Dharmasthala ದೀಪೋತ್ಸವಕ್ಕೆ ಕ್ಷಣಗಣನೆ; 2 ಲಕ್ಷ ಭಕ್ತರ ಸಮಾಗಮದ ಕಾತರ


Team Udayavani, Dec 7, 2023, 12:04 AM IST

Dharmasthala ದೀಪೋತ್ಸವಕ್ಕೆ ಕ್ಷಣಗಣನೆ; 2 ಲಕ್ಷ ಭಕ್ತರ ಸಮಾಗಮದ ಕಾತರ

ಬೆಳ್ತಂಗಡಿ: ನಾಡಿನ ಚತುರ್ದಾನ ಶ್ರೇಷ್ಠ ಪರಂಪರೆಯ ಶ್ರೀ ಕ್ಷೇತ್ರ ಧರ್ಮಸ್ಥಳ ಮಂಜುನಾಥ ಸ್ವಾಮಿ ಸನ್ನಿಧಿಯಲ್ಲಿ ಲಕ್ಷ ದೀಪೋತ್ಸವಕ್ಕೆ ಕ್ಷಣಗಣನೆ ಆರಂಭವಾಗಿದೆ.

ಧರ್ಮಾಧಿಕಾರಿ ಡಾ| ಡಿ. ವೀರೇಂದ್ರ ಹೆಗ್ಗಡೆ ಅವರ ಆಶೀರ್ವಾದದೊಂದಿಗೆ ಡಿ. ಹಷೇìಂದ್ರ ಕುಮಾರ್‌ ನೇತೃತ್ವದಲ್ಲಿ ಡಿ. 8ರಿಂದ 12ರ ವರೆಗೆ ನಡೆಯಲಿರುವ ಲಕ್ಷದೀಪೋತ್ಸವದ ಮೆರುಗಿನ ತಯಾರಿ ಪೂರ್ಣಗೊಂಡಿದ್ದು, ಭಕ್ತರ ಸ್ವಾಗತಕ್ಕೆ ಅಣಿಯಾಗಿದೆ.

ಸರ್ವಧರ್ಮ ಸಮ್ಮೇಳನದ 91ನೇ ಅಧಿವೇಶನ, ಸಾಹಿತ್ಯ ಸಮ್ಮೇಳನದ 91ನೇ ಅಧಿವೇಶನ ನೆರವೇರಲಿದೆ. ಇದರೊಂದಿಗೆ 44ನೇ ವರ್ಷದ ರಾಜ್ಯಮಟ್ಟದ ವಸ್ತುಪ್ರದರ್ಶನ ನೆರವೇರಲಿದೆ.

ದೇವರಿಗೆ ಸ್ವರ್ಣ ಪಲ್ಲಕಿ,ಬೆಳ್ಳಿ ರಥೋತ್ಸವ ವಿಶೇಷ ಕ್ಷೇತ್ರದಲ್ಲಿ ಲಕ್ಷದೀಪೋತ್ಸವ, ಶಿವರಾತ್ರಿ ಹಾಗೂ ಕಾಲಾವಧಿ ವಿಷು ಜಾತ್ರೆಯ ಮೂರು ಸಂದರ್ಭಗಳಲ್ಲಿ ಮಾತ್ರ ದೇವರು ವಿಹಾರಕ್ಕೆ ತೆರಳಿ ಭಕ್ತರಿಗೆ ಗರ್ಭಗುಡಿಯಿಂದ ಹೊರಗೆ ದರ್ಶನಕ್ಕೆ ಸಿಗುವಂತಹದು. ಹಾಗಾಗಿ ಡಿ. 8ರಿಂದ 12ರ ವರೆಗೆ ಶ್ರೀ ದೇವರ ಉತ್ಸವಗಳು ಸ್ವರ್ಣ ಪಲ್ಲಕ್ಕಿ ಮತ್ತು ಬೆಳ್ಳಿ ರಥಗಳ ಮೂಲಕ ನಡೆಯಲಿದೆ.

ನಗರಾಲಂಕಾರಕ್ಕೆ ಕಾಂತಾರ ಮೆರುಗು
ಈ ಬಾರಿ ಕ್ಷೇತ್ರಕ್ಕೆ ವಿಶೇಷ ನಗರಾಲಂಕಾರದ ಸೊಬಗು ಇರಲಿದೆ. ಅದರಲ್ಲೂ ರಾಷ್ಟ್ರಾದ್ಯಂತ ಸದ್ದು ಮಾಡಿರುವ ಕರಾವಳಿಯ “ಕಾಂತಾರ’ ಸಿನೆಮಾದಲ್ಲಿ ಬಳಸಿದ ಅಣಿಯ ಸ್ವರೂಪದ ವಿಶೇಷ ವರ್ಣಾಲಂಕಾರ ನೇತ್ರಾವತಿ ಸ್ನಾನಘಟ್ಟ ದಿಂದ ದೇವಸ್ಥಾನದ ವರೆಗೆ ಕಾಣಬಹುದಾಗಿದೆ. ಅದಲ್ಲದೆ ಪಾರಂಪರಿಕ ಶೈಲಿಯಲ್ಲಿ ಪಥಾಕೆ, ನಿಶಾನೆ, ಕೊಡಪಾನ ಸೇರಿದಂತೆ ನಗರಾಲಂಕಾರಕ್ಕೆ ವಿಶೇಷ ಆದ್ಯತೆ ನೀಡಲಾಗಿದೆ.

44ನೇ ರಾಜ್ಯಮಟ್ಟದ ವಸ್ತುಪ್ರದರ್ಶನ
ಲಕ್ಷದೀಪೋತ್ಸವದಲ್ಲಿ ಪ್ರಮುಖ ಆಕರ್ಷಣೆ 44ನೇ ವರ್ಷದ ರಾಜ್ಯಮಟ್ಟದ ವಸ್ತುಪ್ರದರ್ಶನ ಮಳಿಗೆಯಾಗಿದೆ. ಶ್ರೀ ಕ್ಷೇತ್ರ ಧರ್ಮಸ್ಥಳ ಪ್ರೌಢ ಶಾಲೆಯ 60,300 ಚದರಡಿ ವಿಸ್ತೀರ್ಣದಲ್ಲಿ 335 ಸ್ಟಾಲ್‌ಗೆ ಅವಕಾಶ ಮಾಡಿಕೊಡಲಾಗಿದೆ. ಈ ಪೈಕಿ 171 ಬಗೆಯ ಸ್ಟಾಲ್‌ಗ‌ಳಿರಲಿವೆ. 8 ಸರಕಾರಿ ಮಳಿಗೆ, 5 ಬ್ಯಾಂಕ್‌, 2 ಧಾರ್ಮಿಕ ಮಳಿಗೆ, ಗ್ರಾಮೀಣಾಭಿವೃದ್ಧಿ, ರುಡ್‌ಸೆಟ್‌, ಸಿರಿ ಉತ್ಪನ್ನ, ವಾಹನ ಪ್ರದರ್ಶನ, ಸಾವಯವ ಕೃಷಿ ಉತ್ಪನ್ನ, ಕರಕುಶಲ ವಸ್ತು, ಯಂತ್ರ ಪರಿಕರ, ಗೃಹೋಪಯೋಗಿ ವಸ್ತುಗಳ ಮಳಿಗೆ ಸಹಿತ ತಿಂಡಿ ತಿನಿಸು ಸೇರಿದಂತೆ ನಾನಾ ಬಗೆಯ ವಸ್ತುಪ್ರದರ್ಶನ ಮಳಿಗೆ ಸಜ್ಜಾಗಿದೆ.

ರಥಬೀದಿ ಆಕರ್ಷಣೆ
ಭಕ್ತರಿಗೆ ಮನೋರಂಜನೆಗಾಗಿ ಒಂದೆಡೆ ಮಳಿಗೆಗಳಾದರೆ ರಥಬೀದಿಯಲ್ಲಿ ಈ ಬಾರಿ 6 ವಾರ್ಡ್‌ಗಳಂತೆ ಸುಮಾರು 1500 ಸಂತೆ ಅಂಗಡಿಗಳು ಇರಲಿವೆ. 2 ಲಕ್ಷಕ್ಕೂ ಅಧಿಕಮಂದಿ ಸೇರುವ ನಿರೀಕ್ಷೆಯಿದೆ. ಈಗಾಗಲೆ ರಾಜ್ಯಾದ್ಯಂತ ಎಲ್ಲೆಡೆ ಸರಕಾರಿ ಹೆಚ್ಚುವರಿ ಬಸ್‌ ಸೇವೆ, ಭಕ್ತರಿಗೆ ಊಟದ ವ್ಯವಸ್ಥೆ, ಆರೋಗ್ಯ ಸೇವೆ ಸಹಿತ ಸ್ವತ್ಛತೆಗೆ ವಿಶೇಷ ಆಧ್ಯತೆ ನೀಡಲಾಗಿದೆ.

ಗುರುಕಿರಣ್‌ ನೈಟ್‌
ಡಿ. 10ರಂದು ಅಮೃತವರ್ಷಿಣಿ ಸಭಾಭವನ ದಲ್ಲಿ ಲಲಿತಕಲಾ ಗೋಷ್ಠಿಯಲ್ಲಿ ರಾತ್ರಿ 7ರಿಂದ 10.30ರವರೆಗೆ ಖ್ಯಾತ ಸಂಗೀತ ನಿರ್ದೇಶಕ ಗುರು ಕಿರಣ್‌ ಅವರಿಂದ ಗಾನ ನೃತ್ಯ ವೈವಿಧ್ಯ- ಗುರುಕಿರಣ್‌ ನೈಟ್‌ ಸಂಭ್ರಮ ನಡೆಯಲಿದೆ.

ಡಿ.11 ಸರ್ವಧರ್ಮ 91ನೇ ಅಧಿವೇಶನವನ್ನು ಖ್ಯಾತ ವಿದ್ವಾಂಸ ಬೆಂಗಳೂರಿನ ಡಾ. ಗುರುರಾಜ ಕರ್ಜಗಿ ಉದ್ಘಾಟಿಸುವರು. ಡಿ.12 ಸಾಹಿತ್ಯ ಸಮ್ಮೇಳನವನ್ನು ಬೆಂಗಳೂರಿನ ಇಸ್ರೋದ ಅಧ್ಯಕ್ಷ ಡಾ| ಎಸ್‌. ಸೋಮನಾಥ್‌ ಉದ್ಘಾಟಿಸುವರು.

ಧರ್ಮಸ್ಥಳದಲ್ಲಿ ಅನೇಕ ವರ್ಷಗಳಿಂದ ಕಾರ್ತಿಕ ಮಾಸದಲ್ಲಿ ನಡೆಯುವ ಲಕ್ಷದೀಪೋತ್ಸವ ದೇವರಿಗೆ ವಿಶೇಷ. ಜನರಿಗೆ ಮಾಹಿತಿ ತಂತ್ರಜ್ಞಾನದ ಜತೆಗೆ ಮನೋರಂಜನೆ ನೀಡುವ ಉದ್ದೇಶದಿಂದ ವಸ್ತು ಪ್ರದರ್ಶನ ಸಹಿತ ಸಾಂಸ್ಕೃತಿಕ ಕಾರ್ಯಕ್ರಮ ಆಯೋಜಿಸಲಾಗಿದೆ. ಈ ವರ್ಷ ನಗರಾಲಂಕಾರಕ್ಕೆ ವಿಶೇಷ ಮಹತ್ವ ನೀಡಲಾಗಿದೆ. ಐದು ದಿನಗಳ ಈ ವಿಶೇಷ ಕಾರ್ಯಕ್ರಮಕ್ಕೆ ನಾಡಿನ ಎಲ್ಲರನ್ನೂ ಕ್ಷೇತ್ರದಿಂದ ಆಹ್ವಾನಿಸುತ್ತಿದ್ದೇವೆ.
– ಡಾ| ಡಿ.ವೀರೇಂದ್ರ ಹೆಗ್ಗಡೆ, ಧರ್ಮಾಧಿಕಾರಿಗಳು, ಶ್ರೀ ಕ್ಷೇತ್ರ ಧರ್ಮಸ್ಥಳ

ಟಾಪ್ ನ್ಯೂಸ್

1-deee

Allu Arjun ನಿವಾಸದಲ್ಲಿ ದಾಂಧಲೆ!; 8 ಮಂದಿ ಬಂಧನ: ಕೃತ್ಯ ಎಸಗಿದ್ದು ಯಾರು?

sullia

Davanagere: ವೃದ್ಧೆ ಮೇಲೆ ಅತ್ಯಾ*ಚಾರ; ಯುವಕನಿಗೆ 10 ವರ್ಷ ಕಠಿಣ ಶಿಕ್ಷೆ

Baduta-Mandya

Mandya: ಸಾಹಿತ್ಯ ಸಮ್ಮೇಳನದಲ್ಲಿ ಬಾಡೂಟ ಗಲಾಟೆ: ಪೊಲೀಸರೊಂದಿಗೆ ಮಾತಿನ ಚಕಮಕಿ!

1-women

ODI; ವೆಸ್ಟ್ ಇಂಡೀಸ್ ವಿರುದ್ಧ ಭಾರತದ ವನಿತೆಯರಿಗೆ 211 ರನ್ ಜಯ:ಸ್ಮೃತಿ ನರ್ವಸ್ 90

Kuwait-PM

Highest honour: ಪ್ರಧಾನಿ ನರೇಂದ್ರ ಮೋದಿಗೆ ಕುವೈಟ್‌ನ ಅತ್ಯುನ್ನತ ಗೌರವ ಪ್ರದಾನ

police crime

Delhi; ಅಕ್ರಮ ಬಾಂಗ್ಲಾ ವಲಸಿಗರ ವಿರುದ್ಧ ಕಾರ್ಯಾಚರಣೆ: 175 ಮಂದಿ ಪತ್ತೆ

Agumbe Ghat: ಟ್ರಾಫಿಕ್ ಜಾಮ್, ವಾಹನ ಸವಾರರ ಪರದಾಟ..!

Agumbe Ghat: ಟ್ರಾಫಿಕ್ ಜಾಮ್, ವಾಹನ ಸವಾರರ ಪರದಾಟ..!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Puttur: ತೆಂಕಿಲದಲ್ಲಿ ರಿಕ್ಷಾ ಅಪಘಾತ: ಚಾಲಕ ಸಾವು

Puttur: ತೆಂಕಿಲದಲ್ಲಿ ರಿಕ್ಷಾ ಅಪಘಾತ: ಚಾಲಕ ಸಾವು

Dinesh-Gundurao

Health Programme: ಗೃಹ ಆರೋಗ್ಯ ಯೋಜನೆ ಶೀಘ್ರವೇ ರಾಜ್ಯಕ್ಕೆ ವಿಸ್ತರಣೆ: ಸಚಿವ ದಿನೇಶ್‌

11

Puttur: ಎರಡು ಕಡೆ ಚಿನ್ನಾಭರಣ ಕಳವು; ಮೂವರ ಸೆರೆ

10

Sullia: ಬಸ್‌ ನಿಲ್ದಾಣದಲ್ಲಿ ಮಲಗಿದ್ದ ಪ್ರಯಾಣಿಕನ ಬ್ಯಾಗ್‌, ಶೂ ಕಳವು

2(1

Kumbra ಜಂಕ್ಷನ್‌ನಲ್ಲಿ ಈಗ ಸೆಲ್ಫಿ ಪಾಯಿಂಟ್‌ ಆಕರ್ಷಣೆ!

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

1-deee

Allu Arjun ನಿವಾಸದಲ್ಲಿ ದಾಂಧಲೆ!; 8 ಮಂದಿ ಬಂಧನ: ಕೃತ್ಯ ಎಸಗಿದ್ದು ಯಾರು?

4

Karkala: ಅಸ್ವಸ್ಥಗೊಂಡು ವ್ಯಕ್ತಿ ಸಾವು

sullia

Davanagere: ವೃದ್ಧೆ ಮೇಲೆ ಅತ್ಯಾ*ಚಾರ; ಯುವಕನಿಗೆ 10 ವರ್ಷ ಕಠಿಣ ಶಿಕ್ಷೆ

1-vasu

Vasundhara Raje ಬೆಂಗಾವಲು ವಾಹನ ಪಲ್ಟಿ; ನಾಲ್ವರು ಪೊಲೀಸರಿಗೆ ಗಾಯ

Baduta-Mandya

Mandya: ಸಾಹಿತ್ಯ ಸಮ್ಮೇಳನದಲ್ಲಿ ಬಾಡೂಟ ಗಲಾಟೆ: ಪೊಲೀಸರೊಂದಿಗೆ ಮಾತಿನ ಚಕಮಕಿ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.