ಮೀಸಲಾತಿ ಅಂತಿಮವಾಗದೆ ಚುನಾವಣೆಗೆ ಗ್ರಹಣ
ತಾ.ಪಂ-ಜಿ.ಪಂ. ಕ್ಷೇತ್ರ ವಿಂಗಡಣೆ ;ಬೆಳ್ತಂಗಡಿಗೆ 7 ಜಿ.ಪಂ., 22 ತಾ.ಪಂ. ಕ್ಷೇತ್ರ
Team Udayavani, Jun 28, 2022, 10:22 AM IST
ಬೆಳ್ತಂಗಡಿ: ಈಗಾಗಲೇ ಚುನಾವಣೆ ನಡೆದು ಜಿಲ್ಲಾ ಪಂಚಾಯತ್ ಮತ್ತು ತಾಲೂಕು ಪಂಚಾಯತ್ ಕ್ಷೇತ್ರಗಳಿಗೆ ಅಭ್ಯರ್ಥಿ ಆಯ್ಕೆ ನಡೆಯಬೇಕಿದ್ದರೂ ಮೀಸಲಾತಿ ತಗಾದೆಯಿಂದ ಒಂದು ವರ್ಷದ ಹಿಂದೆ ಮುಂದೂಡಲ್ಪಟ್ಟಿದ್ದ ಪ್ರಕ್ರಿಯೆ ಇನ್ನೂ ಪೂರ್ಣಗೊಂಡಿಲ್ಲ.
ಸುಪ್ರೀಂ ಕೋರ್ಟ್ ಮೂರು ತಿಂಗಳ ಒಳಗಾಗಿ ಪ್ರಕ್ರಿಯೆ ಪೂರ್ಣಗೊಳಿಸುವಂತೆ ಮಧ್ಯಪ್ರದೇಶ ಸರಕಾರಕ್ಕೆ ಸೂಚನೆ ನೀಡಿದೆ. ಹಾಗಾಗಿ ಎಲ್ಲೆಡೆ ತುರ್ತಾಗಿ ಪ್ರಕ್ರಿಯೆ ನಡೆಸಬೇಕಾದ ಅನಿವಾರ್ಯತೆಯೂ ಇದೆ. ಹಾಗಾದಲ್ಲಿ ಮಾತ್ರ ಸೆಪ್ಟೆಂಬರ್‌ನಲ್ಲಿ ಚುನಾವಣೆ ಅಕಾಡ ಸಿದ್ಧವಾಗಬಹುದು. ಮತ್ತೂಂದೆಡೆ ಕರ್ನಾಟಕ ಪಂಚಾಯತ್ ರಾಜ್ ಸೀಮಾ ನಿರ್ಣಯ ಆಯೋಗ ಬೆಂಗಳೂರಿಗೆ ಪುನರ್ ವಿಂಗಡಣೆ ಪಟ್ಟಿಯು ಜಿಲ್ಲಾಧಿಕಾರಿಯ ಮೂಲಕ ಸಲ್ಲಿಕೆಯಾಗಿದೆ. ಮುಂದಿನ ಹಂತದಲ್ಲಿ ಆಯೋಗವು ಪರಿಶೀಲಿಸಿ ಅನುಮೋದನೆ ನೀಡಿ, ಸಾರ್ವಜನಿಕರ ಆಕ್ಷೇಪಣೆಗೆ ನೀಡಬೇಕಿದೆ. ಬಳಿಕವಷ್ಟೆ ಕ್ಷೇತ್ರಗಳ ಪುನರ್ ವಿಂಗಡಣೆ ಹಾಗೂ ಮೀಸಲಾತಿ ಪ್ರಕ್ರಿಯೆ ಅಂತಿಮವಾಗಿ ಜಿ.ಪಂ. ಹಾಗೂ ತಾ.ಪಂ. ಚುನಾವಣೆಗೆ ಮುಹೂರ್ತ ನಿಗದಿಯಾಗಲಿದೆ. ಮತ್ತೆ ತಕರಾರು ಉಂಟಾದಲ್ಲಿ ಚುನಾವಣೆ ಕಗ್ಗಂಟಾಗುವುದೋ ಎಂಬ ಅನುಮಾನವೂ ಕಾಡಿದೆ.
7 ಜಿ.ಪಂ. ಕ್ಷೇತ್ರ, 22 ತಾ.ಪಂ. ಕ್ಷೇತ್ರ ನಿಗದಿ
ಬೆಳ್ತಂಗಡಿ ತಾಲೂಕಿಗೆ 2016ರಲ್ಲಿ 7 ಜಿ.ಪಂ. ಹಾಗೂ 26 ತಾ.ಪಂ. ಕ್ಷೇತ್ರಗಳಿದ್ದವು. ಚುನಾವಣೆ ಆಯೋಗದ ಮೂಲಕ ಕ್ಷೇತ್ರ ಪುನರ್ ವಿಂಗಡಣೆಯಾದಾಗ 8 ಜಿ.ಪಂ. ಹಾಗೂ 21 ಕ್ಷೇತ್ರಕ್ಕೆ ತಾ.ಪಂ. ಕ್ಷೇತ್ರವಾದವು. ಆ ಸಮಯದಲ್ಲಿ ಸರಕಾರವು ಚುನಾವಣೆ ಆಯೋಗದ ಅಧಿಕಾರ ರದ್ದುಪಡಿಸಿ ಹೊಸದಾಗಿ ಸೀಮಾ ನಿರ್ಣಯಕ್ಕೆ ಪುನರ್‌ವಿಂಗಡೆ ಪ್ರಕ್ರಿಯೆ ನೀಡಿದಾಗ ಜನಸಂಖ್ಯೆ ಆಧಾರದಲ್ಲಿ 12,000 ಜನಸಂಖ್ಯೆಗೆ ಒಂದು ತಾ.ಪಂ. ಕ್ಷೇತ್ರ ಹಾಗೂ 40,000 ಜನಸಂಖ್ಯೆಗೆ ಒಂದು ಜಿ.ಪಂ. ಕ್ಷೇತ್ರ ಎಂದು ನಿಗದಿ ಪಡಿಸಿತು. ಅದರಂತೆ ಬೆಳ್ತಂಗಡಿ ತಾಲೂಕಿಗೆ ಮತ್ತೆ ಅದೇ 7 ಜಿ.ಪಂ. ಕ್ಷೇತ್ರ ಹಾಗೂ 22 ತಾ.ಪಂ. ಕ್ಷೇತ್ರ ನಿಗದಿ ಪಡಿಸಲಾಗಿದೆ(ಬೆಳ್ತಂಗಡಿ ಪ.ಪಂ. ವ್ಯಾಪ್ತಿ ಹೊರತು ಪಡಿಸಿ). ಗ್ರಾಮೀಣ ಜನಸಂಖ್ಯೆಯನ್ನಷ್ಟೇ ಆಧಾರದಲ್ಲಿರಿಸಿ ಪ್ರಸ್ತಾವನೆ ಸಲ್ಲಿಸಲಾಗಿದೆ. ಆದರೆ ಸೀಮಾ ಆಯೋಗವು ಇನ್ನಷ್ಟೇ ಪ್ರಕ್ರಿಯೆ ಪೂರ್ಣಗೊಳಿಸಬೇಕಿದೆ.
7 ಜಿ.ಪಂ. ಕ್ಷೇತ್ರಗಳ ವಿವರ
ನಾರಾವಿ ಕ್ಷೇತ್ರ: ನಾರಾವಿ, ಕುತ್ಲೂರು, ಮರೋಡಿ, ಪೆರಾಡಿ, ಹೊಸಂಗಡಿ, ಬಡಕೋಡಿ, ಕಾಶಿಪಟ್ಣ, ವೇಣೂರು, ಬಜಿರೆ, ಕರಿಮಣೇಲು, ಮೂಡುಕೋಡಿ, ಆರಂಬೋಡಿ, ಗುಂಡೂರಿ, ಅಂಡಿಂಜೆ, ಕೊಕ್ರಾಡಿ, ಸಾವ್ಯ. ಅಳದಂಗಡಿ: ನಾವರ, ಸುಲ್ಕೇರಿ, ಕುದ್ಯಾಡಿ, ಬಳಂಜ, ನಾಲ್ಕೂರು, ತೆಂಕಕಾರಂದೂರು, ಬಡಗಕಾರಂದೂರು, ಪಿಲ್ಯ, ಸುಲ್ಕೇರಿಮೊಗ್ರು, ಪಡಂಗಡಿ, ಗರ್ಡಾಡಿ, ಕುಕ್ಕೇಡಿ, ನಿಟ್ಟಡೆ, ಮೇಲಂತಬೆಟ್ಟು, ಮುಂಡೂರು, ಸವಣಾಲು, ಶಿರ್ಲಾಲು, ಕರಂಬಾರು. ಲಾೖಲ: ಲಾೖಲ, ಕೊಯ್ಯೂರು, ನಡ, ಕನ್ಯಾಡಿ, ಮಿತ್ತಬಾಗಿಲು, ಕಡಿರುದ್ಯಾವರ, ಮಲವಂತಿಗೆ, ಇಂದಬೆಟ್ಟು, ನಾವೂರು. ಉಜಿರೆ: ಉಜಿರೆ, ಮುಂಡಾಜೆ, ಕಲ್ಮಂಜ, ಪುದುವೆಟ್ಟು, ನೆರಿಯ, ಚಾರ್ಮಾಡಿ, ಚಿಬಿದ್ರೆ, ತೋಟತ್ತಾಡಿ ಧರ್ಮಸ್ಥಳ: ಧರ್ಮಸ್ಥಳ, ನಿಡ್ಲೆ, ಕಳೆಂಜ, ಕೊಕ್ಕಡ, ಪಟ್ರಮೆ, ಬೆಳಾಲು, ಶಿಶಿಲ, ಶಿಬಾಜೆ, ಹತ್ಯಡ್ಕ, ರೆಖ್ಯ. ಕಣಿಯೂರು: ಕಣಿಯೂರು, ಉರುವಾಲು, ಬಂದಾರು, ಮೊಗ್ರು, ತಣ್ಣೀರುಪಂತ, ಕರಾಯ, ಬಾರ್ಯ, ಪುತ್ತಿಲ, ತೆಕ್ಕಾರು, ಇಳಂತಿಲ ಕುವೆಟ್ಟು: ಕುವೆಟ್ಟು, ಓಡಿಲಾ°ಳ, ಮಾಲಾಡಿ, ಸೋಣಂದೂರು, ಪಾರೆಂಕಿ, ಕುಕ್ಕಳ, ಕಳಿಯ, ನ್ಯಾಯತರ್ಪು, ಮಚ್ಚಿನ.
22 ತಾ.ಪಂ. ಕ್ಷೇತ್ರಗಳು
ನಾರಾವಿ: ನಾರಾವಿ, ಕುತ್ಲೂರು, ಕೊಕ್ರಾಡಿ, ಸಾವ್ಯ, ಮರೋಡಿ, ಪೆರಾಡಿ. ಹೊಸಂಗಡಿ: ಹೊಸಂಗಡಿ, ಬಡಕೋಡಿ, ಕಾಶಿಪಟ್ಣ, ಆರಂಬೋಡಿ, ಗುಂಡೂರಿ. ವೇಣೂರು: ವೇಣೂರು, ಅಂಡಿಂಜೆ, ಬಜಿರೆ, ಮೂಡುಕೋಡಿ, ಕರಿಮಣೆಲು. ಅಳದಂಗಡಿ: ಬಡಗಕಾರಂದೂರು, ಪಿಲ್ಯ, ನಾವರ, ಸುಲ್ಕೇರಿ, ಕುದ್ಯಾಡಿ, ಬಳಂಜ, ನಾಲ್ಕೂರು, ತೆಂಕಕಾರಂದೂರು. ಶಿರ್ಲಾಲು: ಶಿರ್ಲಾಲು, ಕರಂಬಾರು, ಮೇಲಂತಬೆಟ್ಟು, ಮುಂಡೂರು, ಸವಣಾಲು, ಸುಲ್ಕೇರಿಮೊಗ್ರು. ಪಡಂಗಡಿ: ಪಡಂಗಡಿ, ಗರ್ಡಾಡಿ, ಕುಕ್ಕೇಡಿ, ನಿಟ್ಟಡೆ. ಲಾೖಲ: ಲಾೖಲ, ಕೊಯ್ಯೂರು. ನಡ: ನಡ, ಕನ್ಯಾಡಿ, ಇಂದಬೆಟ್ಟು, ನಾವೂರು. ಮಿತ್ತಬಾಗಿಲು: ಮಿತ್ತಬಾಗಿಲು, ಕಡಿರುದ್ಯಾವರ, ಮಲವಂತಿಗೆ. ಉಜಿರೆ: ಉಜಿರೆ. ಚಾರ್ಮಾಡಿ: ಚಾರ್ಮಾಡಿ, ತೋಟತ್ತಾಡಿ, ಚಿಬಿದ್ರೆ. ನೆರಿಯ: ನೆರಿಯ, ಪುದುವೆಟ್ಟು. ಮುಂಡಾಜೆ: ಮುಂಡಾಜೆ, ಕಲ್ಮಂಜ. ಕಳಂಜ: ಕಳಂಜ, ಶಿಬಾಜೆ, ಹತ್ಯಡ್ಕ, ರೆಖ್ಯ, ಶಿಶಿಲ. ಧರ್ಮಸ್ಥಳ: ಧರ್ಮಸ್ಥಳ, ನಿಡ್ಲೆ. ಕೊಕ್ಕಡ: ಕೊಕ್ಕಡ, ಬೆಳಾಲು, ಪಟ್ರಮೆ. ತಣ್ಣೀರುಪಂತ: ತಣ್ಣೀರುಪಂತ, ಬಾರ್ಯ, ಪುತ್ತಿಲ, ತೆಕ್ಕಾರು. ಉರುವಾಲು: ಬಂದಾರು, ಕಣಿಯೂರು, ಉರುವಾಲು. ಇಳಂತಿಲ: ಇಳಂತಿಲ, ಮೊಗ್ರು, ಕರಾಯ. ಕುವೆಟ್ಟು: ಕುವೆಟ್ಟು, ಓಡಿಲ್ನಾಳ, ಸೋಣಂದೂರು. ಕಳಿಯ: ಮಚ್ಚಿನ, ಕಳಿಯ, ನ್ಯಾಯತರ್ಪು. ಮಾಲಾಡಿ: ಮಾಲಾಡಿ, ಪಾರೆಂಕಿ, ಕುಕ್ಕಳ.
ವಿಂಗಡನೆ ಪೂರ್ಣ: ಕ್ಷೇತ್ರವಾರು ವಿಂಗಡನೆ ಪ್ರಕ್ರಿಯೆ ಪೂರ್ಣಗೊಂಡು ಜಿಲ್ಲಾಧಿಕಾರಿ ಮೂಲಕ ಆಯೋಗಕ್ಕೆ ವರದಿ ಸಲ್ಲಿಕೆಯಾಗಿದೆ. ಗಜೆಟ್‌ನಲ್ಲಿ ಪ್ರಕ್ರಿಯೆ ಪೂರ್ಣಗೊಂಡ ಬಳಿಕ ಮೀಸಲಾತಿ ಅಂತಿಮವಾಗಲಿದೆ. –ಮಹೇಶ್ ಜೆ.,ತಹಶೀಲ್ದಾರ್
ಚೈತ್ರೇಶ್ ಇಳಂತಿಲ
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.