ಕೊಲ್ಲಮೊಗ್ರು: ಪಾಳುಬಿದ್ದಿದ್ದ ದೊಡ್ಡಣ್ಣಶೆಟ್ಟಿ ಕೆರೆಗೆ ಮರುಜೀವ
Team Udayavani, Apr 9, 2021, 3:10 AM IST
ಸುಬ್ರಹ್ಮಣ್ಯ: ಹಿಂದೊಮ್ಮೆ ಬಹು ಮಂದಿಗೆ ನೀರುಣಿಸಿ, ಬಳಿಕ ಪಾಳುಬಿದ್ದು ಯಾರಿಗೂ ಬೇಡವಾದ ಐತಿಹಾಸಿಕ ಕೆರೆಯೊಂದು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ನಮ್ಮೂರ ನಮ್ಮ ಕೆರೆ ಎಂಬ ಕಾರ್ಯಕ್ರಮದಡಿ ಅಭಿ ವೃದ್ಧಿಯ ಹೊಸ್ತಿಲಲ್ಲಿದ್ದು, ಕಾಮಗಾರಿ ಭರದಿಂದ ನಡೆಯುತ್ತಿದೆ.
ಸುಳ್ಯ ತಾಲೂಕಿನ ಕೊಲ್ಲಮೊಗ್ರು ಗ್ರಾಮದ ಶಿರೂರು ಚಾಂತಾಳ ಭಾಗದ ಮಳ್ಳಾಜೆ ದೊಡ್ಡಣ್ಣ ಶೆಟ್ಟಿ ಕೆರೆಯು ಅಭಿವೃದ್ಧಿ ಹಂತದಲ್ಲಿದ್ದು, ಕಾಮಗಾರಿಗಳು ಭರದಿಂದ ನಡೆಯುತ್ತಿದೆ. ಧರ್ಮಸ್ಥಳದ ಧರ್ಮಾಧಿಕಾರಿ ಡಾ| ಡಿ.ವೀರೇಂದ್ರ ಹೆಗ್ಗಡೆ ಅವರ ದೂರ ದರ್ಶಿತ್ವದ ಫಲವಾಗಿ ದೊಡ್ಡಣ್ಣ ಶೆಟ್ಟಿ ಕೆರೆ ಮತ್ತೆ ಅಭಿವೃದ್ಧಿಗೊಳ್ಳುತ್ತಿದೆ.
ಐತಿಹಾಸಿಕ ದೊಡ್ಡಣ್ಣ ಶೆಟ್ಟಿ ಕೆರೆ :
ಕೊಲ್ಲಮೊಗ್ರು ಮಳ್ಳಾಜೆ ಎಂಬಲ್ಲಿ ದೊಡ್ಡಣ್ಣ ಶೆಟ್ಟಿ ಕೆರೆ ಸುಮಾರು 400 ವರ್ಷಗಳ ಹಿಂದಿನದ್ದು. ಜೈನರಸರ ಕಾಲದ ಯಜಮಾನ ದೊಡ್ಡಣ್ಣ ಶೆಟ್ಟಿ ಅವರು ಈ ಕೆರೆ ನಿರ್ಮಿಸಿದ್ದರಿಂದ ಅವರ ಹೆಸರನ್ನೇ ಇದಕ್ಕೆ ಇಡಲಾಗಿತ್ತು. ಇದೇ ಸಂದರ್ಭ ಮಲ್ಲಣ್ಣ ಶೆಟ್ಟಿ ಎಂಬವರೂ ಮಳ್ಳಾಜೆಯ ಮತ್ತೂಂದು ಭಾಗದಲ್ಲಿ ಮಲ್ಲಣ್ಣ ಶೆಟ್ಟಿ ಕೆರೆ ನಿರ್ಮಿಸಿದ್ದರು. ದೊಡ್ಡಣ್ಣ ಶೆಟ್ಟಿ ಕೆರೆ ಹಿಂದಿನ ಕಾಲದಲ್ಲಿ ಊರಿಗೆ ನೀರುಣಿಸುವ ಕೆರೆಯಾಗಿತ್ತು ಎನ್ನಲಾಗಿದೆ.
ಅಭಿವೃದ್ಧಿಗೆ ಸಮಿತಿ :
ಪ್ರಸ್ತುತ ಮಾಧವ ಚಾಂತಾಳ ದೊಡ್ಡಣ್ಣಶೆಟ್ಟಿ ಕೆರೆ ಅಭಿವೃದ್ಧಿ ಸಮಿತಿಯ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸುತ್ತಿದ್ದು, ಸಮಿತಿಯಲ್ಲಿ ಉಪಾಧ್ಯಕ್ಷರು, ಕಾರ್ಯದರ್ಶಿ, ಸದಸ್ಯರು, ಸ್ಥಳೀಯಾಡಳಿತ, ಸಂಘ ಸಂಸ್ಥೆಗಳು, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯವರು ಸೇರಿ ಕೆರೆ ಅಭಿವೃದ್ಧಿ ಕೈ ಜೋಡಿಸಿದ್ದಾರೆ. ಗ್ರಾಮಾಭಿವೃದ್ಧಿ ಯೋಜನೆಯ ಗುಂಪು ಲೆಕ್ಕ ಪರಿಶೋಧಕರಾದ ಉಮೇಶ್, ಸುಬ್ರಹ್ಮಣ್ಯ ವಲಯ ಮೇಲ್ವಿಚಾರಕ ಸೀತಾರಾಮ ಕೆ. ಉಸ್ತುವಾರಿ ನೋಡಿ ಕೊಳ್ಳುತಿದ್ದಾರೆ. ಕಾರ್ಯಕರ್ತೆಯರಾದ ಸಾವಿತ್ರಿ, ಶೋಭಾ ಚಾಳೆಪ್ಪಾಡಿ ಸಹಕರಿಸುತ್ತಿದ್ದಾರೆ.
ಶ್ರೀ ಕ್ಷೇ.ಧ.ಗ್ರಾ.ಯೋ.ಯ ನಮ್ಮೂರ ನಮ್ಮ ಕೆರೆ ಕಾರ್ಯಕ್ರಮದಡಿ ಅಭಿವೃದ್ಧಿಗೊಳ್ಳುತ್ತಿರುವ ಸುಳ್ಯ ತಾಲೂಕಿನ ಪ್ರಥಮ ಕೆರೆ ಇದಾಗಿದೆ. ಈ ಕೆರೆಯಿಂದ ಊರಿನ ಸುಮಾರು 200 ಮನೆಗಳಿಗೆ ಪ್ರಯೋಜನವಾಗಲಿದೆ. ಈ ಭಾಗದ ಕೃಷಿ ಜಮೀನಿನ, ಕೃಷಿ ಭೂಮಿಯ ನೀರಿನ ಮಟ್ಟ, ಕುಡಿಯುವ ನೀರಿನ ಮೂಲಗಳ ಮಟ್ಟ ಏರಲಿದೆ. ಈ ಕೆರೆಯ ಕೆಳಭಾಗದಲ್ಲಿ ಶಿರೂರು, ಕುಂಞಟ್ಟಿ, ಚಾಂತಾಳ ಬೈಲುಗಳಿದ್ದರೆ ಮೇಲ್ಭಾಗ ಮಳ್ಳಾಜೆ ಭಾಗವಿದೆ. ಇಲ್ಲಿನವರಿಗೆ ಇದರ ಪ್ರಯೋಜನವಾಗಲಿದೆ.
ಕೆರೆಯ ಅಭಿವೃದ್ಧಿ ಕೆಲಸಗಳಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಉಡುಪಿ ಪ್ರಾದೇಶಿಕ ನಿರ್ದೇಶಕ ವಸಂತ ಸಾಲ್ಯಾನ್, ಸಮುದಾಯ ಅಭಿವೃದ್ಧಿ ಕಾರ್ಯಕ್ರಮಗಳ ನಿರ್ದೇಶಕ ಆನಂದ ಸುವರ್ಣ, ಜಿಲ್ಲಾ ನಿರ್ದೇಶಕ ಪ್ರವೀಣ್ ಕುಮಾರ್, ಸುಳ್ಯ ತಾಲೂಕು ಯೋಜನಾಧಿಕಾರಿ ಸಂತೋಷ್ ಕುಮಾರ್ ರೈ ನೇತೃತ್ವದಲ್ಲಿ ಕಾಮಗಾರಿ ಪ್ರಗತಿಯಲ್ಲಿದೆ.
5 ಲಕ್ಷ ರೂ. ಮಂಜೂರು :
ದೊಡ್ಡಣ್ಣಶೆಟ್ಟಿ ಕೆರೆ 50 ಮೀಟರ್ ಅಗಲ ಮತ್ತು 50 ಮೀಟರ್ ಉದ್ದ, 15 ಅಡಿ ತ್ತರ ಇದೆ. ಕೆರೆಯ ಸುತ್ತ ಕಲ್ಲಿನ ಕಟ್ಟೆ ಕಟ್ಟಲಾಗಿ 2 ಅಡಿ ಅಗಲ ಇರಲಿದೆ. ಪ್ರಸ್ತುತ 5 ಲಕ್ಷ ರೂ. ಗ್ರಾಮಾಭಿವೃದ್ಧಿ ಯೋಜನೆಯಿಂದ ಮಂಜೂರುಗೊಂಡಿದೆ. ಮುಂದೆ ವಿವಿಧ ಯೋಜನೆಗಳಿಂದ ಕೆರೆಗೆ ಪೂರಕವಾಗಿ ತಡೆಬೇಲಿ, ಕಟ್ಟೆ, ಬೆಂಚ್‌ಗಳನ್ನು ಅಳವಡಿಸಲು ಚಿಂತನೆ ನಡೆದಿದೆ. ಹಿಟಾಚಿ, ಟಿಪ್ಪರ್, ಟ್ರ್ಯಾಕ್ಟರ್ ಬಳಸಿ ಕೆಲಸ ಮಾಡಲಾಗುತ್ತಿದೆ. ಈವರೆಗೆ ಸುಮಾರು 3 ಸಾವಿರ ಲೋಡ್ ಮಣ್ಣು ತೆಗೆಯಲಾಗಿದೆ.
5 ಲಕ್ಷ ರೂ. ಮಂಜೂರು :
ದೊಡ್ಡಣ್ಣಶೆಟ್ಟಿ ಕೆರೆ 50 ಮೀಟರ್ ಅಗಲ ಮತ್ತು 50 ಮೀಟರ್ ಉದ್ದ, 15 ಅಡಿ ತ್ತರ ಇದೆ. ಕೆರೆಯ ಸುತ್ತ ಕಲ್ಲಿನ ಕಟ್ಟೆ ಕಟ್ಟಲಾಗಿ 2 ಅಡಿ ಅಗಲ ಇರಲಿದೆ. ಪ್ರಸ್ತುತ 5 ಲಕ್ಷ ರೂ. ಗ್ರಾಮಾಭಿವೃದ್ಧಿ ಯೋಜನೆಯಿಂದ ಮಂಜೂರುಗೊಂಡಿದೆ. ಮುಂದೆ ವಿವಿಧ ಯೋಜನೆಗಳಿಂದ ಕೆರೆಗೆ ಪೂರಕವಾಗಿ ತಡೆಬೇಲಿ, ಕಟ್ಟೆ, ಬೆಂಚ್‌ಗಳನ್ನು ಅಳವಡಿಸಲು ಚಿಂತನೆ ನಡೆದಿದೆ. ಹಿಟಾಚಿ, ಟಿಪ್ಪರ್, ಟ್ರ್ಯಾಕ್ಟರ್ ಬಳಸಿ ಕೆಲಸ ಮಾಡಲಾಗುತ್ತಿದೆ. ಈವರೆಗೆ ಸುಮಾರು 3 ಸಾವಿರ ಲೋಡ್ ಮಣ್ಣು ತೆಗೆಯಲಾಗಿದೆ.
ಸುಮಾರು 400 ವರ್ಷಗಳ ಹಿಂದಿನ ಬಲ್ಲಾಳರ ಕಾಲದ ಕೆರೆ ಇದಾಗಿದೆ. ಗ್ರಾಮಸಭೆಯಲ್ಲಿ ಕೆರೆ ಅಭಿವೃದ್ಧಿಗೆ ನಿರ್ಣಯ ಮಾಡಿದ್ದರೂ ಪ್ರಯೋಜನ ಆಗಿರಲಿಲ್ಲ. ಕೆರೆ ಅಭಿವೃದ್ಧಿಯಿಂದ ಈ ಭಾಗದ ಕೃಷಿಗೆ, ಬೋರ್‌ವೆಲ್‌ಗೆ ಸಹಕಾರಿಯಾಗಲಿದೆ. ತಂತ್ರಜ್ಞಾನ ಬಳಸಿ ಕೆಲಸ ಮಾಡಲಾಗಿದೆ. ಧರ್ಮಸ್ಥಳ ಯೋಜನೆಯ ಮುಖಾಂತರ ನಡೆಯುತ್ತಿರುವ ಕೆಲಸ ಇದಾಗಿದೆ. –ಮಾಧವ ಚಾಂತಾಳ, ಅಧ್ಯಕ್ಷರು, ಕೆರೆ ಅಭಿವೃದ್ಧಿ ಸಮಿತಿ
ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ 52 ಯೋಜನೆಗಳಲ್ಲಿ ಕೆರೆ ಅಭಿವೃದ್ಧಿ ಕೂಡ ಒಂದು. ಸುಳ್ಯ ತಾಲೂಕಿನಲ್ಲಿ ನಾವು ಕೈಗೆತ್ತಿಕೊಂಡ ಮೊದಲ ಕೆರೆ ಶಿವತೀರ್ಥ ದೊಡ್ಡಣ್ಣ ಶೆಟ್ಟಿ ಕೆರೆ. ಎರಡು ವರ್ಷಗಳ ಹಿಂದೆ ಅಭಿವೃದ್ಧಿಗಾಗಿ ಆಯ್ಕೆ ಆಗಿತ್ತು. ಆದರೆ ದಾಖಲೆಗಳು ಸರಿ ಇಲ್ಲದ ಕಾರಣ ತಡವಾಯಿತು. –ಸಂತೋಷ್ ಕುಮಾರ್ ರೈ, ಯೋಜನಾಧಿಕಾರಿ, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಸುಳ್ಯ ತಾಲೂಕು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
GKVK Research; ಇನ್ನು ಜೇನು ಗೂಡು ಕಟ್ಟಬೇಕಿಲ್ಲ: 3ಡಿ ಗೂಡು ಆವಿಷ್ಕಾರ!
Court Judgement: ತಪ್ಪಿತಸ್ಥ ಎಂದಾದರೆ ಮಾತ್ರ ರಾಜೀನಾಮೆ ನೀಡಬೇಕು: ಜಿ.ಟಿ.ದೇವೇಗೌಡ
Daily Horoscope: ಈ ರಾಶಿಯವರಿಗಿಂದು ದಿನವಿಡೀ ಮಿಶ್ರ ಫಲಗಳ ಅನುಭವ
Average Income: ದೇಶದ ಗ್ರಾಮ ಪಂಚಾಯ್ತಿ ಆದಾಯ ಕೇವಲ 59 ಮಾತ್ರ
Ration Card: ರಾಜ್ಯದಲ್ಲಿ ಪಡಿತರ ನೀಡಲು ಹಣದ ಕೊರತೆ ಇಲ್ಲ: ಸಚಿವ ಮುನಿಯಪ್ಪ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.