ಬೆಳ್ತಂಗಡಿ: 37,718 ಪಡಿತರ ಚೀಟಿಗಳ ಇ-ಕೆವೈಸಿ ಪೂರ್ಣ
Team Udayavani, Aug 3, 2021, 3:10 AM IST
ಬೆಳ್ತಂಗಡಿ: ನ್ಯಾಯಬೆಲೆ ಅಂಗಡಿ ಗಳಲ್ಲಿ ಈಗಾಗಲೆ ಇ- ಕೆವೈಸಿಯಾಗಿರುವ ಪಡಿ ತರ ಚೀಟಿ ಫಲಾನುಭವಿಗಳನ್ನು ಹೊರತು ಪಡಿಸಿ, ಉಳಿದಿರುವ ಎಲ್ಲ ಫಲಾನುಭವಿಗಳ ಇ-ಕೆವೈಸಿಯನ್ನು ನ್ಯಾಯಬೆಲೆ ಅಂಗಡಿಗಳ ಮೂಲಕ ಆ.1 ನೇ ತಾರೀಕಿನಿಂದ 10 ನೇ ತಾರೀಕಿನರವರೆಗೆ ನಡೆಸುವ ಪ್ರಕ್ರಿಯೆ ಬೆಳ್ತಂಗಡಿ ತಾಲೂಕಿನಲ್ಲಿ ಬಿರುಸುಗೊಂಡಿದೆ.
ಇ-ಕೆವೈಸಿ ಮಾಡಿಸುವ ಉದ್ದೇಶ ಪಡಿತರ ಚೀಟಿದಾರರು ತಮ್ಮ ಇರುವಿಕೆಯ ಕುರಿತು ದೃಢೀಕರಣ ಮಾಡುವ ಪ್ರಕ್ರಿಯೆಯಾಗಿದೆ. ಎ.ಪಿ.ಎಲ್., ಬಿ.ಪಿ.ಎಲ್., ಅಂತ್ಯೋದಯ ಪಡಿತರ ಚೀಟಿ ಹೊಂದಿರುವ ಕುಟುಂಬಸ್ಥರು ನ್ಯಾಯಬೆಲೆ ಅಂಗಡಿಯಲ್ಲಿ ಇ-ಕೆವೈಸಿ ಮಾಡಿಸಬೇಕಿದೆ. 2021ರ ಆಗಸ್ಟ್ ತಿಂಗಳ ವರೆಗೆ ಇ-ಕೆವೈಸಿ ಅವಕಾಶ ನೀಡ ಲಾಗಿದ್ದು, ಆ ಬಳಿಕ ಇ-ಕೆವೈಸಿ ಮಾಡದ ಪಡಿತರ ಚೀಟಿದಾರರ ಪಡಿತರವನ್ನು ತಡೆಹಿಡಿ ಯಲಾಗುತ್ತದೆ.
ಗ್ರಾಮೀಣ ಭಾಗದಲ್ಲಿ ಸವಾಲು:
ಜಾತಿ ಪ್ರಮಾಣ ಪತ್ರ, ಅನಿಲ ಸಂಪರ್ಕದ ಪುಸ್ತಕ, ಪಡಿತರ ಚೀಟಿ, ಆಧಾರ್ ಕಾರ್ಡ್ ಹಾಗೂ ಆಧಾರ್ ಸಂಖ್ಯೆಗೆ ನೋಂದಾಯಿಸಿದ ಮೊಬೈಲ್ ಸಂಖ್ಯೆಯನ್ನು ಕಡ್ಡಾಯವಾಗಿ ಹಾಜರುಪಡಿಸಬೇಕು. ಕೊರೊನಾದ ಮಧ್ಯೆಯೂ ಸಾಮಾಜಿಕ ಅಂತರ ಪಾಲಿ ಸುವುದು ಸೇರಿದಂತೆ ಗ್ರಾಮೀಣ ಭಾಗಗಳಲ್ಲಿ ನೆಟ್‌ವರ್ಕ್ ಸಮಸ್ಯೆ ಇ-ಕೆವೈಸಿಗೆ ತೊಡ ಕಾಗಿರುವ ಮಧ್ಯೆಯೂ ವಯಸ್ಸಾದ, ಕೊರೊನಾ ಬಾಧಿತರನ್ನು ಕರೆತಂದು ಕೆವೈಸಿ ನೀಡುವುದು ಸವಾಲಾಗಿದೆ.
ಒಟ್ಟು 62,844 ಪಡಿತರ ಚೀಟಿ:
ಬೆಳ್ತಂಗಡಿ ತಾ| ನಲ್ಲಿ ಒಟ್ಟು 62,844 ಪಡಿತರ ಚೀಟಿಗಳಲ್ಲಿ 37,718 ಪಡಿತರ ಚೀಟಿಗಳ ಇ-ಕೆವೈಸಿ ಪೂರ್ಣಗೊಂಡಿದೆ. ಒಟ್ಟು 2,49,068 ಪಡಿತರ ಚೀಟಿ ಫಲಾನು ಭವಿಗಳು ಇದ್ದು, 1,45,189 ಮಂದಿಯ ಇ-ಕೆವೈಸಿ ಪೂರ್ಣಗೊಂಡಿದೆ. ತಾ|ನ ಎಲ್ಲ 68 ನ್ಯಾಯಬೆಲೆ ಅಂಗಡಿಗಳಲ್ಲಿ ಇ-ಕೆವೈಸಿ ಕಾರ್ಯ ನಡೆಸ ಲಾಗುತ್ತಿದ್ದು, ಇ-ಕೆವೈಸಿ ಬಾಕಿ ಇರುವ ಫಲಾನುಭವಿಗಳು ಆ.10ರ ಒಳಗೆ ತಮ್ಮ ಬಯೋ ದೃಢೀಕರಣವನ್ನು ಕಡ್ಡಾಯ ವಾಗಿ ನೀಡುವಂತೆ ಆಹಾರ ಇಲಾಖೆ ಸೂಚಿಸಿದೆ. ಈ ಕುರಿತು ಸಂದೇಹಗಳು ಇದ್ದಲ್ಲಿ 08256-232383 ದೂರವಾಣಿ ಸಂಪರ್ಕಿಸಬಹುದಾಗಿದೆ.
ಪಡಿತರ ಚೀಟಿದಾರರು ತಮ್ಮ ಇರುವಿಕೆಯನ್ನು ಖಾತ್ರಿ ಪಡಿಸಲು ಬಯೋ- ದೃಢೀಕರಣ ನೀಡುವ ಇ-ಕೆವೈಸಿ ಮಾಡಿಸಬೇಕು. ಆಗಸ್ಟ್ 10ರ ವರೆಗೆ ಪ್ರಕ್ರಿಯೆ ಚಾಲ್ತಿಯಲ್ಲಿದ್ದು ಬಾಕಿ ಇರುವವರು ಕಡ್ಡಾಯವಾಗಿ ಮಾಡಬೇಕು. ಇ-ಕೆವೈಸಿ ಮಾಡಿಸದಿದ್ದಲ್ಲಿ ಪಡಿತರ ಹಂಚಿಕೆ ತಡೆಹಿಡಿಯಲಾಗುತ್ತದೆ. -ವಿಶ್ವ ಕೆ., ಆಹಾರ ನಿರೀಕ್ಷಕರು, ಬೆಳ್ತಂಗಡಿ
-ವಿಶೇಷ ವರದಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Toxic Movie: ʼಟಾಕ್ಸಿಕ್ʼನಲ್ಲಿ ನಟಿಸಲು ಯಶ್ ಪಡೆದ ಸಂಭಾವನೆ ಎಷ್ಟು?
Tirupati;ದುರಂತಕ್ಕೆ ಸಿಎಂ ನಾಯ್ಡು,ಆಡಳಿತ ಮಂಡಳಿ,ಪೊಲೀಸರು ಕಾರಣ: ಮಾಜಿ ಟಿಟಿಡಿ ಮುಖ್ಯಸ್ಥರು
ಮೊಳಹಳ್ಳಿ ವ್ಯವಸಾಯ ಸೇವಾ ಸಹಕಾರಿ ಸಂಘ: ನೂತನ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆ
Dharwad: ಬಂದ್ ಹೆಸರಲ್ಲಿ ವ್ಯಾಪಾರಿಗೆ ಕಪಾಳಮೋಕ್ಷ?: ಕಾಲೇಜು ಪ್ರಾಧ್ಯಾಪಕರಿಗೆ ಅವಾಜ್
Friendship: ಸ್ನೇಹವೇ ಸಂಪತ್ತು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.