭ್ರಮ ಸಂಪನ್ನ

udayavani youtube

ಉದಯವಾಣಿ’ಚಿಣ್ಣರ ಬಣ್ಣ -2024

udayavani youtube

ಹಬ್ಬದ ಊಟವೇ ಈ ಹೋಟೆಲ್ ನ ಸ್ಪೆಷಾಲಿಟಿ

ಹೊಸ ಸೇರ್ಪಡೆ

9

New Delhi: ಹಬ್ಬದ ಋತು; ದೇಶದಲ್ಲಿ 4.5 ಲಕ್ಷ ವಾಹನಗಳ ದಾಖಲೆ ಮಾರಾಟ!

8-book

Karnataka Rajyotsava: ಮನೆ ತುಂಬಾ 5 ಲಕ್ಷ ಕನ್ನಡ ಪುಸ್ತಕ: ಹರಿಹರಪ್ರಿಯರ ಪ್ರಪಂಚ!

8

Ranchi: ಹೇಮಂತ್‌ ಸೊರೇನ್‌ ವಯಸ್ಸು 5 ವರ್ಷದಲ್ಲಿ 7 ವರ್ಷ ಹೆಚ್ಚಳ!; ಬಿಜೆಪಿ

Dhananjay: ಮದುವೆಗೆ ಸಿದ್ದವಾದ್ರು ಡಾಲಿ; ದುರ್ಗದ ಹುಡುಗಿಯ ಕೈ ಹಿಡಿಯಲಿದ್ದಾರೆ ಧನಂಜಯ

7-laxmi

Goddess Lakshmi: ಲಕ್ಷ್ಮೀ ಆರಾಧನೆಯ ಪರ್ವ ಸಮಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.