24 ಸಾವಿರ ರೂ. ಬಿಲ್ ಕಟ್ಟಲು ಹೇಳಿ ಫ್ಯೂಸ್ ತೆಗೆದು ದಬ್ಟಾಳಿಕೆ
ಮೆಸ್ಕಾಂನಿಂದ ಗ್ರಾಹಕರಿಗೆ ವಿದ್ಯುತ್ ಶಾಕ್!
Team Udayavani, Dec 7, 2021, 7:20 AM IST
ಬೆಳ್ತಂಗಡಿ: ಮೀಟರ್‌ನಲ್ಲಿ ತಾಂತ್ರಿಕ ದೋಷವಿದೆ ಎಂದು ತಿಳಿದಿದ್ದರೂ 24,000 ರೂ. ಅಧಿಕ ಬಿಲ್ ನಮೂದಿಸಿ ಡಿ. 1ರ ಬೆಳಗ್ಗೆ ಫ್ಯೂಸ್ ತೆಗೆದು ಹಾಕುವ ಮೂಲಕ ನೆರಿಯ ಗ್ರಾಮದ ಜೋಸೆಫ್ ಗಂಡಿಬಾಗಿಲು ಅವರ ಮೇಲೆ ಮೆಸ್ಕಾಂ ದಬ್ಟಾಳಿಕೆ ನಡೆಸಿದ ಘಟನೆ ನಡೆದಿದೆ.
ಜೋಸೆಫ್ ಅವರು 2018ರ ಅಕ್ಟೋಬರ್‌ವರೆಗೆ ಮಾಸಿಕ ಬಿಲ್ ಕಟ್ಟಿದ್ದರು. 200 ರೂ. ಬರುತ್ತಿದ್ದ ಬಿಲ್ ಇದ್ದಕ್ಕಿದ್ದಂತೆ 500, 1,000 ರೂ. ಮೇಲೆ ಬರಲು ಆರಂಭವಾಗಿತ್ತು. ಅದನ್ನು ಪ್ರಶ್ನಿಸಿದಾಗ ಮೀಟರ್ ಫಾಲ್ಟ್ ಇದೆ. ಹೊಸ ಮೀಟರ್ ಅಳವಡಿಸಬೇಕು ಎಂದಿದ್ದರು. ಮೀಟರ್ ಸಮಸ್ಯೆ ಇದ್ದ ಕಾರಣ 2020ರ ನವೆಂಬರ್‌ನಲ್ಲಿ 13,000 ರೂ. ಬಿಲ್ ಪೆಂಡಿಂಗ್ ಆಗಿತ್ತು. ಈ ಕುರಿತು ಮೆಸ್ಕಾಂ ಫ್ಯೂಸ್ ತೆಗೆದಿದ್ದರು.
ವರದಿಯಲ್ಲಿ ಮೀಟರ್ ಸಮಸ್ಯೆ ಇರುವ ಕುರಿತು ಮೆಸ್ಕಾಂ ತಿಳಿಸಿದ್ದರೂ ಗ್ರಾಹಕರಿಗೆ ವರದಿ ಕುರಿತು ಮಾಹಿತಿ ಪ್ರತಿ ಕೇಳಿದಾಗ ನೀಡಿಲ್ಲ. ಬಳಿಕ 2020 ನವೆಂಬರ್‌ನಲ್ಲಿ ಹೊಸ ಮೀಟರ್ ಅಳವಡಿಸಿದ್ದರು. ಆದರೆ ಹಿಂದಿನ ಬಿಲ್ ಮೊತ್ತ ಕಡಿತಗೊಳಿಸದೆ ಮತ್ತೆ ಹೆಚ್ಚುವರಿ ಬಿಲ್ ಬಂದಿತ್ತು. ಈ ಕುರಿತು ಮತ್ತೆ ದೂರು ನೀಡಿದ್ದರೂ ಮೆಸ್ಕಾಂ ಹಿಂದಿನ ಮೊತ್ತ ಪಾವತಿಸಬೇಕು ಎಂದು ಪಟ್ಟು ಬಿಡದೆ ಸತಾಯಿಸಿತ್ತು.
ಇದನ್ನೂ ಓದಿ:ಚಂದ್ರನ ಮೇಲೆ ಮನೆ ಕಟ್ಟಿದವರಾರು? ಚೀನಾದ ರೋವರ್ ಕಣ್ಣಿಗೆ ಬಿತ್ತು “ನಿಗೂಢ ಘನಾಕೃತಿ’
ಉಡಾಫೆ ಉತ್ತರ
ಒಟ್ಟು ಬಾಕಿ ಇರುವ ಮೊತ್ತ 4,000 ರೂ. ಮೀಟರ್ ಸರಿ ಇಲ್ಲದೆ ಇರುವುದರಿಂದ ಎಇ ಹೇಳಿದಂತೆ 6 ತಿಂಗಳು ಬಿಲ್ ಕಡಿತ ಮಾಡಬೇಕಿದ್ದರಿಂದ 1,500 ಕಡಿತ ಮಾಡಬೇಕಿತ್ತು. . ಇದನ್ನು ಪ್ರಶ್ನಿಸಿದರೂ ಉಡಾಫೆ ಉತ್ತರ ನೀಡುತ್ತಿದ್ದಾರೆ ಎಂದು ಜೋಸೆಫ್ ದೂರಿದ್ದಾರೆ.
ಮೆಸ್ಕಾನಿಂದ ದೌರ್ಜನ್ಯ
ಈ ಕುರಿತು ಮೆಸ್ಕಾಂ ಅಧಿಕಾರಿಗಳಿಗೆ ದೂರಿದರೂ ಯಾವುದೇ ಪ್ರಯೋಜನವಾಗಿಲ್ಲ. ಇದೀಗ ಒಟ್ಟು 24,000
ರೂ. ಕಟ್ಟಲೇಬೇಕೆಂದು ಫ್ಯೂಸ್ ತೆಗೆದಿದ್ದಾರೆ. ಮನೆಯಲ್ಲಿ ಎಂಡೋ ಪೀಡಿತ ಮಗಳು ಮತ್ತು ಪತ್ನಿಯೂ ಆರೋಗ್ಯ ಸಮಸ್ಯೆಯಿಂದ ನರಳುತ್ತಿದ್ದಾಳೆ. ಈ ನಡುವೆ ಅಷ್ಟೊಂದು ಬಿಲ್ ಹೇಗೆ ಪಾವತಿಸಲಿ ಎಂದು ಜೋಸೆಫ್ ಅಳಲು ವ್ಯಕ್ತಪಡಿಸಿದ್ದಾರೆ.
ಜೋಸೆಫ್ ಅವರು ಕಳೆದ 2 ವರ್ಷ
ಗಳಿಂದ ಬಿಲ್ ಪಾವತಿಸಿಲ್ಲ. ಮೀಟರ್ ಸಮಸ್ಯೆ ಎಂದು ತಿಳಿದು ಬಂದ ಬಳಿಕ 6 ತಿಂಗಳ ಬಿಲ್ ಕಡಿತಗೊಳಿಸಲಾಗಿದೆ. ಆದರೆ ಅವರು 2018ರ ಬಳಿಕ ಕನಿಷ್ಠ ಮೊತ್ತವನ್ನೂ ಪಾವತಿಸಿಲ್ಲ. ಹೊಸ ಮೀಟರ್ ಅಳವಡಿಸಿದ ಬಳಿಕ ತಿಂಗಳಿಗೆ 72 ಯುನಿಟ್‌ನಂತೆ 800 ಯುನಿಟ್ ಆಗಿದೆ. ಬಳಸಿದ ವಿದ್ಯುತ್ ಬಿಲ್ ಪಾವತಿಸಬೇಕೆಂದು ಹೇಳಿದ್ದೇವೆ.
– ಶಿವಶಂಕರ್, ಎಇ,
ಮೆಸ್ಕಾಂ ಬೆಳ್ತಂಗಡಿ ಉಪವಿಭಾಗ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.