ಜನ ಸಹಭಾಗಿತ್ವದಿಂದ ಅಭಿವೃದ್ಧಿ
ಉಜಿರೆ: 1.10 ಕೋ.ರೂ.ನ ವಿವಿಧ ಕಾಮಗಾರಿ ಉದ್ಘಾಟಿಸಿ ಶಾಸಕ ಹರೀಶ್ ಪೂಂಜ
Team Udayavani, Apr 27, 2022, 9:59 AM IST
ಬೆಳ್ತಂಗಡಿ: ಸರಕಾರದ ಅನುದಾನಗಳು ಒಂದು ಯೋಜನೆಯಾಗಿ ಆಯಾ ಊರಿನ ಅಗತ್ಯಗಳನ್ನು ಪೂರೈಸಬಹುದು. ಆದರೆ ಗ್ರಾಮದ ಕಲ್ಪನೆ ಮೊಳಗುವುದು ಸ್ಥಳೀಯ ಆರ್ಥಿಕತೆ ಹಾಗೂ ಜನ ಸಹಭಾಗಿತ್ವದ ಮೇಲಿನ ನಿರ್ಧಾರಗಳಿಂದಾಗಿದೆ. ಈ ನಿಟ್ಟಿನಲ್ಲಿ ಉಜಿರೆ ಗ್ರಾ.ಪಂ. ರಾಜ್ಯಕ್ಕೆ ಮಾದರಿ ಗ್ರಾಮವಾಗಿ ಗುರುತಿಸಿಕೊಳ್ಳುತ್ತದೆ ಎಂದು ಶಾಸಕ ಹರೀಶ್ ಪೂಂಜ ಹೇಳಿದರು.
ದ.ಕ. ಜಿ.ಪಂ. ಮಂಗಳೂರು, ತಾ.ಪಂ. ಬೆಳ್ತಂಗಡಿ, ಸಾರ್ವಜನಿಕ ಗ್ರಂಥಾಲಯ ಇಲಾಖೆ ಮಂಗಳೂರು, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಬೆಳ್ತಂಗಡಿ, ಗ್ರಾ.ಪಂ. ಉಜಿರೆ, ಪ್ರೇರಣಾ ಮಹಿಳಾ ಸಂಜೀವಿನಿ ಒಕ್ಕೂಟ ಉಜಿರೆ ಸಹ ಭಾಗಿತ್ವದಲ್ಲಿ ಉಜಿರೆ ಗ್ರಾ.ಪಂ. ವಠಾರದಲ್ಲಿ ಒಟ್ಟು 1.10 ಕೋ.ರೂ. ವೆಚ್ಚದಲ್ಲಿ ವಿವಿಧ ಕಾಮಗಾರಿ ಉದ್ಘಾಟಿಸಿ ಅವರು ಮಾತನಾಡಿದರು.
8 ಕೋ.ರೂ. ಅನುದಾನ
ಅತೀ ದೊಡ್ಡ ಗ್ರಾ.ಪಂ. ಆಗಿರುವ ಉಜಿರೆಗೆ ಪ್ರಧಾನಮಂತ್ರಿ ಜಲಜೀವನ್ ಯೋಜನೆಯಡಿ 8 ಕೋ.ರೂ. ಅನುದಾನ ಇರಿಸಲಾಗಿದೆ. ಅತ್ತಾಜೆ ಕೆರೆಯನ್ನು 1.5 ಕೋಟಿ ರೂ.ವೆಚ್ಚದಲ್ಲಿ ಅಭಿವೃದ್ಧಿ ಪಡಿಸಿ ಸುಸಜ್ಜಿತ ಉದ್ಯಾನವನವನ್ನು ನಿರ್ಮಿಸಿ ಶೀಘ್ರ ಉದ್ಘಾಟಿಸಲಾಗುವುದು ಎಂದರು.
ಎಂ.ಎಲ್.ಸಿ.ಪ್ರತಾಪಸಿಂಹ ನಾಯಕ್ ಮಾತನಾಡಿ, ಕಳೆದ 7 ವರ್ಷಗಳಲ್ಲಿ ಕೇಂದ್ರ ಸರಕಾರವು ಹಲವು ಯೋಜನೆಗಳನ್ನು ಜನರ ಮನೆ ಬಾಗಿಲಿಗೆ ತಲುಪಿಸುವಲ್ಲಿ ಯಶಸ್ವಿಯಾಗಿದೆ ಎಂದರು.
ವಿಧಾನ ಪರಿಷತ್ ಸದಸ್ಯ ಹರೀಶ್ ಕುಮಾರ್ ಶುಭಹಾರೈಸಿದರು. ಗ್ರಾ.ಪಂ. ಅಧ್ಯಕ್ಷೆ ಪುಷ್ಪಾವತಿ ಆರ್. ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ತಹಶೀಲ್ದಾರ್ ಮಹೇಶ್ ಜೆ., ತಾ.ಪಂ. ಇಒ ಕುಸುಮಾಧರ ಬಿ., ಜಿಲ್ಲಾ ಮುಖ್ಯ ಗ್ರಂಥಪಾಲಕಿ ಗಾಯತ್ರಿ, ಸಹಾಯಕ ಕಾರ್ಯಪಾಲಕ ಅಭಿಯಂತ ಸೂರ್ಯ ನಾರಾಯಣ ಭಟ್, ಶಿಶು ಅಭಿವೃದ್ಧಿ ಯೋಜನಾಧಿಕಾರಿ ಪ್ರಿಯಾ ಆ್ಯಗ್ನೇಸ್, ಪ್ರೇರಣಾ ಮಹಿಳಾ ಒಕ್ಕೂಟದ ಅಧ್ಯಕ್ಷೆ ಶೀಲಾವತಿ, ಉಜಿರೆ ವರ್ತಕರ ಸಂಘದ ಅಧ್ಯಕ್ಷ ಅರವಿಂದ ಕಾರಂತ, ಜಿ.ಪಂ. ಮಾಜಿ ಸದಸ್ಯ ಕೊರಗಪ್ಪ ನಾಯ್ಕ, ತಾ.ಪಂ. ಮಾಜಿ ಸದಸ್ಯ ಶಶಿಧರ ಕಲ್ಮಂಜ, ಉಜಿರೆ ಜನಾರ್ದನ ದೇವಸ್ಥಾನದ ಶರತ್‌ಕೃಷ್ಣ ಪಡುವೆಟ್ನಾಯ ಮತ್ತಿತರರು ಉಪಸ್ಥಿತರಿದ್ದರು.
ಉಪಾಧ್ಯಕ್ಷ ರವಿ ಬರೆಮೇಲು ಸ್ವಾಗತಿಸಿದರು. ತಾ.ಪಂ. ಸಂಯೋಜಕ ಜಯಾನಂದ ಲಾೖಲ ಕಾರ್ಯಕ್ರಮ ನಿರೂಪಿಸಿದರು. ಪಿಡಿಒ ಪ್ರಕಾಶ್ ಶೆಟ್ಟಿ ನೊಚ್ಚ ಪ್ರಾಸ್ತಾವಿಕವಾಗಿ ಮಾತನಾಡಿದರು. ಅಭಿವೃದ್ಧಿ ಕಾಮಗಾರಿಗಳಿಗೆ ನೆರವು ನೀಡಿದ ದಾನಿಗಳನ್ನು ಸಮ್ಮಾನಿಸಲಾಯಿತು.
ಉದ್ಘಾಟನೆಗೊಂಡ ಕಾಮಗಾರಿಗಳು/ನೆರವು
ಉಜಿರೆಯಲ್ಲಿ ಡಿಜಿಟಲೀಕರಣ ಗೊಂಡ ನೂತನ ಗ್ರಂಥಾಲಯ ಮತ್ತು ಮಾಹಿತಿ ಕೇಂದ್ರ, ಗ್ರಾಮೀಣ ಹಳ್ಳಿ ಸಂತೆ ಪ್ರಾಂಗಣ, ಅಮೃತ ಉದ್ಯಾನವನ, ಮೀನು ಮಾರುಕಟ್ಟೆ ಕಟ್ಟಡ, ಮಾಪಲ ಹಾಗೂ ದೊಂಪದಪಲ್ಕೆ ಅಂಗನವಾಡಿ ಕಟ್ಟಡ, ಶಿವಾಜಿನಗರ ಕ್ರಾಸ್‌ನ ಹೈಮಾಸ್ಟ್ ಸೋಲಾರ್ ದೀಪ, ಆಧಾರ್ ಕೇಂದ್ರ, ಉಜಿರೆ ಬಸ್ ನಿಲ್ದಾಣ ಬಳಿಯ ವಾಣಿಜ್ಯ ಸಂಕೀರ್ಣ ಸೇರಿ ಒಟ್ಟು 1 ಕೋಟಿ 10 ಲಕ್ಷ ರೂ. ಮೊತ್ತದ ಕಾಮಗಾರಿ ಉದ್ಘಾಟನೆಗೊಂಡಿತು. ಉಜಿರೆ ವ್ಯಾಪ್ತಿಯ 20 ಮಂದಿ ಅಂಗವಿಕಲರಿಗೆ ಸಹಾಯಧನ ಮತ್ತು ಸಲಕರಣೆ ವಿತರಿಸಲಾಯಿತು.
ನವೆಂಬರ್‌ನಲ್ಲಿ ಚಾರ್ಮಾಡಿ ದ್ವಿಪಥ ರಸ್ತೆ ಕಾಮಗಾರಿ
ಟ್ರಾಫಿಕ್ ಸಮಸ್ಯೆ ನಿವಾರಣೆಗೊಳಿಸಲು 718 ಕೋಟಿ ರೂ. ವೆಚ್ಚದಲ್ಲಿ ಪುಂಜಾಲಕಟ್ಟೆ- ಚಾರ್ಮಾಡಿ ದ್ವಿಪಥ ರಸ್ತೆಗೆ ನವೆಂಬರ್ ತಿಂಗಳಲ್ಲಿ ಕಾಮಗಾರಿ ಆರಂಭವಾಗಲಿದೆ. ಕಾಶಿಬೆಟ್ಟು-ಅರಳಿ ರಸ್ತೆಗೆ 6 ಕೋಟಿ ರೂ. ವೆಚ್ಚದಲ್ಲಿ ಅಭಿವೃದ್ಧಿ ಕಾಮಗಾರಿಗೆ ಯೋಜನೆ ರೂಪಿಸಲಾಗಿದೆ. ಉಜಿರೆ- ಪೆರ್ಲ ರಸ್ತೆ ಅಭಿವೃದ್ಧಿಗೆ 2.5 ಕೋಟಿ ರೂ. ಅನುದಾನವಿರಿಸಿದ್ದು ತಿಂಗಳೊಳಗೆ ಕಾಮಗಾರಿ ಆರಂಭಿಸಲಾಗುವುದು. ಉಜಿರೆಗೆ ಸುಸಜ್ಜಿತ ಬಸ್ ನಿಲ್ದಾಣ ನಿರ್ಮಿಸುವ ಯೋಜನೆ ರೂಪಿಸಲಾಗಿದೆ ಎಂದು ಹರೀಶ್ ಪೂಂಜ ತಿಳಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Priyanka Upendra: ಬ್ಯೂಟಿಫುಲ್ ಲೈಫ್ ನಲ್ಲಿ ಪ್ರಿಯಾಂಕಾ
Shimoga; ಕಾಂಗ್ರೆಸ್-ಮುಸ್ಲಿಮರ ವಿರುದ್ದ ಹೇಳಿಕೆ: ಈಶ್ವರಪ್ಪ ವಿರುದ್ದ ಸುಮೋಟೋ ಪ್ರಕರಣ
Bantwala: ಶಾಲಾ ವಾಹನ ಡಿಕ್ಕಿಯಾಗಿ ಗಂಭೀರ ಗಾಯಗೊಂಡಿದ್ದ ಸ್ಕೂಟರ್ ಸವಾರ ಮೃತ್ಯು
Manipal: ನಿತ್ಯ ಅಪಘಾತ ತಾಣವಾದ ಈಶ್ವರ ನಗರ-ಪರ್ಕಳ ರಸ್ತೆ
Siruguppa: ಬೈಕ್ ಮತ್ತು ಅಪರಿಚಿತ ವಾಹನದ ಮಧ್ಯೆ ಭೀಕರ ಅಪಘಾತ; ಇಬ್ಬರ ಸಾವು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.