ಧರ್ಮಸ್ಥಳ: 281 ಶಿಬಿರಾರ್ಥಿಗಳಿಗೆ ಭಜನ ಕಲಿಕೆ ಪಾಠ
Team Udayavani, Sep 27, 2018, 12:36 PM IST
ಬೆಳ್ತಂಗಡಿ: ಶ್ರೀಕ್ಷೇತ್ರ ಧರ್ಮಸ್ಥಳದ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಭಜನ ಪರಿಷತ್ ವತಿಯಿಂದ ಧರ್ಮಾಧಿಕಾರಿ ಡಾ| ಡಿ. ವೀರೇಂದ್ರ ಹೆಗ್ಗಡೆ ಮಾರ್ಗದರ್ಶನದಲ್ಲಿ 20ನೇ ವರ್ಷದ ಭಜನ ತರಬೇತಿ ಕಮ್ಮಟವು ಸೆ. 23ಕ್ಕೆ ಆರಂಭಗೊಂಡು, ಅತ್ಯಂತ ಯಶಸ್ವಿಯಾಗಿ ನಡೆಯುತ್ತಿದೆ.
ಕಮ್ಮಟದಲ್ಲಿ ರಾಜ್ಯದ 157 ಭಜನ ಮಂಡಳಿಗಳ 281 ಸದಸ್ಯರು ಶಿಬಿರಾರ್ಥಿಗಳಾಗಿ ಪಾಲ್ಗೊಂಡಿದ್ದು, 186 ಪುರುಷರು ಹಾಗೂ 95 ಮಹಿಳಾ ಶಿಬಿರಾರ್ಥಿಗಳಿದ್ದಾರೆ. ಹೇಮಾವತಿ ವಿ. ಹೆಗ್ಗಡೆ, ಶ್ರೀ ಮೋಹನದಾಸ ಸ್ವಾಮೀಜಿ, ಡಿ. ಹರ್ಷೇನ್ದ್ರ ಕುಮಾರ್ ಅವರು ಕಮ್ಮಟಕ್ಕೆ ಆಗಮಿಸಿ, ಪ್ರೇರಣೆ ನೀಡಿದ್ದಾರೆ.
ಕಮ್ಮಟದ 2ನೇ ದಿನ ಧಾರ್ಮಿಕ ಹಾಗೂ ಸಾಮಾಜಿಕ ಸಮನ್ವಯತೆಯಲ್ಲಿ ಭಜನ ಮಂಡಳಿಯ ಪಾತ್ರದ ಕುರಿತು ಡಾ| ಎಲ್.ಎಚ್. ಮಂಜುನಾಥ್ ಉಪನ್ಯಾಸ ನೀಡಿದ್ದು, 3ನೇ ದಿನ ವಿಟ್ಠಲ್ ನಾಯಕ್ ವಿಟ್ಲ ಅವರು ಗೀತ ಸಾಹಿತ್ಯ ಸಂಭ್ರಮ ನಡೆಸಿಕೊಟ್ಟಿದ್ದಾರೆ.
ಶಿಬಿರಾರ್ಥಿಗಳ ಪರಿಚಯ ಹಾಗೂ ಗುಂಪು ರಚನೆಯನ್ನು ಮಮತಾ ರಾವ್ ಹಾಗೂ ಶ್ರೀನಿವಾಸ್ ರಾವ್ ನಡೆಸಿದ್ದು, ರಾಗ-ತಾಳ-ಶ್ರುತಿ ಕುರಿತು ಮನೋರಮಾ ತೋಳ್ಪಾಡಿತ್ತಾಯ ನಡೆಸಿಕೊಟ್ಟಿದ್ದಾರೆ. ಸುಬ್ರಹ್ಮಣ್ಯ ಪ್ರಸಾದ್ ಕ್ಷೇತ್ರದ ಸಮಗ್ರ ಪರಿಚಯ ತಿಳಿಸಿದ್ದಾರೆ.
ರಾಗ-ತಾಳ-ವೈವಿಧ್ಯ ಪ್ರಾತ್ಯಕ್ಷಿಕೆ
ರಾಗ-ತಾಳ-ವೈವಿಧ್ಯ ಕುರಿತು ಅಣ್ಣು ದೇವಾಡಿಗ ಹಾಗೂ ಪ್ರಭಾಕರ್ ಅವರ ತಂಡ ಪ್ರಾತ್ಯಕ್ಷಿಕೆ ನಡೆಸಿಕೊಟ್ಟಿದೆ. ನೃತ್ಯ ಭಜನೆ ಕುರಿತು ರಮೇಶ್ ಕಲ್ಮಾಡಿ, ಶಂಕರ್, ಬೆಳಾಲು ಲಕ್ಷ್ಮಣ್ ಗೌಡ, ಧೀವಿತ್ ಕೋಟ್ಯಾನ್, ಚೈತ್ರಾ ನಡೆಸಿಕೊಡುತ್ತಿದ್ದಾರೆ. ಕಮ್ಮಟದಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ಉಷಾ ಹೆಬ್ಟಾರ್, ಶಿವಾನಂದ ರಾವ್ ಕಕ್ಕಿನೇಜಿ, ಭಗೀರಥ್, ದೇವದಾಸ್ ಪ್ರಭು, ಮನೋರಮಾ ತೋಳ್ಪಾಡಿತ್ತಾಯ, ಮಂಗಲದಾಸ ಗುಲ್ವಾಡಿ, ಮೋಹನ್‌ದಾಸ್ ಶೆಣೈ ಮಂಗಳೂರು ಭಾಗವಹಿಸಿದ್ದಾರೆ.
ಯೋಗಾಭ್ಯಾಸ, ಉಪನ್ಯಾಸ
ಡಾ| ಶಶಿಕಾಂತ್ ಜೈನ್ ಅವರು ಪ್ರತಿ ದಿನ ಯೋಗಾಭ್ಯಾಸ ನಡೆಸುತ್ತಿದ್ದಾರೆ. ಹರಿದಾಸ್ ಗಾಂಭೀರ್, ವೀರು ಶೆಟ್ಟಿ ಚಿಂತನ ಕಾರ್ಯಕ್ರಮ, ವಿವೇಕ್ ವಿನ್ಸೆಂಟ್ ಪಾಯ್ಸ ಆರೋಗ್ಯಕರ ಅಭ್ಯಾಸಗಳು, ದುರಭ್ಯಾಸದ ವಿರುದ್ಧ ಜಾಗೃತಿ ಮೂಡಿಸುವ ಚಲನಚಿತ್ರ ಪ್ರದರ್ಶನದ ಜತೆಗೆ ಉಪನ್ಯಾಸ ನೀಡಿದ್ದಾರೆ. ಯೋಜನಾಧಿಕಾರಿ ದಿನೇಶ್, ಶ್ರೀನಿವಾಸ್ ರಾವ್, ಬಾಲಕೃಷ್ಣ, ರಾಜೇಶ್ ನಿರ್ವಹಣೆಯ ಜವಾಬ್ದಾರಿ ಹೊತ್ತಿದ್ದಾರೆ.
ಸಾಂಸ್ಕೃತಿಕ ಕಾರ್ಯಕ್ರಮ
ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಉಜಿರೆ ಶ್ರೀ ಧ.ಮಂ. ನ್ಯಾಚುರೋಪತಿ ಕಾಲೇಜಿನ ವಿದ್ಯಾರ್ಥಿಗಳು ಭಕ್ತಿಗೀತೆ ನಡೆಸಿಕೊಟ್ಟಿದ್ದಾರೆ. ಕಮ್ಮಟದ ಯಶಸ್ಸಿಗೆ ಸುಬ್ರಹ್ಮಣ್ಯ ಪ್ರಸಾದ್, ಮಮತಾ ಹರೀಶ್ ರಾವ್, ಶಾಂತಿವನದ ಕಾರ್ಯದರ್ಶಿ ಸೀತಾರಾಮ ತೋಳ್ಪಾಡಿತ್ತಾಯ, ಕೋಶಾಧಿಕಾರಿ ನಾಗೇಂದ್ರ ಅಡಿಗ, ಭುಜಬಲಿ, ಬಿ. ಜಯರಾಮ ನೆಲ್ಲಿತ್ತಾಯ, ಕಮ್ಮಟದ ಕಾರ್ಯಕಾರಿ ಸದಸ್ಯರು, ಕ್ಷೇತ್ರದ ಸಿಬಂದಿ, ಯೋಜನೆ ಪ್ರಮುಖರು, ಸ್ವಯಂ ಸೇವಕರು, ಕನ್ಯಾಕುಮಾರಿ ಯುವತಿ ಮಂಡಲದ ಸದಸ್ಯರು ಸಹಕರಿಸುತ್ತಿದ್ದಾರೆ.
ಸೆ. 30: ಭಜನೋತ್ಸವ
ಸೆ. 30ರಂದು ಭಜನೋತ್ಸವ ಹಾಗೂ ಭಜನ ತರಬೇತಿ ಕಮ್ಮಟದ ಸಮಾರೋಪ ನಡೆಯಲಿದ್ದು,ಬೆಳಗ್ಗೆ 10ಕ್ಕೆ ಸುಮಾರು 3,000 ಭಜನ ಪಟುಗಳಿಂದ ಶೋಭಾಯಾತ್ರೆ, ಅಮೃತ ವರ್ಷಿಣಿ ಸಭಾಭವನದಲ್ಲಿ ಭಜನೆಯೊಂದಿಗೆ ನೃತ್ಯ ಭಜನೆ ನಡೆಯಲಿದೆ. ಸಮಾರಂಭದಲ್ಲಿ ಶ್ರೀಕ್ಷೇತ್ರ ಕನಕಗಿರಿಯ ಸ್ವಸ್ತಿಶ್ರೀ ಭುವನಕೀರ್ತಿ ಭಟ್ಟಾರಕ ಸ್ವಾಮೀಜಿ ಆಶೀರ್ವಚನ ನೀಡಲಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Renukaswamy case: ದರ್ಶನ್ ವಿರುದ್ಧ ಸಾಕ್ಷ್ಯ “ಸೃಷಿ’: ವಕೀಲ ವಾದ
Kottigehara: ನಾಯಿ ದಾಳಿಯಿಂದ ಮಗುವಿಗೆ ಗಾಯ
IPL 2024: ಭಾರತ ಕ್ರಿಕೆಟ್ ನಾಯಕನಾಗುವ ಉದ್ದೇಶ ಪಂತ್ ಗಿದೆ: ಜಿಂದಾಲ್
Sambhal Mosque Survey: ಜಾಮಾ ಮಸೀದಿಯ ಸಮೀಕ್ಷೆಗೆ ತಡೆ ನೀಡಿದ ಸುಪ್ರೀಂಕೋರ್ಟ್
Gadget Review: iPhone 16: ಆಕರ್ಷಕ ವಿನ್ಯಾಸ, ಉತ್ತಮ ಕ್ಯಾಮರಾ, ವೇಗದ ಕಾರ್ಯಾಚರಣೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.