ಧರ್ಮಸ್ಥಳ : ಹೊಸಕಟ್ಟೆ ಉತ್ಸವ ಸಂಪನ್ನ
Team Udayavani, Nov 24, 2019, 1:16 AM IST
ಬೆಳ್ತಂಗಡಿ: ಧರ್ಮಸ್ಥಳ ಲಕ್ಷದೀಪೋತ್ಸವದ ಮೊದಲ ದಿನವಾದ ಶುಕ್ರವಾರ ರಾತ್ರಿ ಹೊಸಕಟ್ಟೆ ಉತ್ಸವವು ಧರ್ಮಾಧಿಕಾರಿ ಡಾ| ಡಿ. ವೀರೇಂದ್ರ ಹೆಗ್ಗಡೆ ಅವರ ನೇತೃತ್ವದಲ್ಲಿ ವಿವಿಧ ಪೂಜಾ ವಿಧಿವಿಧಾನದೊಂದಿಗೆ ನಡೆಯಿತು.
ಶ್ರೀ ಮಂಜುನಾಥ ಸ್ವಾಮಿಗೆ ವಿಶೇಷ ಪೂಜೆಗಳು, ನೈವೇದ್ಯ ಸಮರ್ಪಣೆ ಸೇರಿದಂತೆ ವಿವಿಧ ಸೇವೆ ಸಲ್ಲಿಸಿ ದೇವರ ಗುಡಿಯೊಳಗೆ ಪಲ್ಲಕ್ಕಿಯನ್ನು ಹೊತ್ತು 16 ಸುತ್ತು ಬಂದ ಬಳಿಕ ಲಾಲಾಕ್ಕಿ ಪಲ್ಲಕ್ಕಿಯಲ್ಲಿ ಸ್ವಾಮಿಯ ಮೂರ್ತಿಯನ್ನು ಕೂರಿಸಿ ಮೆರವಣಿಗೆಯೊಂದಿಗೆ ವಸಂತ ಮಹಲ್‌ನ ಹೊಸಕಟ್ಟೆಗೆ ಕೊಂಡೊಯ್ಯಲಾಯಿತು.
ಹೊಸಕಟ್ಟೆಯಲ್ಲಿ ಅಷ್ಟಾವಧಾನ ಸೇವೆಯೊಂದಿಗೆ ಪೂಜೆ ನೆರವೇರಿತು. ಬಳಿಕ ಮೆರವಣಿಗೆಯಲ್ಲಿ ದೇಗುಲದ ಆನೆ ಸ್ವಾಮಿಗೆ ಚಾಮರ ಬೀಸಿತು. ಉತ್ಸವದಲ್ಲಿ ಸ್ವಾಮಿಗೆ ಸಂಗೀತ ಸೇವೆ, ವಾಲಗ, ಕೊಳಲು, ಚೆಂಡೆ, ಶಂಖ ಸೇವೆ, ಗೊಂಬೆಗಳು ಮೆರುಗನ್ನು ನೀಡುವುದರೊಂದಿಗೆ ದೇವಸ್ಥಾನದ ಮುಂಭಾಗಕ್ಕೆ ಕರೆತರಲಾಯಿತು. ಸಾವಿರಾರು ಭಕ್ತರು ನೆರೆದಿದ್ದರು.
ಹೊಸಕಟ್ಟೆ ಉತ್ಸವದಂದು ಭಕ್ತರ ಹರಕೆಯಂತೆ ಬೆಳ್ಳಿ ರಥ ಎಳೆಯುವುದು ವಿಶೇಷವಾಗಿತ್ತು. ಬಳಿಕ ದೇವರ ಮೂರ್ತಿಗೆ ಕೊನೆಯ ಮಂಗಳಾರತಿ ಬೆಳಗಿ ದೇಗುಲದೊಳಗೆ ಕೊಂಡೊಯ್ಯಲಾಯಿತು.
ಉತ್ಸವದ ಸಂದರ್ಭದಲ್ಲಿ ದೇಗುಲದಿಂದ ವಸಂತ ಮಹಲ್‌ನವರೆಗೆ ಭಕ್ತರು ತಮ್ಮ ಇಷ್ಟಾರ್ಥ ನೆರವೇರಿಕೆಗಾಗಿ ಹಣತೆಗಳನ್ನು ಬೆಳಗಿದರು.
ಇಂದು ಲಲಿತಕಲಾಗೋಷ್ಠಿ
ನ. 24ರಂದು ಸಂಜೆ 3ರಿಂದ ಅಮೃತವರ್ಷಿಣಿ ಸಭಾಭವನದಲ್ಲಿ ಲಲಿತಕಲಾ ಗೋಷ್ಠಿ, ಸಂಜೆ 5.30ರಿಂದ ನೃತ್ಯ ಕಾರ್ಯಕ್ರಮ, ಸಂಜೆ 7ರಿಂದ ಸಂಗೀತ ಮೇಳ, ರಾತ್ರಿ 8.30ರಿಂದ ನೃತ್ಯ ವೈವಿಧ್ಯ ರಂಜಿಸಲಿದೆ.
ವಸ್ತುಪ್ರದರ್ಶನ ಮಂಟಪದಲ್ಲಿ ಸಂಜೆ 6ರಿಂದ ಸಾಂಸ್ಕೃತಿಕ ಕಾರ್ಯಕ್ರಮ, 7ರಿಂದ ಮಾತನಾಡುವ ಗೊಂಬೆ ಹಾಗೂ ಜಾದೂ, 8.30ರಿಂದ ಭರತನಾಟ್ಯ, ರಾತ್ರಿ 9ರಿಂದ ಲಲಿತೋದ್ಯಾನ ಉತ್ಸವ ನೆರವೇರಲಿದೆ.
ವೈಭವದ ಕೆರೆ ಕಟ್ಟೆ ಉತ್ಸವ
ಲಕ್ಷದೀಪೋತ್ಸವ ಪ್ರಯುಕ್ತ ಶನಿವಾರ ಶ್ರೀ ಮಂಜುನಾಥ ಸ್ವಾಮಿ ಸನ್ನಿಧಿಯಲ್ಲಿ ಕೆರೆಕಟ್ಟೆ ಉತ್ಸವ ವಿಜೃಂಭಣೆಯಿಂದ ನೆರವೇರಿತು. ದೇಗುಲದಲ್ಲಿ ರಾತ್ರಿ 9ಗಂಟೆಗೆ ನಿತ್ಯ ಪೂಜಾ ಕೈಂಕರ್ಯ ನಡೆಯಿತು.
ಬಳಿಕ ದೇಗುಲದ ಪ್ರಧಾನ ಅರ್ಚಕರು ಸ್ವಾಮಿಯನ್ನು ಹೊತ್ತು ದೇವರ ಗುಡಿಯೊಳಗೆ 16 ಸುತ್ತು ಪ್ರದಕ್ಷಿಣೆ ಬಂದರು, ಅನಂತರ ದೇವಸ್ಥಾನದ ಮುಂಭಾಗವಿರುವ ಕೆರೆಯ ಬಳಿ ಇರುವ ದೇವರ ಕಟ್ಟೆಯಲ್ಲಿ ಇರಿಸಿ ಧೂಪ ದೀಪ, ನೈವೇದ್ಯಗಳಿಂದ ಪೂಜಿಸಲಾಯಿತು.
ಸೇವೆಯ ರೂಪವಾಗಿ ಕೆರೆಕಟ್ಟೆಯಿಂದ ಬಳಿಕ ನಡೆದ ಉತ್ಸವಕ್ಕೆ ಸಂಗೀತ ಸೇವೆ, ವಾಲಗ, ಕೊಳಲು, ಚೆಂಡೆ, ಶಂಖ ಸೇವೆ, ಗೊಂಬೆಗಳು ಮೆರುಗನ್ನು ನೀಡಿದವು. ಶ್ರೀದೇವರನ್ನು ದೇಗುಲದ ಮುಂಭಾಗಕ್ಕೆ ಕರೆತಂದು ಬೆಳ್ಳಿ ರಥದ ಪಲ್ಲಕ್ಕಿಯಲ್ಲಿರಿಸಿ ಪ್ರದಕ್ಷಿಣೆ ನಡೆಸಿ ಒಳಕ್ಕೆ ಕರೆತರುವ ಮೂಲಕ ಕೆರೆಕಟ್ಟೆ ಉತ್ಸವ ಪೂರ್ಣಗೊಂಡಿತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.