ಪಂಚಾಯತ್‌ರಾಜ್ ವಿಭಾಗಕ್ಕೂ ಎಲೆಕ್ಟ್ರಿಕಲ್ ಎಂಜಿನಿಯರ್‌ಗಳ ಬೇಡಿಕೆ
ವಿದ್ಯುತ್ ಸಂಪರ್ಕಕ್ಕೆ ಸಂಬಂಧಿಸಿದ ಕಾಮಗಾರಿ ಬಂಟ್ವಾಳ: ಗ್ರಾಮೀಣ ಭಾಗಗಳಲ್ಲಿ ಸರಕಾರಿ ಅ
Team Udayavani, Sep 11, 2020, 4:38 AM IST
ಬಂಟ್ವಾಳ: ಗ್ರಾಮೀಣ ಭಾಗಗಳಲ್ಲಿ ಸರಕಾರಿ ಅನುದಾನದ ಕಾಮಗಾರಿಗಳು ಜಿ.ಪಂ. ಪಂಚಾಯತ್‌ರಾಜ್ ಎಂಜಿನಿಯರಿಂಗ್ ವಿಭಾಗದ ಮೂಲಕ ಅನುಷ್ಠಾನಗೊಳ್ಳುತ್ತಿದ್ದು, ಆದರೆ ಈ ವಿಭಾಗದಲ್ಲಿ ಸಿವಿಲ್ ಎಂಜಿನಿಯರ್‌ಗಳು ಮಾತ್ರ ಇರುವುದರಿಂದ ವಿದ್ಯುತ್ ಸಂಪರ್ಕಕ್ಕೆ ಸಂಬಂಧಿಸಿದ ಕಾಮಗಾರಿಗಳಿಗೆ ಮೆಸ್ಕಾಂ ಎಂಜಿನಿಯರ್‌ಗಳನ್ನೇ ಆಶ್ರಯಿಸಬೇಕಾದ ಸ್ಥಿತಿ ಇದೆ. ಹೀಗಾಗಿ ಜಿ.ಪಂ. ಎಂಜಿನಿಯರಿಂಗ್ ವಿಭಾಗದಲ್ಲೂ ಎಲೆಕ್ಟ್ರಿಕಲ್ ಎಂಜಿ ನಿಯರ್‌ಗಳು ಬೇಕು ಎಂಬ ಬೇಡಿಕೆ ಕೇಳಿಬರುತ್ತಿದೆ.
ಇದು ಮೆಸ್ಕಾಂ ಎಂಜಿನಿಯರ್‌ಗಳು ಮಾಡ ಬೇಕಾದ ಕಾರ್ಯಗಳಲ್ಲ. ಪಂಚಾಯತ್‌ರಾಜ್ ಎಂಜಿನಿಯರಿಂಗ್ ವಿಭಾಗದ ಮೂಲಕವೇ ನಡೆಯಬೇಕಿದ್ದರೂ ಸಿವಿಲ್ ಎಂಜಿನಿಯರ್‌ಗಳು ಎಲೆಕ್ಟ್ರಿಕಲ್ ವಿಭಾಗದಲ್ಲಿ ಪರಿಣಿತರು ಅಲ್ಲದೇ ಇರು ವುದರಿಂದ ಅವರು ಮೆಸ್ಕಾಂ ಎಂಜಿನಿಯರ್‌ಗಳನ್ನು ಕಾಯುತ್ತಾರೆ. ಹೀಗಾಗಿ ಬಹುತೇಕ ಕಾಮಗಾರಿ ವಿಳಂಬವಾಗುತ್ತಿವೆ ಎಂಬ ಆರೋಪ ಇದೆ.
ಪ್ರಸ್ತುತ ಹೇಗೆ ನಡೆಯುತ್ತಿದೆ ಕಾರ್ಯ?
ಗ್ರಾಮೀಣ ಭಾಗಗಳಲ್ಲಿ ಗ್ರಾ.ಪಂ.ಗಳು ಹೊಸ ವಿದ್ಯುತ್ ಲೈನ್ ಅಥವಾ ಇನ್ಯಾವುದೇ ವಿದ್ಯುತ್ ಸಂಪರ್ಕಕ್ಕೆ ಸಂಬಂಧಿಸಿದ ಕಾಮಗಾರಿಗಳಿಗೆ ಅನುದಾನ ಮೀಸಲಿಡುತ್ತವೆ. ಅದರ ಕ್ರೀಯಾಯೋಜನೆಯನ್ನು ಮೆಸ್ಕಾಂ ಎಂಜಿನಿಯರ್‌ಗಳು ಸಿದ್ಧಪಡಿಸುತ್ತಾರೆ. ಬಳಿಕ ಗುತ್ತಿಗೆದಾರರ ಮೂಲಕ ಕಾಮಗಾರಿಗಳು ನಡೆದು, ಅದರ ಪರಿಪೂರ್ಣತೆಯನ್ನೂ ಮೆಸ್ಕಾಂ ಎಂಜಿನಿಯರ್‌ಗಳೇ ಹೇಳಬೇಕಾಗುತ್ತದೆ. ಇಷ್ಟೆಲ್ಲ ಕೆಲಸಗಳು ನಡೆದ ಬಳಿಕ ಅದರ ಬಿಲ್ ಪಾವತಿಯ ಕಾರ್ಯವನ್ನು ಪಂಚಾಯತ್‌ರಾಜ್ ಎಂಜಿನಿಯರಿಂಗ್ ವಿಭಾಗದ ಮೂಲಕವೇ ನಿರ್ವಹಿಸಬೇಕಾಗುತ್ತದೆ. ಹೀಗಾಗಿ ಈ ಎಲ್ಲ ಕಾರ್ಯಗಳಿಗೆ ಮೆಸ್ಕಾಂ ಎಂಜಿನಿಯರ್‌ಗಳನ್ನೇ ಕಾಯಬೇಕಿದ್ದು, ಕಾಮಗಾರಿ ವಿಳಂಬಕ್ಕೆ ಕಾರಣವಾಗುತ್ತಿದೆ ಎಂಬ ಅಭಿಪ್ರಾಯ ಕೇಳಿಬರುತ್ತಿದೆ. ಅಂದರೆ ಮೆಸ್ಕಾಂನವರು ತಮ್ಮ ಕೆಲಸದ ಜತೆಗೆ ಇದನ್ನು ಹೆಚ್ಚುವರಿಯಾಗಿ ನಿರ್ವಹಿಸಬೇಕಾಗುತ್ತದೆ.
ಅಧಿಕಾರಿಗಳ ಸಭೆಯಲ್ಲೂ ಚರ್ಚೆ
ಕೆಲವು ದಿನಗಳ ಹಿಂದೆ ಬಂಟ್ವಾಳ ತಾ.ಪಂ.ನಲ್ಲಿ ಶಾಸಕ ರಾಜೇಶ್ ನಾೖಕ್ ಉಳಿಪ್ಪಾಡಿ ಗುತ್ತು ನೇತೃ ತ್ವದಲ್ಲಿ ನಡೆದ ಗ್ರಾ.ಪಂ. ಪಿಡಿಒ ಹಾಗೂ ಆಡಳಿತಾಧಿ ಕಾರಿಗಳ ಸಭೆಯಲ್ಲಿ 14ನೇ ಹಣಕಾಸು ಯೋಜನೆಯ ಬಹುತೇಕ ಕಾಮಗಾರಿಗಳ ವಿಳಂಬಕ್ಕೆ ಇದೇ ಸಮಸ್ಯೆ ಎದುರಾಗಿದ್ದು, ಒಂದು ವೇಳೆ ಪಂಚಾಯತ್‌ರಾಜ್ ಎಂಜಿನಿಯರಿಂಗ್ ವಿಭಾಗದಲ್ಲಿ ಎಲೆಕ್ಟ್ರಿಕಲ್ ಎಂಜಿನಿಯರ್‌ಗಳು ಇರುತ್ತಿದ್ದರೆ ಈ ತೊಂದರೆ ಇರುತ್ತಿರಲಿಲ್ಲ ಎಂಬ ಅಭಿಪ್ರಾಯ ಕೇಳಿಬಂದಿತ್ತು.
ಹಿಂದೆ ಜಿಲ್ಲೆಗೊಬ್ಬರು ಇದ್ದರು
ಕೆಲವು ವರ್ಷಗಳ ಹಿಂದೆ ಜಿ.ಪಂ. ಎಂಜಿನಿಯರಿಂಗ್ ವಿಭಾಗದಲ್ಲಿ ಜಿಲ್ಲೆಗೆ ಒಬ್ಬರು ಎಲೆಕ್ಟ್ರಿಕಲ್ ಎಂಜಿನಿಯರ್‌ಗಳು ಇರುತ್ತಿದ್ದರು. ಆದರೆ ಹಿಂದೆ ಇದ್ದ ಎಂಜಿನಿಯರ್‌ಗಳು ನಿವೃತ್ತಿ ಹೊಂದಿದ ಬಳಿಕ ಹೊಸ ಹುದ್ದೆಗಳನ್ನು ನೇಮಕ ಮಾಡದೆ, ಎಲೆಕ್ಟ್ರಿಕಲ್ ಹುದ್ದೆಯನ್ನೇ ತೆಗೆದು ಹಾಕಲಾಗಿತ್ತು ಎಂದು ಪಂಚಾಯತ್‌ರಾಜ್ ಎಂಜಿನಿಯರಿಂಗ್ ವಿಭಾಗದ ಮೂಲಗಳು ತಿಳಿಸಿವೆ. ಮುಂದಿನ ದಿನಗಳಲ್ಲಿ ತಾಲೂಕಿಗೆ ಒಬ್ಬರಾದರೂ ಎಲೆಕ್ಟ್ರಿಕಲ್ ಎಂಜಿನಿಯರ್‌ಗಳು ಬೇಕು ಎಂಬ ಬೇಡಿಕೆ ಇದೆ.
ವಿ. ಸಭೆಯಲ್ಲೂ ಚರ್ಚೆ
ಗ್ರಾಮೀಣ ಭಾಗಗಳಲ್ಲಿ ಕಟ್ಟಡದ ವಿದ್ಯುತ್ ಸಂಪರ್ಕ ವ್ಯವಸ್ಥೆ, ವಿದ್ಯುತ್ ಲೈನ್ ವರ್ಕ್ ಹೀಗೆ ಹಲವು ಕಾಮಗಾರಿಗಳು ಎಲೆಕ್ಟ್ರಿಕಲ್ ಎಂಜಿನಿಯರ್‌ಗಳಿಲ್ಲದೆ ಬಾಕಿಯಾಗಿದ್ದು, ಹೀಗಾಗಿ ಪಂಚಾಯತ್‌ರಾಜ್ ಎಂಜಿನಿಯರಿಂಗ್ ವಿಭಾಗದಲ್ಲಿ ಎಲೆಕ್ಟ್ರಿಕಲ್ ಎಂಜಿನಿಯರ್‌ಗಳ ಹುದ್ದೆಯನ್ನು ಸೃಷ್ಟಿಸು ವಂತೆ ಬಂಟ್ವಾಳ ಶಾಸಕರು ಒಂದೂವರೆ ವರ್ಷಗಳ ಹಿಂದೆ ವಿಧಾನಸಭಾ ಅಧಿವೇಶನದಲ್ಲಿ ವಿಷಯ ಪ್ರಸ್ತಾವಿಸಿದ್ದರು.
ಮೆಸ್ಕಾಂ ಎಂಜಿನಿಯರ್‌ಗಳು ನಿರ್ವಹಣೆ
ಪ್ರಸ್ತುತ ಎಲೆಕ್ಟ್ರಿಕಲ್ ವಿಚಾರಕ್ಕೆ ಸಂಬಂಧಿಸಿದಂತೆ ಕ್ರಿಯಾಯೋಜನೆ ಮೊದಲಾದ ಕೆಲಸಗಳನ್ನು ಮೆಸ್ಕಾಂ ಎಂಜಿನಿಯರ್‌ಗಳ ಮೂಲಕವೇ ಮಾಡಲಾಗುತ್ತದೆ. ಅಂದರೆ ಪಂಚಾಯತ್‌ರಾಜ್ ಎಂಜಿನಿಯರಿಂಗ್ ವಿಭಾಗದಲ್ಲಿ ಸಿವಿಲ್ ಎಂಜಿನಿಯರ್‌ಗಳು ಮಾತ್ರ ಇರುತ್ತಾರೆ. ಹೀಗಾಗಿ ಹಿಂದೆ ನಡೆದ ಅಧಿಕಾರಿಗಳ ಸಭೆಯಲ್ಲಿ ಶಾಸಕರು ಎಲೆಕ್ಟ್ರಿಕಲ್
ಎಂಜಿನಿಯರ್‌ಗಳ ವಿಚಾರವನ್ನು ಪ್ರಸ್ತಾವಿಸಿದ್ದರು.
-ತಾರಾನಾಥ್ ಸಾಲ್ಯಾನ್, ಸಹಾಯಕ ಕಾರ್ಯಪಾಲಕ ಎಂಜಿನಿಯರ್, ಪಂಚಾಯತ್‌ರಾಜ್ ಎಂಜಿನಿಯರಿಂಗ್ ವಿಭಾಗ, ಬಂಟ್ವಾಳ
ಕಿರಣ್ ಸರಪಾಡಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
German: ಮಾರುಕಟ್ಟೆಗೆ ನುಗ್ಗಿದ ಕಾರು, ಇಬ್ಬರು ಸಾವು, 60ಕ್ಕೂ ಹೆಚ್ಚು ಗಾಯ, ವೈದ್ಯನ ಬಂಧನ
Prithvi Shaw: ಮುಂಬೈ-ಶಾ ನಡುವೆ ಆರೋಪ ಸಮರ; ಅರ್ಧ ಗೊತ್ತಿದ್ದು ಮಾತಾಡಬೇಡಿ ಎಂದ ಶಾ
Tobacco: ತಂಬಾಕು ಮೇಲಿನ ಚಿತ್ರ ಸಹಿತ ಎಚ್ಚರಿಕೆ ಗಾತ್ರ ಶೀಘ್ರ ಹಿರಿದು!
Coconut: ಕೊಬ್ಬರಿಯ ಕನಿಷ್ಠ ಬೆಂಬಲ ಬೆಲೆ 422 ರೂ. ಹೆಚ್ಚಳ: ಕೇಂದ್ರ ಸಂಪುಟ
laws: ಕಠಿಣ ಕಾಯ್ದೆ ಇರುವುದು ಸ್ತ್ರೀ ರಕ್ಷಣೆಗೆ, ದುರ್ಬಳಕೆ ಸಲ್ಲ: ಸುಪ್ರೀಂ ಕೋರ್ಟ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.