‘ಅನುದಾನ ಪಡೆಯುವಲ್ಲಿ ದ.ಕ. ರಾಜ್ಯಕ್ಕೆ ಪ್ರಥಮ’
Team Udayavani, Feb 16, 2018, 4:41 PM IST
ಬೆಳ್ತಂಗಡಿ: ಬೆಳ್ತಂಗಡಿ ತಾಲೂಕಿನಲ್ಲಿ ಅತೀ ಹೆಚ್ಚು 52 ಅಂಗನವಾಡಿ ಕಟ್ಟಡ ನಿರ್ಮಾಣಕ್ಕೆ 8 ಕೋಟಿ 32 ಲಕ್ಷ ರೂ. ಅನುದಾನ ಮಂಜೂರಾಗಿದ್ದು, ದ.ಕ. ಜಿಲ್ಲೆಗೆ 20 ಕೋ. ರೂ. ಅನುದಾನ ಮಂಜೂರಾಗಿದೆ. ಈ ಜಿಲ್ಲೆ ಹೆಚ್ಚು ಅನುದಾನ ಪಡೆಯುವಲ್ಲಿ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದಿದೆ ಎಂದು ಶಾಸಕ ಹಾಗೂ ಸಣ್ಣ ಕೈಗಾರಿಕಾ ಅಭಿವೃದ್ಧಿ ನಿಗಮದ ಅಧ್ಯಕ್ಷ ಕೆ. ವಸಂತ ಬಂಗೇರ ಹೇಳಿದರು.
ಅವರು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ, ಜಿ.ಪಂ. ಎಂಜಿನಿಯರಿಂಗ್ ಉಪ ವಿಭಾಗ ಬೆಳ್ತಂಗಡಿ, ಮಹಿಳೆ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಬೆಳ್ತಂಗಡಿ, ಗ್ರಾ.ಪಂ. ಮೇಲಂತಬೆಟ್ಟು ಆಶ್ರಯದಲ್ಲಿ 16.57 ಲಕ್ಷ ರೂ. ಅನುದಾನದಿಂದ ಮುಂಡೂರು ಗ್ರಾಮದ ಕೋಟಿಕಟ್ಟೆ ಅಂಗನವಾಡಿ ಕಟ್ಟಡ ಉದ್ಘಾಟನೆ, ರಾಜ್ಯ ಸರಕಾರದ ಪ.ಜಾ.- ಪ.ಪಂ.ದ ರಸ್ತೆ ನಿರ್ಮಾಣದಡಿ 113 ಲಕ್ಷ ರೂ. ಅನುದಾನದದಿಂದ ಬದ್ಯಾರು-ಕೋಟಿಕಟ್ಟೆ 1.48 ಕಿ. ಮೀ. ರಸ್ತೆಯ ಕಾಂಕ್ರೀಟ್ ಕಾಮಗಾರಿಗೆ ಶಂಕುಸ್ಥಾಪನೆ ನಡೆಸಿ ಮಾತನಾಡಿದರು.
ಸಮ್ಮಾನ, ಹಕ್ಕುಪತ್ರ ವಿತರಣೆ
ಮುಂಡೂರು ಗ್ರಾಮದ ಸಮಸ್ತ ಜನತೆ ಪರವಾಗಿ ಶಾಸಕರನ್ನು ಸಮ್ಮಾನಿಸಲಾಯಿತು. ಅಂಗನವಾಡಿ ನಡೆಸಲು 2006 ರಿಂದ 2018ರ ತನಕ ಉಚಿತವಾಗಿ ಕಟ್ಟಡವನ್ನು ಒದಗಿಸಿದ ಸ್ಥಳೀಯ ದಾನಿ ಗುರುವಪ್ಪ ಸಾಲಿಯಾನ್ ಕೇರಿಯಾರು ಅವರನ್ನು ಶಾಸಕರು ಸಮ್ಮಾನಿಸಿದರು. ಮೇಲಂತಬೆಟ್ಟು ಗ್ರಾ.ಪಂ.ನ ನಿವೇಶನ ರಹಿತ 3 ಕುಟುಂಬಗಳಿಗೆ ಸಾಂಕೇತಿಕವಾಗಿ ಹಕ್ಕುಪತ್ರ ವಿತರಿಸಿದರು. ಮೇಲಂತಬೆಟ್ಟು ಗ್ರಾ.ಪಂ. ಅಧ್ಯಕ್ಷೆ ನಳಿನಿ ಸಂಜೀವ ಪೂಜಾರಿ ಅಧ್ಯಕ್ಷತೆ ವಹಿಸಿದ್ದರು.
ಮುಖ್ಯ ಅತಿಥಿ, ಅಳದಂಗಡಿ ಜಿ.ಪಂ. ಕ್ಷೇತ್ರದ ಸದಸ್ಯ ಶೇಖರ್ ಕುಕ್ಕೇಡಿ ಮಾತನಾಡಿ, ಮುಂಡೂರು ಗ್ರಾಮದ ಮೂಲ ಸೌಕರ್ಯಗಳ ಅಭಿವೃದ್ಧಿಗೆ ಸುಮಾರು 9 ಲಕ್ಷ ರೂ. ಅನುದಾನ ಒದಗಿಸಿ ಕಾಮಗಾರಿ ನಡೆಸಲಾಗಿದ್ದು, ಮುಂದಕ್ಕೆ ಇನ್ನೂ ಅನೇಕ ಬೇಡಿಕೆಗಳನ್ನು ಈಡೇರಿಸಲಾಗುವುದು ಎಂದರು.
ತಾ.ಪಂ. ಸದಸ್ಯೆ ಜಯಶೀಲಾ ಕುಶಾಲಪ್ಪ ಗೌಡ, ಜಿಲ್ಲೆಯ ಮಹಿಳೆ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪ ನಿರ್ದೇಶಕ ಸುಂದರ ಪೂಜಾರಿ, ತಾ| ಕಾರ್ಯನಿರ್ವಾಹಕ ಅಧಿಕಾರಿ ಬಸವರಾಜ ಕೆ. ಅಯ್ಯಣ್ಣನವರ್, ಶಿಶು ಅಭಿವೃದ್ಧಿ ಯೋಜನಾಧಿಕಾರಿ ಪ್ರಿಯಾ ಆಗ್ನೇಸ್ ಚಾಕೊ, ಗ್ರಾ.ಪಂ. ಸದಸ್ಯರಾದ ನೀತಾ ಮಹೇಶ್ ಕುಮಾರ್, ಸವಿತಾ ಪನೆತ್ತಗುರಿ, ನಾರಾಯಣ ಪೂಜಾರಿ, ರೇಖಾ, ಸಿ.ಎ. ಬ್ಯಾಂಕ್ ನಿರ್ದೇಶಕಿ ವಿಮಲಾ ಹಾಗೂ ಎಂಜಿನಿಯರ್ ಉದಯ ಕುಮಾರ್, ಗುತ್ತಿಗೆದಾರರಾದ ಡಿ.ಆರ್. ರಾಜು, ವಸಂತ ಮಜಲು ಉಪಸ್ಥಿತರಿದ್ದರು. ಸಿ.ಎ. ಬ್ಯಾಂಕ್ ಅಧ್ಯಕ್ಷ ಯೋಗೀಶ್ ಕುಮಾರ್ ಕೆ.ಎಸ್. ಉಪಸ್ಥಿತರಿದ್ದರು.
ಗುರುವಪ್ಪ ಸಾಲ್ಯಾನ್, ಅಶೋಕ ಕುಮಾರ್ ಕೊಡಕ್ಕಾಲು, ವಾಸು ಪೂಜಾರಿ ಕೊದ್ಕೋಳಿ, ಆನಂದ ಸಾಲ್ಯಾನ್ ಮುಂಡೂರು, ಜಯಾನಂದ ಬಂಗೇರ, ಚಾಮರಾಜ ಸೇಮಿತ, ಅರವಿಂದ ಭಟ್ ಎಂ., ಇಸುಬು ಬಡೆಕ್ಕಿಲ, ಅತ್ತುಸ್ ವೇಗಸ್ ಕಲ್ಯಾರಡ್ಕ, ರಮಾನಂದ ಸಾಲ್ಯಾನ್ ಮುಂಡೂರು, ಹರೀಶ್ ಕುದ್ಕೋಳಿ, ಆಶಾ ಕಾರ್ಯಕರ್ತೆ ಸುಶೀಲಾ ಶೆಟ್ಟಿ, ಸ್ಟೇನಿ ವೇಗಸ್, ಶ್ರೀಧರ ಅಂಚನ್, ವಸಂತ ಪೂಜಾರಿ ನಾನಿಲ್ತ್ಯಾರು, ಅಶೋಕ್ ಕುಮಾರ್ ಜೈನ್, ಹರಿಶ್ಚಂದ್ರ ಬಳ್ಳಿದಡ್ಡ ಸಹಕರಿಸಿದರು.
ರಾಜೀವ ಸಾಲ್ಯಾನ್ ಮುಂಡೂರು ಪ್ರಸ್ತಾವಿಸಿ, ಅಂಗನವಾಡಿ ಸಹಾಯಕಿ ಸುಧಾಮಣಿ ಹರಿಶ್ಚಂದ್ರ ವರದಿ ವಾಚಿಸಿದರು. ಪಿಡಿಒ ರಾಜಶೇಖರ್ ಶೆಟ್ಟಿ ಸ್ವಾಗತಿಸಿ, ಮೇಲ್ವಿಚಾರಕಿ ನಾಗವೇಣಿ ವಂದಿಸಿ, ಸುಧಾಮಣಿ ರಮಾನಂದ ನಿರೂಪಿಸಿದರು.
ಬಹುದಿನದ ಬೇಡಿಕೆ ಈಡೇರಿಸುವೆ
ಮುಂಡೂರು ಗ್ರಾಮದ ಬಹುದಿನದ ಬೇಡಿಕೆ ಹಾಗೂ ದಿ| ಮಹೇಶ್‌ಕುಮಾರ್ ನಡಕ್ಕರ ಇವರ ಪ್ರಮುಖ ಬೇಡಿಕೆಯಾಗಿದ್ದ ಬದ್ಯಾರು – ಮುಂಡೂರು ದೇವಸ್ಥಾನದ ತನಕದ ರಸ್ತೆಯಲ್ಲಿ ಇದೀಗ ಕೋಟಿಕಟ್ಟೆ ವರೆಗಿನ ಕಾಮಗಾರಿಗೆ ಚಾಲನೆ ನೀಡಲಾಗಿದೆ. ಉಳಿದ ಕಾಮಗಾರಿಗೆ ಶೀಘ್ರದಲ್ಲೆ ಬಂದು ಶಿಲಾನ್ಯಾಸ ನಡೆಸಲಿದ್ದೇನೆ. ಈ ಮೂಲಕ ಈ ಭಾಗದ ಬಹುದಿನದ ಬೇಡಿಕೆಯನ್ನು ಚುನಾವಣೆಯ ಮೊದಲು ಈಡೇರಿಸುತ್ತೇನೆ ಎಂದು ಶಾಸಕ ಕೆ. ವಸಂತ ಬಂಗೇರ ತಿಳಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Dhanashree Verma: ಯಶ್ ಸಿನಿಮಾಕ್ಕೆ ಕ್ರಿಕೆಟಿಗ ಚಹಾಲ್ ಪತ್ನಿ ಹೀರೋಯಿನ್
Re-Release: ಈ ವರ್ಷ ರೀ ರಿಲೀಸ್ ಆದ ಬಾಲಿವುಡ್ ಸಿನಿಮಾಗಳ ಬಾಕ್ಸ್ ಆಫೀಸ್ ಗಳಿಕೆ ಎಷ್ಟು?
Uttara Pradesh By poll: 30 ವರ್ಷದ ಬಳಿಕ ಮುಸ್ಲಿಂ ಬಾಹುಳ್ಯದ ಕ್ಷೇತ್ರದಲ್ಲಿ ಅರಳಿದ ಕಮಲ!
IPL Mega Auction: 2008-2024.. ಪ್ರತಿ ಹರಾಜಿನ ದುಬಾರಿ ಆಟಗಾರರ ಪಟ್ಟಿ ಇಲ್ಲಿದೆ
ಬೆಳಗಾವಿ:ಬಟ್ಟೆ ಅಂಗಡಿಯಲ್ಲಿ ಕೆಲಸ ಮಾಡಿದ ಹುಡುಗ..ಜಿಲ್ಲಾ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.