Dharmasthala: ಲಕ್ಷದೀಪೋತ್ಸವಕ್ಕೆ ವಿಧ್ಯುಕ್ತ ಚಾಲನೆ
ಹೊಸಕಟ್ಟೆ ಉತ್ಸವ, ಬೆಳ್ಳಿ ರಥೋತ್ಸವದೊಂದಿಗೆ ಮೊದಲದಿನದ ಉತ್ಸವ ಸಂಪನ್ನ
Team Udayavani, Nov 27, 2024, 9:27 PM IST
ಬೆಳ್ತಂಗಡಿ: ಶ್ರೀ ಕ್ಷೇತ್ರ ಧರ್ಮಸ್ಥಳ ಮಂಜುನಾಥ ಸ್ವಾಮಿ ಸನ್ನಿಧಾನದಲ್ಲಿ ಲಕ್ಷದೀಪೋತ್ಸವದ ಪ್ರಥಮ ದಿನವಾದ ಮಂಗಳವಾರ ಹೊಸಕಟ್ಟೆ ಉತ್ಸವವು ಲಕ್ಷಾಂತರ ಮಂದಿಯ ಸೇರುವಿಕೆಯೊಂದಿಗೆ ವೈಭವೋಪೇತವಾಗಿ ನೆರವೇರಿತು.
ಧರ್ಮಾಧಿಕಾರಿ ಡಾ| ಡಿ.ವೀರೇಂದ್ರ ಹೆಗ್ಗಡೆಯವರ ಉಪಸ್ಥಿತಿಯಲ್ಲಿ ಧಾರ್ಮಿಕ ಕಾರ್ಯಗಳೊಂದಿಗೆ ಲಕ್ಷದೀಪೋತ್ಸವದ ಪೂಜಾ ವಿಧಿವಿಧಾನಗಳಿಗೆ ಚಾಲನೆ ನೀಡಲಾಯಿತು.
ಮಂಜುನಾಥ ಸ್ವಾಮಿಗೆ ವಿಶೇಷ ಪೂಜೆ ನಡೆಸಿ, ದೇವಾಲಯದ ಒಳಾಂಗಣದಲ್ಲಿ ಉತ್ಸವಮೂರ್ತಿಯೊಂದಿಗೆ 16 ಸುತ್ತು ಬರಲಾಯಿತು. ಚೆಂಡೆ, ನಾದಸ್ವರ, ಸಂಗೀತ, ಶಂಖ ಸಹಿತ ಸರ್ವವಾದ್ಯಗಳೊಂದಿಗೆ ಉತ್ಸವಮೂರ್ತಿಯನ್ನು ಪಲ್ಲಕ್ಕಿಯಲ್ಲಿ ಇರಿಸಿ ಮೆರವಣಿಗೆ ಮೂಲಕ ಭಕ್ತರಿಗೆ ದರ್ಶನವ ನೀಡಿದರು.
ಹೊರಾಂಗಣದಲ್ಲಿ ಭಕ್ತರು ಮಂಜುನಾಥನಿಗೆ ನಮಿಸಿ ದೀಪಗಳನ್ನು ಬೆಳಗಿ ತಮ್ಮ ಇಷ್ಟಾರ್ಥಕ್ಕಾಗಿ ಪ್ರಾರ್ಥನೆ ಸಲ್ಲಿಸಿದರು.
ದೇವಾಲಯದಿಂದ ಉತ್ಸವಮೂರ್ತಿಯನ್ನು ವಾದ್ಯಘೋಷಗಳೊಂದಿಗೆ ಮೆರವಣಿಗೆಯಲ್ಲಿ ವಸಂತ ಮಹಲಿನ ಹೊಸಕಟ್ಟೆಯಲ್ಲಿ ವಿರಾಜಮಾನಗೊಳಿಸಲಾಯಿತು. ಅಲ್ಲಿ ದೇವರಿಗೆ ಪುರೋಹಿತರಿಂದ ಚತುರ್ವೇದಗಳ ಪಠಣ, ಸಂಗೀತ ಸಹಿತ ಅಷ್ಟಾವಧಾನ ಸೇವೆಗಳ ಸಲ್ಲಿಸಲಾಯಿತು. ಮೆರವಣಿಗೆಯಲ್ಲಿ ದೇವಾಲಯದ ಆನೆಗಳಾದ ಲಕ್ಷ್ಮಿ ಮತ್ತು ಶಿವಾನಿ ಮತ್ತು ಬಸವ ಹೆಜ್ಜೆ ಹಾಕಿದವು.
ವಸಂತ ಮಹಲಿನಲ್ಲಿ ದೇವರಿಗೆ ಪೂಜೆ ನೆರವೇರಿದ ಬಳಿಕ ದೇವಾಲಯದ ಹೊರಾಂಗಣದಲ್ಲಿ ಅಲಂಕೃತ ಬೆಳ್ಳಿರಥದಲ್ಲಿ ದೇವರನ್ನು ವಿರಾಜಮಾನಗೊಳಿಸಿ ದೇವಾಲಯಕ್ಕೆ ಒಂದು ಸುತ್ತು ಪ್ರದಕ್ಷಿಣೆ ಬರಲಾಯಿತು. ನೆರೆದಿದ್ದ ಭಕ್ತರು ಭಕ್ತಿಭಾವದಿಂದ ರಥ ಎಳೆದು ಮಂಜುನಾಥ ಸ್ವಾಮಿಗೆ ತಲೆಭಾಗಿ ಅನುಗ್ರಹ ಪಡೆದು ಧನ್ಯತೆಯಿಂದ ತೃಪ್ತರಾದರು.
ಉತ್ಸವಮೂರ್ತಿಯನ್ನು ದೇವಾಲಯದ ಒಳಗೆ ಕೊಂಡೊಯ್ಯುವಲ್ಲಿಗೆ ಹೊಸಕಟ್ಟೆ ಉತ್ಸವ ಸಂಪನ್ನವಾಯಿತು.
ನ.27: ಕೆರೆ ಕಟ್ಟೆ ಉತ್ಸವ ಸಂಪನ್ನ
ನ.27ರಂದು ಕ್ಷೇತ್ರದಲ್ಲಿ ರಾತ್ರಿ ದೇವರಿಗೆ ಕೆರೆ ಕಟ್ಟೆ ಉತ್ಸವ ಸಂಪನ್ನಗೊಂಡಿತು. ವಸ್ತುಪ್ರದರ್ಶನ ವೇದಿಕೆಯಲ್ಲಿ ಕರ್ನಾಟಕ ಶಾಸ್ತ್ರೀಯ ಸಂಗೀತ, ಲಯಲಹರಿ ಸಂಗೀತ ಮೇಳ, ರಾಮಪ್ರಿಯ ತುಲಸೀದಾಸ ನೃತ್ಯರೂಪಕ, ಯಕ್ಷಗಾನ-ಹಿಡಿಂಬಾ ವಿವಾಹ-ಬಕಾಸುರ ವಧೆಗೆ ಸಾಕ್ಷಿಯಾಯಿತು.
ನ.28: ಲಲಿತಕಲಾ ಗೋಷ್ಠಿ
ನ.28ರಂದು ಅಮೃತವರ್ಷಿಣಿ ವೇದಿಕೆಯಲ್ಲಿ ಸಂಜೆ ಗಂಟೆ 5.30ರಿಂದ ಲಲಿತಕಲಾ ಗೋಷ್ಠಿ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ನಾಗಸ್ವರ ವಾದನ, ಸಾತ್ವಿಕ ಸಂಗೀತ, ನೃತ್ಯಾರ್ಚನೆ ಮತ್ತು ಮಾಯಾವಿಲಾಸ ನೃತ್ಯರೂಪಕ ನೆರವೇರಲಿದೆ. ವಸ್ತುಪ್ರದರ್ಶನ ವೇದಿಕೆಯಲ್ಲಿ ಗಾನಸಂಭ್ರಮ, ಭರತನಾಟ್ಯ ಮತ್ತು ಕೂಚಿಪುಡಿ, ನೃತ್ಯರೂಪಕ, ಯಕ್ಷಗಾನ ತಾಳಮದ್ದಳೆ ನೆರವೇರಲಿದೆ.
ನ.29: ಗೃಹಸಚಿವರಿಂದ ಸರ್ವಧರ್ಮ ಸಮ್ಮೇಳನ ಉದ್ಘಾಟನೆ
ನ.29ರಂದು ಸಂಜೆ 5 ಗಂಟೆಗೆ ಸರ್ವಧರ್ಮ ಸಮ್ಮೇಳನದ 92ನೇ ಅಧಿವೇಶನವನ್ನು ಗೃಹ ಸಚಿವ ಡಾ| ಜಿ.ಪರಮೇಶ್ವರ ಉದ್ಘಾಟಿಸುವರು. ಬೆಂಗಳೂರಿನ ಕೈಲಾಸ ಆಶ್ರಮದ ಜಯೇಂದ್ರಪುರಿ ಸ್ವಾಮೀಜಿ ಅಧ್ಯಕ್ಷತೆ ವಹಿಸುವರು. ಬೆಂಗಳೂರಿನ ಡಾ| ಜಿ.ಬಿ. ಹರೀಶ್, ಡಾ| ಜೋಸೆಫ್, ಎನ್.ಎಂ. ಮತ್ತು ಬಿಜಾಪುರದ ಮೆಹತಾಬ ಇಬ್ರಾಹಿಂ ಸಾಬ ಕಾಗವಾಡ ಧಾರ್ಮಿಕ ಉಪನ್ಯಾಸ ನೀಡುವರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.