“ಶ್ರದ್ಧೆ, ನಿಷ್ಠೆಯ ಸೇವಾ ತತ್ಪರತೆ ಮಾದರಿ’


Team Udayavani, Jun 3, 2019, 5:50 AM IST

z-16

ಪುಂಜಾಲಕಟ್ಟೆ: ಬಂಟ್ವಾಳ ತಾಲೂಕು ಕೊಯಿಲ ಅಂಚೆ ಕಚೇರಿಯಲ್ಲಿ ಸುಮಾರು 40 ವರ್ಷಗಳ ಕಾಲ ಗ್ರಾಮೀಣ ಅಂಚೆ ಬಟವಾಡೆದಾರ ರಾಗಿ (ಪೋಸ್ಟ್‌ಮ್ಯಾನ್‌) ಕಾರ್ಯ ನಿರ್ವಹಿಸಿ ನಿವೃತ್ತಿ ಹೊಂದಿದ ಕೊರಗಪ್ಪ ಪೂಜಾರಿ ಕೊçಲ ಅವರಿಗೆ ಕೊçಲ ಅಂಚೆ ವ್ಯಾಪ್ತಿಯ ಗ್ರಾಮಸ್ಥರು ಹಾಗೂ ಅಖೀಲ ಭಾರತ ಗ್ರಾಮೀಣ ಅಂಚೆ ನೌಕರರ ಸಂಘ ಪುತ್ತೂರು ವಿಭಾಗದ ವತಿಯಿಂದ ಬೀಳ್ಕೊಡುಗೆ ಮತ್ತು ಸಮ್ಮಾನ ಸಮಾರಂಭ ರವಿವಾರ ಮಾವಂತೂರು ಶ್ರೀ ಮಹಾಗಣಪತಿ ದೇವಸ್ಥಾನದ ಸಭಾಂಗಣದಲ್ಲಿ ಜರಗಿತು.

ನಿವೃತ್ತ ಶಿಕ್ಷಕಿ ಪಾವನಾದೇವಿ ಕಾರ್ಯಕ್ರಮ ಉದ್ಘಾಟಿಸಿ, ಕರ್ತವ್ಯ ನಿಷ್ಠ, ಸೌಮ್ಯ, ಸರಳ ವ್ಯಕ್ತಿತ್ವ, ಉಪ ಕಾರ ಮನೋಭಾವನೆಯ ಕೊರಗಪ್ಪ ಪೂಜಾರಿ ಅವರ ಸೇವಾ ತತ್ಪರತೆ ಇತರರಿಗೆ ಮಾದರಿಯಾಗಿದೆ. ಕೆಲಸದಿಂದ ನಿವೃತ್ತರಾದರೂ ಅವರ ಸಾಮಾಜಿಕ ಸೇವೆ ಮತ್ತಷ್ಟು ದೊರಕುವಂತಾಗಲಿ ಎಂದರು.

ಅಖೀಲ ಭಾರತ ಗ್ರಾಮೀಣ ಅಂಚೆ ನೌಕರರ ಸಂಘದ ಪುತ್ತೂರು ವಿಭಾಗದ ಅಧ್ಯಕ್ಷ ವಿಟ್ಟಲ ಎಸ್‌. ಪೂಜಾರಿ ಮಾತನಾಡಿ, ಕರ್ತವ್ಯದಲ್ಲಿ ಶ್ರದ್ಧೆ, ನಿಷ್ಠೆ, ಪ್ರಾಮಾಣಿಕತೆಯಿಂದ ತನ್ನ ಹುದ್ದೆಗೆ ನ್ಯಾಯ ಒದಗಿಸಿದ ಕೊರಗಪ್ಪ ಪೂಜಾರಿ ಅವರ ಅನುಪಮ ಸೇವೆ ಮಾದರಿಯಾಗಿದೆ ಎಂದರು. ನಿವೃತ್ತ ಮುಖ್ಯ ಶಿಕ್ಷಕ ದಾಮೋದರ ರಾವ್‌, ನಿವೃತ್ತ ಬ್ಯಾಂಕ್‌ ಅಧಿಕಾರಿ ರಾಮಣ್ಣ ರೈ, ಅಂಚೆ ಇಲಾಖೆ ಸಂಘಟನ ಕಾರ್ಯದರ್ಶಿ ಫ್ರಾನ್ಸಿಸ್‌ ಗೋವಿಯಸ್‌, ಸ್ಥಳೀಯ ಪ್ರಗತಿಪರ ಕೃಷಿಕರಾದ ವಾಲ್ಟರ್‌ ಫೆರ್ನಾಂಡಿಸ್‌, ನೋಣಯ ಶೆಟ್ಟಿಗಾರ್‌, ಬಂಟ್ವಾಳ ಉಪ ವಿಭಾಗ ನಿರೀಕ್ಷಕ ಸುನಿಲ್‌ ದೇವರಾಜ್‌, ಕೊಯಿಲ ಅಂಚೆ ಕಚೇರಿ ಪೋಸ್ಟ್‌ ಮಾಸ್ಟರ್‌ ದಯಾವತಿ ಶೆಟ್ಟಿ, ಅರುಣಾ ಜೆ. ಶೆಟ್ಟಿ, ಗೋಪಾಲ ರೈ, ಅಖೀಲ ಭಾರತ ಗ್ರಾಮೀಣ ಅಂಚೆ ನೌಕರರ ಸಂಘದ ವಿಭಾಗೀಯ ಕಾರ್ಯದರ್ಶಿ ಗಣೇಶ್‌ ಶೆಟ್ಟಿ ಸೇವಾ, ಕೊಯಿಲ ಸ.ಪ್ರೌ. ಶಾಲೆಯ ದೈಹಿಕ ಶಿಕ್ಷಣ ಶಿಕ್ಷಕ ಜನಾರ್ದನ ಅವರು ನಿವೃತ್ತರ ಬಗ್ಗೆ ಅನಿಸಿಕೆ ವ್ಯಕ್ತಪಡಿಸಿ ಶುಭಹಾರೈಸಿದರು.

ರಾಯಿ ಗ್ರಾ.ಪಂ. ಅಧ್ಯಕ್ಷ ದಯಾನಂದ ಸಪಲ್ಯ, ಶ್ರೀಕ್ಷೇತ್ರ ಧ.ಗ್ರಾ. ಯೋಜನೆ ಮೇಲ್ವಚಾರಕಿ ಹರಿಣಾಕ್ಷಿ ರೈ, ಉದ್ಯಮಿ ಖಾದರ್‌ ಕೆ.ಎ., ಸಂಘಟಕ ರಾಮಚಂದ್ರ ಶೆಟ್ಟಿಗಾರ್‌, ಗ್ರಾ.ಪಂ. ಸದಸ್ಯರು, ಶ್ರೀಕ್ಷೇತ್ರ ಧ.ಗ್ರಾ. ಯೋಜನೆ ಸೇವಾ ಪ್ರತಿನಿಧಿಗಳು, ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು, ಶಿಕ್ಷಕರು ಉಪಸ್ಥಿತರಿದ್ದರು.

ಕೊಲ ಗ್ರಾಮದ ನಾಗರಿಕರು, ಅಖೀಲ ಭಾರತ ಗ್ರಾಮೀಣ ಅಂಚೆ ನೌಕರರ ಸಂಘ ಪುತ್ತೂರು ವಿಭಾಗ, ಶ್ರೀಕ್ಷೇತ್ರ ಧ.ಗ್ರಾ. ಯೋಜನೆ ಕೊಯಿಲ ಒಕ್ಕೂಟ, ಸಿದ್ದಿಶ್ರೀ ಮಹಿಳಾ ಭಜನ ಮಂಡಳಿ ವತಿಯಿಂದ ಕೊರಗಪ್ಪ ಪೂಜಾರಿ ಅವರನ್ನು ಸಮ್ಮಾನಿಸಲಾ ಯಿತು. ಊರ ಅಭಿಮಾನಿಗಳು ಗೌರ ವಾರ್ಪಣೆ ನಡೆಸಿದರು. ಕೊರಗಪ್ಪ ಪೂಜಾರಿ ವತಿಯಿಂದ ಪೋಸ್ಟ್‌ ಮಾಸ್ಟರ್‌ ದಯಾವತಿ ಶೆಟ್ಟಿ ಅವರನ್ನು ಸಮ್ಮಾನಿಸಲಾಯಿತು.

ಸಮ್ಮಾನಕ್ಕೆ ಉತ್ತರಿಸಿದ ಕೊರಗಪ್ಪ ಪೂಜಾರಿ, ಅಂಚೆ ಬಟವಾಡೆ ಪವಿತ್ರ ಕಾರ್ಯ ಎಂದು ಭಾವಿಸಿ 40 ವರ್ಷ ಶ್ರದ್ಧೆಯಿಂದ ಕಾರ್ಯ ನಿರ್ವಹಿಸಿದ ಹೆಮ್ಮೆ ಇದೆ. ಊರ ಜನರ ಪ್ರೀತಿ ಅಭಿಮಾನವೇ ದೊಡ್ಡ ಕೊಡುಗೆಯಾಗಿದೆ. ಆದರೆ ಸರಕಾರದ ಸವಲತ್ತು ದೊರಕಿಲ್ಲ ಎಂಬ ನೋವಿದೆ ಎಂದರು. ಗ್ರಾ.ಪಂ. ಸದಸ್ಯ ಜಗದೀಶ ಕೊಯಿಲ ಸ್ವಾಗತಿಸಿ, ಸುಮಾ ನಾಗರಾಜ್‌ ಸಮ್ಮಾನಪತ್ರ ವಾಚಿಸಿ ದರು. ವಿದ್ಯಾ ವಂದಿಸಿದರು. ಪುರುಷೋತ್ತಮ ಕೊಯಿಲ ನಿರೂಪಿಸಿದರು. ಬಳಿಕ ಜಿಲ್ಲೆಯ ಖ್ಯಾತ ಕಲಾವಿದರ ಕೂಡುವಿಕೆಯಿಂದ ಶರಸೇತು ಬಂಧ ಯಕ್ಷಗಾನ ತಾಳಮದ್ದಳೆ ನಡೆಯಿತು.

ಊರವರ ಕರ್ತವ್ಯ
ಅಧ್ಯಕ್ಷತೆ ವಹಿಸಿದ್ದ ಕೊçಲ ಮಾವಂತೂರು ಶ್ರೀ ಮಹಾಗಣಪತಿ ದೇವಸ್ಥಾನದ ಆಡಳಿತ ಮೊಕ್ತೇಸರ ಪದ್ಮರಾಜ್‌ ಬಲ್ಲಾಳ್‌ ಮಾತನಾಡಿ, ಕೊರಗಪ್ಪ ಪೂಜಾರಿಯವರು ಕರ್ತವ್ಯದಲ್ಲಿ ಮಾತ್ರವಲ್ಲದೆ ತನ್ನ ವ್ಯಕ್ತಿತ್ವ ದಿಂದಲೂ ಜನಪ್ರೀತಿ ಗಳಿಸಿದವರು. ಅವರನ್ನು ಗೌರವಿಸುವುದು ಊರವರ ಕರ್ತವ್ಯ ಎಂದರು.

ಟಾಪ್ ನ್ಯೂಸ್

Maha-Election

Assembly Election: ಮಹಾರಾಷ್ಟ್ರ ಗೆಲ್ಲಲು 10 ಗ್ಯಾರಂಟಿಗಳ ಕೊಟ್ಟ ʼಮಹಾಯುತಿʼ!

HDD–By-election

By Election: ಮುಖ್ಯಮಂತ್ರಿ ಗರ್ವದ ಸೊಕ್ಕು ಮುರಿಯಬೇಕು: ಎಚ್‌.ಡಿ.ದೇವೇಗೌಡ ಗುಡುಗು

ರೈಲು ಬುಕಿಂಗ್‌, ಟ್ರ್ಯಾಕ್‌ಗೆ ‘’ಸೂಪರ್‌ಆ್ಯಪ್‌’: ಮುಂದಿನ ತಿಂಗಳು ಬಿಡುಗಡೆ

Super App: ರೈಲು ಬುಕಿಂಗ್‌, ಟ್ರ್ಯಾಕ್‌ಗೆ ‘’ಸೂಪರ್‌ಆ್ಯಪ್‌’: ಮುಂದಿನ ತಿಂಗಳು ಬಿಡುಗಡೆ

High-Court

Kambala: ಪೆಟಾ ಪಿಐಎಲ್‌; ವಿಚಾರಣೆ ನ.12ಕ್ಕೆ ಮುಂದೂಡಿದ ಹೈಕೋರ್ಟ್‌

CM-Shiigavi-2

MUDA Case: ಕೇವಲ 14 ಸೈಟ್‌ಗಾಗಿ ನಾನು ರಾಜಕಾರಣ ಮಾಡಬೇಕಾ?: ಸಿಎಂ ಸಿದ್ದರಾಮಯ್ಯ

vidan-soudha-kannada

Golden Jubilee: ಕನ್ನಡವೇ ಅಧಿಕಾರಿಗಳ‌ ಹೃದಯದ ಭಾಷೆ ಆಗಲಿ

KSRTC

Transport: ಕೆಎಸ್ಸಾರ್ಟಿಸಿ ದಾಖಲೆ: ಒಂದೇ ದಿನ 1.23 ಕೋಟಿ ಮಂದಿ ಪ್ರಯಾಣ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಸಜೀಪಮೂಡ: ಮನೆಗೆ ಸಿಡಿಲು ಬಡಿದು ಹಾನಿ

Bantwal ಸಜೀಪಮೂಡ: ಮನೆಗೆ ಸಿಡಿಲು ಬಡಿದು ಹಾನಿ

Uppinangady: ರಸ್ತೆ ಬದಿ ಬಿದ್ದ ಕಂಟೈನರ್‌ ಲಾರಿ

Uppinangady: ರಸ್ತೆ ಬದಿ ಬಿದ್ದ ಕಂಟೈನರ್‌ ಲಾರಿ

ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಯಕ್ಷಗಾನ ಮಂಡಳಿ: ಪ್ರಸಕ್ತ ಸಾಲಿನ ಸೇವೆಯಾಟ ಆರಂಭ

Shri Dharmasthala: ಮಂಜುನಾಥೇಶ್ವರ ಯಕ್ಷಗಾನ ಮಂಡಳಿ: ಪ್ರಸಕ್ತ ಸಾಲಿನ ಸೇವೆಯಾಟ ಆರಂಭ

Kumbra

Kukke: ಅಭಯ ಆಂಜನೇಯ ಗುಡಿಯಿಂದ ಕಳವು

missing

Missing Case: ಬೆಳ್ತಂಗಡಿ; ಯುವತಿ ಕಾಣೆ: ದೂರು ದಾಖಲು

MUST WATCH

udayavani youtube

ಗೋವಿನ ಪೂಜೆ ಯಾಕಾಗಿ ಮಾಡಬೇಕು?

udayavani youtube

ಮೇಲುಕೋಟೆಯಲ್ಲಿ ದೀಪಾವಳಿ ಆಚರಿಸುವುದಿಲ್ಲ ಎಂಬ ಮಾತು ನಿಜವೋ ಸುಳ್ಳೋ

udayavani youtube

ಗಣಪತಿ ಸಹಕಾರಿ ವ್ಯವಸಾಯಕ ಸಂಘ ‘ನಿ.’ ಕೆಮ್ಮಣ್ಣು ಶತಾಭಿವಂದನಂ ಸಮಾರೋಪ ಸಂಭ್ರಮ ಸಂಪನ್ನ

udayavani youtube

ಉದಯವಾಣಿ’ಚಿಣ್ಣರ ಬಣ್ಣ -2024

udayavani youtube

ಹಬ್ಬದ ಊಟವೇ ಈ ಹೋಟೆಲ್ ನ ಸ್ಪೆಷಾಲಿಟಿ

ಹೊಸ ಸೇರ್ಪಡೆ

Maha-Election

Assembly Election: ಮಹಾರಾಷ್ಟ್ರ ಗೆಲ್ಲಲು 10 ಗ್ಯಾರಂಟಿಗಳ ಕೊಟ್ಟ ʼಮಹಾಯುತಿʼ!

HDD–By-election

By Election: ಮುಖ್ಯಮಂತ್ರಿ ಗರ್ವದ ಸೊಕ್ಕು ಮುರಿಯಬೇಕು: ಎಚ್‌.ಡಿ.ದೇವೇಗೌಡ ಗುಡುಗು

ರೈಲು ಬುಕಿಂಗ್‌, ಟ್ರ್ಯಾಕ್‌ಗೆ ‘’ಸೂಪರ್‌ಆ್ಯಪ್‌’: ಮುಂದಿನ ತಿಂಗಳು ಬಿಡುಗಡೆ

Super App: ರೈಲು ಬುಕಿಂಗ್‌, ಟ್ರ್ಯಾಕ್‌ಗೆ ‘’ಸೂಪರ್‌ಆ್ಯಪ್‌’: ಮುಂದಿನ ತಿಂಗಳು ಬಿಡುಗಡೆ

High-Court

Kambala: ಪೆಟಾ ಪಿಐಎಲ್‌; ವಿಚಾರಣೆ ನ.12ಕ್ಕೆ ಮುಂದೂಡಿದ ಹೈಕೋರ್ಟ್‌

CM-Shiigavi-2

MUDA Case: ಕೇವಲ 14 ಸೈಟ್‌ಗಾಗಿ ನಾನು ರಾಜಕಾರಣ ಮಾಡಬೇಕಾ?: ಸಿಎಂ ಸಿದ್ದರಾಮಯ್ಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.