ಋಣಭಾರ ಪರಿಹಾರ ಯೋಜನೆ: ಬಾಣಲೆಯಿಂದ ಬೆಂಕಿಗೆ
ಪಂಜದಲ್ಲಿ ಅರ್ಜಿ ಸಿದ್ಧಪಡಿಸುವ ನೆಪದಲ್ಲಿ ಅನಕ್ಷರಸ್ಥ, ಬಡವರ ಸುಲಿಗೆ: ಆರೋಪ
Team Udayavani, Aug 29, 2019, 5:00 AM IST
ಸಾಂದರ್ಭಿಕ ಚಿತ್ರ
ಸುಬ್ರಹ್ಮಣ್ಯ: ರಾಜ್ಯ ಸರಕಾರವು ಜಾರಿಗೊಳಿಸಿದ ಋಣ ಪರಿಹಾರ ಯೋಜನೆಯಲ್ಲಿ ಅರ್ಜಿ ಸಲ್ಲಿಸಲು ಫಲಾನುಭವಿಗಳಿಗೆ ಅವಕಾಶ ನೀಡಲಾಗಿದೆ. ಇನ್ನೊಂದೆಡೆ ಯೋಜನೆಯ ದುರ್ಲಾಭವನ್ನು ಪಡೆದುಕೊಳ್ಳಲು ಕೆಲವರು ಹವಣಿಸುತ್ತಿದ್ದಾರೆ.
ಋಣಭಾರ ಪರಿಹಾರ ಯೋಜನೆಯನ್ನು ದುರುಪಯೋಗ ಮಾಡಿಕೊಂಡು ಹಣ ಗಳಿಸುತ್ತಿರುವ ಘಟನೆ ಪಂಜದಲ್ಲಿ ಬುಧವಾರ ಬೆಳಕಿಗೆ ಬಂದಿದೆ.
ಪಂಜ ಮುಖ್ಯ ಪೇಟೆಯ ಕೆಳಗಿನ ಪೇಟೆಯ ಕಚೇರಿಯೊಂದರಲ್ಲಿ ಯೋಜನೆಯ ಫಲಾನುಭವಿಗಳಿಗೆ ಅರ್ಜಿ ನಮೂನೆಯನ್ನು ಸಿದ್ಧಪಡಿಸಿ ಕೊಡುವ ಕೆಲಸ ನಡೆದಿತ್ತು. ಅರ್ಜಿ ನಮೂನೆ ಸಿದ್ಧಪಡಿಸಿ ಕೊಡುತ್ತೇವೆ ಎಂದು ಹೇಳಿ ಯೋಜನೆಯ ಬಗ್ಗೆ ಸ್ಪಷ್ಟ ಮಾಹಿತಿ ನೀಡದೆ ದಾರಿ ತಪ್ಪಿಸಿ ಹೆಚ್ಚು ಹಣ ವಸೂಲಿ ಮಾಡುತ್ತಿರುವ ಆರೋಪ ವ್ಯಕ್ತವಾಗಿದೆ.
ಮೂಲ ದಾಖಲೆ
ಯೋಜನೆ ಕುರಿತು ಸರಿಯಾದ ಮಾಹಿತಿ ಇಲ್ಲದವರು ಈ ಕಚೇರಿಗೆ ದಾಖಲೆ ಪತ್ರಗಳೊಂದಿಗೆ ಆಗಮಿಸಿದ್ದಾರೆ. ಫಲಾನುಭವಿಗಳು ಯೋಜನೆಯಲ್ಲಿ ತಿಳಿಸಿದಂತೆ ಮೂಲ ದಾಖಲೆಗಳನ್ನು ಅಂಗಡಿ ಸಿಬಂದಿ ಕೈಗೆ ಒಪ್ಪಿಸಿದ್ದಾರೆ. ಅದನ್ನು ಪಡೆದ ಕಚೇರಿ ಸಿಬಂದಿ ಅರ್ಜಿ ನಮೂನೆ ಭರ್ತಿ ಮಾಡಿ ಕೊಡುತ್ತೇವೆ ಎಂದಿದ್ದಾರೆ.
ಕಚೇರಿಗೆ ಬರುವ ಗ್ರಾಹಕರಿಂದ ಮೂಲ ದಾಖಲೆ ಪತ್ರಗಳನ್ನು ಪಡೆಯುವ ಕಚೇರಿ ಸಿಬಂದಿ ಜೆರಾಕ್ಸ್, ಅರ್ಜಿ ನಮೂನೆ ಸಿದ್ಧಪಡಿಸುವ ನೆಪದಲ್ಲಿ ಫಲಾನುಭವಿಗಳಿಂದ ದೊಡ್ಡ ಮೊತ್ತದ ಹಣ ಪಡೆಯುತ್ತಿದ್ದಾರೆ ಎನ್ನುವುದು ಸಾರ್ವಜನಿಕರ ಆರೋಪ.
ದಾಖಲೆ ಸಿದ್ಧಪಡಿಸಿ ಕೊಡುವ ಕೆಲಸ
ಫಲಾನುಭವಿಗಳಿಂದ ದಾಖಲೆ ಪತ್ರ ಪಡೆದು, ಬಳಿಕ ಅರ್ಜಿ ನಮೂನೆಯಲ್ಲಿ ಟೈಪ್ ಮಾಡಿ ಸಿದ್ಧಪಡಿಸುತ್ತಿದ್ದಾರೆ. ನಕಲು ಪ್ರತಿ ತೆಗೆಯುವುದು, ಅರ್ಜಿ ನಮೂನೆ ಹಾಗೂ ದಾಖಲೆಗಳನ್ನು ಲಕೋಟೆಯಲ್ಲಿ ತುಂಬುವುದು ಇತ್ಯಾದಿ ಕೆಲಸಗಳಿಗೆ ಖರ್ಚಿನ ಬಾಬ್ತು 150 ರೂ.ಗಳಿಂದ 300 ರೂ. ತನಕ ಪಡೆಯುತ್ತಿರುವುದು ಕಂಡು ಬರುತ್ತಿದೆ. ಒಂದು ಪ್ರತಿಯನ್ನು ಉಪ ವಿಭಾಗಾಧಿಕಾರಿಗೆ, ಮತ್ತೂಂದು ಪ್ರತಿಯನ್ನು ಮುಖ್ಯಮಂತ್ರಿ ಕಚೇರಿಗೆ ಸಲಹೆ ನೀಡುತ್ತಿದ್ದಾರೆ. ಸಣ್ಣ ರೈತರು ಭೂರಹಿತ ಕೃಷಿ ಕಾರ್ಮಿಕರು ದುರ್ಬಲ ವರ್ಗದ ಜನತೆ ಅಧಿಕ ಬಡ್ಡಿಯಿಂದ ಶೋಷಣೆಗೆ ಒಳಗಾಗುವುದನ್ನು ತಪ್ಪಿಸಲು ಈ ಯೋಜನೆಯನ್ನು ರಾಜ್ಯ ಸರಕಾರ ಜಾರಿಗೆ ತಂದಿದೆ.
– ಕುಂಞಿ ಅಹಮ್ಮದ್ ತಹಶೀಲ್ದಾರ್ ಸುಳ್ಯ
– ಪಂಜದ ಕಚೇರಿಯ ಸಿಬಂದಿ
200ಕ್ಕೂ ಹೆಚ್ಚು ಜನರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Hospital ನಿಂದ ಶಿಶುವಿನ ಅಪಹರಣ: ರೈಲು ನಿಲ್ದಾಣದಲ್ಲಿ ರಕ್ಷಣೆ: ಇಬ್ಬರ ಬಂಧನ
Middle class; ಮಧ್ಯಮ ವರ್ಗದವರಿಗೆ ಪರಿಹಾರ: ಎಕ್ಸ್ ಬಳಕೆದಾರಗೆ ನಿರ್ಮಲಾ ಪ್ರತಿಕ್ರಿಯೆ
ಪಾಠ ಮಾಡಿದೆವು… ಸರಿ, ಬದುಕಲು ಕಲಿಸಿದೆವಾ?
Big Boss ಸ್ಪರ್ಧಿಯಾಗಿದ್ದ ನಟ-ಗಾಯಕ ಮಾದಕ ವಸ್ತು ಸಹಿತ ಬಂಧನ
Pushpa 2 trailer: ಪೈಸಾ ವಸೂಲ್ ಅವತಾರದಲ್ಲಿ ʼಪುಷ್ಪರಾಜ್ʼ; ಅಲ್ಲು ಭರ್ಜರಿ ಆ್ಯಕ್ಷನ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.