ರೈತರಿಗೆ ಕುಮ್ಕಿ, ಬಾಣೆ ಜಮೀನು ಹಕ್ಕು ವಿತರಣೆ: ಸಂಪುಟ ಉಪಸಮಿತಿ ರಚನೆ : ಸಚಿವ ಸುನಿಲ್
Team Udayavani, May 18, 2022, 12:47 AM IST
ಪುತ್ತೂರು: ದ.ಕ., ಉಡುಪಿ, ಕೊಡಗು ಸಹಿತ ಐದಾರು ಜಿಲ್ಲೆಗಳಲ್ಲಿನ ರೈತರಿಗೆ ಕುಮ್ಕಿ, ಬಾಣೆ ಜಮೀನಿನ ಹಕ್ಕು ನೀಡುವ ಸಲುವಾಗಿ ಕಂದಾಯ ಸಚಿವರ ನೇತೃತ್ವದಲ್ಲಿ ಸಂಪುಟ ಉಪ ಸಮಿತಿ ರಚಿಸಲಾಗಿದೆ ಎಂದು ದ.ಕ.ಜಿಲ್ಲಾ ಉಸ್ತುವಾರಿ ಸಚಿವ ವಿ.ಸುನಿಲ್ ಕುಮಾರ್ ಹೇಳಿದರು.
ಪುರಭವನದಲ್ಲಿ ಫಲಾನುಭವಿಗಳಿಗೆ ಹಕ್ಕುಪತ್ರ ವಿತರಣೆ ಹಾಗೂ ಸಾರ್ವಜನಿಕರಿಂದ ಅಹವಾಲು ಸ್ವೀಕಾರ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಈಗಾಗಲೇ ಡೀಮ್ಡ್ ಫಾರೆಸ್ಟ್ ವಿರಹಿತಗೊಳಿಸಿ ಕಂದಾಯ ಇಲಾಖೆಗೆ ನೀಡುವ ಪ್ರಕ್ರಿಯೆ ಅಂತಿಮ ಹಂತದಲ್ಲಿದೆ. ಅಕ್ರಮ ಸಕ್ರಮ 57ರಡಿ ಅರ್ಜಿ ಸಲ್ಲಿಕೆಯನ್ನು ವಿಸ್ತರಿಸಲು ಸಂಪುಟ ಸಭೆ ನಿರ್ಧರಿಸಿದೆ ಎಂದು ಸಚಿವರು ಹೇಳಿದರು.
ಗ್ರಾ.ಪಂ.ಗೆ ಏಕ ವಿನ್ಯಾಸ
ಅನುಮೋದನೆ ಅಧಿಕಾರ
ಗ್ರಾ.ಪಂ.ಗಿದ್ದ ಏಕವಿನ್ಯಾಸ ಅನುಮೋದನ (9/11) ಅಧಿಕಾರವನ್ನು ಯೋಜನಾ ಪ್ರಾಧಿಕಾರಕ್ಕೆ ನೀಡಿರುವುದನ್ನು ರದ್ದುಪಡಿಸಿ ಈ ಹಿಂದಿನಂತೆ ಗ್ರಾ.ಪಂ.ಗೆ ಅಧಿಕಾರ ನೀಡುವಲ್ಲಿ ಸಂಪುಟ ಸಭೆ ತೀರ್ಮಾನಿಸಿದ್ದು ಈ ಮೂಲಕ ಗ್ರಾಮಾಂತರ ಜನರ ಬೇಡಿಕೆಗೆ ಸ್ಪಂದನೆ ನೀಡಲಾಗಿದೆ ಎಂದು ಸಚಿವರು ಹೇಳಿದರು.
ಶಾಸಕ ಸಂಜೀವ ಮಠಂದೂರು ಮಾತನಾಡಿ, ಸರಕಾರವು ಹಲವು ಯೋಜನೆಗಳ ಮೂಲಕ ಜನರಿಗೆ ಮೂಲಭೂತ ಸೌಕರ್ಯ ಒದಗಿಸುವ ಕಾರ್ಯ ಮಾಡುತ್ತಿದ್ದು ಸಚಿವ ಸುನಿಲ್ ಕುಮಾರ್ ಉಸ್ತುವಾರಿ, ಇಂಧನ ಸಚಿವರಾಗಿ ಸೌಲಭ್ಯಗಳನ್ನು ತಳಮಟ್ಟದ ಜನರಿಗೆ ತಲುಪಿಸುವ ನಿಟ್ಟಿನಲ್ಲಿ ಮುತುವರ್ಜಿ ವಹಿಸಿದ್ದಾರೆ. ತಾಲೂಕಿಗೆ ದಿನದ 24 ತಾಸು ವಿದ್ಯುತ್ ನೀಡುವ ಸಲುವಾಗಿ ನೆಕ್ಕಿಲಾಡಿ, ಕೈಕಾರದಲ್ಲಿ 110 ಕೆ.ವಿ.ಸಬ್ ಸ್ಟೇಷನ್ ನಿರ್ಮಾಣಕ್ಕೆ ಸಚಿವರು ಸಕರಾತ್ಮಕ ಸ್ಪಂದನೆ ನೀಡಿದ್ದಾರೆ ಎಂದರು.
ಕಡತ ವಿಲೇಗೆ ಸೂಚನೆ
ದ. ಕ. ಜಿಲ್ಲಾಧಿಕಾರಿ ಡಾ| ರಾಜೇಂದ್ರ ಕೆ.ವಿ. ಮಾತನಾಡಿ, ಜಿಲ್ಲೆಯಲ್ಲಿ ಪ್ಲಾಟಿಂಗ್ ಕಡತಗಳು ಬಾಕಿ ಇದ್ದು 11,500 ಅರ್ಜಿ ವಿಲೇ ಆಗಬೇಕಿದೆ. ಈ ಬಗ್ಗೆ ಸಹಾಯಕ ಆಯುಕ್ತರಿಗೆ, ತಹಶೀಲ್ದಾರ್, ಕಂದಾಯ ನಿರೀಕ್ಷಕ, ಗ್ರಾಮಕರಣಿಕರಿಗೆ ನಿರ್ದೇಶನ ನೀಡಲಾಗಿದ್ದು ಜೂ. 20ರೊಳಗೆ ವಿಲೇ ಪೂರ್ಣಗೊಳಿಸುವಂತೆ ಸೂಚಿಸಲಾಗಿದೆ ಎಂದರು.
ಈ ಸಂದರ್ಭ 53, 57 ಅಕ್ರಮ ಸಕ್ರಮ ಹಕ್ಕುಪತ್ರ, ಪ್ರಾಪರ್ಟಿ ಕಾರ್ಡ್ ಸೇರಿದಂತೆ ವಿವಿಧ ಸವಲತ್ತುಗಳನ್ನು ಜನರಿಗೆ ವಿತರಿಸಲಾಯಿತು.
ಜಿ.ಪಂ. ಸಿಇಒ ಡಾ| ಕುಮಾರ್, ಪೊಲೀಸ್ ವರಿಷ್ಠಾಧಿಕಾರಿ ಹೃಷಿಕೇಶ್ ಸೋನಾವಣೆ, ನಗರಸಭೆ ಅಧ್ಯಕ್ಷ ಜೀವಂಧರ್ ಜೈನ್, ಪುಡಾ ಅಧ್ಯಕ್ಷ ಭಾಮೀ ಅಶೋಕ್ ಶೆಣೈ, ಸಹಾಯಕ ಆಯುಕ್ತ ಗಿರೀಶ್ ನಂದನ್, ಡಿವೈಎಸ್ಪಿ ಡಾ| ಗಾನ ಪಿ ಕುಮಾರ್, ತಹಶೀಲ್ದಾರ್ ರಮೇಶ್ ಬಾಬು ಉಪಸ್ಥಿತರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Leopard: ಮನೆಯ ಮಹಡಿ ಮೇಲೆ ಚಿರತೆ ಓಡಾಟ, CCTVಯಲ್ಲಿ ದೃಶ್ಯ ಸೆರೆ, ಆತಂಕದಲ್ಲಿ ಗ್ರಾಮಸ್ಥರು
Bangladesh: ಶೇ.90ರಷ್ಟಿ ಮುಸ್ಲಿಮರು ಇರುವ ಬಾಂಗ್ಲಾದೇಶ ಶೀಘ್ರ ಇಸ್ಲಾಮಿಕ್ ರಾಷ್ಟ್ರ?
India-South Africa; ನಾಲ್ಕನೇ ಟಿ20 ಪಂದ್ಯ ಇಂದು: ಸರಣಿ ಗೆಲುವಿನ ನಿರೀಕ್ಷೆಯಲ್ಲಿ ಭಾರತ
Marriage: ಕ್ರಿಸ್ಮಸ್‌ಗೆ ಅಮೆಜಾನ್ ಸಿಇಒ ಅದ್ಧೂರಿ ವಿವಾಹ?
Washington: ಅಮೆರಿಕ ಗುಪ್ತಚರ ಸಂಸ್ಥೆಗೆ ತುಳಸಿ ಗಬಾರ್ಡ್ ಮುಖ್ಯಸ್ಥೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.