ಡ್ರೋನ್‌ನಿಂದ ಎಲೆಚುಕ್ಕಿ ರೋಗಕ್ಕೆ ಔಷಧ: ಬೆಳ್ತಂಗಡಿಯಲ್ಲಿ ಯಶಸ್ವಿ
4,000 ಎಕ್ರೆ ಪ್ರದೇಶದಲ್ಲಿ ಹಾರಾಟ
Team Udayavani, Feb 18, 2023, 5:40 AM IST
ಬೆಳ್ತಂಗಡಿ: ಅಡಿಕೆ ಎಲೆಚುಕ್ಕಿ ರೋಗ ಹತೋಟಿ ಸವಾಲಾಗಿರುವ ಮಧ್ಯೆ ಸುಳ್ಯ-ಕಾಸರಗೋಡು ಪ್ರದೇಶ ದಲ್ಲಿ ಡ್ರೋನ್ ಬಳಸಿ ಔಷಧ ಸಿಂಪಡಣೆಗೆ ತೊಡಗಿದ್ದು, ಬೆಳ್ತಂಗಡಿ ತಾಲೂಕಿನಲ್ಲೂ ಬೆಳೆಗಾರ ರೊಬ್ಬರು ಈ ಪ್ರಯೋಗ ನಡೆಸಿದ್ದಾರೆ.
ಎಲೆ ಚುಕ್ಕಿ ರೋಗ ನಿಯಂತ್ರಣ ಸಲುವಾಗಿ ಸರಕಾರ ಶಿಲೀಂಧ್ರ ನಾಶಕ ಖರೀದಿಸಲು ಪ್ರತೀ ಹೆಕ್ಟೇರ್‌ಗೆ 4 ಸಾವಿರ ರೂ. ಗಳಂತೆ ಆರಂಭದಲ್ಲಿ 10 ಸಾವಿರ ಹೆಕ್ಟೇರ್ ಪ್ರದೇಶಕ್ಕೆ ಮೊದಲನೇ ಸಿಂಪಡಣೆಗೆ 4 ಕೋ.ರೂ. ಅನುದಾನ ನೀಡಿ, ಹೆಕ್ಸ್‌ಕೊನೊಜಾಲ್ ಅಥವಾ ಪ್ರೊಪಿಕೊಜಾಲ್ ದ್ರಾವಣವನ್ನು ಪೂರೈಸಿತ್ತು.
ಕಡಿರುದ್ಯಾವರದಲ್ಲಿ ಪ್ರಯೋಗ
ಒಂದು ಲೀ. ನೀರಿಗೆ 1 ಎಂ.ಎಲ್. ಔಷಧವನ್ನು ಬೆರೆಸಿ ಸೋಗೆ ಪೂರ್ತಿ ನೆನೆಯುವಂತೆ ಸಿಂಪಡಿಸಬೇಕು. ಇದು ಮನುಷ್ಯ ಶ್ರಮದಿಂದ ಅಸಾಧ್ಯ ವಾದ ಕಾರಣ ಬೆಂಗಳೂರಿನ ಒಂದು ಸಂಸ್ಥೆಯ ಮೂಲಕ ಈಗಾಗಲೇ ಸುಳ್ಯ -ಕಾಸರಗೋಡು ವ್ಯಾಪ್ತಿಯ ಬೆಳೆಗಾರರು 4 ಸಾವಿರ ಎಕ್ರೆಗೂ ಅಧಿಕ ಪ್ರದೇಶದಲ್ಲಿ ಸಿಂಪಡಣೆ ಮಾಡಲಾಗಿದೆ. ಚಿಕ್ಕಮಗಳೂರಿನ ಸಂಸೆಯಲ್ಲಿ 400 ಎಕ್ರೆಗೆ ಸಿಂಪಡಿಸಲಾಗಿದೆ. ಈಗ ಬೆಳ್ತಂಗಡಿ ತಾಲೂಕಿನ ಕಡಿರುದ್ಯಾವರ ಗ್ರಾಮದ ಕೃಷಿಕ ಲಿಜೋ ಸ್ಕರಿಯ ಅವರ ತೋಟದಲ್ಲೂ ಸಿಂಪಡಣೆ ನಡೆದಿದೆ.
5 ಎಕ್ರೆಗೆ 2.7 ಲೀ. ಬಳಕೆ
ಸ್ಕರಿಯ ಅವರ 5 ಎಕ್ರೆ ತೋಟದಲ್ಲಿ ಸುಮಾರು 2 ಸಾವಿರ ಅಡಿಕೆ ಸಸಿಗಳಿಗೆ ಎರಡೂವರೆ ತಾಸುಗಳಲ್ಲಿ 20 ಲೀ. ಸಾಮರ್ಥ್ಯದ ಡ್ರೋನ್ ಮೂಲಕ ಔಷಧ ಸಿಂಪಡಿಸಲಾಗಿದ್ದು, ಇದಕ್ಕೆ ಸುಮಾರು 6 ಸಾವಿರ ರೂ. ವೆಚ್ಚ ತಗುಲಿದೆ.
ಸಿಸ್ಟಮ್ಯಾಟಿಕ್ ಫಂಗಿಸೈಡ್ ಮಾದರಿಯಲ್ಲಿ ಔಷಧ ಸಿಂಪಡಣೆ ನಡೆದಿದೆ. ಡ್ರೋನ್ ಮೂಲಕ ಮರದ ಮೇಲ್ಭಾಗದಿಂದ ಸೋಗೆಗಳ ಮೇಲೆ ಮಿಸ್ಟಿ ರೂಪದಲ್ಲಿ ಸಿಂಪಡಣೆಯಾಗುವುದರಿಂದ ಎಲೆ ಚುಕ್ಕಿ ರೋಗ ನಿಯಂತ್ರಣ ಸಾಧ್ಯತೆ ಇದೆ.
– ಲಿಜೋ ಸ್ಕರಿಯ, ಕೃಷಿಕರು, ಕಡಿರುದ್ಯಾವರ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Puttur: ವಿದ್ಯುತ್ ಕಂಬ ಏರುವ ತರಬೇತಿ!; ಪವರ್‌ಮನ್ ಉದ್ಯೋಗಕ್ಕೆ ಸ್ಥಳೀಯರಿಗೆ ಪ್ರೋತ್ಸಾಹ
Belthangady: ಗ್ರಾಮೀಣ ರಸ್ತೆಗಳಲ್ಲೂ ಗುಂಡಿ
Bantwal: ತುಂಬೆ ಶ್ರೀಮಹಾಲಿಂಗೇಶ್ವರ ದೇವಸ್ಥಾನಕ್ಕೆ ಕನ್ನ; ಲಕ್ಷಾಂತರ ಮೌಲ್ಯದ ನಗನಗದು ಲೂಟಿ
Puttur: ಮಾದಕ ವಸ್ತು ಎಂಡಿಎಂಎ ಸಾಗಾಟ ಪ್ರಕರಣ; ಆರೋಪಿಗೆ ಜಾಮೀನು
Rain: ಸುಬ್ರಹ್ಮಣ್ಯದಲ್ಲಿ ಭಾರೀ ಮಳೆ; ರಸ್ತೆಗೆ ಬಿದ್ದ ಮರ; ತಪ್ಪಿದ ಭಾರೀ ಅನಾಹುತ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.