Areca nut: ಅಡಿಕೆ ಫಸಲು ಇಳಿಕೆ… ಬೆಳೆಗಾರರಿಗೂ ನಷ್ಟ, ಕಾರ್ಮಿಕರಿಗೂ ಕಷ್ಟ
Team Udayavani, Dec 12, 2024, 9:00 AM IST
ಪುತ್ತೂರು: ಈ ಬಾರಿ ಅಡಿಕೆ ಫಸಲು ಕಡಿಮೆ ಎಂಬ ನೋವು ತೋಟದ ಮಾಲಕರದ್ದಾದರೆ, ಕೊçಲನ್ನೇ ನಂಬಿ ಜೀವಿಸುತ್ತಿದ್ದ ಕಾರ್ಮಿಕರು ಆದಾಯವೇ ಇಲ್ಲ ಎಂದು ಆತಂಕದಲ್ಲಿದ್ದಾರೆ.
ಅಡಿಕೆ ತೋಟದ ನಿರ್ವಹಣೆಯಲ್ಲಿ ಮುಖ್ಯಭಾಗ ಕೊçಲು, ಔಷಧ ಸಿಂಪಡಣೆ. ತೋಟಕ್ಕೆ ನೀರುಣಿಸಲು, ಗೊಬ್ಬರ ಹಾಕಲು ಪರಿಣಿತ ಕಾರ್ಮಿಕರೇ ಬೇಕೆಂದಿಲ್ಲ. ಆದರೆ ಕೊçಲು, ಔಷಧ ಸಿಂಪಡಣೆಗೆ ಮರ ಹತ್ತಲು ತಿಳಿದಿರುವವರು ಅಗತ್ಯ. ಇಂಥ ಬೆರಳೆಣಿಕೆಯ ಕಾರ್ಮಿಕರು ಆಯಾ ಊರಿನ ಹತ್ತಕ್ಕಿಂತ ಅಧಿಕ ತೋಟಗಳಲ್ಲಿ ನಿಗದಿತ ದಿನದಂತೆ ಕೆಲಸ ನಿರ್ವಹಿಸುತ್ತಾರೆ. ಇವರಿಗೆ ದಿನವೊಂದಕ್ಕೆ 1,700 ರೂ.ನಿಂದ 2 ಸಾ. ರೂ. ತನಕ ವೇತನ ಇದೆ.
ಇವರು ತೋಟವೊಂದರಲ್ಲಿ ಹಿಂಗಾರ, ಎಳೆನಳ್ಳಿ, ಎಳೆಕಾಯಿ ಅಡಿಕೆಗೆ ಎಂದು ಮೂರದಿಂದ ನಾಲ್ಕು ಬಾರಿ ಔಷಧ ಸಿಂಪಡಣೆ ಮಾಡುತ್ತಾರೆ. ಅಡಿಕೆ ಹಣ್ಣಾದ ಮೇಲೆ ಮೂರರಿಂದ ನಾಲ್ಕು ಬಾರಿ ಕೊçಲು. ಆದರೆ ಈ ಬಾರಿಯ ಫಸಲು ನಷ್ಟ ಈ ಕಾರ್ಮಿಕರ ಕೆಲಸಕ್ಕೆ ಕುತ್ತು ತಂದಿದೆ. ಸಣ್ಣ ತೋಟವೊಂದರಲ್ಲಿ ನಾಲ್ಕು ಕೊçಲು ಮಾಡಿ ಒಂದು ಬಾರಿಗೆ 2 ಸಾ.ರೂ.ಯಂತೆ (ದಿನಕ್ಕೆ) 8 ಸಾವಿರ ರೂ. ಸಂಪಾದಿಸುತ್ತಿದ್ದ ಕಾರ್ಮಿಕನಿಗೆ ಈ ಬಾರಿ ಒಂದು ಅಥವಾ ಎರಡು ಕೊçಲಷ್ಟೇ ಸಿಗಬಹುದು. 2 ಸಾವಿರಕ್ಕಿಂತ ಮೇಲ್ಪಟ್ಟ ಅಡಿಕೆ ಮರ ಇರುವ ತೋಟಗಳಲ್ಲಿ ಕೊçಲಿಗೆ ಒಂದಕ್ಕಿಂತ ಹೆಚ್ಚು ದಿನ ಬೇಕು. ಈ ಪ್ರಮಾಣಕ್ಕೆ ಹೊಂದಿಕೊಂಡು ಅವರ ಆದಾಯದ ನಷ್ಟವೂ ಇರುತ್ತದೆ. ಹೆಚ್ಚಿನ ಕಾರ್ಮಿಕರು 10ರಿಂದ 15ರಷ್ಟು ಅಧಿಕ ತೋಟದ ಜವಾಬ್ದಾರಿ ಹೊಂದಿರುತ್ತಾರೆ.
ಅಕಾಲಿಕ ಮಳೆಯಿಂದಾಗಿಯೂ ಬೆಳೆಗಾರರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಸಿಕ್ಕಿದ ಅಡಿಕೆಯನ್ನು ಒಣಗಿಸುವುದು ಕಷ್ಟವಾಗುತ್ತಿದೆ. ನಿರಂತರವಾಗಿ ಮಳೆಯಿಂದ ಒದ್ದೆಯಾದರೆ ಆ ಅಡಿಕೆ ಒಣಗಿದ ಮೇಲೂ ಹೆಚ್ಚು ಬಾಳಿಕೆ ಬರುವುದಿಲ್ಲ. ಗುಣಮಟ್ಟವೂ ಕಳಪೆಯಾಗುತ್ತದೆ. ಇದರಿಂದ ಮಾರುಕಟ್ಟೆಯಲ್ಲಿ ಕಡಿಮೆ ಬೆಲೆ ಸಿಗುತ್ತದೆ.
ಬೆಳೆ ವಿಮೆಯೂ ಇಳಿಕೆ
ಹವಾಮಾನ ಆಧಾರಿತ ವಿಮೆ ಯೋಜನೆಯಲ್ಲಿ ಅಡಿಕೆ, ಕಾಳುಮೆಣಸು ಬೆಳೆಗಾರರಿಗೆ ಈ ಬಾರಿ ನಿರೀಕ್ಷಿತ ಮೊತ್ತ ಪಾವತಿಯಾಗಿಲ್ಲ. ಕಳೆದ ಬಾರಿಗೆ ಹೋಲಿಸಿದರೆ ಶೇ.40ರಷ್ಟು ಕಡಿಮೆ ಮೊತ್ತ ಜಮೆ ಆಗಿದೆ. ಹಿಂದಿನ ಮಾನದಂಡದ ಪ್ರಕಾರ ವಿಮೆ ಮೊತ್ತ ಪಾವತಿ ಮಾಡಿದರೆ ಕಂಪೆನಿಗೆ ನಷ್ಟ ಉಂಟಾಗುತ್ತದೆ ಎಂಬ ಕಾರಣದಿಂದ ಹೊಸ ನಿಯಮ ರೂಪಿಸಲಾಗಿತ್ತು. ಇದರಿಂದ ಬೆಳೆ ವಿಮೆ ಮೊತ್ತ ಕಡಿಮೆ ಆಗಿದೆ. ಬೆಳೆಗಾರರು ಹೇಳುವ ಪ್ರಕಾರ, ಕಳೆದ ಬಾರಿ ತಾಪಮಾನ ಹಾಗೂ ನೀರಿನ ಕೊರತೆ ಹೆಚ್ಚಾಗಿತ್ತು. ಹವಾಮಾನ ವೈಪರೀತ್ಯದ ಆಧಾರದಲ್ಲೇ ವಿಮೆ ಮೊತ್ತ ನಿರ್ಧಾರವಾಗುವ ಕಾರಣ ಈಗ ಲಭಿಸಿರುವ ಮೊತ್ತ ಅದಕ್ಕೆ ತಕ್ಕುದಾಗಿ ಇಲ್ಲ ಅನ್ನುವ ಕೂಗು ಬೆಳೆಗಾರರದ್ದು. ಹೀಗಾಗಿ ಕಷ್ಟ ಕಾಲದಲ್ಲಿ ಕೈ ಹಿಡಿಯಬೇಕಿದ್ದ ವಿಮೆಯ ಕಥೆಯೂ ಕೈ ಕೊಟ್ಟಿದೆ ಎನ್ನುತ್ತಾರೆ ಅವರು.
ಫಸಲು ಕಡಿಮೆ, ರೋಗ ಮುಂತಾದ ಕಾರಣಗಳಿಂದ ಅಡಿಕೆ ಕ್ನಷಿಕರು ಸಂಕಷ್ಟದಲ್ಲಿದ್ದಾರೆ. ನೆರವಾಗಬೇಕಿದ್ದ ಬೆಳೆ ವಿಮೆಯೂ ಕೈ ಕೊಟ್ಟಿದೆ. ಅಡಿಕೆ ಕೃಷಿಗೆ ತಟ್ಟಿರುವ ಸಮಸ್ಯೆಯು ಬೆಳೆಗಾರ ಮತ್ತು ಕಾರ್ಮಿಕರನ್ನು ಆತಂಕಕ್ಕೆ ತಳ್ಳಿದೆ. ಆದ್ದರಿಂದ ಸರಕಾರ ತತ್‌ಕ್ಷಣ ಬೆಳೆಗಾರರು ಮತ್ತು ಕಾರ್ಮಿಕರ ನೆರವಿಗೆ ಬರಬೇಕು.
– ಎಂ.ವೆಂಕಪ್ಪ ಗೌಡ, ಕೃಷಿಕರು
– ಕಿರಣ್ ಪ್ರಸಾದ್ ಕುಂಡಡ್ಕ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Bengaluru: ಏಳನೇ ಆವೃತ್ತಿಯ ಮಣಿಪಾಲ ಮ್ಯಾರಥಾನ್‌ಗೆ ಚಾಲನೆ
Cabinet: ಸಂಕ್ರಾಂತಿ ಬಳಿಕ ಸಂಪುಟ ವಿಸ್ತರಣೆ ಆಗುವುದಿಲ್ಲ: ಡಿ.ಕೆ.ಶಿವಕುಮಾರ್
ಹಸುವಿನ ಕೆಚ್ಚಲು ಕೊಯ್ದ ಪ್ರಕರಣ; ರಾಕ್ಷಸಿ ಕೃತ್ಯ, ನೀಚತನದ ಪರಮಾವಧಿ ಎಂದ ವಿಪಕ್ಷ ನಾಯಕರು
Congress: ಕೆಪಿಸಿಸಿ ಅಧ್ಯಕ್ಷ ಸ್ಥಾನ ಸಿಕ್ಕಿದರೆ ನಿಭಾಯಿಸುವೆ: ಸಚಿವ ರಾಜಣ್ಣ
ಬದರೀನಾಥದಿಂದ ಶಬರಿಮಲೆಗೆ 8000 ಕಿ.ಮೀ ಪಾದಯಾತ್ರೆ; ಕಾಸರಗೋಡಿನ ಯುವಕರ ಸಾಧನೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.