ನಿರೀಕ್ಷೆಯಂತೆ ಅಭಿವೃದ್ಧಿ ಕಾರ್ಯ ನಡೆಯಲಿದೆ: ಡಿವಿ ಸದಾನಂದ ಗೌಡ
Team Udayavani, Jul 9, 2018, 1:12 PM IST
ನಗರ: ಈ ಬಾರಿಯ ವಿಧಾನಸಭಾ ಚುನಾವಣೆಯನ್ನು ಸವಾಲಾಗಿ ತೆಗೆದುಕೊಂಡ ಹಿನ್ನಲೆಯಲ್ಲಿ ಜಯ ಗಳಿಸಲು ಸಾಧ್ಯವಾಗಿದೆ. ನಿರೀಕ್ಷೆಗಿಂತ ಮೀರಿ ಮತದಾರರ ಓಲೈಕೆ ಆಗಿದ್ದು, ನಿರೀಕ್ಷೆಗೆ ತಕ್ಕಂತೆ ಅಭಿವೃದ್ಧಿ ಕೆಲಸಗಳನ್ನು ಮಾಡಲಾಗುವುದು ಎಂದು ಕೇಂದ್ರ ಸಾಂಖ್ಯಿಕ ಮತ್ತು ಯೋಜನಾ ಅನುಷ್ಠಾನ ಸಚಿವ ಡಿ.ವಿ. ಸದಾನಂದ ಗೌಡ ಹೇಳಿದರು.
ಮುಂದಿನ ಲೋಕಸಭೆ ಮತ್ತು ನಗರಸಭೆ ಚುನಾವಣೆ ಹಿನ್ನಲೆಯಲ್ಲಿ ಇಲ್ಲಿಯ ಮುಳಿಯ ನಿಸರ್ಗ ನಿಲಯದಲ್ಲಿ ರವಿವಾರ ನಡೆದ ಸೌಹಾರ್ದ ಕೂಟ ಕಾರ್ಯಕ್ರಮದಲ್ಲಿ ಮಾತನಾಡಿದರು. ಯಾವುದೇ ವಿಚಾರದಲ್ಲಾದರೂ ಆತ್ಮವಿಶ್ವಾಸ ಇರಬೇಕು. ಆದರೆ ಅತಿ ಆತ್ಮವಿಶ್ವಾಸ ಇರಬಾರದು. ಇದಕ್ಕೆ ಹಿನ್ನೆಲೆ ಎಂಬಂತೆ ಕಾಂಗ್ರೆಸ್‌ನ ಅನಾಚಾರ, ಹಿಂದುತ್ವದ ಮೇಲಿದ್ದ ಭಾವನೆ ಮುಳ್ಳಾಗಿವೆ. ಸಾಮೂಹಿಕ ಜನರ ಭಾವನೆಗೆ ಸ್ಪಂದಿಸುವಂತಿದ್ದ ಬಿಜೆಪಿಗರಿಗೆ ಈ ಬಾರಿಯ ಚುನಾವಣೆ ಫಲಿತಾಂಶ ನೀಡಿದೆ ಎಂದರು.
ನಗರಸಭೆ ಚುಕ್ಕಾಣಿ
ಪುತ್ತೂರು ನಗರಸಭೆ ಚುನಾವಣೆ ಹಿನ್ನೆಲೆಯಲ್ಲಿ ಪಕ್ಷದ ಮುಖಂಡರು, ಕಾರ್ಯಕರ್ತರು ಹೊಂದಾಣಿಕೆಯಿಂದ ವಿಧಾನಸಭೆ ಚುನಾವಣೆ ರೀತಿಯಲ್ಲಿ ಪ್ರಯತ್ನಿಸಬೇಕಾದ ಅಗತ್ಯವಿದೆ. ಈ ಬಾರಿ ನಗರಸಭೆ ಚುಕ್ಕಾಣಿಯನ್ನು ಬಿಜೆಪಿ ಬಗಲಿಗೆ ಹಾಕಿಕೊಳ್ಳಬೇಕಾದ ಅನಿವಾರ್ಯತೆ ಇದ್ದು, ಈ ನಿಟ್ಟಿನಲ್ಲಿ ಪ್ರಯತ್ನಗಳು ಸಾಗಬೇಕು ಎಂದರು.
ಶಾಸಕ ಸಂಜೀವ ಮಠಂದೂರು, ಬಿಜೆಪಿ ತಾಲೂಕು ಮಂಡಲ ಅಧ್ಯಕ್ಷ ಚನಿಲ ತಿಮ್ಮಪ್ಪ ಶೆಟ್ಟಿ, ನಗರ ಮಂಡಲ ಅಧ್ಯಕ್ಷ ಜೀವಂಧರ್ ಜೈನ್, ಜಿ.ಪಂ. ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು, ಬಿಜೆಪಿ ಮುಖಂಡ ಅಪ್ಪಯ್ಯ ಮಣಿಯಾಣಿ, ಮುಳಿಯ ಜುವೆಲರ್ನ ಮುಳಿಯ ಶ್ಯಾಮ್ ಭಟ್, ತಾ.ಪಂ. ಸದಸ್ಯರಾದ ಸಾಜ ರಾಧಾಕೃಷ್ಣ ಆಳ್ವ, ಶಿವರಂಜನ್, ನಗರಸಭೆ ಉಪಾಧ್ಯಕ್ಷ ವಿಶ್ವನಾಥ ಗೌಡ, ಸದಸ್ಯರಾದ ಚಂದ್ರಸಿಂಗ್, ವಿನಯ ಭಂಡಾರಿ, ನಿಸರ್ಗ ಮನೆಯ ಕೃಷ್ಣನಾರಾಯಣ ಮುಳಿಯ, ಕೇಶವಪ್ರಸಾದ್ ಮುಳಿಯ, ಸುಲೋಚನಾ ಶ್ಯಾಮ್ ಭಟ್ ಉಪಸ್ಥಿತರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Contracter Case: ನಿಷ್ಪಕ್ಷ ತನಿಖೆಗೆ ಸಚಿವರು, ಸಿಎಂ ರಾಜೀನಾಮೆ ನೀಡಲಿ: ಗೋವಿಂದ ಕಾರಜೋಳ
Madikeri; ಜಾತ್ರೋತ್ಸವದ ವೇಳೆ ಗುಂಪು ಸಂಘರ್ಷ: ಕಟ್ಟೆಮಾಡು ಗ್ರಾಮದಲ್ಲಿ ನಿಷೇಧಾಜ್ಞೆ
Udupi: ಗೀತಾರ್ಥ ಚಿಂತನೆ-140: ಮಕ್ಕಳಲ್ಲಿ “ಇಗೋ’ ಏರಿಕೆ, ಪಾಲಕರಲ್ಲಿ ಗೌರವ ಇಳಿಕೆ
Kasaragod; ಬಸ್-ಕಾರು ಢಿಕ್ಕಿ: ಇಬ್ಬರ ಸಾವು
South Korea Plane Crash: ಛಿದ್ರಗೊಂಡ ದೇಹಗಳು, ಕೊನೇ ಸಂದೇಶ…
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.