ಸರ್ವೇ ಕಾರ್ಯಕ್ಕೆ ವನ್ಯಜೀವಿ ವಿಭಾಗದ ಸಮ್ಮತಿ: ದಿಡುಪೆ-ಸಂಸೆ ರಸ್ತೆ ನನಸಾಗುವತ್ತ
Team Udayavani, Sep 16, 2021, 6:25 AM IST
ಬೆಳ್ತಂಗಡಿ: ಕುದುರೆಮುಖ ರಾಷ್ಟ್ರೀಯ ಉದ್ಯಾನವನವನದ ಮೂಲಕ ಹಾದು ಹೋಗುವ ದಿಡುಪೆ-ಎಳನೀರು-ಸಂಸೆ ನಡುವೆ ರಸ್ತೆ ನಿರ್ಮಿಸುವ ಬಗ್ಗೆ ಸರ್ವೇ ಕಾರ್ಯ ಕೈಗೊಳ್ಳಲು ಕೊನೆಗೂ ಅರಣ್ಯ ಇಲಾಖೆ ವನ್ಯಜೀವಿ ವಿಭಾಗ ಅನುಮತಿಸಿದ್ದು, ತಾಲೂಕಿನ ದಿಡುಪೆ ಭಾಗದ ಜನರ ಬಹುಕಾಲದ ಬೇಡಿಕೆಯೊಂದು ಈಡೇರುವ ಕಾಲ ಸನ್ನಿಹಿತವಾಗಿದೆ.
ಅನೇಕ ವರ್ಷಗಳ ಹೋರಾಟದ ಫಲವಾಗಿ ವನ್ಯಜೀವಿ ವಿಭಾಗವು ರಸ್ತೆಗೆ ಸರ್ವೇ ನಡೆಸುವಂತೆ ಲೋಕೋಪಯೋಗಿ ಇಲಾಖೆಯ ಬೆಳ್ತಂಗಡಿ ಸಹಾಯಕ ಕಾರ್ಯಪಾಲಕ ಅಭಿಯಂತ ಶಿವಪ್ರಸಾದ್ ಅವರಿಗೆ ಪತ್ರ ಬರೆದು ಸೂಚನೆ ನೀಡಿದೆ. ಮಳೆ ಪರಿಸ್ಥಿತಿ ಅವಲೋಕಿಸಿ ಸರ್ವೇ ಕಾರ್ಯದ ರೂಪುರೇಖೆ ಸಿದ್ಧವಾಗಲಿದೆ.
ಘಾಟಿ ಕ್ರಮಿಸುವ ವ್ಯಾಪ್ತಿ ಅತೀ ಕಡಿಮೆ:
ಗುಡ್ಡ ಕುಸಿತದಿಂದ ನಲುಗಿರುವ ಚಾರ್ಮಾಡಿ ಘಾಟಿ ರಸ್ತೆಯಲ್ಲಿ ಕಾಲಕ್ರಮೇಣ ಸಂಚಾರ ಬಾಧಿತವಾಗುವ ಸಾಧ್ಯತೆಯನ್ನು ಅಲ್ಲಗಳೆಯುವಂತಿಲ್ಲ. ದಿಡುಪೆ-ಸಂಸೆ ರಸ್ತೆಯು ಪರ್ಯಾಯವಾಗುವ ಜತೆಗೆ ಕೇವಲ 7 ಕಿ.ಮೀ.ಗಳಷ್ಟೇ ಘಾಟಿ ಪ್ರದೇಶದಲ್ಲಿ ಕ್ರಮಿಸುವ ಅಂತರವಾಗಲಿದೆ. ಉಳಿ
ದಂತೆ ಮಾಳ ಮತ್ತು ಚಾರ್ಮಾಡಿ ಘಾಟಿಗಳಲ್ಲಿ 20 ಕಿ.ಮೀ. ದೂರ ಕ್ರಮಿಸಬೇಕಿದೆ. ನೂತನ ರಸ್ತೆ ನಿರ್ಮಾಣಕ್ಕೆ ದೊಡ್ಡ ಸೇತುವೆಗಳ ಆವಶ್ಯಕತೆಯಿಲ್ಲ. ಮೋರಿಗಳ ಆಗತ್ಯವಷ್ಟೇ ಇದೆ. ಭಾರೀ ಮರಗಳ ತೆರವಿಗೆ ಆಸ್ಪದವಿಲ್ಲ. 4 ಕಿ.ಮೀ. ರಸ್ತೆಯಷ್ಟೇ ವನ್ಯಜೀವಿ ವಲಯಕ್ಕೆ ಸೇರಲಿದ್ದು, ಉಳಿದಂತೆ ಎಳನೀರು ಗಡಿಯಿಂದ ಹಲಸಿನಕಟ್ಟೆವರೆಗಿನ 3.30 ಕಿ.ಮೀ. ಕಂದಾಯ ಭೂಮಿಗೆ ಸೇರಿದ್ದಾಗಿದೆ.
ಪ್ರಮುಖ ಪ್ರಯೋಜನೆ:
ರಾ.ಹೆ. 73ರ ಚಾರ್ಮಾಡಿ ರಸ್ತೆಗೆ ಪರ್ಯಾಯ ರಸ್ತೆಯಾಗುವ ಜತೆಗೆ 4 ಪ್ರಮುಖ ಯಾತ್ರಾಸ್ಥಳಗಳಾದ ಧರ್ಮಸ್ಥಳ, ಸುಬ್ರಹ್ಮಣ್ಯ, ಶೃಂಗೇರಿ, ಹೊರನಾಡುಗಳನ್ನು ಬಹುಬೇಗನೆ ಸಂದರ್ಶಿಸಲು ಅನಕೂಲವಾಗಲಿದೆ. ಇಲ್ಲವಾದಲ್ಲಿ 150 ಕಿ.ಮೀ. ಸುತ್ತುಬಳಸಿ ಚಾರ್ಮಾಡಿ ಅಥವಾ ಬಜಗೋಳಿಯಾಗಿ ಬಂದು ಹೊರನಾಡಿನಿಂದ ಶೃಂಗೇರಿಗೆ ತೆರಳಬೇಕಾಗಿದೆ. ನೂತನ ರಸ್ತೆಯಾದಲ್ಲಿ 100 ಕಿ.ಮೀ. ಉಳಿತಾಯವಾಗಲಿದೆ.
ಮತ್ತೂಂದೆಡೆ ಎಳನೀರು ಪ್ರದೇಶದಲ್ಲಿ 500ಕ್ಕೂ ಅಧಿಕ ಜನಸಂಖ್ಯೆಯಿದ್ದು, ಆರೋಗ್ಯ, ಶಿಕ್ಷಣ ಇತ್ಯಾದಿಗಳಿಗಾಗಿ ತಾಲೂಕು ಕೇಂದ್ರಕ್ಕೆ ತಲುಪಲು ಅವರ ಜೀವಮಾನದ ಸಂಪರ್ಕ ರಸ್ತೆ ಇದು ಎನಿಸಿಕೊಳ್ಳಲಿದೆ. ಇಲ್ಲವಾದಲ್ಲಿ ಅವರು ಬೆಳ್ತಂಗಡಿಗೆ ತಲುಪಲು ಬಸ್‌ನಲ್ಲಾದರೆ 100 ಕಿ.ಮೀ. ಸುತ್ತಬೇಕು. ಕಾಲ್ನಡಿಗೆಯಲ್ಲಾದರೆ 12 ಕಿ.ಮೀ. ಕ್ರಮಿಸುವ ಅನಿವಾರ್ಯ ಎಳನೀರು ನಿವಾಸಿಗಳದ್ದು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಫೋನ್ ಪೇ ಹೆಸರಿನಲ್ಲಿ ಹೇಗೆಲ್ಲಾ ಮೋಸ ಮಾಡುತ್ತಾರೆ ನೋಡಿ !
ನಿಮ್ಮ ತೋಟಕ್ಕೆ ಬೇಕಾದ ಗೊಬ್ಬರವನ್ನು ನೀವೇ ತಯಾರಿಸಬೇಕೆ ? ಇಲ್ಲಿದೆ ಸರಳ ಉಪಾಯ
ಮೈಲಾರಲಿಂಗ ಸ್ವಾಮಿ ಹೆಸರಿನಲ್ಲಿ ಒಂಟಿ ಮನೆಗಳೇ ಇವರ ಟಾರ್ಗೆಟ್ |
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಹೊಸ ಸೇರ್ಪಡೆ
ಅಂತಾರಾಜ್ಯ ಮಕ್ಕಳ ಮಾರಾಟ ಜಾಲ ಪತ್ತೆ… 4.50 ಲಕ್ಷಕ್ಕೆ ಗೋವಾಕ್ಕೆ ಮಾರಿದ್ದ ಮಗುವಿನ ರಕ್ಷಣೆ
Protest: ಮುಳಗುಂದ: ಕಡಲೆ ಖರೀದಿ ಹಣ ಬಿಡುಗಡೆಗೆ ಆಗ್ರಹಿಸಿ ಪಾದಯಾತ್ರೆ… ಅಹೋರಾತ್ರಿ ಧರಣಿ
Surathkal: ಈಜಾಡಲು ತೆರಳಿದ್ದ ನಾಲ್ವರ ಪೈಕಿ ಮೂವರು ಸಮುದ್ರಪಾಲು
Sandalwood: ಉಪ್ಪಿ ʼಯುಐʼ ಓಟಿಟಿ ರಿಲೀಸ್ ಯಾವಾಗ?; ಚಿತ್ರತಂಡದಿಂದ ಸಿಕ್ತು ಸ್ಪಷ್ಟನೆ
Manipal: ಮಣ್ಣಪಳ್ಳ ಕೆರೆಯಲ್ಲಿ ಹೇಳ್ಳೋರಿಲ್ಲ, ಕೇಳ್ಳೋರಿಲ್ಲ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.