ಗುಣಮಟ್ಟದ ಸೇವೆಯಿದ್ದರೂ ಶೇ. 50ಕ್ಕಿಂತಲೂ ಹೆಚ್ಚು ಹುದ್ದೆ ಖಾಲಿ
ಬಂಟ್ವಾಳ ತಾಲೂಕು ಸಾರ್ವಜನಿಕ ಆಸ್ಪತ್ರೆ
Team Udayavani, Nov 3, 2019, 4:31 AM IST
ಬಂಟ್ವಾಳ: ಸರಕಾರಿ ಆಸ್ಪತ್ರೆಗಳು ಮೇಲ್ದರ್ಜೆ ಗೇರಿದಾಗ ಬಡ ರೋಗಿಗಳಿಗೆ ಅನುಕೂಲವಾಗುತ್ತದೆ. ಆದರೆ ಅಲ್ಲಿ ವೈದ್ಯರು-ಸಿಬಂದಿ ಕೊರತೆ ಇದ್ದರೆ ಸೌಲಭ್ಯ ಗಳಿದ್ದೂ ಪ್ರಯೋಜನ ಇಲ್ಲದಂತಾಗುತ್ತದೆ. ಪ್ರಸ್ತುತ ಬಂಟ್ವಾಳ ತಾ| ಸಾರ್ವಜನಿಕ ಆಸ್ಪತ್ರೆ ಸ್ಥಿತಿ ಅದೇ ಆಗಿದ್ದು, ಶೇ. 50ಕ್ಕಿಂತಲೂ ಹೆಚ್ಚು ಹುದ್ದೆಗಳು ಖಾಲಿ ಇವೆ.
ಬಂಟ್ವಾಳ ಸಾರ್ವಜನಿಕ ಆಸ್ಪತ್ರೆ 100 ಹಾಸಿಗೆಗಳ ಆಸ್ಪತ್ರೆಯಾಗಿ ಮೇಲ್ದರ್ಜೆಗೇರಿರುವ ಜತೆಗೆ ಗುಣ ಮಟ್ಟದ ಸೇವೆ ಲಭ್ಯವಾಗುತ್ತಿದೆ. ಆದರೆ ಪ್ರಸ್ತುತ ಆಸ್ಪತ್ರೆಗೆ ವೈದ್ಯರು, ಸಿಬಂದಿ ಕೊರತೆ ಕಾಡುತ್ತಿದ್ದು, ಇರುವವರು ಒತ್ತಡದಿಂದಲೇ ಕಾರ್ಯ ನಿರ್ವಹಿಸ ಬೇಕಾದ ಸ್ಥಿತಿ ನಿರ್ಮಾಣವಾಗಿದೆ.
ಶಾಸಕರ ಭರವಸೆ
ಅ. 30ರಂದು ಸರಕಾರಿ ಆಸ್ಪತ್ರೆಯ ಆವರಣ ದಲ್ಲಿ ಜರಗಿದ ಆ್ಯಂಬುಲೆನ್ಸ್ ಹಸ್ತಾಂತರ ಕಾರ್ಯಕ್ರಮದಲ್ಲಿ ಶಾಸಕ ರಾಜೇಶ್ ನಾೖಕ್ ಉಳಿಪ್ಪಾಡಿಗುತ್ತು ಅವರು ಸಚಿವ ರಿಗೆ ಹುದ್ದೆಗಳ ಭರ್ತಿ ಕುರಿತು ಮನವಿ ಮಾಡಿದ್ದಾರೆ. ಜತೆಗೆ ಆಸ್ಪತ್ರೆಯ ಮುಖ್ಯ ವೈದ್ಯಾಧಿಕಾರಿಯವರೂ ಶಾಸಕರಿಗೆ ಮನವಿ ನೀಡಿದ್ದು, ಹುದ್ದೆ ಗಳ ಭರ್ತಿ ಜತೆಗೆ ಸೌಲಭ್ಯ ಒದಗಿಸಲು ಶಾಸಕರು ಭರವಸೆ ನೀಡಿದ್ದಾರೆ.
ಹುದ್ದೆಗಳಲ್ಲಿ ಖಾಲಿ ಎಷ್ಟು? ಭರ್ತಿ ಎಷ್ಟು?
ಆಸ್ಪತ್ರೆಯ ಮುಖ್ಯ ವೈದ್ಯಾಧಿಕಾರಿ ಹುದ್ದೆ ಭರ್ತಿ ಯಿದ್ದು, ಫಿಜಿಶಿಯನ್, ಮಕ್ಕಳ ತಜ್ಞ ಹಾಗೂ ಅರಿವಳಿಕೆ ತಜ್ಞರ ತಲಾ ಒಂದೊಂದು ಹುದ್ದೆಗಳಲ್ಲಿ ಮೂರು ಕೂಡಾ ಖಾಲಿ ಇದೆ. ಕೀಲು ಮೂಳೆ ತಜ್ಞರ ಒಂದು ಹುದ್ದೆ ಸದ್ಯಕ್ಕೆ ಭರ್ತಿಯಿದ್ದರೂ ಈ ವೈದ್ಯರು ಇದೇ ತಿಂಗಳು ನಿವೃತ್ತರಾಗಲಿದ್ದಾರೆ.
ಕಣ್ಣಿನ ತಜ್ಞರು, ಇಎನ್‌ಟಿ ತಜ್ಞರು, ಜನರಲ್ ಸರ್ಜನ್, ಸ್ತ್ರಿರೋಗ ತಜ್ಞರು, ಹಿರಿಯ ದಂತ ಆರೋಗ್ಯಾಧಿಕಾರಿ, ಎಸ್‌ಎಂಒ, ಸಹಾಯಕ ಆಡಳಿತಾಧಿ ಕಾರಿ, ಶುಶ್ರೂಷಕ ಅಧೀಕ್ಷಕರು ದರ್ಜೆ- 2ರ ತಲಾ ಒಂದೊಂದು ಹುದ್ದೆಗಳಲ್ಲಿ ಎಲ್ಲವೂ ಭರ್ತಿ ಯಾಗಿದೆ. ಕಚೇರಿ ಅಧೀಕ್ಷಕರು ಹಾಗೂ ಹಿರಿಯ ಪ್ರಯೋಗಶಾಲಾ ತಂತ್ರಜ್ಞ, ಹಿರಿಯ ಫಾರ್ಮಸಿಸ್ಟ್, ನೇತ್ರಾಧಿಕಾರಿ ತಲಾ ಒಂದೊಂದು ಹುದ್ದೆಗಳಲ್ಲಿ ನಾಲ್ಕು ಕೂಡಾ ಖಾಲಿ ಇವೆ.
ಆಸ್ಪತ್ರೆಗೆ ಮಂಜೂರಾಗಿರುವ 20 ಶುಶ್ರೂಷಕರ ಹುದ್ದೆಗಳಲ್ಲಿ ಎಲ್ಲವೂ ಭರ್ತಿ ಇದೆ. ಕಿರಿಯ ಪ್ರಯೋಗಶಾಲಾ ತಂತ್ರಜ್ಞ ಒಂದು ಹುದ್ದೆ ಭರ್ತಿ ಇದೆ. ಕಿರಿಯ ಫಾರ್ಮಸಿಸ್ಟ್, ಪ್ರಥಮದರ್ಜೆ ಸಹಾ ಯಕ, ದ್ವಿತೀಯದರ್ಜೆ ಸಹಾಯಕ ತಲಾ ಎರ ಡೆರಡು ಹುದ್ದೆಗಳಲ್ಲಿ ಎಲ್ಲವೂ ಖಾಲಿ ಇವೆ. ಎಕ್ಸ್‌ರೇ ತಂತ್ರಜ್ಞರು, ವಾಹನ ಚಾಲಕರ ತಲಾ ಎರಡೆರಡು ಹುದ್ದೆಗಳಲ್ಲಿ ಒಂದೊಂದು ಮಾತ್ರ ಭರ್ತಿಯಾಗಿದೆ.
ಕ್ಲರ್ಕ್ ಕಂ ಟೈಪಿಸ್ಟ್ ಹಾಗೂ ಅಡುಗೆಯವರ ತಲಾ ಒಂದೊಂದು ಹುದ್ದೆಗಳಲ್ಲಿ ಎರಡೂ ಖಾಲಿ ಇವೆ. ಗ್ರೂಪ್ “ಡಿ’ 32 ಹುದ್ದೆಗಳಲ್ಲಿ ಬರೋಬ್ಬರಿ 30 ಖಾಲಿಯಿದ್ದು, ಇದರ ಒತ್ತಡ ನಿರ್ವಹಣೆಗೆ 15 ಮಂದಿ ಹೊರಗುತ್ತಿಗೆಯ ಆಧಾರದಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ.
ಹುದ್ದೆಗಳು ಭರ್ತಿಯಾಗಲಿ
ಆಸ್ಪತ್ರೆಗೆ ಮಂಜೂರಾಗಿರುವ ಒಟ್ಟು 82 ಹುದ್ದೆಗಳಲ್ಲಿ ಹಾಲಿ 35 ಮಂದಿ ಕಾರ್ಯ ನಿರ್ವಹಿಸುತ್ತಿದ್ದು, 47 ಹುದ್ದೆಗಳು ಖಾಲಿ ಇವೆ. ಆಸ್ಪತ್ರೆಯ ಮುಖ್ಯ ವೈದ್ಯಾಧಿಕಾರಿ ವರದಿ ಪ್ರಕಾರ ಆಸ್ಪತ್ರೆಯಲ್ಲಿ ಮಾಸಿಕ 17 ಸಾವಿರ ಹೊರರೋಗಿಗಳು, 1 ಸಾವಿರ ಒಳರೋಗಿಗಳು ಸೇವೆ ಪಡೆದುಕೊಳ್ಳುತ್ತಿ ದ್ದಾರೆ. ಇನ್ನಷ್ಟು ಸೇವೆ ಲಭಿಸಲು ಖಾಲಿ ಹುದ್ದೆಗಳ ಭರ್ತಿಗೆ ಕ್ರಮ ಜರಗಿಸಬೇಕಿದೆ.
ಸಿಬಂದಿ ಭರ್ತಿ ಜತೆಗೆ ಸೌಲಭ್ಯಕ್ಕೆ ಕ್ರಮ
ಪ್ರಸ್ತುತ ಬಂಟ್ವಾಳ ಸರಕಾರಿ ಆಸ್ಪತ್ರೆಯಲ್ಲಿ ಗುಣಮಟ್ಟದ ಸೇವೆ ಲಭ್ಯವಾಗುತ್ತಿದ್ದು, ವೈದ್ಯರು, ಸಿಬಂದಿಯ ಭರ್ತಿಗೆ ಜಿಲ್ಲಾ ಉಸ್ತುವಾರಿ ಸಚಿವರ ಮೂಲಕ ಸರಕಾರಕ್ಕೆ ಮನವಿ ಮಾಡಲಾಗಿದೆ. ಶೀಘ್ರದಲ್ಲಿ ಸಿಬಂದಿ ಭರ್ತಿಯ ಜತೆಗೆ ಇತರ ಸೌಲಭ್ಯಗಳನ್ನೂ ಒದಗಿಸುವ ಕುರಿತು ಕ್ರಮ ಕೈಗೊಳ್ಳಲಾಗುವುದು.
- ರಾಜೇಶ್ ನಾೖಕ್ ಉಳಿಪ್ಪಾಡಿಗುತ್ತು, ಶಾಸಕರು
- ಕಿರಣ್ ಸರಪಾಡಿ
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.