ಡಾ| ವೀರೇಂದ್ರ ಹೆಗ್ಗಡೆ, ಹೇಮಾವತಿ ಹೆಗ್ಗಡೆಯವರಿಗೆ ಊರ ಗೌರವ; ಸಂಭ್ರಮಗಳ ಸಂಗಮ
ಸಾವಿರಕ್ಕೂ ಅಧಿಕ ಕಲಾವಿದರು ಮೆರವಣಿಗೆಯಲ್ಲಿ ವಿವಿಧ ವೇಷಭೂಷಣಗಳೊಂದಿಗೆ ಕಂಗೊಳಿಸಿದರು
Team Udayavani, Dec 29, 2022, 10:09 AM IST
ಬೆಳ್ತಂಗಡಿ: ಧರ್ಮಸ್ಥಳ ಪರಂಪರೆಯ ಶ್ರೇಯಸ್ಸನ್ನು ನಾಡಿನುದ್ದಕ್ಕೂ ಪಸರಿಸಿದ, ಶಿಕ್ಷಣ ಸಂಸ್ಥೆಗಳ ಮೂಲಕ ವಿದ್ಯಾದಾನಗೈದು, ಧರ್ಮೋತ್ಥಾನ ಟ್ರಸ್ಟ್ ಮುಖೇನ ನಾಡಿನ ದೇವಸ್ಥಾನಗಳ ಪುನರುಜ್ಜೀವನಗೈದು, ಗ್ರಾಮಾಭಿವೃದ್ಧಿಯನ್ನು ಹುಟ್ಟು ಹಾಕಿ ಜನತೆಗೆ ಸ್ವಾವಲಂಬನೆಯ ಹಾದಿ ತೋರಿ, ಮಹಿಳಾ ಸಬಲೀಕರಣಕ್ಕೆ ಹೊಸ ಭಾಷ್ಯ ಬರೆದ ಚತುರ್ದಾನ ಶ್ರೇಷ್ಠ ಪರಂಪರೆಯ ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ| ಡಿ. ವೀರೇಂದ್ರ ಹೆಗ್ಗಡೆ ಹಾಗೂ ಡಾ| ಹೇಮಾವತಿ
ವೀ. ಹೆಗ್ಗಡೆಯವರಿಗೆ ಕ್ಷೇತ್ರದ ನೌಕರರಿಂದ ಧರ್ಮಸ್ಥಳದಲ್ಲಿ ಏರ್ಪಡಿಸಿದ ಸಂಭ್ರಮಗಳ ಸಂಗಮ ಗೌರವ ಕಾರ್ಯಕ್ರಮ ಧನ್ಯತಾಭಾವದಲ್ಲಿ ತೇಲಿಸಿತು.
ಡಿ. ವೀರೇಂದ್ರ ಹೆಗ್ಗಡೆಯವರನ್ನು ಭಾರತ ಸರಕಾರ ರಾಜ್ಯಸಭಾ ಸದಸ್ಯರನ್ನಾಗಿ ನಾಮನಿರ್ದೇಶನ ಮಾಡಿದ ಸಂಭ್ರಮ, ಹೇಮಾವತಿ ವೀ. ಹೆಗ್ಗಡೆಯವರಿಗೆ ಮಂಗಳೂರು ವಿ.ವಿ. ನೀಡಿರುವ ಗೌರವ ಡಾಕ್ಟರೇಟ್, ದಂಪತಿಗಳ ವೈವಾಹಿಕ ಜೀವನದ ಸುವರ್ಣ ಸಂಭ್ರಮ, ಡಿ. ವೀರೇಂದ್ರ ಹೆಗ್ಗಡೆಯವರು 75ನೇ ಸಂವತ್ಸರಕ್ಕೆ ಪಾದಾರ್ಪಣೆಗೊಂಡ ಸಂಭ್ರಮದ ಪ್ರಯುಕ್ತ ಗ್ರಾಮಸ್ಥರು, ನೌಕರರರು, ಕ್ಷೇತ್ರದ ವಿವಿಧ ಸಂಸ್ಥೆಗಳ ಮುಖ್ಯಸ್ಥರ ಸಮ್ಮುಖದಲ್ಲಿ ಧರ್ಮಸ್ಥಳ ಅಮೃತವರ್ಷಿಣಿ ಸಭಾಭವನದಲ್ಲಿ ಸಂತೋಷದ ಕ್ಷಣಕ್ಕೆ ಸಾಕ್ಷಿಯಾಯಿತು.
ಡಿ. ಹರ್ಷೇಂದ್ರ ಕುಮಾರ್, ಡಿ.ಸುರೇಂದ್ರ ಕುಮಾರ್, ಡಿ. ರಾಜೇಂದ್ರ ಕುಮಾರ್, ಸುಪ್ರಿಯಾ ಹರ್ಷೇಂದ್ರ, ಅನಿತಾ ಸುರೇಂದ್ರ ಕುಮಾರ್, ನೀತಾ ರಾಜೇಂದ್ರ ಕುಮಾರ್, ಶ್ರದ್ಧಾ ಅಮಿತ್, ಅಮಿತ್, ಡಾ| ನಿರಂಜನ್ ಕುಮಾರ್, ಪದ್ಮಲತಾ, ನಿಶ್ಚಲ್ ಕುಮಾರ್, ಶ್ರೇಯಸ್ ಕುಮಾರ್ ಸಹಿತ ಕುಟುಂಬದವರು, ಚಲನಚಿತ್ರ ನಟ ರಮೇಶ್ ಅರವಿಂದ್, ಅರ್ಚನಾ ರಮೇಶ್, ಶಾಸಕ ಹರೀಶ್ ಪೂಂಜ, ಎಸ್.ಡಿ.ಎಂ. ಶಿಕ್ಷಣ ಸಂಸ್ಥೆ ಮುಖ್ಯಸ್ಥರು ಭಾಗವಹಿಸಿದ್ದರು.
ಸಂಜೆ ಹೆಗ್ಗಡೆಯವರ ಬೀಡಿನಿಂದ ಅಮೃತವರ್ಷಿಣಿ ಸಭಾಭವನದವರೆಗೆ ಮೆರವಣಿಗೆಯಲ್ಲಿ ಹೆಗ್ಗಡೆ ದಂಪತಿಯವರನ್ನು ಬೆಳ್ಳಿ ಲಾಲಕಿ ವಾಹನದಲ್ಲಿ ಕರೆತರಲಾಯಿತು. ಮೆರವಣಿಗೆಯಲ್ಲಿ ಗಜಪಡೆಯೊಂದಿಗೆ ಕೊಂಬು, ಬಸವ, ನಿಶಾನೆ, ನಂದಿಕೋಲು, ಭಜನ ತಂಡ, ಡೊಳ್ಳುಕುಣಿತ, ಸೇರಿದಂತೆ ಶಾಲಾ ಮಕ್ಕಳಿಂದ ಯಕ್ಷಗಾನ ವೇಷ, ಕಥಕ್ಕಳಿ, ಕೂಚುಪುಡಿ, ಶಿವಪಾರ್ವತಿ, ಹುಲಿವೇಷ, ಕಂಸಾಲೆ, ಮೋಹಿನಿ ಅಟ್ಟಂ, ಕೋಲಾಟ ಪ್ರದರ್ಶನಗೊಂಡರೆ, ಗ್ರಾಮಾಭಿವೃದ್ಧಿ ಯೋಜನೆ, ಯುವತಿ ಮಂಡಲ, ಕೇಂದ್ರ ಕಚೇರಿ ಸಿಬಂದಿ, ವಸತಿ ವಿಭಾಗ, ಆಟೋ ಚಾಲಕರು, ಸಹಿತ ದೇಗುಲದ ಸಹಿತ ಬೀಡು ಎಲ್ಲ ವಿಭಾಗದವರು ರಾಜಸ್ಥಾನಿ, ಬಿಳಿ ಪಂಚೆ, ಸೈನಿಕರ ವೇಷ, ಕಾಡುಜನರ ವೇಷ, ಕೋಲಾಟ, ನಾಸಿಕ್ ಬ್ಯಾಂಡ್, ವೀರಗಾಸೆ ಸಹಿತ ಅನೇಕ ಕಲಾ ಪ್ರಕಾರಗಳೊಂದಿಗೆ ಹೆಜ್ಜೆ ಹಾಕಲಾಯಿತು.
ಸುಮಾರು ಸಾವಿರಕ್ಕೂ ಅಧಿಕ ಕಲಾವಿದರು ಮೆರವಣಿಗೆಯಲ್ಲಿ ವಿವಿಧ ವೇಷಭೂಷಣಗಳೊಂದಿಗೆ ಕಂಗೊಳಿಸಿದರು. ವೇದಿಕೆವರೆಗೆ ದಂಪತಿಗೆ ಪುಷ್ಪವೃಷ್ಟಿ ಸಮರ್ಪಿಸಲಾಯಿತು. ಹೆಗ್ಗಡೆ ದಂಪತಿ ರೇಷ್ಮೆ ವಸ್ತ್ರಧಾರಿಗಳಾಗಿ ಕಣ್ಮನಸೆಳೆದರು. ಧರ್ಮಸ್ಥಳ ಕ್ಷೇತ್ರ ಸಹಿತ ನಗರವನ್ನು ಅಲಂಕಾರಿಕ ವಸ್ತುಗಳಿಂದ ಸಿಂಗಾರಗೊಳಿಸಲಾಗಿತ್ತು. ಸಂಭ್ರಮೋತ್ಸವ ಸಮಿತಿ ಧರ್ಮಸ್ಥಳದಿಂದ ಸಂಪೂರ್ಣ ವ್ಯವಸ್ಥೆ ಕಲ್ಪಿಸಲಾಗಿತ್ತು.
ಪೆರಾಡಿಯಿಂದ ಮಂಗಳ ಗಂಗೋತ್ರಿವರೆಗಿನ ಯಾನ ದೃಶ್ಯಾಭಿವಂದನ, ಮಣಿಪಾಲ ದಿವ್ಯಶ್ರೀ ಬಳಗದಿಂದ ಮುಡಿಗೇರಿತು ಡಾಕ್ಟರೇಟ್ ಕಾವ್ಯಾಭಿವಂದನ, ಧರ್ಮಸ್ಥಳದಿಂದ ದಿಲ್ಲಿಗೆ ದೃಶ್ಯಾಭಿವಂದನ, ಉಜಿರೆಯ ಎಸ್.ಡಿ.ಎಂ. ಕಾಲೇಜು ವಿದ್ಯಾರ್ಥಿಗಳಿಂದ ಪರಹಿತ ಬಯಸುವ ಗಾನ ವೈಭವ, ವೇ| ಮೂ| ಸೋಮಸುಂದರ ಭಟ್ ಮತ್ತು ಬಳಗದಿಂದ ವೇದಘೋಷ, ದಿವ್ಯಶ್ರೀ ಬಳಗದಿಂದ ಶೋಭಾನೆ ಎನ್ನೀರೆ ಶೋಭಾನೆ, ಬಾಹುಬಲಿ ಸೇವಾ ಸಮಿತಿಯಿಂದ ಆರತಿ ಹಾಡು ಹಾಡಲಾಯಿತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Hysteroscopy: ಸಂತಾನಹೀನತೆಯ ಪತ್ತೆ ಮತ್ತು ಚಿಕಿತ್ಸೆಗೆ ಒಂದು ಅತ್ಯವಶ್ಯಕ ಕಾರ್ಯವಿಧಾನ
ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಬಗ್ಗೆ ಅವಹೇಳನಕಾರಿ ಪದಬಳಕೆ: ಪ್ರಸಾದ್ ರಾಜ್ ಕಾಂಚನ್ ಖಂಡನೆ
Puttur: ತೆಂಕಿಲದಲ್ಲಿ ರಿಕ್ಷಾ ಅಪಘಾತ: ಚಾಲಕ ಸಾವು
Gurunandan: ಡಿ.27ಕ್ಕೆ ತೆರೆಗೆ ಬರುತ್ತಿಲ್ಲ ʼರಾಜು ಜೇಮ್ಸ್ ಬಾಂಡ್’ ಚಿತ್ರ
N Kannaiah Naidu ಅವರಿಗೆ ಗೌರವಧನ ನೀಡಲು ಮರೆತ ತುಂಗಭದ್ರಾ ಬೋರ್ಡ್, ಜಲಸಂಪನ್ಮೂಲ ಇಲಾಖೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.