![Kuruburu-Shanta](https://www.udayavani.com/wp-content/uploads/2025/02/Kuruburu-Shanta-415x249.jpg)
![Kuruburu-Shanta](https://www.udayavani.com/wp-content/uploads/2025/02/Kuruburu-Shanta-415x249.jpg)
Team Udayavani, May 29, 2023, 6:40 AM IST
ಸುಬ್ರಹ್ಮಣ್ಯ/ಧರ್ಮಸ್ಥಳ, ಕೊಲ್ಲೂರು: ವಾರದ ರಜೆ, ಶಾಲಾಂರಂಭದ ರಜೆ ಹಿನ್ನೆಲೆಯಲ್ಲಿ ರವಿವಾರ ಕರಾವಳಿಯ ಪ್ರಮುಖ ದೇವಸ್ಥಾನಗಳಲ್ಲಿ ಭಕ್ತರ ದಂಡೇ ಹರಿದು ಬಂದಿದೆ. ದ.ಕ. ಜಿಲ್ಲೆಯ ಕುಕ್ಕೆ ಸುಬ್ರಹ್ಮಣ್ಯ, ಶ್ರೀಕ್ಷೇತ್ರ ಧರ್ಮಸ್ಥಳ, ಸೌತಡ್ಕ ಶ್ರೀ ಮಹಾಗಣಪತಿ, ಕಟೀಲು ದುರ್ಗಾಪರಮೇಶ್ವರೀ, ಉಡುಪಿ ಜಿಲ್ಲೆಯ ಶ್ರೀ ಕೃಷ್ಣಮಠ, ಆನೆಗುಡ್ಡೆ ಶ್ರೀ ವಿನಾಯಕ, ಕೊಲ್ಲೂರು ಶ್ರೀ ಮುಕಾಂಬಿಕಾ ದೇಗುಲ ಸಹಿತ ಪ್ರಮುಖ ದೇಗುಲಗಳಿಗೆ ಭಕ್ತರು ಭೇಟಿ ನೀಡಿ ಶ್ರೀ ದೇವರ ದರುಶನ ಪಡೆದರಲ್ಲದೇ ಭೋಜನ ಪ್ರಸಾದವನ್ನು ಸ್ವೀಕರಿಸಿದರು.
ಧರ್ಮಸ್ಥಳ ಶ್ರೀ ಮಂಜುನಾಥ ಸ್ವಾಮಿ ಮತ್ತು ಕುಕ್ಕೆ ಶ್ರೀ ಸುಬ್ರಹ್ಮಣ್ಯ ಕ್ಷೇತ್ರದಲ್ಲಿ ರವಿವಾರ ಭಕ್ತರ ಸಂಖ್ಯೆ ಹೆಚ್ಚಾಗಿ ಕಂಡುಬಂದಿದೆ. ಸುಡು ಬಿಸಿಲನ್ನು ಲೆಕ್ಕಿಸದೆ ಭಕ್ತರು ಆಗಮಿಸಿ ಶ್ರೀ ದೇವರ ದರ್ಶನ ಪಡೆದರು. ಅನ್ನ ಪ್ರಸಾದ ಸ್ವೀಕರಿಸಲು ಆದಿ ಸುಬ್ರಹ್ಮಣ್ಯದಲ್ಲೂ ಭೋಜನ ಪ್ರಸಾದ ವಿತರಣೆ ವ್ಯವಸ್ಥೆ ಮಾಡಲಾಗಿತ್ತು.
ಧರ್ಮಸ್ಥಳ ಮತ್ತು ಸುಬ್ರಹ್ಮಣ್ಯ ಪೇಟೆಯಲ್ಲಿ ವಾಹನಗಳ ಓಡಾಟವೂ ಅಧಿಕವಾಗಿತ್ತು. ರಥ ಬೀದಿ, ಹೊರಾಂಗಣ ಭಕ್ತರಿಂದ ತುಂಬಿತ್ತು. ವಾಹನ ಪಾರ್ಕಿಂಗ್ ಪ್ರದೇಶವೂ ವಾಹನಗಿಂದ ಭರ್ತಿಯಾಗಿತ್ತು.
ಉಡುಪಿ ಜಿಲ್ಲೆಯ ಶ್ರೀಕೃಷ್ಣಮಠ, ಆನೆಗುಡ್ಡೆಯ ವಿನಾಯಕ ದೇಗುಲ, ಕೊಲ್ಲೂರಿನ ಶ್ರೀ ಮುಕಾಂಬಿಕಾ ದೇಗುಲ ಸಹಿತ ಪ್ರಮುಖ ದೇವಾಲಯಗಳಿಗೆ ಭಾರೀ ಸಂಖ್ಯೆಯ ಭಕ್ತರು ಭೇಟಿ ನೀಡಿ ಶ್ರೀ ದೇವರ ದರುಶನ, ಪ್ರಸಾದ ಸ್ವೀಕರಿಸಿದರು.
ಬೀಚ್‌ಗಳಲ್ಲೂ ಭಾರೀ ಜನ
ಮಂಗಳೂರಿನ ಉಳ್ಳಾಲ, ಪಣಂಬೂರು, ಮಲ್ಪೆ, ತ್ರಾಸಿ ಮರವಂತೆ ಬೀಚ್‌ಗೆ ರವಿವಾರ ಭಾರೀ ಸಂಖ್ಯೆಯ ಪ್ರವಾಸಿಗರು ಭೇಟಿ ನೀಡಿ ರಜೆಯ ಖುಷಿಯನ್ನು ಸಂಭ್ರಮಿಸಿದರು. ಬೇಸಗೆ ರಜೆ ಮುಕ್ತಾಯದ ಹಿನ್ನೆಲೆಯಲ್ಲಿ ಕರಾವಳಿಯ ಪ್ರಮುಖ ಪ್ರವಾಸಿ ತಾಣಗಳಿಗೆ ಪ್ರವಾಸಿಗರು ಭೇಟಿ ನೀಡಿದ್ದಾರೆ.
Udayavani-MIC ನಮ್ಮ ಸಂತೆ ಸಂಭ್ರಮ: ಜೇನುಗೂಡು, ಜೇನು ಹನಿ
Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್
Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?
Bharamasagara: ವಿದ್ಯುತ್ ಕಿಡಿಗೆ ಎರಡು ಮೇವಿನ ಬಣವೆ ಸಂಪೂರ್ಣ ಭಸ್ಮ
Udayavani-MIC ನಮ್ಮ ಸಂತೆ: ತೆಂಗಿನ ಗರಟೆಯಲ್ಲಿ ಅರಳಿದ ಕಲಾಕೃತಿ
You seem to have an Ad Blocker on.
To continue reading, please turn it off or whitelist Udayavani.