ಜೀವನದಿಗೆ ಜೀವ ತುಂಬಬೇಕಿದೆ ವರುಣ: ಸತತ 2 ದಿನಗಳ ಮಳೆ ಅವಶ್ಯ

ಅಂತರ್ಜಲ ಮಟ್ಟ ಕುಸಿತ

Team Udayavani, May 17, 2023, 3:22 PM IST

ಜೀವನದಿಗೆ ಜೀವ ತುಂಬಬೇಕಿದೆ ವರುಣ: ಸತತ 2 ದಿನಗಳ ಮಳೆ ಅವಶ್ಯ

ಬೆಳ್ತಂಗಡಿ: ಪಶ್ಚಿಮಘಟ್ಟ ದಿಂದ ಹರಿಯುವ ನದಿಗಳು ಹರಿವು ನಿಲ್ಲಿಸಿದ್ದರಿಂದ ಇತ್ತ ಬೆಳ್ತಂಗಡಿಯಿಂದ ಮಂಗಳೂರಿನವರೆಗೆ ನೀರಿನ ಅಭಾವ ಉಂಟಾಗಿದೆ. ಜತೆಗೆ ಕಳೆದ ಎರಡು ದಿನಗಳ ಹಿಂದೆ ಸುರಿದ ಮಳೆಗೂ ಬೆಳ್ತಂಗಡಿ ತಾಲೂಕಿನ ಮೃತ್ಯುಂಜಯ ಹಾಗೂ ಜೀವನದಿ ನೇತ್ರಾವತಿ ನದಿಗೆ ಜೀವ ತುಂಬಲು ಸಾಧ್ಯವಾಗಿಲ್ಲ.
ನೇತ್ರಾವತಿ ನದಿ ಹಾಗೂ ಮೃತ್ಯುಂಜಯ ನದಿ ಬರಿದಾಗಿ ಕಿಂಡಿ ಅಣೆಕಟ್ಟುಗಳಲ್ಲೂ ನೀರಿಲ್ಲದಂತಾಗಿದೆ. 2019ರ ಬರಗಾಲದ ಬಳಿಕ ಇಷ್ಟೊಂದು ನದಿಗಳು ಬತ್ತಿರುವುದು ಈ ಬಾರಿ ಮಾತ್ರ. ಕಳೆದ ಎರಡು ದಿನಗಳ ಹಿಂದೆ ಚಂಡಮಾರುತದಿಂದ ಉತ್ತಮ ಮಳೆಯಾದರೂ ಹಾನಿಗಳು ಬಿಟ್ಟರೆ ನದಿ ನೀರಿನ ಒಳಹರಿವು ಹೆಚ್ಚಿಸಬಹುದೆಂಬ ನಿರೀಕ್ಷೆ ಹುಸಿಯಾಗಿದೆ. ಶನಿವಾರ ದಿನವಿಡಿ ಮಳೆಯಾದ್ದರಿಂದ ಕೊಂಚ ಹರಿವು ಹೆಚ್ಚಿ ಸಿದ್ದು, ಕಿಂಡಿ ಅಣೆಕಟ್ಟುಗಳಲ್ಲಿ ಒಂದೆರಡು ದಿನ ಹೆಚ್ಚುವರಿ ಬಳಕೆ ಮಾಡುವಷ್ಟು ನೀರು ಸಂಗ್ರಹವಾಗಿರುವುದು ಬಿಟ್ಟರೆ ದೊಡ್ಡ ಪ್ರಯೋಜನವಾಗಿಲ್ಲ.

800, 1,000 ಅಡಿ
ತಲುಪುತ್ತಿದೆ ಕೊಳವೆ ಬಾವಿ
ತಾಲೂಕಿನಲ್ಲಿ 10ರಿಂದ 15 ಸಾವಿರಕ್ಕೂ ಮಿಕ್ಕಿ ಕೊಳವೆಬಾವಿಗಳಿವೆ. ಇರುವ ಕೊಳವೆ ಬಾವಿ ಅಂತರ್ಜಲ ಮಟ್ಟ ಪಾತಾಳಕ್ಕೆ ಇಳಿದಿದೆ. ಹೊಸ ಕೊಳವೆಬಾವಿ ತೆಗೆಯಲು ಮುಂದಾದ ಮಂದಿಗೆ ಮತ್ತೂಂದು ಶಾಕ್‌ ನೀಡುತ್ತಿದೆ. ಈ ಬೇಸಗೆಯಲ್ಲಿ ನೀರು ಸಿಕ್ಕರೆ ಶಾಶ್ವತವಾಗಿ ನೀರು ಸಿಗಬಹುದೆಂಬ ನಿರೀಕ್ಷೆಯಲ್ಲಿ ಕೊಳವೆ ಬಾವಿ ಕೊರೆದರೆ 800 ಅಡಿಗಳವರೆಗೆ ತಲುಪಿದರೂ ಹನಿ ನೀರು ಸಿಗುತ್ತಿಲ್ಲ. ಇದು ಭೂ ವಿಜ್ಞಾನಿಗಳಿಗೂ ಆತಂಕ ಮೂಡಿಸಿದೆ. ಅತ್ತ ನದಿಯೂ ಬತ್ತಿರುವುದರಿಂದ ಕೃಷಿಕರಿಗೆ ಹೊಡೆತ ಬಿದ್ದಿದೆ.

ಕಳೆದ ನಾಲ್ಕಾರು ದಿನಗಳಿಂದ ಬೆಳ್ತಂಗಡಿ ತಾಲೂಕು ಹಾಗೂ ಪಶ್ಚಿಮಘಟ್ಟದಲ್ಲಿ ಹರಿವ ನದಿ ಪ್ರದೇಶಗಳಲ್ಲಿ ಸಾಮಾನ್ಯವಾಗಿ ಸುರಿದ ಮಳೆಯ ಪರಿಣಾಮ ನೀರಿನ ಹರಿವು ಆರಂಭವಾಗಿದೆ. ನೇತ್ರಾವತಿ ಮೃತ್ಯುಂಜಯ ಸೇರುವ ಪಜಿರಡ್ಕದಲ್ಲಿ ಕೊಂಚ ನೀರು ಶೇಖರಣೆಯಾಗಿದೆ. ಇದರಿಂದ ಆನಂಗಳ್ಳಿ, ಕಡಂಬಳ್ಳಿ, ಮುಂಡಾಜೆ, ಕಾಪು ಮೊದಲಾದ ಪರಿಸರಗಳಲ್ಲಿರುವ ಕಿಂಡಿ ಅಣೆಕಟ್ಟುಗಳಲ್ಲಿ ನೀರಿನ ಮಟ್ಟ ಸುಧಾರಣೆ ಕಂಡಿದೆ. ಸುಮಾರು ಒಂದು ತಿಂಗಳಿನಿಂದ ಕೃಷಿ ತೋಟಗಳಿಗೆ ಕಿಂಡಿ ಅಣೆಕಟ್ಟಿನ ನೀರಿನ ವ್ಯವಸ್ಥೆ ಇರಲಿಲ್ಲ. ಆದರೆ ಈಗ ಇವು ತುಂಬಿದ ಪರಿಣಾಮ ನದಿ ಸಮೀಪದ ಕೃಷಿ ತೋಟಗಳನ್ನು ತಲುಪಿದೆ.

ಎರಡು ದಿನಗಳ ಮಳೆ ಅವಶ್ಯ
ನೇತ್ರಾವತಿ ನದಿಗೆ ಹೆಚ್ಚಿನ ಬಲವನ್ನು ನೀಡುವ ಮೃತ್ಯುಂಜಯ ನದಿಯಲ್ಲಿ ನೀರಿನ ಹರಿವು ಹೆಚ್ಚಳವಾದಲ್ಲಿ ಪಜಿರಡ್ಕದಿಂದ ತಗ್ಗು ಪ್ರದೇಶಗಳಲ್ಲಿ ನೇತ್ರಾವತಿ ನದಿಯ ಹರಿವಿನಲ್ಲೂ ಹೆಚ್ಚಳವಾಗುತ್ತದೆ. ಇದು ಜಿಲ್ಲೆಯ ನಾನಾ ಭಾಗಗಳ ಮೂಲಕ ಹರಿಯುವ ನೇತ್ರಾವತಿ ನದಿ ನೀರಿನ ಹೆಚ್ಚಳಕ್ಕೆ ಕಾರಣವಾಗುವುದಲ್ಲದೆ ಮಂಗಳೂರು ನಗರಕ್ಕೆ ರೇಶನಿಂಗ್‌ ಮೂಲಕ ನೀರಿನ ವ್ಯವಸ್ಥೆ ಕಲ್ಪಿಸುವುದನ್ನು ತಪ್ಪಿಸಲಿದೆ. ಇದಕ್ಕೆ ಸತತ ಎರಡು ದಿನಗಳ ಮಳೆ ಅತ್ಯವಶ್ಯವಾಗಿದೆ.

ಬೆಳ್ತಂಗಡಿ ನಗರದಲ್ಲಿ ಬೋರ್‌ವೆಲ್‌ ಆಶ್ರಯ
ಬೆಳ್ತಂಗಡಿ ಪಟ್ಟಣಕ್ಕೆ 13 ಬೋರ್‌ವೆಲ್‌ ಸಹಿತ ಸೋಮಾವತಿ ನದಿ ನೀರನ್ನು ಬಳಸಲಾಗುತ್ತಿತ್ತು. ಕಳೆದ ಎರಡು ವಾರಗಳಿಂದ ನದಿ ನೀರು ಬಳಕೆ ಮಾಡುತ್ತಿಲ್ಲ. ನಗರದಲ್ಲಿ ಗೃಹ, ವಾಣಿಜ್ಯ, ಕಚೇರಿ ಸೇರಿ 11 ವಾರ್ಡ್‌ಗಳಲ್ಲಿ 1,820 ನಳ್ಳಿ ನೀರಿನ ಸಂಪರ್ಕವಿದೆ. ಪ್ರತಿ ದಿನ 1.05 ಎಂ.ಎಲ್‌.ಡಿ. (10.50 ಲಕ್ಷ ಲೀಟರ್‌) ನೀರಿನ ಆವಶ್ಯಕತೆ ಯಿದೆ. ನಗರಕ್ಕೆ 13 ಕೊಳವೆ ಬಾವಿ ಹಾಗೂ ನದಿ ನೀರಿನ ಬದಲಿಗೆ ಹೆಚ್ಚುವರಿ 4 ಕೊಳವೆಬಾವಿಯನ್ನು ನೆಚ್ಚಿಕೊಂಡಿದೆ. ಬೆಳಗ್ಗೆ 6ಗಂಟೆ ಯಿಂದ ರಾತ್ರಿ 10.30ರವರೆಗೆ ನೀರು ಸರಬರಾಜು ಮಾಡಲಾಗು ತ್ತಿದೆ ಎಂದು ನ.ಪಂ. ಎಂಜಿನಿಯರ್‌ ಮಹಾವೀರ ಆರಿಗ ತಿಳಿಸಿದ್ದಾರೆ.

ಜಾಗೃತಿ ಕಾರ್ಯಕ್ರಮ
ನೀರಿನ ಮರುಪೂರಣಕ್ಕೆ ಪರಿಣಾಮಕಾರಿ ಆದ್ಯತೆ ನೀಡಿದ್ದು ಒಂದೆಡೆಯಾದರೆ ಮಳೆ ದಿನಗಳು ಕಡಿಮೆಯಾಗಿದೆ. ಕಡಿಮೆ ದಿನದಲ್ಲಿ ಹೆಚ್ಚು ಮಳೆ ಸುರಿದರೂ ಮರುಪೂರಣವಾಗದೆ ಸಮುದ್ರ ಸೇರುತ್ತಿದೆ. ಹಿಂದೆ ಗದ್ದೆ ಬೇಸಾಯ ನೀರಿನ ಶೇಖರಣೆಯ ಮೂಲವಾಗಿತ್ತು. ಈ ಕುರಿತು ಸರಕಾರ ಸಾಕಷ್ಟು ಜಾಗೃತಿ ಕಾರ್ಯಕ್ರಮ ಅನುಷ್ಠಾನಕ್ಕೆ ಮುಂದಾಗಿದೆ.
-ಶೇಖ್‌ ದಾವೂದ್‌,
ಹಿರಿಯ ಭೂ ವಿಜ್ಞಾನಿ, ಅಂತರ್ಜಲ ನಿರ್ದೇಶನಾಲಯ, ಜಿಲ್ಲಾ ಕಚೇರಿ, ಮಂಗಳೂರು

- ಚೈತ್ರೇಶ್‌ ಇಳಂತಿಲ

ಟಾಪ್ ನ್ಯೂಸ್

Court Notice: 2002ರ ಹ*ತ್ಯೆ ಪ್ರಕರಣ: ಡೇರಾ ಸೌಧ ಮುಖ್ಯಸ್ಥ ಗುರ್ಮೀತ್‌ಗೆ ನೋಟಿಸ್‌

Court Notice: 2002ರ ಹ*ತ್ಯೆ ಪ್ರಕರಣ: ಡೇರಾ ಸೌಧ ಮುಖ್ಯಸ್ಥ ಗುರ್ಮೀತ್‌ಗೆ ನೋಟಿಸ್‌

Madikeri: ಬೈಕ್‍ನಲ್ಲಿ ತೆರಳುತ್ತಿದ್ದ ವೇಳೆ ಕಾಡಾನೆ ದಾಳಿ; ಇಬ್ಬರಿಗೆ ಗಾಯ

Madikeri: ಬೈಕ್‍ನಲ್ಲಿ ತೆರಳುತ್ತಿದ್ದ ವೇಳೆ ಕಾಡಾನೆ ದಾಳಿ; ಇಬ್ಬರಿಗೆ ಗಾಯ

ಅಪರಿಚಿತ ವಾಹನ ಡಿಕ್ಕಿ : ಚಿಕಿತ್ಸೆ ಫ‌ಲಿಸದೆ ವ್ಯಕ್ತಿ ಸಾವು

Madikeri ಅಪರಿಚಿತ ವಾಹನ ಡಿಕ್ಕಿ: ಚಿಕಿತ್ಸೆ ಫ‌ಲಿಸದೆ ವ್ಯಕ್ತಿ ಸಾವು

Madikeri: ಲಾರಿಯಿಂದ ಹಾರಿದ ಚಾಲಕ: ಚಕ್ರದಡಿಗೆ ಸಿಲುಕಿ ಸಾವು

Madikeri: ಲಾರಿಯಿಂದ ಹಾರಿದ ಚಾಲಕ: ಚಕ್ರದಡಿಗೆ ಸಿಲುಕಿ ಸಾವು

Vande Bharat Sleeper Train: ಪರೀಕ್ಷಾರ್ಥ ಓಡಾಟದಲ್ಲಿ ಗಂಟೆಗೆ 180 ಕಿ.ಮೀ ವೇಗ

Vande Bharat Sleeper Train: ಪರೀಕ್ಷಾರ್ಥ ಓಡಾಟದಲ್ಲಿ ಗಂಟೆಗೆ 180 ಕಿ.ಮೀ ವೇಗ

Suraj Revanna ಎಲ್ಲೇ ಹೋದ್ರೂ ಕಿತಾಪತಿ ಮಾಡಿ ಬರ್ತಾರೆ: ಶ್ರೇಯಸ್‌ ಪಟೇಲ್‌

Suraj Revanna ಎಲ್ಲೇ ಹೋದ್ರೂ ಕಿತಾಪತಿ ಮಾಡಿ ಬರ್ತಾರೆ: ಶ್ರೇಯಸ್‌ ಪಟೇಲ್‌

Karnataka Govt. : ನಾಲ್ವರು ಡಿವೈಎಸ್‌ಪಿಗಳು ವಿವಿಧೆಡೆ ವರ್ಗಾವಣೆ

Karnataka Govt. : ನಾಲ್ವರು ಡಿವೈಎಸ್‌ಪಿಗಳು ವಿವಿಧೆಡೆ ವರ್ಗಾವಣೆ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

11-venur

Venur; ಚಿರತೆ ಓಡಾಟ; ಸಾರ್ವಜನಿಕರಲ್ಲಿ ಆತಂಕ; ಅರಣ್ಯಾಧಿಕಾರಿ- ಸಾರ್ವಜನಿಕರ ಸಭೆ

3-kadaba

Kadaba: ಕರ್ತವ್ಯದ ಬಿಡುವಿನಲ್ಲಿ ಮೊಬೈಲ್‌ನಲ್ಲೇ ಓದಿ ಎಸ್‌ಐ ಆದ ಪೊಲೀಸ್‌ ಚಾಲಕ!

1

Puttur: ನಳಿನ್‌ಗೆ ನಿಂದನೆ; ದೂರು ದಾಖಲು

1-asdaaasdasd

Kadaba; ಪ್ರೀತಿಸುವ ನಾಟಕವಾಡಿ ಬಾಲಕಿಯ ಮೇಲೆ ಅತ್ಯಾಚಾರ:ಯುವಕ ಸೆರೆ

1aaaane

Sullia: ತೋಟದಲ್ಲಿ ಮೂರು ಕಾಡಾನೆ!

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

Court Notice: 2002ರ ಹ*ತ್ಯೆ ಪ್ರಕರಣ: ಡೇರಾ ಸೌಧ ಮುಖ್ಯಸ್ಥ ಗುರ್ಮೀತ್‌ಗೆ ನೋಟಿಸ್‌

Court Notice: 2002ರ ಹ*ತ್ಯೆ ಪ್ರಕರಣ: ಡೇರಾ ಸೌಧ ಮುಖ್ಯಸ್ಥ ಗುರ್ಮೀತ್‌ಗೆ ನೋಟಿಸ್‌

Madikeri: ಬೈಕ್‍ನಲ್ಲಿ ತೆರಳುತ್ತಿದ್ದ ವೇಳೆ ಕಾಡಾನೆ ದಾಳಿ; ಇಬ್ಬರಿಗೆ ಗಾಯ

Madikeri: ಬೈಕ್‍ನಲ್ಲಿ ತೆರಳುತ್ತಿದ್ದ ವೇಳೆ ಕಾಡಾನೆ ದಾಳಿ; ಇಬ್ಬರಿಗೆ ಗಾಯ

ಅಪರಿಚಿತ ವಾಹನ ಡಿಕ್ಕಿ : ಚಿಕಿತ್ಸೆ ಫ‌ಲಿಸದೆ ವ್ಯಕ್ತಿ ಸಾವು

Madikeri ಅಪರಿಚಿತ ವಾಹನ ಡಿಕ್ಕಿ: ಚಿಕಿತ್ಸೆ ಫ‌ಲಿಸದೆ ವ್ಯಕ್ತಿ ಸಾವು

Madikeri: ಲಾರಿಯಿಂದ ಹಾರಿದ ಚಾಲಕ: ಚಕ್ರದಡಿಗೆ ಸಿಲುಕಿ ಸಾವು

Madikeri: ಲಾರಿಯಿಂದ ಹಾರಿದ ಚಾಲಕ: ಚಕ್ರದಡಿಗೆ ಸಿಲುಕಿ ಸಾವು

Vande Bharat Sleeper Train: ಪರೀಕ್ಷಾರ್ಥ ಓಡಾಟದಲ್ಲಿ ಗಂಟೆಗೆ 180 ಕಿ.ಮೀ ವೇಗ

Vande Bharat Sleeper Train: ಪರೀಕ್ಷಾರ್ಥ ಓಡಾಟದಲ್ಲಿ ಗಂಟೆಗೆ 180 ಕಿ.ಮೀ ವೇಗ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.