BSNL TOWER; ಕರಾವಳಿ ಕುಗ್ರಾಮಗಳಿಗೆ ಬಿಎಸ್ಸೆನ್ನೆಲ್‌ 4ಜಿ ಸೇವೆ

ದ.ಕ.ದ 66, ಉಡುಪಿಯ 36 ಕಡೆಗಳಲ್ಲಿ ಟವರ್‌ ಸ್ಥಾಪನೆ

Team Udayavani, Jul 31, 2023, 7:05 AM IST

BSNL TOWER; ಕರಾವಳಿ ಕುಗ್ರಾಮಗಳಿಗೆ ಬಿಎಸ್ಸೆನ್ನೆಲ್‌ 4ಜಿ ಸೇವೆ

ಬೆಳ್ತಂಗಡಿ: ಕೇಂದ್ರ ಸರಕಾರವು ಸಾರ್ವತ್ರಿಕ ಸೇವಾ ಬಾಧ್ಯತೆ ನಿಧಿ (ಯುನಿವರ್ಸಲ್‌ ಸರ್ವೀಸ್‌ ಆಬ್ಲಿಗೇಶನ್‌ ಫ‌ಂಡ್‌)ಯಡಿ ದೇಶಾದ್ಯಂತ ಕುಗ್ರಾಮಗಳ ಸಹಿತ ಸ್ವಲ್ಪವೂ ನೆಟ್‌ವರ್ಕ್‌ ತಲುಪದ 3 ಲಕ್ಷಕ್ಕೂ ಅಧಿಕ ಸ್ಥಳಗಳಲ್ಲಿ ಸ್ಥಾಪಿಸಲಿರುವ ಬಿಎಸ್ಸೆನ್ನೆಲ್‌ 4ಜಿ ಸೇವೆ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯಲ್ಲೂ ಅನುಷ್ಠಾನಗೊಳ್ಳಲಿದೆ. ಇದರಿಂದ ಕರಾವಳಿಯ ಕುಗ್ರಾಮಗಳಿಗೂ ಇನ್ನು ನೆಟ್‌ವರ್ಕ್‌ ಲಭಿಸಲಿದೆ.

ಸರಕಾರಿ ಸ್ವಾಮ್ಯದ ಬಿಎಸ್ಸೆನ್ನೆಲ್‌ನ ಗುಣಮಟ್ಟ ಹೆಚ್ಚಿಸುವ ಸಲುವಾಗಿ ಕೇಂದ್ರ ಸರಕಾರವು ಮೇಕ್‌ ಇನ್‌ ಇಂಡಿಯಾದಡಿ ಟಿಸಿಎಸ್‌ (ಟಾಟಾ ಕನ್ಸಲ್ಟೆನ್ಸಿ ಸರ್ವೀಸ್‌) ಮತ್ತು ಐಟಿಐ ಲಿ. ಒಪ್ಪಂದದೊಂದಿಗೆ ದೇಶದ ವಿವಿಧೆಡೆ 4ಜಿ ನೆಟ್‌ವರ್ಕ್‌ ಟವರ್‌ ಸ್ಥಾಪಿಸಲಿದೆ. ಈಗಿರುವ 4ಜಿಯನ್ನೇ ಮುಂದೆ 5ಜಿ ಸೇವೆಯಾಗಿ ಪರಿವರ್ತಿಸಲು ಕೂಡ ಸಾಧ್ಯವಿದೆ.

ದ.ಕ.ದ ಎಲ್ಲೆಲ್ಲಿ ನೂತನ ಟವರ್‌ ನಿರ್ಮಾಣ?
ಬಂಟ್ವಾಳ ತಾಲೂಕಿನ ಕೈಲಾರು, ಹಂಚಿಕಟ್ಟ, ಬೋಳಂತೂರು ಕೇಶವ ನಗರ, ಕುರಿಯಾಲ, ಅಬ್ಬೆಟ್ಟು, ನಾಟೆಕಲ್ಲು, ಬೆಳ್ತಂಗಡಿ ತಾಲೂಕಿನ ಪೆರಾಡಿ, ಅಣಿಯೂರು, ಬದನಾಜೆ, ನಿಟ್ಟಡ್ಕ, ಬರೆಂಗಾಯ, ಚಾರ್ಮಾಡಿ ಕಾಂಜಾಲ್‌, ಮಾಲಾಡಿ ಕರಿಯಬೆ, ಕೆಮ್ಮಟೆ, ಕೊಡಿಯಾಲುಬೈಲು, ಕೊಲ್ಪಾಡಿ, ಕುಪ್ಲೊಟ್ಟು, ಬೈಪಾಡಿ, ಮುಂಡೂರು, ಪೆರ್ನಡ್ಕ, ಮಿಯಲಾಜೆ, ಎಳನೀರು, ಪೆರ್ಲ, ಕಡಬ ತಾಲೂಕಿನ ಕುಡೂÉರು, ಒಲಕಡಮ, ಮಂಜುನಾಥ ನಗರ, ಉಳಿಪ್ಪು, ಕಲ್ಲಪ್ಪಾರು, ಮಂಜೋಲಿ ಮಲೆ, ಆಲಂತಾಯ, ಬೆತ್ತೋಡಿ, ದೋಲ್ಪಾಡಿ, ಪುತ್ತಿಗೆ, ಸಿರಿಬಾಗಿಲು, ಸುರುಳಿ, ಮಂಗಳೂರು ತಾಲೂಕಿನ ಒಡೂxರು, ಮೂಡುಬಿದಿರೆಯ ಕೇಮಾರು, ಪಡುಮಾರ್ನಾಡಿನ ಮೂರುಗೋಳಿ, ಪುತ್ತೂರು ತಾಲೂಕಿನ ಕೊರಂಬಡ್ಕ, ಕುವೆಚ್ಚಾರು, ದೂಮಡ್ಕ, ಎಟ್ಯಡ್ಕ, ಗುತ್ತಿಕಲ್ಲು, ನೆಟ್ಟಣಿಗೆ ಫಳ್ನೀರು, ಸುಳ್ಯ ತಾಲೂಕಿನ ಕಂದ್ರಪಾಡಿ, ದೇವ, ಗಬ್ಬಲಡ್ಕ, ಸೋಣಂಗೇರಿ, ಪೆರಂಗೋಡಿ, ದೇರಾಜೆ, ಪೇರಾಲು, ಮಡಪ್ಪಾಡಿ ಗುಡ್ಡೆ ಮನೆ, ಬಾಳುಗೋಡು, ಆಚಳ್ಳಿ, ಚಿಕ್ಕಿನಡ್ಕ, ಬಡ್ಡಡ್ಕ, ಬಾಂಜಿಕೋಡಿ, ಕೆಮ್ರಾಜೆಯ ಬೆಟ್ಟ ಬೊಳ್ಳಾಜೆ, ಜೀರ್ಮುಕ್ಕಿ, ಕಟ್ಟ, ಕೊಪ್ಪಡ್ಕ, ಕೋನಡ್ಕ, ಕೂರ್ನಡ್ಕ ಕೂತ್ಕುಂಜ, ಕುತ್ತಮೊಟ್ಟೆ, ಅಜ್ಜಾವರ ಮುಳ್ಯ, ನಾರ್ಣಕಜೆ ಈ ಸ್ಥಳಗಳಲ್ಲಿ ಟವರ್‌ ನಿರ್ಮಾಣಗೊಳ್ಳಲಿವೆ.

ಉಡುಪಿ ಜಿಲ್ಲೆಯ ಪಂಚನ ಬೆಟ್ಟು, ಕಾರ್ಕಳದ ಕೌಡೂರು, ಮಾಳ ಹುಕ್ರಟ್ಟೆ, ಮುಟ್ಲುಪಾಡಿ, ನೂರಾಲ್‌ಬೆಟ್ಟು, ಕಾಂತಾವರದ ಬೆಲ್ಲಾಡಿ, ಬೈಂದೂರಿನ ನಾಗರಮಕ್ಕಿ, ಗಂಗನಾಡು, ಮೂಡನಗದ್ದೆ, ಬೊಳ್ಳಂಬಳ್ಳಿ, ಚುಚ್ಚಿ, ಕೊಲ್ಲೂರು ದಳಿ, ಜಡ್ಕಲ್‌ ಬಸ್ರಿಬೇರು, ಇಡೂರು ಕುಕ್ಕಡ, ಬರದಕಲ್ಲು, ಬೆಳ್ಳಾಲ ಊರುಬೈಲ್‌, ನಂದೊಳ್ಳಿ, ಹಳ್ಳಿಹೊಳೆಯ ಇರಿಗೆ, ಕುಂದನ  ಬೈಲು, ಕಬ್ಬಿನಾಲೆ ಕುಂದಾಪುರದ ಆರ್ಗೋಡು, ಎಳೆಬೇರು, ಬೆಚ್ಚಳ್ಳಿ, ಸಿದ್ದಾಪುರದ ಐರಬೈಲು, ಸೋಣಿ, ಹೆಬ್ರಿಯ ಬೆಪಿx, ಮಡಾಮಕ್ಕಿ, ಕರ್ಜೆ ಕುರ್ಪಾಡಿ, ಕಾಸನಮಕ್ಕಿಗಳಲ್ಲಿ ಟವರ್‌ ಸ್ಥಾಪನೆಯಾಗಲಿವೆ.

ದೇಶಾದ್ಯಂತ ನೆಟ್‌ವರ್ಕ್‌
ಸ್ಯಾಚುರೇಶನ್‌ ಆಫ್ 4ಜಿ ಮೊಬೈಲ್‌ ಯೋಜನೆಯಡಿ ಯುನಿವರ್ಸಲ್‌ ಸರ್ವೀಸ್‌ ಆಬ್ಲಿಗೇಶನ್‌ ಫಂಡ್ ಮೂಲಕ ಭಾರತ್‌ ಸಂಚಾರ್‌ ನಿಗಮ್‌ ಲಿಮಿಟೆಡ್‌ (ಬಿಎಸ್ಸೆನ್ನೆಲ್‌)ಆತ್ಮನಿರ್ಭರ್‌ ಭಾರತ್‌ನ 4ಜಿ ತಂತ್ರಜ್ಞಾನ ಬಳಸಿದೆ. ದೇಶದಾದ್ಯಂತ ತೀರಾ ಹಳ್ಳಿಗಳಲ್ಲಿ 4ಜಿ ಮೊಬೈಲ್‌ ಸೇವೆ ಒದಗಿಸುವುದು ಇದರ ಉದ್ದೇಶ. ಒಟ್ಟು 26,316 ಕೋಟಿ ರೂ.ಗಳ ಯೋಜನೆ ಇದಾಗಿದ್ದು, ದೂರದ ಮತ್ತು ಕಷ್ಟಕರ ಪ್ರದೇಶಗಳ 24,680 ಹಳ್ಳಿಗಳಲ್ಲಿ 4ಜಿ ಮೊಬೈಲ್‌ ಸೇವೆಗಳನ್ನು ಒದಗಿಸಲಿದೆ. ಇದರೊಂದಿಗೆ ಈಗಾಗಲೇ ಇರುವ 2ಜಿ ಅಥವಾ 3ಜಿ ಸಂಪರ್ಕ ಹೊಂದಿರುವ 6,279 ಗ್ರಾಮಗಳನ್ನು 4ಜಿಗೆ ಅಪ್‌ಗೆÅàಡ್‌ ಮಾಡಲಾಗುತ್ತದೆ. 4ಜಿ ಸ್ಯಾಚುರೇಶನ್‌ ಪ್ರೊಜೆಕ್ಟ್‌ನಡಿ ದೇಶಾದ್ಯಂತ 17 ಸಾವಿರ, ಕರ್ನಾಟಕದಲ್ಲಿ 700ಕ್ಕೂ ಅಧಿಕ ತೀರಾ ಹಳ್ಳಿಗಾಡು ಪ್ರದೇಶದಲ್ಲಿ ಈ ಟವರ್‌ ಸ್ಥಾಪನೆಯಾಗಲಿದೆ.

ದ.ಕ., ಉಡುಪಿಯಲ್ಲಿ ಸರ್ವೇ ಪೂರ್ಣ
ದ.ಕ. ಜಿಲ್ಲೆಯಲ್ಲಿ 66, ಉಡುಪಿ ಜಿಲ್ಲೆಯ 36 ಕಡೆ ರಾಷ್ಟ್ರೀಯ ಉದ್ಯಾನವನ ಸಹಿತ ಅರಣ್ಯದಂಚಿನ ಪ್ರದೇಶಗಳಲ್ಲಿ ನೂತನ 4ಜಿ ನೆಟ್‌ವರ್ಕ್‌ ಟವರ್‌ ಸ್ಥಾಪನೆಗಾಗಿ ಸರ್ವೇ ನಡೆಸ ಲಾಗಿದೆ. ಸರಕಾರಿ ಸ್ಥಳದಲ್ಲಿ 43 ಕಡೆ ಜಮೀನು ಮಂಜೂರಾಗಿದ್ದು 5- 6 ಕಡೆ ಅರಣ್ಯ, ಉಳಿದಂತೆ ಖಾಸಗಿ ಸ್ಥಳದಲ್ಲಿದೆ. ಪ್ರತೀ ಟವರ್‌ 2 ಸಾವಿರ ಚದರ ಅಡಿ ವಿಸ್ತೀರ್ಣದಲ್ಲಿ ನಿರ್ಮಾಣ ಗೊಳ್ಳಲಿದ್ದು, ತಲಾ 1 ಕೋ.ರೂ. ನಿರ್ಮಾಣ ವೆಚ್ಚ ತಗಲಲಿದೆ. 2 ಕಿ.ಮೀ. ವ್ಯಾಪ್ತಿಯಲ್ಲಿ 4ಜಿ ಸೇವೆ ಲಭ್ಯವಾಗಲಿದ್ದು, ಇದರ ನಿರ್ವಹಣೆಯನ್ನು ಖಾಸಗಿಗೆ ನೀಡಲಾಗುತ್ತದೆ ಎಂದು ಬಿಎಸ್ಸೆನ್ನೆಲ್‌ ದ.ಕ. ವಿಭಾಗದ ಎಜಿಎಂ ಎಸ್‌.ಜಿ. ದೇವಾಡಿಗ “ಉದಯವಾಣಿ’ಗೆ ತಿಳಿಸಿದ್ದಾರೆ.

ಉಡುಪಿಯಲ್ಲಿ 27 ಟವರ್‌ ಸ್ಥಾಪಿಸ ಲಾಗಿದ್ದು, ದ.ಕ.ದಲ್ಲಿ 2 ಪೂರ್ಣ ಗೊಂಡಿವೆ. 2ನೇ ಹಂತದಲ್ಲಿ ಉಡುಪಿಯಲ್ಲಿ 9, ದ.ಕ.ದಲ್ಲಿ 64 ಕಡೆ 2024ರ ಜೂನ್‌ ಒಳಗೆ ಕಾಮಗಾರಿ ಪೂರ್ಣ ಗೊಳ್ಳಲಿದೆ. ಉಭಯ ಜಿಲ್ಲೆಯಲ್ಲಿ ಈಗಾಗಲೇ ಇರುವ 600ರಷ್ಟು ಹಳೇ 2ಜಿ ಟವರ್‌ಗಳನ್ನು ಒಂದೂವರೆ ವರ್ಷದಲ್ಲಿ
4 ಜಿಗೆ ಅಪ್‌ಗ್ರೇಡ್‌ ಮಾಡಲಾಗುತ್ತದೆ.
– ನವೀನ್‌ ಕುಮಾರ್‌ ಗುಪ್ತ,
ಪಿಜಿಎಂ, ಬಿಎಸ್ಸೆನ್ನೆಲ್‌

ದ.ಕ. ಜಿಲ್ಲೆಯಲ್ಲಿ 50 ಪ್ರದೇಶಗಳ ಸಮೀಕ್ಷೆ ಪೂರ್ಣಗೊಂಡಿದೆ. ಉಳಿದ ಕಡೆಗಳಲ್ಲಿ ಸರ್ವೇ ನಡೆಯುತ್ತಿದೆ. ಇದು ಪೂರ್ಣಗೊಂಡ ಕೂಡಲೇ ಗುರುತಿಸಲಾದ ಜಾಗಗಳನ್ನು ಬಿಎಸ್ಸೆನ್ನೆಲ್‌ಗೆ ಹಸ್ತಾಂತರಿಸಿ ಟವರ್‌ ನಿರ್ಮಾಣ ಆರಂಭವಾಗಲಿದೆ.
ಮುಲ್ಲೈ ಮುಗಿಲನ್‌, ಜಿಲ್ಲಾಧಿಕಾರಿ, ದ.ಕ.

- ಚೈತ್ರೇಶ್‌ ಇಳಂತಿಲ

ಟಾಪ್ ನ್ಯೂಸ್

Plane Mishap: ಲಘು ವಿಮಾನ ಪತನ… ಬ್ರೆಜಿಲ್ ನ ಉದ್ಯಮಿ ಸೇರಿ ಹತ್ತು ಮಂದಿ ಮೃತ್ಯು

Plane Mishap: ಲಘು ವಿಮಾನ ಪತನ… ಬ್ರೆಜಿಲ್ ನ ಉದ್ಯಮಿ ಸೇರಿ ಹತ್ತು ಮಂದಿ ಮೃತ್ಯು

‌BBK11: ಬಾಯಿ ಮುಚ್ಕೊಂಡು ಇರು..‌ ಫೈಯರ್‌ ಬ್ರ್ಯಾಂಡ್ ಚೈತ್ರಾ ಕೋಪಕ್ಕೆ ಮನೆಮಂದಿ ಶಾಕ್.!

‌BBK11: ಬಾಯಿ ಮುಚ್ಕೊಂಡು ಇರು..‌ ಫೈಯರ್‌ ಬ್ರ್ಯಾಂಡ್ ಚೈತ್ರಾ ಕೋಪಕ್ಕೆ ಮನೆಮಂದಿ ಶಾಕ್.!

1-chali

Kashmir cold: 34 ವರ್ಷಗಳಲ್ಲೇ ಕನಿಷ್ಠ ತಾಪಮಾನ ದಾಖಲು!

Hemmadi-Sevantige

Natural Disaster: ಅನಿರೀಕ್ಷಿತ ಮಳೆಗೆ ಸೊರಗಿದ ವಿಶಿಷ್ಟ ಗುಣದ ಹೆಮ್ಮಾಡಿ ಸೇವಂತಿಗೆ

rain-dk

Rain Alert: ರಾಜ್ಯದಲ್ಲಿ ಕನಿಷ್ಠ ತಾಪಮಾನ 4 ಡಿ.ಸೆ ಏರಿಕೆ; ಹಲವೆಡೆ 24ರಂದು ಮಳೆ ಸಾಧ್ಯತೆ

1-puri

Puri; ವರ್ಷಾರಂಭದೊಂದಿಗೆ ಜಗನ್ನಾಥ ದೇಗುಲದಲ್ಲಿ ಹೊಸ ದರ್ಶನ ವ್ಯವಸ್ಥೆ

tirupati

Tirupati; ದೇವಸ್ಥಾನದಲ್ಲೂ ಶೀಘ್ರ ಎಐ ಚಾಟ್‌ಬಾಟ್‌!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Car-Palti

Sulya: ಚಾಲಕನ ನಿಯಂತ್ರಣ ತಪ್ಪಿ ಕಾರು ಪಲ್ಟಿ

Accident-logo

Putturu: ಬೈಕ್‌-ಪಿಕಪ್‌ ಢಿಕ್ಕಿ: ಇಬ್ಬರು ಸವಾರರಿಗೆ ಗಂಭೀರ ಗಾಯ

Arrest

Bantwala: ನಾವೂರು: ಅತ್ಯಾಚಾರ; ಆರೋಪಿಗೆ ನ್ಯಾಯಾಂಗ ಬಂಧನ

Perla-fire

Disaster: ಪೆರ್ಲದಲ್ಲಿ ಭಾರೀ ಬೆಂಕಿ ದುರಂತ; ಐದು ಅಂಗಡಿಗಳು ಸಂಪೂರ್ಣ ಭಸ್ಮ

death

Puttur: ಎಲೆಕ್ಟ್ರಿಕ್‌ ಆಟೋ ರಿಕ್ಷಾ ಪಲ್ಟಿ; ಚಾಲಕ ಮೃತ್ಯು

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

Plane Mishap: ಲಘು ವಿಮಾನ ಪತನ… ಬ್ರೆಜಿಲ್ ನ ಉದ್ಯಮಿ ಸೇರಿ ಹತ್ತು ಮಂದಿ ಮೃತ್ಯು

Plane Mishap: ಲಘು ವಿಮಾನ ಪತನ… ಬ್ರೆಜಿಲ್ ನ ಉದ್ಯಮಿ ಸೇರಿ ಹತ್ತು ಮಂದಿ ಮೃತ್ಯು

‌BBK11: ಬಾಯಿ ಮುಚ್ಕೊಂಡು ಇರು..‌ ಫೈಯರ್‌ ಬ್ರ್ಯಾಂಡ್ ಚೈತ್ರಾ ಕೋಪಕ್ಕೆ ಮನೆಮಂದಿ ಶಾಕ್.!

‌BBK11: ಬಾಯಿ ಮುಚ್ಕೊಂಡು ಇರು..‌ ಫೈಯರ್‌ ಬ್ರ್ಯಾಂಡ್ ಚೈತ್ರಾ ಕೋಪಕ್ಕೆ ಮನೆಮಂದಿ ಶಾಕ್.!

1-chali

Kashmir cold: 34 ವರ್ಷಗಳಲ್ಲೇ ಕನಿಷ್ಠ ತಾಪಮಾನ ದಾಖಲು!

Hemmadi-Sevantige

Natural Disaster: ಅನಿರೀಕ್ಷಿತ ಮಳೆಗೆ ಸೊರಗಿದ ವಿಶಿಷ್ಟ ಗುಣದ ಹೆಮ್ಮಾಡಿ ಸೇವಂತಿಗೆ

rain-dk

Rain Alert: ರಾಜ್ಯದಲ್ಲಿ ಕನಿಷ್ಠ ತಾಪಮಾನ 4 ಡಿ.ಸೆ ಏರಿಕೆ; ಹಲವೆಡೆ 24ರಂದು ಮಳೆ ಸಾಧ್ಯತೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.