![Gun-Fire](https://www.udayavani.com/wp-content/uploads/2025/02/Gun-Fire-415x249.jpg)
![Gun-Fire](https://www.udayavani.com/wp-content/uploads/2025/02/Gun-Fire-415x249.jpg)
Team Udayavani, Sep 24, 2020, 4:00 AM IST
ಬಿ.ಸಿ.ರೋಡ್ ಮಿನಿ ವಿಧಾನಸೌಧದಲ್ಲಿ ಆವರಣದಲ್ಲಿ ಪಾರ್ಕಿಂಗ್ ಮಾಡಲಾದ ವಾಹನಗಳು.
ಬಂಟ್ವಾಳ: ಬಂಟ್ವಾಳ ತಾಲೂಕು ಕಚೇರಿಗೆ ಬರುವವರ ಜತೆಗೆ ಬಿ.ಸಿ. ರೋಡ್‌ನ ಇತರ ಕೆಲಸಕ್ಕೆ ಬರುವವರು ಕೂಡ ಬಿ.ಸಿ. ರೋಡ್ ಮಿನಿ ವಿಧಾನಸೌಧದ ಆವರಣದಲ್ಲಿ ವಾಹನಗಳನ್ನು ನಿಲ್ಲಿಸಿ ಹೋಗುತ್ತಿರುವುದರಿಂದ ಕೆಲವು ಬಾರಿ ತಹಶೀಲ್ದಾರ್ ಅವರ ಇಲಾಖಾ ವಾಹನ ಬರುವುದಕ್ಕೂ ತೊಂದರೆ ಉಂಟಾಗುವ ಸ್ಥಿತಿ ಇದೆ.
ಮಿನಿ ವಿಧಾನಸೌಧದ ಆವರಣ ಪಾರ್ಕಿಂಗ್‌ಗೆ ಸುರಕ್ಷಿತ ಸ್ಥಳವೆಂದು ಸಾಕಷ್ಟು ಮಂದಿ ಅಲ್ಲೇ ವಾಹನಗಳನ್ನು ನಿಲ್ಲಿಸಿ ತಮ್ಮ ಎಲ್ಲ ಕೆಲಸಗಳು ಮುಗಿದ ಬಳಿಕ ಅಲ್ಲಿಂದ ವಾಹನ ತೆಗೆದುಕೊಂಡು ಹೋಗುತ್ತಾರೆ. ತಾಲೂಕು ಕಚೇರಿಗೆ ಆಗಮಿಸಿದವರು ಮಾತ್ರ ವಾಹನ ತಂದರೆ ಇಂತಹ ತೊಂದರೆ ಎದುರಾಗುವುದಿಲ್ಲ.
ಸೆ. 22ರಂದು ಇದೇ ರೀತಿ ವಾಹನಗಳನ್ನು ಅಡ್ಡಾದಿಡ್ಡಿಯಾಗಿ ನಿಲ್ಲಿಸಿದ ಪರಿಣಾಮ ತಹಶೀಲ್ದಾರ್ ಅವರ ಬೊಲೆರೋ ವಾಹನ ಆವರಣದೊಳಕ್ಕೆ ಬರಲು ತೊಂದರೆ ಉಂಟಾಗಿತ್ತು. ಇದರಿಂದ ಆಕ್ರೋಶಿತರಾದ ತಹಶೀಲ್ದಾರ್ ರಶ್ಮಿ ಎಸ್.ಆರ್. ವಾಹನಗಳನ್ನು ತೆರವುಗೊಳಿಸಲು ಪೊಲೀಸರಿಗೆ ತಿಳಿಸಿದರು. ಬಿ.ಸಿ. ರೋಡ್‌ನಲ್ಲಿ ವಾಹನಗಳ ಪಾರ್ಕಿಂಗ್ ಸವಾಲಾಗುತ್ತಿದ್ದು, ಹೀಗಾಗಿ ಎಲ್ಲಿ ಅವಕಾಶ ಉಂಟೋ ಅಲ್ಲಿ ವಾಹನಗಳನ್ನು ನಿಲ್ಲಿಸಿ ತೆರಳುತ್ತಿದ್ದಾರೆ. ಬಹುತೇಕ ಕಡೆ ರಸ್ತೆಯ ಎರಡೂ ಕಡೆ ವಾಹನಗಳನ್ನು ನಿಲ್ಲಿಸಿದ ಪರಿಣಾಮ ಸಂಚಾರಕ್ಕೂ ತೊಂದರೆಯಾಗುತ್ತಿದೆ.
ಪುತ್ತೂರು: ದಂಡದ ಎಚ್ಚರಿಕೆ
ಪುತ್ತೂರು: ನಗರದಲ್ಲಿ ನೋ ಪಾರ್ಕಿಂಗ್‌ನಲ್ಲಿ ವಾಹನಗಳ ನಿಲುಗಡೆಯಿಂದ ಸಾರ್ವಜನಿಕರಿಗೆ ತೊಂದರೆ, ಟ್ರಾಫಿಕ್ ಸಮಸ್ಯೆಗೆ ಕಾರಣವಾಗುತ್ತಿದ್ದು, ಹೀಗಾಗಿ ಪುತ್ತೂರು ಸಂಚಾರ ಪೊಲೀಸ್ ಠಾಣೆ ವತಿಯಿಂದ ಪುತ್ತೂರು ಪೇಟೆಯ ಮುಖ್ಯರಸ್ತೆಯ ನೋ ಪಾರ್ಕಿಂಗ್‌ನಲ್ಲಿ ವಾಹನ ನಿಲುಗಡೆ ಮಾಡಿದ್ದಲ್ಲಿ ದಂಡ ವಿಧಿಸಲು ಆರಂಭಿಸಿದೆ. ಬೇಕಾಬಿಟ್ಟಿ ವಾಹನ ನಿಲುಗಡೆಯಿಂದ ಸಂಚಾರ ದಟ್ಟಣೆ ಹೆಚ್ಚಲಿದ್ದು, ತುರ್ತು ಸೇವಾ ವಾಹನಗಳ ಓಡಾಟಕ್ಕೂ ತೊಂದರೆ ಉಂಟಾಗುತ್ತಿದೆ. ಹೀಗಾಗಿ ದಂಡ ವಿಧಿಸಲಾಗುತ್ತಿದ್ದು, ದಿನವೊಂದಕ್ಕೆ ಸುಮಾರು 15 ಸಾವಿರ ರೂ.ಗೂ ಹೆಚ್ಚು ದಂಡ ವಸೂಲಾತಿ ಆಗುತ್ತಿದೆ. ದಂಡ ಪ್ರಕ್ರಿಯೆಗೆ ಒಳಾಗಾದ ವಾಹನಗಳು ಪದೇ-ಪದೇ ಕಾನೂನು ಉಲ್ಲಂಘಿಸುವುದು ಕಂಡು ಬಂದಲ್ಲಿ ವಾಹನ ಜಪ್ತಿ ಮಾಡಲಾಗುವುದು ಸಂಚಾರ ಪೊಲೀಸ್ ಠಾಣೆ ಎಸ್.ಐ. ರಾಮ ನಾಯ್ಕ ತಿಳಿಸಿದ್ದಾರೆ.
Mandya: ನಾಗಮಂಗಲದಲ್ಲಿ ಆಕಸ್ಮಿಕ ಫೈರಿಂಗ್: 3 ವರ್ಷದ ಮಗು ಮೃತ್ಯು!
Kaup: ಸ್ಕೂಟಿ, ಕಾರಿಗೆ ಬಸ್ ಢಿಕ್ಕಿ; ಸವಾರನಿಗೆ ಗಾಯ
Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್ ಸಿಬ್ಬಂದಿ!
Padubidri: ಕಬ್ಬಿಣದ ತುಂಡು ಹೆಕ್ಕಿದ ಬಾಲಕರಿಗೆ ರೈಲ್ವೇ ಗ್ಯಾಂಗ್‌ಮನ್ ಹಲ್ಲೆ; ದೂರು
Restriction: ನಿಷೇಧವಿದ್ದರೂ ಗೂಡ್ಸ್ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!
You seem to have an Ad Blocker on.
To continue reading, please turn it off or whitelist Udayavani.