‘ಸುಜ್ಞಾನ ನಿಧಿ ಶಿಷ್ಯವೇತನ’ ವಿತರಣೆ
Team Udayavani, Jan 16, 2019, 9:14 AM IST
ಪುತ್ತೂರು: ಶ್ರೀ ಕ್ಷೇತ್ರ ಧ.ಗ್ರಾ. ಯೋಜನೆ ಮೂಲಕ ಪ.ಪೂ. ಹಾಗೂ ಪದವಿಯ ಬಳಿಕ ವೃತ್ತಿಪರ ಶಿಕ್ಷಣ ಮಾಡುವ ಯೋಜನೆಯ ಸದಸ್ಯರ ಮಕ್ಕಳಿಗೆ ನೀಡಲಾಗುವ ‘ಸುಜ್ಞಾನ ನಿಧಿ ಶಿಷ್ಯ ವೇತನ’ ವಿತರಣೆ ಕಾರ್ಯಕ್ರಮವು ಯೋಜನೆಯ ಪುತ್ತೂರು ಪ್ರಧಾನ ಕಚೇರಿ ಸಭಾಂಗಣದಲ್ಲಿ ಮಂಗಳವಾರ ನಡೆಯಿತು.
ಪ್ರಾಸ್ತಾವಿಕವಾಗಿ ಮಾತನಾಡಿದ ತಾ| ಯೋಜನಾಧಿಕಾರಿ ಜನಾರ್ದನ ಎಸ್., ಗ್ರಾಮಾಭಿವೃದ್ಧಿ ಯೋಜನೆ ಆರಂಭ ಗೊಂಡು 25 ವರ್ಷಗಳನ್ನು ಪೂರೈಸಿದ ನೆನಪಿನಲ್ಲಿ 2007ರಲ್ಲಿ ಸುಜ್ಞಾನ ನಿಧಿ ಶಿಷ್ಯ ವೇತನ ವಿತರಣೆಗೆ ಚಾಲನೆ ನೀಡಲಾಗಿದೆ. ಈ ವರೆಗೆ ರಾಜ್ಯದಲ್ಲಿ 34 ಸಾವಿರ ಮಕ್ಕಳಿಗೆ 39 ಕೋಟಿ ರೂ. ಶಿಷ್ಯ ವೇತನ ವಿತರಿಸಲಾಗಿದೆ. 2018 -19ನೇ ಸಾಲಿನಲ್ಲಿ 10,146 ಮಕ್ಕಳಿಗೆ ವಿದ್ಯಾರ್ಥಿ ವೇತನ ವಿತರಿಸಲಾಗುತ್ತಿದೆ ಎಂದರು.
2007ರಿಂದ ಪುತ್ತೂರು ತಾಲೂಕಿನಲ್ಲಿ 863 ವಿದ್ಯಾರ್ಥಿಗಳಿಗೆ 1 ಕೋಟಿ ರೂ. ವಿದ್ಯಾರ್ಥಿವೇತನ ನೀಡಲಾಗಿದೆ. ಈ ಬಾರಿ 51 ಹೊಸ ಹಾಗೂ 68 ನವೀಕರಣ ಸಹಿತ ತಾಲೂಕಿನ 119 ವಿದ್ಯಾರ್ಥಿಗಳನ್ನು ವಿದ್ಯಾರ್ಥಿ ವೇತನಕ್ಕೆ ಆಯ್ಕೆ ಮಾಡಲಾಗಿದೆ ಎಂದು ಮಾಹಿತಿ ನೀಡಿದರು.
ಕಟ್ಟ ಕಡೆಯ ವ್ಯಕ್ತಿಗೆ
ಜನಜಾಗೃತಿ ವೇದಿಕೆ ಪುತ್ತೂರು ತಾಲೂಕು ಅಧ್ಯಕ್ಷ ಪದ್ಮನಾಭ ಶೆಟ್ಟಿ ಮಾತನಾಡಿ, ಇಂದು ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಧರ್ಮಸ್ಥಳದ ಯೋಜನೆ ತಲುಪುತ್ತಿದೆ. ಸಮಾಜದ ಆವಶ್ಯಕತೆಯನ್ನು ಗಮನಿಸಿ ಕೈಜೋಡಿಸುವ ಕೆಲಸವನ್ನು ಧರ್ಮಸ್ಥಳದ ಗ್ರಾಮಾಭಿವೃದ್ಧಿ ಯೋಜನೆ ಮಾಡುತ್ತಿದೆ ಎಂದು ಹೇಳಿದರು.
ಸುಜ್ಞಾನ ನಿಧಿ ಶಿಷ್ಯ ವೇತನದ ಫಲಾನುಭವಿ ವಿದ್ಯಾರ್ಥಿಗಳು, ಧ. ಗ್ರಾ. ಯೋಜನೆಯ ಅಧಿಕಾರಿಗಳು, ಸಿಬಂದಿ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ವಲಯ ಮೇಲ್ವಿಚಾರಕಿ ಪಾವನಾ ಸ್ವಾಗತಿಸಿ, ವಲಯ ಮೇಲ್ವಿಚಾರಕಿ ಪುಷ್ಪಾ ವಂದಿಸಿದರು.
ಸಹಕಾರದ ಚಿಂತನೆ
ವಿದ್ಯಾರ್ಥಿ ವೇತನವನ್ನು ವಿತರಿಸಿ ಮಾತನಾಡಿದ ಪುತ್ತೂರು ತಾಲೂಕು ಪಂಚಾಯತ್ ಅಧ್ಯಕ್ಷ ರಾಧಾಕೃಷ್ಣ ಬೋರ್ಕರ್, ಸರಕಾರ ಮಾಡಬೇಕಾದ ಕರ್ತವ್ಯದ ಪಾಲನ್ನು ನಿಭಾಯಿಸುತ್ತಿರುವ ಧರ್ಮಸ್ಥಳ ಕ್ಷೇತ್ರ ಅನೇಕ ಜನಪರ ಯೋಜನೆಗಳನ್ನು ಜಾರಿಗೊಳಿಸಿದೆ. ಸಮಾಜದ ಎಲ್ಲರೂ ಮುಖ್ಯವಾಹಿನಿಯಲ್ಲಿ ಕಾಣಿಸಿಕೊಳ್ಳಬೇಕೆಂಬ ಧರ್ಮಸ್ಥಳದ ಧರ್ಮಾಧಿಕಾರಿ ಡಾ| ವೀರೇಂದ್ರ ಹೆಗ್ಗಡೆ ಅವರ ಚಿಂತನೆ ನಿಜಕ್ಕೂ ಶ್ಲಾಘನೀಯ ಎಂದರು. ವಿದ್ಯಾರ್ಥಿಗಳು ಕರ್ತವ್ಯವನ್ನು ಮರೆಯದೆ ಉತ್ತಮ ಗುರಿಯ ಕಡೆಗೆ ಸಾಗಬೇಕು ಎಂದು ಹೇಳಿದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.