ಕುಸಿಯುವ ಹಂತದಲ್ಲಿ ಬೆಳಂದೂರಿನ ತಂಗುದಾಣ
ಶಿಥಿಲಗೊಂಡಿದೆ ಛಾವಣಿ; ಅಪಾಯಕ್ಕೆ ಮುನ್ನ ದುರಸ್ತಿಪಡಿಸಿ
Team Udayavani, May 16, 2019, 5:50 AM IST
ಬೆಳಂದೂರಿನ ಪ್ರಯಾಣಿಕರ ತಂಗುದಾಣದ ರೀಪು ಮುರಿದು ಛಾವಣಿ ಕುಸಿಯುತ್ತಿದೆ.
ಬೆಳಂದೂರು: ಇಲ್ಲಿನ ಪ್ರಯಾಣಿಕರ ಬಸ್ಸು ತಂಗುದಾಣವು ಶಿಥಿಲಗೊಂಡಿದ್ದು, ಅಪಾಯದ ಸೂಚನೆ ನೀಡುತ್ತಿದೆ. ಬೆಳಂದೂರು ಗ್ರಾ.ಪಂ. ವ್ಯಾಪ್ತಿಯ ಬೆಳಂದೂರಿನ ಮುಖ್ಯ ರಸ್ತೆಯಲ್ಲಿರುವ ಈ ಬಸ್ಸು ತಂಗುದಾಣವನ್ನು ಶಾಲಾ ವಿದ್ಯಾರ್ಥಿಗಳು ಸಹಿತ ಸಾರ್ವಜನಿಕರು ಆಶ್ರಯಿಸುತ್ತಿದ್ದಾರೆ. ತಂಗುದಾಣದ ಛಾವಣಿ ಶಿಥಿಲಗೊಂಡಿರುವುದರಿಂದ ಅಪಾಯ ಕಾಡುವ ಸಾಧ್ಯತೆ ಇದೆ.
ದುರಸ್ತಿಗೆ ಸಾರ್ವಜನಿಕರ ಆಗ್ರಹ
ವಿದ್ಯಾರ್ಥಿಗಳು, ಸಾರ್ವಜನಿಕರು ಆಶ್ರಯಿಸುವ ಪ್ರಯಾಣಿಕರ ಬಸ್ಸು ತಂಗುದಾಣವು ಕುಸಿದು ಬೀಳುವ ಹಂತದಲ್ಲಿದ್ದರೂ ಸಂಬಂಧಪಟ್ಟವರು ಇತ್ತ ಗಮನಹರಿಸುತ್ತಿಲ್ಲ. ತಂಗುದಾಣದ ಛಾವಣಿಯ ಮಚರದ ಪಕ್ಕಾಸು, ರೀಪುಗಳು ಶಿಥಿಲಗೊಂಡು ಮುರಿದು ಹೋಗಿವೆ. ಹೆಂಚುಗಳು ಆಗಲೋ, ಈಗಲೋ ಎನ್ನುವ ಸ್ಥಿತಿಯಲ್ಲಿದೆ. ಮುಂಬರುವ ಮಳೆಗಾಲಕ್ಕೆ ಭಾರೀ ಅನಾಹುತ ಸಂಭವಿಸುವ ಸಾಧ್ಯತೆಯನ್ನೂ ಅಲ್ಲಗಳೆಯುವಂತಿಲ್ಲ. ಸಾರ್ವಜನಿಕರು ಈ ತಂಗುದಾಣವನ್ನೇ ಹೆಚ್ಚಾಗಿ ಉಪಯೋಗಿಸುವುದರಿಂದ ಅಪಾಯ ಸಂಭವಿಸುವ ಮೊದಲು ಸಂಬಂಧಪಟ್ಟವರು ಗಮನಹರಿಸಬೇಕು ಎಂದು ಸಾರ್ವಜನಿಕರ ಒತ್ತಾಯವಾಗಿದೆ.
ಬೀಳುವ ಮುನ್ನ ಕ್ರಮ ಕೈಗೊಳ್ಳಿ
ಬೆಳಂದೂರಿನ ಪ್ರಯಾಣಿಕರ ತಂಗುದಾಣದಲ್ಲಿ ವಿದ್ಯಾರ್ಥಿಗಳು, ಸಾರ್ವಜನಿಕರು ದಿನಂಪ್ರತಿ ಆಶ್ರಯಿಸುತ್ತಿದ್ದು, ತಂಗುದಾಣದ ಛಾವಣಿ ಶಿಥಿಲಗೊಂಡಿರುವುದರಿಂದ ಯಾವಾಗ ಬೀಳುತ್ತದೆ ಎಂದು ಹೇಳಲಾಗದು. ತಂಗು ದಾಣದ ದುರಸ್ತಿಗೆ ಸಂಬಂಧಪಟ್ಟ ಇಲಾಖೆ ಕ್ರಮ ಕೈಗೊಳ್ಳಬೇಕು ಎನ್ನುತ್ತಾರೆ ಸ್ಥಳೀಯ ಚಂದ್ರಶೇಖರ ಆಚಾರ್ಯ ಬನಾರಿ.
ಕ್ರಿಯಾಯೋಜನೆ, ಅನುದಾನ
ಬಸ್ಸು ತಂಗುದಾಣದ ದುರಸ್ತಿಗೆ ಗ್ರಾಮ ಪಂಚಾಯತ್ ಸಭೆಯಲ್ಲಿ ಕ್ರಿಯಾ ಯೋಜನೆ ತಯಾರಿಸಿ ಅನುದಾನ ಇಡಲಾಗಿದೆ. ಚುನಾವಣೆ ನೀತಿಸಂಹಿತೆ ಹಿನ್ನೆಲೆಯಲ್ಲಿ ಕಾಮಗಾರಿ ಬಾಕಿಯಾಗಿದೆ. ಜತೆಗೆ ಬೆಳಂದೂರು ಶಾಲೆ ಎದುರಿನ ರಸ್ತೆ ದುರಸ್ತಿಗೂ ಅನುದಾನ ಇರಿಸಲಾಗಿದೆ.
– ನಝೀರ್ ದೇವಸ್ಯ, ಸದಸ್ಯರು, ಗ್ರಾ.ಪಂ. ಬೆಳಂದೂರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Puttur: ಮೃತದೇಹ ಪಿಕಪ್ನಲ್ಲಿ ತಂದು ಮನೆ ಮುಂಭಾಗ ಮಲಗಿಸಿ ಹೋದರು: ಮನೆ ಮಂದಿಯ ಆಕ್ರೋಶ
Sullia: ಅಪಘಾತ; ಪರಾರಿಯಾಗಿದ್ದ ಲಾರಿ ವಶಕ್ಕೆ
Mangaluru: ನೋಟು ಬ್ಯಾನ್ಗೆ 8 ವರ್ಷ: ಹುಂಡಿಗೆ ಹಾಕೋದು ನಿಂತಿಲ್ಲ!
ಹೆದ್ದಾರಿ ತಡೆ ನಡೆಸಿದ ಆರೋಪ; ಸುಳ್ಯ, ಬೈಂದೂರು ಶಾಸಕರ ಸಹಿತ ಹಲವರ ವಿರುದ್ಧ ಪ್ರಕರಣ
Puttur: ‘ಕಾಡಿನೊಳಗಿದ್ದೇನೆ ದಾರಿ ಸಿಗುತ್ತಿಲ್ಲ’ ಎಂದಾತ 7 ತಿಂಗಳ ಬಳಿಕವೂ ಪತ್ತೆಯಾಗಿಲ್ಲ!
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.