Dharmasthala; ಗ್ರಾಮಾಭಿವೃದ್ಧಿ ಯೋಜನೆ ಜನರ ನಾಡಿಮಿಡಿತ: ನಿರ್ಮಲಾ ಸೀತಾರಾಮನ್
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆಯ ಸದಸ್ಯರಿಗೆ ಲಾಭಾಂಶ ವಿತರಿಸಿ ವಿತ್ತ ಸಚಿವೆ
Team Udayavani, Nov 15, 2024, 1:27 AM IST
ಬೆಳ್ತಂಗಡಿ: ಮಹಿಳೆಯರ ಸಶಕ್ತೀಕರಣ ಜತೆಗೆ ಸ್ವಯಂ ಉದ್ಯೋಗ ಕಲ್ಪಿಸಿ, ತಾವು ಉತ್ಪಾದಿಸುವ ಉತ್ಪನ್ನಗಳಿಗೆ ಮಾರುಕಟ್ಟೆ ಒದಗಿಸುವ ಮೂಲಕ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆಯು ಇಂದು ಗ್ರಾಮೀಣ ಜನರ ನಾಡಿಮಿಡಿತ ವಾಗಿದೆ. ಕೇಂದ್ರ ಸರಕಾರ ಸಹಿತ ದೇಶದೆಲ್ಲೆಡೆ ನೂತನ ಯೋಜನೆಗಳನ್ನು ಆರಂಭಿಸುವ ಮುನ್ನ ಧರ್ಮಸ್ಥಳದ ಯೋಜನೆಗಳನ್ನು ಪ್ರಾಯೋಗಿಕವಾಗಿ ಅಧ್ಯಯನ ಮಾಡಲಾಗುತ್ತದೆ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಶ್ಲಾಘಿಸಿದರು.
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ.ಟ್ರಸ್ಟ್ ವತಿಯಿಂದ ಗ್ರಾಮಾಭಿವೃದ್ಧಿ ಯೋಜನೆಯ ಸ್ವಸಹಾಯ ಸಂಘಗಳ ಸದಸ್ಯರಿಗೆ ನ.14ರಂದು ಶ್ರೀ ಕ್ಷೇತ್ರ ಧರ್ಮಸ್ಥಳದ ಅಮೃತವರ್ಷಿಣಿಯಲ್ಲಿ 600 ಕೋ.ರೂ. ಲಾಭಾಂಶ ವಿತರಿಸಿ ಮಾತನಾಡಿದರು.
ಸ್ವಾತಂತ್ರೊéàತ್ತರದಿಂದ ಧರ್ಮ ಸ್ಥಳವು ಒಂದು ಸರಕಾರದ ಮಾದರಿಯಲ್ಲಿ ಗ್ರಾಮೀಣ ಜನರ ಸಶಕ್ತೀಕರಣಕ್ಕೆ ದುಡಿದಿದೆ. ಡಾ| ಹೆಗ್ಗಡೆಯವರ ನಾಯಕತ್ವದಿಂದ ರಾಜ್ಯದಲ್ಲಿ ಆರ್ಥಿಕ ಶಿಸ್ತು ಬಂದರೆ, ದೇಶದೆಲ್ಲೆಡೆ ಅವರ ಜ್ಞಾನ ಪಸರಿದೆ, ವಿಶ್ವಾದ್ಯಂತ ಅವರ ಯೋಜನೆ ಅನುಷ್ಠಾನ ಆಗುವಂತಿರುತ್ತದೆ. ಹಾಗಾಗಿ ಸ್ವತಃ ಪ್ರಧಾನಿ ನರೇಂದ್ರ ಮೋದಿ ಯವರೇ ಮೆಚ್ಚಿ ರಾಜ್ಯಸಭಾ ಸದಸ್ಯ ಸ್ಥಾನ ನೀಡಿದ್ದಾರೆ ಎಂದರು.
ಪ್ರತಿಯೊಬ್ಬ ಮಹಿಳೆಯನ್ನೂ ವಿತ್ತ ಸಚಿವೆಯಾಗಿಸಿದ್ದೇವೆ: ಡಾ| ಹೆಗ್ಗಡೆ
ಧರ್ಮಾಧಿಕಾರಿ ಡಾ| ಡಿ. ವೀರೇಂದ್ರ ಹೆಗ್ಗಡೆಯವರು ಅಧ್ಯಕ್ಷತೆ ವಹಿಸಿ ಮಾತನಾಡಿ, ನಿರ್ಮಲಾ ಸೀತಾರಾಮನ್ ದೇಶದ ಆರ್ಥಿಕ ಮಂತ್ರಿಯಾದರೆ, ನಾವು ಪ್ರತಿ ಮನೆಯ ಹೆಣ್ಣುಮಕ್ಕಳನ್ನು ಆರ್ಥಿಕ ಮಂತ್ರಿಯಾಗಿಸಿದ್ದೇವೆ. ಯೋಜನೆಯಲ್ಲಿ 55 ಲಕ್ಷ ಮಂದಿಯಲ್ಲಿ 34 ಲಕ್ಷ ಅಂದರೆ ಶೇ.62 ಮಂದಿ ಮಹಿಳೆಯರೇ ಇದ್ದಾರೆ. ವಿಶ್ವದಲ್ಲಿ ಯಾರೂ ಇಷ್ಟು ದೊಡ್ಡ ಮಟ್ಟದಲ್ಲಿ ಸ್ವಸಹಾಯ ಸಂಘದಡಿ ಲಾಭಾಂಶ ವಿತರಿಸಿರಲು ಸಾಧ್ಯವಿಲ್ಲ ಎಂದರು.
ವಿಸ್ತರಿಸಬಹುದಾದ ಯೋಜನೆ
ದೇಶದ ನಬಾರ್ಡ್ ಅಧ್ಯಕ್ಷ ಶಾಜಿ ಕೆ.ವಿ. ಮಾತನಾಡಿ, 1982ರಲ್ಲಿ ನಬಾರ್ಡ್ ಹಾಗೂ ಎಸ್‌ಕೆಡಿಆರ್‌ಡಿಪಿ ಜತೆಯಾಗಿ ಸಾಮಾಜಿಕ ಜವಾಬ್ದಾರಿಗಾಗಿ ಹುಟ್ಟಿಕೊಂಡಿತು. ಇಂದು ಶೇ.80ರಷ್ಟು ಗ್ರಾಮೀಣ ಭಾರತವನ್ನು ತಲುಪಿದೆ ಎಂದು ಹೇಳಲು ಹೆಮ್ಮೆಯಾಗುತ್ತಿದೆ. ರುಡ್‌ಸೆಟ್ ಜತೆಗೂ ನಬಾರ್ಡ್ ಸಹಭಾಗಿತ್ವ ಹೊಂದಿದ್ದು, ದೇಶದಲ್ಲಿ 575 ಆರ್.ಸಿ.ಟಿ.ಗಳ ಮೂಲಕ ಕೌಶಲಾಭಿವೃದ್ಧಿಗೆ ಆದ್ಯತೆ ನೀಡಿದೆ. ಇದು ಬೇರೆ ರಾಜ್ಯಗಳಿಗೂ ವಿಸ್ತರಿಸ ಬಹುದಾದಂಥ ಯೋಜನೆ ಎಂದರು.
ಆರ್ಥಿಕ ಶಿಸ್ತು ನೀಡಿದೆ
ಎಸ್‌ಕೆಡಿಆರ್‌ಡಿಪಿ ಸಿಇಒ ಅನಿಲ್ ಕುಮಾರ್ ಎಸ್.ಎಸ್. ಪ್ರಾಸ್ತಾವಿಕವಾಗಿ ಮಾತನಾಡಿ, ಗ್ರಾಮೀಣಾಭಿವೃದ್ಧಿ ಸಂಸ್ಥೆಯು ಕಳೆದ ನಾಲ್ಕು ದಶಕಗಳಿಂದ ಸಂಸ್ಥೆಯು ಗ್ರಾಮೀಣ ಪ್ರದೇಶದಲ್ಲಿ ಉಳಿತಾಯದ ಆರ್ಥಿಕ ಶಿಸ್ತು ನೀಡಿದೆ. 2021ರಲ್ಲಿ ಅರ್ಹ ಸ್ವಸಹಾಯ ಸಂಘಗಳಿಗೆ ಲಾಭಾಂಶವನ್ನು ವಿತರಿಸ ಲಾಗಿತ್ತು. ಪ್ರತೀ ಮೂರು ವರ್ಷಗಳಿಗೆ ಲಾಭಾಂಶ ವಿತರಣೆ ಕಾರ್ಯಕ್ರಮ ನಡೆಯುತ್ತಿದ್ದು, ಭಾರತದ ಸ್ವಸಹಾಯ ಸಂಘದ ಇತಿಹಾಸದಲ್ಲೆ ಸುಮಾರು 600 ಕೋ.ರೂ. ಮೊತ್ತದ ಲಾಭಾಂಶ ವಿತರಣೆ ಇದೇ ಮೊದಲು ಎಂದರು.
ಜ್ಞಾನವಿಕಾಸ ಕಾರ್ಯಕ್ರಮದ ಅಧ್ಯಕ್ಷೆ ಹೇಮಾವತಿ ವೀ.ಹೆಗ್ಗಡೆ, ಸಂಸದ ಕ್ಯಾ| ಬ್ರಿಜೇಶ್ ಚೌಟ, ಶಾಸಕ ಹರೀಶ್ ಪೂಂಜ, ವಿ.ಪ.ಸದಸ್ಯ ಕೆ.ಪ್ರತಾಪಸಿಂಹ ನಾಯಕ್ ಉಪಸ್ಥಿತರಿದ್ದರು. ಡಿ.ಸುರೇಂದ್ರ ಕುಮಾರ್, ಸುಪ್ರಿಯಾ ಹಷೇìಂದ್ರ ಕುಮಾರ್, ಡಿ.ಶ್ರೇಯಸ್ ಕುಮಾರ್ ಹಾಗೂ ವಿವಿಧ ಪಾಲುದಾರ ಬ್ಯಾಂಕ್‌ಗಳ ಮುಖ್ಯಸ್ಥರು ಭಾಗವಹಿಸಿದರು.
ಮುಖ್ಯ ಹಣಕಾಸು ಅಧಿಕಾರಿ ಶಾಂತಾರಾಮ್ ಆರ್.ಪೈ ನಿರೂಪಿ ಸಿದರು. ಸಮುದಾಯ ವಿಭಾಗ ಪ್ರಾದೇ ಶಿಕ ನಿರ್ದೇಶಕ ಆನಂದ ಸುವರ್ಣ ವಂದಿಸಿದರು.
ಕೃಷಿ-ಗ್ರಾಮೀಣಾಭಿವೃದ್ಧಿಯಲ್ಲಿ ಎಐ
2047ರ ಭವಿಷ್ಯದ ಭಾರತವನ್ನು ಪ್ರಧಾನಿ ನರೇಂದ್ರ ಮೋದಿ ಚಿಂತಿಸಿದ್ದಾರೆ. ವಿದೇಶಿ ಶಿಕ್ಷಣ ವೆಚ್ಚವನ್ನು ತಗ್ಗಿಸಲು ಪ್ರತಿಷ್ಠಿತ ವಿದೇಶಿ ವಿವಿಗಳನ್ನು ಭಾರತದಲೇ ಸ್ಥಾಪಿಸಲಿದ್ದೇವೆ. ಕೃಷಿ ಹಾಗೂ ನಗರಾಭಿವೃದ್ಧಿಗೆ (ಎಐ) ಆರ್ಟಿಫಿಷಿಯಲ್ ಇಂಟಲಿಜೆನ್ಸ್ ಅತ್ಯಗತ್ಯವಾಗಲಿದೆ. ಉತ್ತಮ ಮಾರುಕಟ್ಟೆ ಒದಗಣೆ ಹಾಗೂ ಗುಣಮಟ್ಟಕ್ಕೆ ಪೂರಕವಾಗಲಿದೆ ಎಂದು ನಿರ್ಮಲಾ ಹೇಳಿದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.