ಧರ್ಮಸ್ಥಳ: ಭಜನ ತರಬೇತಿ ಕಮ್ಮಟ
ಯಕ್ಷಗಾನ ಶೈಲಿಯಲ್ಲಿ ಭಜನೆ ಹಾಡಿನ ಪ್ರಯೋಗ
Team Udayavani, Oct 2, 2021, 5:37 AM IST
ಬೆಳ್ತಂಗಡಿ: ಸಾಮಾಜಿಕ ಸಶಕ್ತೀಕರಣವಾಗಬೇಕಾದರೆ, ಧಾರ್ಮಿಕ ಚಿಂತನೆಗಳು ಬಹಳ ಅಮೂಲ್ಯವೆಂಬು ದನ್ನು ಅನೇಕ ದಾರ್ಶನಿಕರು ಸಾರಿದ್ದಾರೆ, ನಮ್ಮ ದೇಶದಲ್ಲಿ ವಿವಿಧ ರೂಪ ಗಳಲ್ಲಿ, ಭಗವಂತನ ಆರಾಧನೆ ಯನ್ನು ಮಾಡ ಲಾಗುತ್ತಿದೆ. ಆದರೆ, ಭಗವಂತನನ್ನು ಒಲಿಸಿ ಕೊಳ್ಳಲು ಅತ್ಯಂತ ಸರಳ ಹಾಗೂ ಸುಲಭದ ಮಾರ್ಗೋಪಾಯವೇ ಭಜನೆ. ಧಾರ್ಮಿಕ ಚಿಂತನೆ,ಭಜನ ಮಂಡಳಿ
ಭಜನ ಮಂಡಳಿಗಳು ಸಮಾಜದ ವಿಕಾಸದಲ್ಲಿ ಮಹತ್ತರವಾದ ಪಾತ್ರವನ್ನು ವಹಿಸುತ್ತಿದೆ. ಅವುಗಳಿಗೆ ಹೆಚ್ಚಿನ ಪ್ರಾಶಸ್ತ್ಯವನ್ನು ನೀಡಿ, ಧಾರ್ಮಿಕ ಶ್ರದ್ಧಾ ಕೇಂದ್ರಗಳ ಮುಖೇನ ಸಮಾಜದ ಮೂಲೆ ಮೂಲೆಗೂ ಭಜನೆಯ ಮಹತ್ವದ ಸಂದೇಶ ಸಾರಬೇಕೆಂಬ ಚಿಂತನೆಯೊಂದಿಗೆ ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿಗಳಾದ ಡಾ| ಡಿ.ವೀರೇಂದ್ರ ಹೆಗ್ಗಡೆ ಹಾಗೂ ಹೇಮಾವತಿ ವೀ.ಹೆಗ್ಗಡೆ ಅವರ ಮಾರ್ಗದರ್ಶನದಂತೆ ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಕಳೆದ 22 ವರ್ಷಗಳಿಂದ ಭಜನ ಕಮ್ಮಟವನ್ನು ಆಯೋಜಿಸುತ್ತಾ ಬರಲಾಗಿದೆ. ಪ್ರಸಕ್ತ 23ನೇ ವರ್ಷದ ಭಜನ ಕಮ್ಮಟಕ್ಕೆ ವಿದ್ಯುಕ್ತವಾಗಿ ಚಾಲನೆ ದೊರೆತಿದ್ದು, ಈಗಾಗಲೇ ಕೊರೊನಾ ನಿಯಮದಿಂದಾಗಿ ಆನ್‌ಲೈನ್ ಬುಕ್ಕಿಂಗ್ ಅವಕಾಶ ಕಲ್ಪಿಸಲಾಗಿತ್ತು.
ಭಜನ ಕಮ್ಮಟ ವಿಶೇಷತೆ
ಅ.7ರ ವರೆಗೆ 7ದಿನಗಳ ಕಾಲ ಭಜನ ತರಬೇತಿ ಕಮ್ಮಟ ನಡೆಯುತ್ತದೆ. ಈ ವರ್ಷ ವಿಶೇಷವಾಗಿ ಯಕ್ಷಗಾನ ಶೈಲಿಯಲ್ಲಿ ಭಜನ ಹಾಡುಗಳನ್ನು ತರುವಲ್ಲಿ ಒಂದು ಚಿಂತನೆ ನಡೆಸಲಾಗಿದೆ. ಜತೆಗೆ ಭಜನೆಯಲ್ಲಿ ವಿವಿಧ ಪರಿಕರಗಳ ಬಳಕೆ, ಭಕ್ತಿ ಭಾವಗಳ ಪ್ರಾಮುಖ್ಯತೆ, ಸಾಮೂಹಿಕ ಭಜನ ಪದ್ಧತಿ, ಯೋಗ ಧ್ಯಾನಗಳ ಮೂಲಕ ಭಗವಂತನ ಸ್ಮರಣೆ ಇತ್ಯಾದಿಗಳ ಅನುಭವ ನೀಡಲಾಗುತ್ತಿದೆ.
ನುರಿತ ಸಂಪನ್ಮೂಲ ವ್ಯಕ್ತಿಗಳಿಂದ ದಾಸ ಸಾಹಿತ್ಯಗಳು, ವಚನಗಳು, ಸಮಕಾಲೀನ ಹಾಡುಗಳು, ಭಕ್ತಿ ಗೀತೆಗಳ ತರಬೇತಿಗಳನ್ನು ನೀಡಲಾಗುತ್ತದೆ. ಮಹಿಳಾ -ಅಭ್ಯರ್ಥಿಗಳಿಗೆ ಸಂಪ್ರದಾಯ ಗೀತೆಗಳು, ಶೋಭಾನೆ ಹಾಡುಗಳು, ಪುರುಷ ಅಭ್ಯರ್ಥಿಗಳಿಗೆ ನೃತ್ಯ ಭಜನೆ, ಸಂಜೆಯ ಹೊತ್ತಿನಲ್ಲಿ ಶ್ರೀ ಕ್ಷೇತ್ರದ ಸುತ್ತ ಮುತ್ತ ನಗರ ಸಂಕೀರ್ತನೆಯಿಂದ ಭಕ್ತಿಯ ಅಲೆಯನ್ನು ಪಸರಿಸಲಾಗುತ್ತಿದೆ.
ಇದನ್ನೂ ಓದಿ:ವಿಜಯಲಕ್ಷ್ಮಿ ಕಷ್ಟಕ್ಕೆ ಸ್ಪಂದಿಸಿದ ಕನ್ನಡಿಗರು|’ನಾಗಮಂಡಲ’ ನಟಿಗೆ ಹರಿದು ಬಂತು ಸಹಾಯ ಧನ
ಆಯ್ದ ಭಜನ ತಂಡಗಳಿಂದ ಭಜನ ಪ್ರಾತ್ಯಕ್ಷಿಕೆಯನ್ನು ನಡೆಸಿ ಭಜನ ಆರಂಭ, ಹಾಡುಗಳ ಅನುಕ್ರಮಮಣಿಕೆ, ಭಜನ ಅಂತ್ಯ ಹೇಗಿರಬೇಕು ಎಂಬುದನ್ನು ತಿಳಿಸಲಾಗುತ್ತದೆ. ಅಲ್ಲದೆ ಒಂದು ತಾಸು ಅತ್ಯುತ್ತಮ ವಿಚಾರಧಾರೆಗಳ ಉಪನ್ಯಾಸ ಕಾರ್ಯಕ್ರಮ ನಡೆಯಲಿದೆ.
ಭಜನ ಕಮ್ಮಟದಲ್ಲಿ ಇದುವರೆಗೆ 2,059 ಮಂಡಳಿಯ 7,205 ಮಂದಿಗೆ ತರಬೇತಿ ನೀಡಲಾಗಿದೆ. ಭಜನ ಮಂಗಳ್ಳೋತ್ಸವದಲ್ಲಿ ನಾಡಿನ ಸುಮಾರು 6,837 ಮಂಡಳಿಯ 98,832 ಕ್ಕಿಂತಲೂ ಅಧಿಕ ಭಜಕರು ಭಾಗವಹಿಸಿದ್ದಾರೆ.
ಸಂಪನ್ಮೂಲ ವ್ಯಕ್ತಿಗಳು
ರಾಮಕೃಷ್ಣ ಕಾಟುಕುಕ್ಕೆ, ಉಪ್ಪು³ಂದ ರಾಜೇಶ್ ಪಡಿಯಾರ್, ಕಿಶೋರ್ ಪೆರ್ಲ, ಉಷಾ ಹೆಬ್ಟಾರ್, ಕಾವ್ಯಶ್ರೀ ಗುರುಪ್ರಸಾದ್ ಆಜೇರು, ಅನಸೂಯಾ ಪಾಠಕ್, ಮನೋರಮಾ ತೋಳ್ಪಡಿತ್ತಾಯ, ಮಂಗಲದಾಸ್ ಗುಲ್ವಾಡಿ, ಗಿರೀಶ್ ನಾಗೇಶ್ ಪ್ರಭು, ಎಂ.ನಾಗೇಶ್ ಶೆಣೈ, ರಮೇಶ್ ಕಲ್ಮಾಡಿ, ಶಂಕರ್ ಉಡುಪಿ, ಚೈತ್ರಾ ಭಾಗವ ಹಿಸುವರು. ಶ್ರೀ ಧಾಮ ಮಾಣಿಲದ ಶ್ರೀಮೋಹನದಾಸ ಪರಮಹಂಸ ಸ್ವಾಮೀಜಿ, ಶ್ರೀ ಕ್ಷೇ.ಧ.ಗ್ರಾ.ಯೋಜನೆ ಕಾರ್ಯನಿರ್ವಾಹಕ ನಿರ್ದೇ ಶಕ ಡಾ| ಎಲ್.ಎಚ್ ಮಂಜುನಾಥ್, ಉಜಿರೆ ಅಶೋಕ್ ಭಟ್, ಸುಬ್ರಹ್ಮಣ್ಯ ಪ್ರಸಾದ್ ಉಪನ್ಯಾಸ ನೀಡುವರು.
211 ಸದಸ್ಯರ ನೋಂದಣೆ
ವಿಶೇಷವಾಗಿ ಈ ವರ್ಷ ಆನ್‌ಲೈನ್ ನೋಂದಾವಣೆಯನ್ನು ಮೂಲಕ ಎರಡು ದಿನಗಳಲ್ಲಿ 150 ಮಂಡಳಿಯ 265 ಶಿಬಿರಾರ್ಥಿಗಳು ನೋಂದಣಿ ಮಾಡಿಕೊಂಡಿದ್ದಾರೆ. ಪ್ರಸ್ತುತ ಭಜನ ಕಮ್ಮಟಕ್ಕೆ 128 ಭಜನ ಮಂಡಳಿಯ 211 ಸದಸ್ಯರ ನೋಂದಾವಣೆ ಮಾಡಲಾಗಿದೆ. ಇದರಲ್ಲಿ 137 ಪುರುಷರು ಹಾಗೂ 75 ಮಹಿಳಾ ಶಿಬಿರಾರ್ಥಿಗಳು ಇದ್ದಾರೆ. ಭಜನ ಕಮ್ಮಟಕ್ಕೆ ಶಿಬಿರಾರ್ಥಿಗಳನ್ನು ಕೆವೈಸಿ ಆಧಾರವಾಗಿ ನೋಂದಾವಣಿ ಮಾಡಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Financial Status: 42,000 ಕೋಟಿ ರೂ. ಸಾಲದ ಸುಳಿಯಲ್ಲಿ ಎಸ್ಕಾಂಗಳು!
Flights: ಇನ್ಮುಂದೆ ವಿಮಾನಗಳಲ್ಲಿ 7 ಕೆ.ಜಿ. ಮೀರದ ಕೇವಲ 1 ಬ್ಯಾಗ್‌ಗಷ್ಟೇ ಅವಕಾಶ!
Derogatary Term: ಸಿ.ಟಿ.ರವಿ ಪ್ರಕರಣಗಳು ಸಿಐಡಿ ತನಿಖೆಗೆ
A.B.Vajapayee Birth Century: ಸರಳತೆಯ ಸಾಕಾರಮೂರ್ತಿ ನಮ್ಮ ವಾಜಪೇಯಿ
ಮೇಲ್ಮನೆಗೆ ನಾನೇ ಫೈನಲ್, ನನ್ನ ಹಕ್ಕುಚ್ಯುತಿ ಬಗ್ಗೆ ಕಾನೂನು ತಜ್ಞರ ಜತೆ ಸಮಾಲೋಚಿಸಿ ಕ್ರಮ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.