ಪುರಾಣ ಅಧ್ಯಯನದಲ್ಲಿದೆ ವೇದದ ತಿರುಳು: ನಾಗರಾಜ

ಧರ್ಮಸ್ಥಳ: ಪುರಾಣಕಾವ್ಯ ವಾಚನ-ಪ್ರವಚನ ಪ್ರಾರಂಭ

Team Udayavani, Jul 18, 2019, 5:00 AM IST

u-12

ಬೆಳ್ತಂಗಡಿ: ಇತಿಹಾಸ ಮತ್ತು ಪುರಾಣದ ಕಲ್ಪನೆ ಇದ್ದರೆ ವೇದಗಳ ಅಧ್ಯಯನ ಸುಲಲಿತ ಎಂದು ಮಂಗಳೂರಿನ ಹಿರಿಯ ವಿದ್ವಾಂಸ, ನಿವೃತ್ತ ಶಿಕ್ಷಕ ಬಿ.ಎಲ್‌. ನಾಗರಾಜ ಹೇಳಿದರು.

ಧರ್ಮಸ್ಥಳ ಅಮೃತವರ್ಷಿಣಿ ಸಭಾ ಭವನದಲ್ಲಿ 64 ದಿನಗಳಲ್ಲಿ ನಡೆಯುವ ಪುರಾಣಕಾವ್ಯ ವಾಚನ ಪ್ರವಚನ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಪ್ರಪಂಚದ ಮೂರು ಮೂಲಭೂತ ಕಾಯಕಗಳಾದ ಸೃಷ್ಟಿ, ಸ್ಥಿತಿ ಮತ್ತು ಲಯದ ಕುರಿತಾಗಿ ಪುರಾಣ ವಿವರಿ ಸುತ್ತದೆ. ಸೃಷ್ಟಿಯ ಅಧಿಪತಿ ಬ್ರಹ್ಮ, ಸ್ಥಿತಿಯ ಅಧಿಪತಿ ವಿಷ್ಣು ಹಾಗೂ ಲಯದ ಅಧಿಪತಿ ಶಿವನ ಕುರಿತು ಪುರಾಣದಲ್ಲಿ ಮಾಹಿತಿ, ಮಾರ್ಗದರ್ಶನವಿದೆ ಎಂದು ಅವರು ತಿಳಿಸಿದರು.

ಪರಿಶುದ್ಧ ಮನಸ್ಸಿಂದ ಪಠಣ
ಪರಿಶುದ್ಧ ಮನಸ್ಸಿನಿಂದ ಪರಮಾತ್ಮ ನನ್ನು ಪೂಜಿಸಬೇಕು. ವ್ರತ- ನಿಯಮ ಗಳ ಅನುಷ್ಠಾನ, ಉಪಾ ಸನೆ ಹಾಗೂ ನಿತ್ಯವೂ ಗಾಯತ್ರಿ ಮಂತ್ರ ಪಠಣ ದಿಂದ ವೈದ್ಯರಿಂದ ಗುಣಪಡಿಸಲಾಗದ ರೋಗವು ಸಂಪೂರ್ಣ ಶಮನಗೊಳ್ಳುತ್ತದೆ. ಇದು ನನ್ನ ಸ್ವಾನು ಭವವೂ ಹೌದು ಎಂದು ಅವರು ವಿವರಿಸಿದರು. ಲಲಿತೋ ಪಾಖ್ಯಾನ, ಶ್ರೀ ಧಾರಣಾ ಸರಸ್ವತಿ ಮಂತ್ರ ಪಠಣದಿಂದ ನೆಮ್ಮದಿ ಪ್ರಾಪ್ತಿ, ಆಧ್ಯಾತ್ಮಿಕ ಉನ್ನತಿಯಾಗುತ್ತದೆ ಎಂದು ಹೇಳಿದರು.

ಅಧ್ಯಕ್ಷತೆ ವಹಿಸಿದ ಧರ್ಮಸ್ಥಳದ ಧರ್ಮಾಧಿಕಾರಿ ಡಾ| ಡಿ. ವೀರೇಂದ್ರ ಹೆಗ್ಗಡೆ ಮಾತನಾಡಿ, ಕ್ಷೇತ್ರದಲ್ಲಿ ಮಂಜುನಾಥ ಸ್ವಾಮಿಗೆ ಅನೇಕ ರೀತಿಯ ಪೂಜೆ, ಸೇವೆಗಳನ್ನು ಅರ್ಪಿಸಲಾಗುತ್ತದೆ. 47 ವರ್ಷಗಳಿಂದ ಪ್ರತಿ ವರ್ಷ ಎರಡು ತಿಂಗಳು ನಡೆಯುವ ಪುರಾಣ ವಾಚನ- ಪ್ರವಚನವೂ ಅಮೂಲ್ಯ ಸೇವೆಯಾಗಿದೆ. ಇದರಿಂದಾಗಿ ಬೆಳ್ತಂಗಡಿ ತಾಲೂಕಿನಲ್ಲಿ ಅನೇಕ ಮಂದಿ ಉದಯೋನ್ಮುಖ ಗಮಕಿಗಳು, ಕಲಾವಿದರು ಮೂಡಿ ಬಂದಿದ್ದಾರೆ. ಸ್ವಾಧ್ಯಾಯ ಹಾಗೂ ವಿಶೇಷ ಅಧ್ಯಯನಕ್ಕೂ ಅವಕಾಶವಾಗಿದೆ ಎಂದು ಹೇಳಿದರು.

ಇತರ ದೇವಸ್ಥಾನಗಳಲ್ಲಿಯೂ ಧರ್ಮಸ್ಥಳದ ಮಾದರಿಯಲ್ಲಿ ಪುರಾಣ ವಾಚನ- ಪ್ರವಚನ ಏರ್ಪಡಿಸುತ್ತಿರುವುದು ಸಂತಸ ದಾಯಕ ಎಂದ ಅವರು, ಬಿ.ಎಲ್‌. ನಾಗರಾಜ ಅವರು ಜ್ಞಾನಪೀಠ ಪ್ರಶಸ್ತಿ ಪಡೆಯುವ ಅರ್ಹತೆ ಹೊಂದಿದ್ದಾರೆ ಎಂದು ಅಭಿನಂದಿಸಿದರು.

ಹೇಮಾವತಿ ವೀ. ಹೆಗ್ಗಡೆ, ಸುಪ್ರಿಯಾ ಹಷೇìಂದ್ರ ಕುಮಾರ್‌, ಹರಿಕೃಷ್ಣ ಪುನರೂರು, ಗಣಪತಿ ಪದ್ಯಾಣ ಮತು ¤ಉಜಿರೆ ಅಶೋಕ ಭಟ್‌ ಉಪಸ್ಥಿತರಿದ್ದರು. ಗಣಪತಿ ಪದ್ಯಾಣ ಅವರು ವಾಚನ ಮಾಡಿದರು. ಉಜಿರೆ ಅಶೋಕ ಭಟ್‌ ಪ್ರವಚನ ನೀಡಿದರು. ಎ.ವಿ. ಶೆಟ್ಟಿ ಸ್ವಾಗತಿಸಿದರು. ಶ್ರೀನಿವಾಸ ರಾವ್‌ ಧರ್ಮಸ್ಥಳ ಅವರು ನಿರೂಪಿಸಿ, ವಂದಿಸಿದರು.

64 ದಿನ ಪುರಾಣ ವಾಚನ-ಪ್ರವಚನ
ಅಮೃತವರ್ಷಿಣಿ ಸಭಾಭವನದಲ್ಲಿ 64 ದಿನಗಳಲ್ಲಿ ಪ್ರತಿದಿನ ಸಂಜೆ ಗಂಟೆ 6.30 ರಿಂದ 8 ಗಂಟೆ ವರೆಗೆ ಪುರಾಣ ವಾಚನ-ಪ್ರವಚನ ನಡೆಯಲಿದೆ. 17 ಮಂದಿ ಪುರಾಣ ವಾಚನ ಮಾಡಲಿದ್ದು, 27 ಮಂದಿ ಪ್ರವಚನ ನೀಡುವರು. ಶ್ರೀ ಲಲಿತೋಪಾಖ್ಯಾನ, ಸೋಮೇಶ್ವರ ಶತಕ, ಶಿಶುನಾಳ ಷರೀಫರ ಗೀತೆಗಳು, ಭಗವದ್ಗೀತೆ, ಶಂಕರ ಸಂಹಿತೆ, ನಳಚರಿತ್ರೆ, ರಾಮಾಶ್ವಮೇಧ, ರಾಮಾಯಣದರ್ಶನಂ ಮೊದಲಾದ ಪುರಾಣ ಕಾವ್ಯಗಳ ವಾಚನ-ಪ್ರವಚನ ನಡೆಯಲಿದೆ.

ನಿರಪೇಕ್ಷ ಭಾವ
ಜೀವನದಲ್ಲಿ ಅತೀ ಶ್ರೇಷ್ಠ ಭಾವನೆಗಳನ್ನು ಗೌರವಿಸಿ ನಿರಪೇಕ್ಷ ಭಾವದಿಂದ ಸ್ವೀಕರಿಸಬೇಕು. ಬೆಳಕಿನಲ್ಲಿ ಏಳು ಬಣ್ಣಗಳು ಲೀನವಾಗಿದ್ದರೂ ಸಹಜವಾಗಿ ನಾವು ಅದನ್ನು ಪ್ರತ್ಯೇಕವಾಗಿ ಬಣ್ಣವಾಗಿ ಗುರುತಿಸಲು ಸಾಧ್ಯವಾಗುವುದಿಲ್ಲ. ಅದೇ ರೀತಿ ಎಲ್ಲ ಭಾವನೆಗಳನ್ನು ಸಹಜವಾಗಿ ಹೊಂದಿರಬೇಕು.
– ಎಲ್‌. ನಾಗರಾಜ ಹಿರಿಯ ವಿದ್ವಾಂಸರು

ಟಾಪ್ ನ್ಯೂಸ್

Koratagere: ಟಾಟಾ ಏಸ್ ಪಲ್ಟಿ; 15 ವಿದ್ಯಾರ್ಥಿಗಳಿಗೆ ಗಂಭೀರ ಗಾಯ

Koratagere: ಟಾಟಾ ಏಸ್ ಪಲ್ಟಿ; 15 ವಿದ್ಯಾರ್ಥಿಗಳಿಗೆ ಗಂಭೀರ ಗಾಯ

10

Mangaluru: ಗುತ್ತಿಗೆದಾರ ಸಚಿನ್‌ ಪ್ರಕರಣ; ಪ್ರಿಯಾಂಕ್‌ ಖರ್ಗೆ ರಾಜೀನಾಮೆಗೆ ಬಿಜೆಪಿ ಆಗ್ರಹ

Court Notice: 2002ರ ಹ*ತ್ಯೆ ಪ್ರಕರಣ: ಡೇರಾ ಸೌಧ ಮುಖ್ಯಸ್ಥ ಗುರ್ಮೀತ್‌ಗೆ ನೋಟಿಸ್‌

Court Notice: 2002ರ ಹ*ತ್ಯೆ ಪ್ರಕರಣ: ಡೇರಾ ಸೌಧ ಮುಖ್ಯಸ್ಥ ಗುರ್ಮೀತ್‌ಗೆ ನೋಟಿಸ್‌

Madikeri: ಬೈಕ್‍ನಲ್ಲಿ ತೆರಳುತ್ತಿದ್ದ ವೇಳೆ ಕಾಡಾನೆ ದಾಳಿ; ಇಬ್ಬರಿಗೆ ಗಾಯ

Madikeri: ಬೈಕ್‍ನಲ್ಲಿ ತೆರಳುತ್ತಿದ್ದ ವೇಳೆ ಕಾಡಾನೆ ದಾಳಿ; ಇಬ್ಬರಿಗೆ ಗಾಯ

ಅಪರಿಚಿತ ವಾಹನ ಡಿಕ್ಕಿ : ಚಿಕಿತ್ಸೆ ಫ‌ಲಿಸದೆ ವ್ಯಕ್ತಿ ಸಾವು

Madikeri ಅಪರಿಚಿತ ವಾಹನ ಡಿಕ್ಕಿ: ಚಿಕಿತ್ಸೆ ಫ‌ಲಿಸದೆ ವ್ಯಕ್ತಿ ಸಾವು

Madikeri: ಲಾರಿಯಿಂದ ಹಾರಿದ ಚಾಲಕ: ಚಕ್ರದಡಿಗೆ ಸಿಲುಕಿ ಸಾವು

Madikeri: ಲಾರಿಯಿಂದ ಹಾರಿದ ಚಾಲಕ: ಚಕ್ರದಡಿಗೆ ಸಿಲುಕಿ ಸಾವು

Vande Bharat Sleeper Train: ಪರೀಕ್ಷಾರ್ಥ ಓಡಾಟದಲ್ಲಿ ಗಂಟೆಗೆ 180 ಕಿ.ಮೀ ವೇಗ

Vande Bharat Sleeper Train: ಪರೀಕ್ಷಾರ್ಥ ಓಡಾಟದಲ್ಲಿ ಗಂಟೆಗೆ 180 ಕಿ.ಮೀ ವೇಗ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

11-venur

Venur; ಚಿರತೆ ಓಡಾಟ; ಸಾರ್ವಜನಿಕರಲ್ಲಿ ಆತಂಕ; ಅರಣ್ಯಾಧಿಕಾರಿ- ಸಾರ್ವಜನಿಕರ ಸಭೆ

3-kadaba

Kadaba: ಕರ್ತವ್ಯದ ಬಿಡುವಿನಲ್ಲಿ ಮೊಬೈಲ್‌ನಲ್ಲೇ ಓದಿ ಎಸ್‌ಐ ಆದ ಪೊಲೀಸ್‌ ಚಾಲಕ!

1

Puttur: ನಳಿನ್‌ಗೆ ನಿಂದನೆ; ದೂರು ದಾಖಲು

1-asdaaasdasd

Kadaba; ಪ್ರೀತಿಸುವ ನಾಟಕವಾಡಿ ಬಾಲಕಿಯ ಮೇಲೆ ಅತ್ಯಾಚಾರ:ಯುವಕ ಸೆರೆ

1aaaane

Sullia: ತೋಟದಲ್ಲಿ ಮೂರು ಕಾಡಾನೆ!

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

Hunsur: ಆಕಸ್ಮಿಕ ವಿದ್ಯುತ್‌ ತಂತಿ ತಗುಲಿ ಟ್ರ್ಯಾಕ್ಟರ್‌ನಲ್ಲಿದ್ದ ಹುಲ್ಲಿಗೆ ಬೆಂಕಿ 

Hunsur: ಆಕಸ್ಮಿಕ ವಿದ್ಯುತ್‌ ತಂತಿ ತಗುಲಿ ಟ್ರ್ಯಾಕ್ಟರ್‌ನಲ್ಲಿದ್ದ ಹುಲ್ಲಿಗೆ ಬೆಂಕಿ 

police

Kasaragod; ಬಂದೂಕು ತೋರಿಸಿ ಹಲ್ಲೆ : ನಾಲ್ವರ ಮೇಲೆ ಕೇಸು

Koratagere: ಟಾಟಾ ಏಸ್ ಪಲ್ಟಿ; 15 ವಿದ್ಯಾರ್ಥಿಗಳಿಗೆ ಗಂಭೀರ ಗಾಯ

Koratagere: ಟಾಟಾ ಏಸ್ ಪಲ್ಟಿ; 15 ವಿದ್ಯಾರ್ಥಿಗಳಿಗೆ ಗಂಭೀರ ಗಾಯ

2

Mulki: ಗಾಂಜಾ ಮಾರಾಟ ಯತ್ನ; ಇಬ್ಬರ ಬಂಧನ

accident

Udupi: ಸ್ಕೂಟರಿಗೆ ಕಾರು ಢಿಕ್ಕಿ; ಇಬ್ಬರಿಗೆ ಗಾಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.