ಉದನೆ: ಉಪ್ಪಿನಂಗಡಿ ವ್ಯಾಪಾರಿಯ ಅಂಗಡಿ ಮುಚ್ಚಿಸಲು ಆಗ್ರಹ!
Team Udayavani, Apr 21, 2020, 10:01 AM IST
ಉಪ್ಪಿನಂಗಡಿ: ದಂಪತಿಗೆ ಕೋವಿಡ್-19 ಪಾಸಿಟಿವ್ ಬಂದಿದೆ ಎಂಬ ಕಾರಣಕ್ಕೆ ಉಪ್ಪಿನಂಗಡಿಯ ನಿವಾಸಿ ಪ್ರಸಕ್ತ ಶಿರಾಡಿ ಗ್ರಾಮದ ಉದನೆಯಲ್ಲಿ ಅಡಿಕೆ ವ್ಯಾಪಾರ ಮಾಡುತ್ತಿದ್ದ ವ್ಯಕ್ತಿಯ ಬಗ್ಗೆ ಅಲ್ಲಿನ ಜನತೆ ಭೀತರಾಗಿ ಅಂಗಡಿ ಮುಚ್ಚಲು ಒತ್ತಡ ಹಾಕಿದ ಘಟನೆ ಸೋಮವಾರ ನಡೆದಿದೆ.
ಉಪ್ಪಿನಂಗಡಿಯ ನಿವಾಸಿಯಾಗಿರುವ ವ್ಯಕ್ತಿ ಸೋಮವಾರ ಅಂಗಡಿ ತೆರೆದಾಗ ಅವರು ಉಪ್ಪಿನಂಗಡಿಯ ಕೋವಿಡ್-19 ಪೀಡಿತರೊಂದಿಗೆ ನಂಟು ಹೊಂದಿದ್ದಾರೆಂದು ಭ್ರಮಿಸಿ ಅಂಗಡಿಯನ್ನು ಮುಚ್ಚಬೇಕೆಂದು ಆಗ್ರಹಿಸಿದ್ದಲ್ಲದೆ ಅವರು ಇಲ್ಲಿನ ಜನತೆಗೆ ಕೋವಿಡ್-19 ವೈರಸ್ ಹರಡುತ್ತಾರೆಂದು ಉಪ್ಪಿನಂಗಡಿ ಪೊಲೀಸರಿಗೆ ದೂರು ಸಲ್ಲಿಸಿದರು. ಪರಿಶೀಲನೆ ನಡೆಸಿದ ಪೊಲೀಸರು, ಕೋವಿಡ್-19 ಪೀಡಿತರ ಸಂಪರ್ಕದಲ್ಲಿ ವ್ಯಾಪಾರಿಯ ಹೆಸರು ಇಲ್ಲದ ಕಾರಣ ಕೇವಲ ಉಪ್ಪಿನಂಗಡಿಯ ವ್ಯಕ್ತಿ ಎಂಬ ಕಾರಣಕ್ಕೆ ಅವರಿಗೆ ದಿಗ್ಬಂಧನ ಹಾಕಲು ಸಾಧ್ಯವಿಲ್ಲ ಎಂದು ಮನದಟ್ಟು ಮಾಡಿದರು.
ಸೀಲ್‌ಡೌನ್ ಕಟ್ಟುನಿಟ್ಟು
ಉಪ್ಪಿನಂಗಡಿಯ ಲಕ್ಷ್ಮೀನಗರ ಹಾಗೂ ಕರಾಯ ಗ್ರಾಮದ ಕಲ್ಲೇರಿಯಲ್ಲಿ ಸೀಲ್‌ಡೌನ್ ಕಟ್ಟುನಿಟ್ಟಾಗಿ ಅನುಷ್ಠಾನಿಸಲ್ಪಟ್ಟಿದ್ದು, ಸ್ಥಳಕ್ಕೆ ಸಹಾಯಕ ಕಮಿಷನರ್ ಹಾಗೂ ತಹಶೀಲ್ದಾರ್ ಭೇಟಿ ನೀಡಿ ಪರಿಸ್ಥಿತಿಯ ಪರಾಮರ್ಶೆ ನಡೆಸಿದರು. ಉಪ್ಪಿನಂಗಡಿಯ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಪ್ರಸಕ್ತ ನಿಗಾ ಘಟಕದಲ್ಲಿರುವ ಮಕ್ಕಳೂ ಸೇರಿದಂತೆ 12 ಮಂದಿಯ ಆರೋಗ್ಯದಲ್ಲಿ ಯಾವುದೇ ವ್ಯತ್ಯಯ ಕಂಡು ಬಂದಿಲ್ಲ .
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Leopard: ಮನೆಯ ಮಹಡಿ ಮೇಲೆ ಚಿರತೆ ಓಡಾಟ, CCTVಯಲ್ಲಿ ದೃಶ್ಯ ಸೆರೆ, ಆತಂಕದಲ್ಲಿ ಗ್ರಾಮಸ್ಥರು
Bangladesh: ಶೇ.90ರಷ್ಟಿ ಮುಸ್ಲಿಮರು ಇರುವ ಬಾಂಗ್ಲಾದೇಶ ಶೀಘ್ರ ಇಸ್ಲಾಮಿಕ್ ರಾಷ್ಟ್ರ?
India-South Africa; ನಾಲ್ಕನೇ ಟಿ20 ಪಂದ್ಯ ಇಂದು: ಸರಣಿ ಗೆಲುವಿನ ನಿರೀಕ್ಷೆಯಲ್ಲಿ ಭಾರತ
Marriage: ಕ್ರಿಸ್ಮಸ್‌ಗೆ ಅಮೆಜಾನ್ ಸಿಇಒ ಅದ್ಧೂರಿ ವಿವಾಹ?
Washington: ಅಮೆರಿಕ ಗುಪ್ತಚರ ಸಂಸ್ಥೆಗೆ ತುಳಸಿ ಗಬಾರ್ಡ್ ಮುಖ್ಯಸ್ಥೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.