![Kuruburu-Shanta](https://www.udayavani.com/wp-content/uploads/2025/02/Kuruburu-Shanta-415x249.jpg)
![Kuruburu-Shanta](https://www.udayavani.com/wp-content/uploads/2025/02/Kuruburu-Shanta-415x249.jpg)
Team Udayavani, Dec 10, 2023, 10:55 PM IST
ಬೆಳ್ತಂಗಡಿ: ಶ್ರೀ ಕ್ಷೇತ್ರ ಧರ್ಮಸ್ಥಳದ ಶ್ರೀ ಮಂಜುನಾಥ ಸ್ವಾಮಿಗೆ ಲಕ್ಷದೀಪೋತ್ಸವದ ಎರಡನೇ ದಿನ ಡಿ. 9ರಂದು ಧರ್ಮಾಧಿಕಾರಿ ಡಾ| ಡಿ. ವೀರೇಂದ್ರ ಹೆಗ್ಗಡೆ ಅವರ ನೇತೃತ್ವದಲ್ಲಿ ಹೊಸಕಟ್ಟೆ ಉತ್ಸವ ನೆರವೇರಿತು.
ದೇಗುಲದ ಪ್ರಾಂಗಣದಲ್ಲಿ ಸ್ವಾಮಿಗೆ ಪೂಜೆ ನೆರವೇರಿಸಲ್ಪಟ್ಟ ಬಳಿಕ 16 ಸುತ್ತುಗಳಲ್ಲಿ ಶ್ರೀ ಸ್ವಾಮಿಯ ಉತ್ಸವ ಮೂರ್ತಿಯನ್ನು ಲಾಲಕ್ಕಿಯಲ್ಲಿ ವಿರಾಜಮಾನಗೊಳಿಸಲಾಯಿತು.ದೇಗುಲದ ಮುಂಭಾಗದ ಕಲ್ಯಾಣಿಗೆ ಸುತ್ತು ಹಾಕಿದ ಬಳಿಕ ಮೆರವಣಿಗೆಯಲ್ಲಿ ಹೊರಟ ಉತ್ಸವ ಮೂರ್ತಿ ಯ ಪ್ರದಕ್ಷಿಣೆಯಲ್ಲಿ ಡಾ| ಹೆಗ್ಗಡೆಯವರೊಂದಿಗೆ ನೆರೆದಿದ್ದ ಭಕ್ತಗಣ ಓಂ ನಮಃ ಶಿವಾಯ ಜಪಿಸುತ್ತ ಸಾಗಿದರು.
ಅಷ್ಟಸೇವೆಯೊಂದಿಗೆ ಪೂಜೆ ನೆರವೇರಿದ ಬಳಿಕ ದೇವರನ್ನು ಬೆಳ್ಳಿರಥದಲ್ಲಿ ವಿರಾಜಮಾ® ಗೊಳಿಸಿ, ಮಂಗಳಾರತಿ ಬೆಳಗಿ ದೇಗುಲಕ್ಕೆ ಕರೆತರುವ ಮೂಲಕ ಕೆರೆಕಟ್ಟೆ ಉತ್ಸವ ಸಂಪನ್ನಗೊಂಡಿತು.
ಡಿ. 10ರಂದು ಲಲಿತೋದ್ಯಾನ ಉತ್ಸವ ಜರಗಿತು. ಡಿ. 11ರಂದು ಕಂಚಿಮಾರು ಕಟ್ಟೆ ಉತ್ಸವ ಜರಗಲಿದೆ.
ಭಕ್ತರ ಸಂಖ್ಯೆ ದ್ವಿಗುಣ
ಶನಿವಾರ ಹಾಗೂ ರವಿವಾರ ಸರಕಾರಿ ರಜೆಯಾಗದ್ದರಿಂದ ಶ್ರೀ ಕ್ಷೇತ್ರದಲ್ಲಿ ಭಕ್ತರ ಸಂಖ್ಯೆ ದ್ವಿಗುಣವಾಗಿತ್ತು. ಸಂಜೆ ನೇತ್ರಾವತಿಯಿಂದಲೇ ವಾಹನಗಳ ಸಾಲು ಸರತಿ ಸಾಲಿನಲ್ಲಿ ನಿಂತಿತ್ತು. ಪ್ರತಿದಿನ ಕ್ಷೇತ್ರದ ಅನ್ನಪೂರ್ಣ ಭೋಜನಾಲಯದಲ್ಲಿ ಸರಾಸರಿ 50 ಸಾವಿರ ಮಂದಿ ಭೋಜನ ಸ್ವೀಕರಿಸುತ್ತಿದ್ದಾರೆ.
ಡಿ.12ರ ರಾತ್ರಿ ಭಕ್ತರಿಂದ
ಉಪಹಾರ ಸೇವೆ
ಡಿ. 12ರಂದು ರಾತ್ರಿ ಅನ್ನಛತ್ರ ತೆರೆದಿರುವುದಿಲ್ಲ. ಅಂದು ಅನ್ನಪೂರ್ಣ ಛತ್ರದ ಹಿಂಬದಿ ತೆರೆದ ಸ್ಥಳದಲ್ಲಿ ಮೈಸೂರು, ಬೆಂಗಳೂರು ಸೇರಿದಂತೆ 22 ತಂಡಗಳು ಸುಮಾರು ಒಂದರಿಂದ ಎರಡು ಲಕ್ಷ ಮಂದಿ ಭಕ್ತರಿಗೆ 60 ಬಗೆಯ ಉಪಾಹಾರ ವ್ಯವಸ್ಥೆ ಕಲ್ಪಿಸುವರು ಎಂದು ಕ್ಷೇತ್ರದ ಅನ್ನಪೂರ್ಣ ಭೋಜನಾಲಯದ ವ್ಯವಸ್ಥಾಪಕರಾದ ಸುಬ್ರಮ್ಮಣ್ಯ ಪ್ರಸಾದ್ ಉದಯವಾಣಿಗೆ ತಿಳಿಸಿದ್ದಾರೆ.
ಇಂದು ಸರ್ವಧರ್ಮ ಸಮ್ಮೇಳನ
ಡಿ.11ರ ಸಂಜೆ 5ರಿಂದ ಅಮೃತವರ್ಷಿಣಿ ಸಭಾಭವನದಲ್ಲಿ ಧರ್ಮಾಧಿಕಾರಿ ಡಾ| ಡಿ.ವೀರೇಂದ್ರ ಹೆಗ್ಗಡೆಯವರ ಉಪಸ್ಥಿತಿಯಲ್ಲಿ ಸರ್ವಧರ್ಮ ಸಮ್ಮೇಳನದ 91ನೇ ಅಧಿವೇಶನ ನೆರವೇರಲಿದೆ. ಖ್ಯಾತ ವಿದ್ವಾಂಸ ಬೆಂಗಳೂರಿನ ಡಾ| ಗುರುರಾಜ ಕರ್ಜಗಿ ಉದ್ಘಾಟಿಸುವರು. ತುಮಕೂರು ಸಿದ್ಧಗಂಗಾ ಮಠದ ಶ್ರೀ ಸಿದ್ಧಲಿಂಗ ಸ್ವಾಮೀಜಿ ಅಧ್ಯಕ್ಷತೆ ವಹಿಸುವರು. ಭಾರತದ ಸರ್ವೋತ್ಛ ನ್ಯಾಯಾಲ ಯದ ನ್ಯಾಯವಾದಿ ಡಾ| ಎಂ.ಆರ್.ವೆಂಕಟೇಶ್, ಬೆಂಗಳೂರಿನ ವಿಭು ಅಕಾಡೆಮಿ ಮುಖ್ಯಸ್ಥ ವಿಜಯಪುರದ ಮಹಮ್ಮದ್ ಗೌಸ್ ಹವಾಲ್ದಾರ ಧಾರ್ಮಿಕ ಉಪನ್ಯಾಸ ನೀಡುವರು.
Udayavani-MIC ನಮ್ಮ ಸಂತೆ ಸಂಭ್ರಮ: ಜೇನುಗೂಡು, ಜೇನು ಹನಿ
Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್
Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?
Bharamasagara: ವಿದ್ಯುತ್ ಕಿಡಿಗೆ ಎರಡು ಮೇವಿನ ಬಣವೆ ಸಂಪೂರ್ಣ ಭಸ್ಮ
Udayavani-MIC ನಮ್ಮ ಸಂತೆ: ತೆಂಗಿನ ಗರಟೆಯಲ್ಲಿ ಅರಳಿದ ಕಲಾಕೃತಿ
You seem to have an Ad Blocker on.
To continue reading, please turn it off or whitelist Udayavani.