ಹನ್ನೊಂದು ವರ್ಷಗಳ ಹೋರಾಟಕ್ಕೆ ಕೊನೆಗೂ ಯಶಸ್ಸು


Team Udayavani, Jun 19, 2019, 5:00 AM IST

v-12

ವಿಟ್ಲ: ಇಡ್ಕಿದು ಗ್ರಾಮದ ಉರಿಮಜಲು, ಮುದಲೆಗುಂಡಿ, ಖಂಡಿಗ, ಪಾಂಡೇಲು, ವಿಷ್ಣುಮೂರ್ತಿ ದೇಗುಲ ಸಂಪರ್ಕಿಸುವ ರಸ್ತೆ ಅಭಿವೃದ್ಧಿಗಾಗಿ ನಾಗರಿಕರ 11 ವರ್ಷಗಳ ಹೋರಾಟಕ್ಕೆ ಕೊನೆಗೂ ಜಯ ಸಿಕ್ಕಿದೆ. ರಸ್ತೆ ಸಂಪರ್ಕಿಸುವ ಮುಳುಗು ಸೇತುವೆ ನಿರ್ಮಾಣ ವಾಗಿದೆ. ರಸ್ತೆಗೆ ಡಾಮರು ಹಾಕಲಾಗಿದೆ. 4 ಕಿ.ಮೀ. ದೂರವನ್ನು ಈ ಸಂಪರ್ಕ ರಸ್ತೆ ಕೇವಲ 1 ಕಿ.ಮೀ. ದೂರಕ್ಕಿಳಿಸಿ ಅನುಕೂಲ ಮಾಡಿಕೊಟ್ಟಿದೆ.

2.50 ಕಿ.ಮೀ. ದೂರ
ಇದು ಕುಳ, ಇಡ್ಕಿದು ಮತ್ತು ವಿಟ್ಲಮುಟ್ನೂರು ಗ್ರಾಮಗಳನ್ನು ಸಂಪರ್ಕಿಸ ಬೇಕಾದ ರಸ್ತೆ. 2.50 ಕಿ.ಮೀ. ದೂರ ವಿದೆ. ಕಾಲು ದಾರಿ ಮತ್ತು ಒಂದು ತೋಡನ್ನು ದಾಟಲು ಕಾಲುಸಂಕವಿದೆ. ಇದನ್ನು ರಸ್ತೆಯಾಗಿಸಬೇಕು, ಸೇತುವೆ ನಿರ್ಮಾಣ ಮಾಡಬೇಕೆಂದು ಸ್ಥಳೀಯರ ಆಗ್ರಹವಿತ್ತು. ಸ್ಥಳೀಯವಾಗಿ 300ರಿಂದ 400 ಕುಟುಂಬಕ್ಕೆ ಅವಶ್ಯವಾಗಿರುವ ಈ ರಸ್ತೆ ಪುತ್ತೂರು ಮತ್ತು ಬಂಟ್ವಾಳ ತಾಲೂಕನ್ನು ಸಂಪರ್ಕಿಸುತ್ತದೆ.

ಇಲಾಖೆ, ಜನಪ್ರತಿನಿಧಿಗಳಿಗೆ ಮನವಿ
2008ರಲ್ಲಿ ಖಂಡಿಗ ರಾಮಚಂದ್ರ ಭಟ್‌ ಸಂಬಂಧಪಟ್ಟ ಇಲಾಖೆಗೆ ಪತ್ರ ಬರೆದರು. ಗ್ರಾ.ಪಂ., ತಾ.ಪಂ., ಜಿ.ಪಂ.ಗೆ, ಜನಪ್ರತಿನಿಧಿಗಳಿಗೆ ಮನವಿ ಸಲ್ಲಿಸಿದರು. ಇಡ್ಕಿದು ಗ್ರಾ.ಪಂ.ನಲ್ಲಿ 2010ರ ಅ. 4ರಂದು ನಿರ್ಣಯ ಕೈಗೊಳ್ಳಲಾಯಿತು. ಬಂಟ್ವಾಳ ತಹಶೀಲ್ದಾರ್‌ ಮೂಲಕ ನಕ್ಷೆ ರಚಿಸಲಾ ಯಿತು. ಅ. 26ರಂದು ಪಂ. ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿತು. ಅ. 28ರಂದು ಜಿ.ಪಂ.ಗೆ ಮನವಿ ಸಲ್ಲಿಸಲಾಯಿತು. ಜನಸಂಪರ್ಕ ಸಭೆಯಲ್ಲಿಯೂ ಮನವಿ ಸಲ್ಲಿಸಲಾಯಿತು.

ಕಾಲುದಾರಿ ರಸ್ತೆಯಾಯಿತು
ಇಡ್ಕಿದು ಗ್ರಾ.ಪಂ. ವತಿ ಯಿಂದ ಸ್ಥಳೀ ಯರ ಮನವೊಲಿಸಿ, ಕಾಲುದಾರಿಯನ್ನು 20 ಅಡಿ ಅಗಲದ ರಸ್ತೆ ಯನ್ನಾಗಿ ಪರಿವರ್ತಿಸಲಾಯಿತು. ಒಂದು ಮೋರಿಯನ್ನು ನಿರ್ಮಿಸಲಾಯಿತು. ಆದರೆ ತೋಡನ್ನು ದಾಟುವ ಸೇತುವೆಗೆ ಪಂ. ಅನುದಾನ ಸಾಲುವುದಿಲ್ಲ. ಈ ರಸ್ತೆಯ ಅಭಿವೃದ್ಧಿಗೆ ಕನಿಷ್ಠ ಒಂದು ಕೋಟಿ ರೂ.ಗಳ ಆವಶ್ಯಕತೆಯಿದೆ.

ಈ ಮಧ್ಯೆ ಖಂಡಿಗ ರಾಮಚಂದ್ರ ಭಟ್‌ ಅವರು 2017ರಲ್ಲಿ ಪ್ರಧಾನಿ ಮೋದಿ ಅವರಿಗೆ ಮನವಿ ಸಲ್ಲಿಸಿದರು. ಜಿ.ಪಂ. ಕಾರ್ಯ ನಿರ್ವಾಹಕ ಎಂಜಿನಿಯರ್‌ ಎಸ್ಟಿಮೇಟನ್ನು ಜತೆಗಿರಿಸಿದ್ದರು. ಅದರಲ್ಲಿ ಸೇತುವೆಗೆ 40 ಲಕ್ಷ ರೂ., ಕೂಡುರಸ್ತೆಗೆ 26 ಲಕ್ಷ ರೂ., ಮೋರಿ ನಿರ್ಮಾಣಕ್ಕೆ 2 ಲಕ್ಷ ರೂ., ರಸ್ತೆ ಡಾಮರು ಕಾಮಗಾರಿಗೆ 60 ಲಕ್ಷ ರೂ. ಅಂದರೆ ಒಟ್ಟು 128 ಲಕ್ಷ ರೂ.ಗಳ ಅಂದಾಜು ಪಟ್ಟಿಯನ್ನು ಲಗತ್ತಿಸಿದರು.ಆದರೆ ಈಗ ಸ್ಥಳೀಯ ಇಡ್ಕಿದು ಗ್ರಾ.ಪಂ. ಗುತ್ತಿಗೆದಾರರ ಮನವೊಲಿಸಿ, ಮುಳುಗು ಸೇತುವೆಯನ್ನು ನಿರ್ಮಿಸಿದೆ. ಅಂದಾಜು 6 ಲಕ್ಷ ರೂ.ಗಳ ಅನುದಾನದ ಈ ಯೋಜನೆಯನ್ನು ಮಾಡಲಾಗಿದ್ದರೂ ಯಾವ ಅನುದಾನವೆಂಬುದು ನಿಗದಿ ಯಾಗಿಲ್ಲ. ಆದರೆ ರಸ್ತೆ ಸಂಪರ್ಕವಾಯಿ ತೆಂದು ಸ್ಥಳೀಯ ನಾಗರಿಕರು ಸಂತಸ ಪಡುತ್ತಿದ್ದಾರೆ.

6 ಲಕ್ಷ ರೂ. ಅನುದಾನ
ಕಾಲುದಾರಿಯನ್ನು ರಸ್ತೆಯಾಗಿಸಲು ಗ್ರಾ.ಪಂ. ಅನೇಕರ ಮನವೊಲಿಸಿದೆ. ಸೇತುವೆಗೆ ಅನುದಾನ ಸಾಲದು. ಆದುದರಿಂದ ಗುತ್ತಿಗೆದಾರರ ಮನವೊಲಿಸಿ ಮುಳುಗು ಸೇತುವೆ ಕಾಮಗಾರಿ ಮಾಡಲಾಗಿದೆ. 6 ಲಕ್ಷ ರೂ. ಅನುದಾನ ಬಳಸಲಾಗಿದೆ. ರಸ್ತೆ ° ನಿರ್ಮಿಸಲು ಬಹಳ ಪ್ರಯತ್ನಿಸಿ, ಅದು ಯಶಸ್ವಿಯಾಗಿದೆ. 1 ಕೋಟಿ ರೂ.ಗೂ ಮಿಕ್ಕಿದ ಅನುದಾನ ಬಿಡುಗಡೆಯಾದಲ್ಲಿ ಕಾಮಗಾರಿ ಪೂರ್ತಿಯಾಗಬಹುದು. ನಾಗರಿಕರಿಗೆ ಉಪಯುಕ್ತವಾಗಬಹುದು.
– ಗೋಕುಲ್‌ದಾಸ್‌ ಭಕ್ತ
ಪಿಡಿಒ, ಇಡ್ಕಿದು ಗ್ರಾಮ ಪಂಚಾಯತ್‌

ಮೋದಿ ಸ್ಪಂದನೆ
2008ರಿಂದ ಮನವಿ ಸಲ್ಲಿಸುವ ಕಾರ್ಯ ಮಾಡಲಾಗಿದೆ. ಸ್ಥಳೀಯ ಪಂ. ಹೊರತುಪಡಿಸಿ ಇನ್ನಾರೂ ಸ್ಪಂದಿಸ ಲಿಲ್ಲ. ಇವೆಲ್ಲವನ್ನು ಪ್ರಧಾನಿ ಮೋದಿ ಗಮನಕ್ಕೆ 2017ರಲ್ಲಿ ಪತ್ರಮುಖೇನ ತಂದಿದ್ದೇನೆ. ಆಮೇಲೆ ಅವರು ಜಿ.ಪಂ.ಗೆ ಕ್ರಮ ಕೈಗೊಳ್ಳಲು ಸೂಚಿಸಿರಬೇಕು. ಯಾವ ಇಲಾಖೆ ಯಿಂದ ಅನುದಾನ ಬಿಡುಗಡೆಯಾಯಿತೆಂದು ಗೊತ್ತಿಲ್ಲ. ಮುಳುಗು ಸೇತುವೆ ನಿರ್ಮಾಣವಾಗಿದೆ. ರಸ್ತೆ ಸಂಪರ್ಕವಾಗಿದೆ. ಮೋದಿ ಸ್ಪಂದನೆಯಿಂದಲೇ ಇದಾಗಿದೆ.
– ಖಂಡಿಗ ರಾಮಚಂದ್ರ ಭಟ್‌ , ಹೋರಾಟದ ರೂವಾರಿ

-  ಉದಯಶಂಕರ್‌ ನೀರ್ಪಾಜೆ

ಟಾಪ್ ನ್ಯೂಸ್

Rakesh Adiga in Maryade Prashne movie

Rakesh Adiga: ನಾನು ಮಿಡಲ್‌ ಕ್ಲಾಸ್‌ ಹುಡುಗ ಮರ್ಯಾದೆ ಉಳಿಸಿ!

JPC misused for drama in by-election: HK Patil

Waqf issue: ಉಪಚುನಾವಣೆಯಲ್ಲಿ ನಾಟಕ ಮಾಡಲು ಜೆಪಿಸಿ ದುರ್ಬಳಕೆ: ಎಚ್.ಕೆ.ಪಾಟೀಲ್

Hubli: ಜೆಪಿಸಿ ಬಗ್ಗೆ ಆರೋಪ ಮಾಡುವವರಿಗೆ ಸಂವಿಧಾನದ ಬಗ್ಗೆ ಗೌರವ ಇಲ್ಲ: ಬೊಮ್ಮಾಯಿ

Hubli: ಜೆಪಿಸಿ ಬಗ್ಗೆ ಆರೋಪ ಮಾಡುವವರಿಗೆ ಸಂವಿಧಾನದ ಬಗ್ಗೆ ಗೌರವ ಇಲ್ಲ: ಬೊಮ್ಮಾಯಿ

Tragedy: KTM ಬೈಕ್‌ ಅಪಘಾತ… ಕಾಲೇಜಿಗೆ ಹೊರಟಿದ್ದ ಯುವಕರು ಸ್ಥಳದಲ್ಲೇ ಮೃತ್ಯು

Tragedy: ಭೀಕರ ಬೈಕ್‌ ಅಪಘಾತ… ಕಾಲೇಜಿಗೆ ಹೊರಟಿದ್ದ ಇಬ್ಬರು ಯುವಕರು ಸ್ಥಳದಲ್ಲೇ ಮೃತ್ಯು

Mangaluru: ಬೆಳ್ಳಂಬೆಳಗ್ಗೆ ವಿಮಾನ ನಿಲ್ದಾಣದ ಪರಿಸರದಲ್ಲಿ ಚಿರತೆ ಓಡಾಟ… ಪರಿಶೀಲನೆ

Mangaluru: ಬೆಳ್ಳಂಬೆಳಗ್ಗೆ ವಿಮಾನ ನಿಲ್ದಾಣದ ಪರಿಸರದಲ್ಲಿ ಚಿರತೆ ಓಡಾಟ… ಪರಿಶೀಲನೆ

Bellary; ಜನಾರ್ದನ ರೆಡ್ಡಿ ಪಟಾಲಂ ರಾಜಕೀಯವಾಗಿ ಮತ್ತೆ ಬೆಳೆಯದಂತೆ ಮಾಡಬೇಕು: ಸಿದ್ದರಾಮಯ್ಯ

Bellary; ಜನಾರ್ದನ ರೆಡ್ಡಿ ಪಟಾಲಂ ರಾಜಕೀಯವಾಗಿ ಮತ್ತೆ ಬೆಳೆಯದಂತೆ ಮಾಡಬೇಕು: ಸಿದ್ದರಾಮಯ್ಯ

Gold Rates:ಡಾಲರ್‌ ಬೆಲೆ ಏರಿಕೆ-‌18k, 22K, 24K, ಇಂದಿನ ಚಿನ್ನದ ಮಾರುಕಟ್ಟೆ ಬೆಲೆ ಎಷ್ಟು?

Gold Rates:ಡಾಲರ್‌ ಬೆಲೆ ಏರಿಕೆ-‌18k, 22K, 24K, ಇಂದಿನ ಚಿನ್ನದ ಮಾರುಕಟ್ಟೆ ಬೆಲೆ ಎಷ್ಟು?


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1(1)

Vitla: ನಾಲ್ಕೂ ದಿಕ್ಕಿನಿಂದ ಬರುವ ರಸ್ತೆಗಳಲ್ಲಿ ಗುಂಡಿಯೋ ಗುಂಡಿ

Aranthodu: ಕಾನೂನು ವಿದ್ಯಾರ್ಥಿ ನೇಣು ಬಿಗಿದುಕೊಂಡು ಆತ್ಮಹ*ತ್ಯೆ

Aranthodu: ಕಾನೂನು ವಿದ್ಯಾರ್ಥಿ ನೇಣು ಬಿಗಿದುಕೊಂಡು ಆತ್ಮಹ*ತ್ಯೆ

Untitled-5

Puttur: ತಲೆಮರೆಸಿಕೊಂಡಿದ್ದ ಆರೋಪಿ ಬಂಧನ

death

Belthangady: ನೇಣು ಬಿಗಿದು ವ್ಯಕ್ತಿ ಆತ್ಮಹ*ತ್ಯೆ

crime

Puttur: ಕಾರು ತಡೆಬೇಲಿ ಸಹಿತ ಹಲವು ವಾಹನಗಳಿಗೆ ಢಿಕ್ಕಿ

MUST WATCH

udayavani youtube

ಗೋವಿನ ಪೂಜೆ ಯಾಕಾಗಿ ಮಾಡಬೇಕು?

udayavani youtube

ಮೇಲುಕೋಟೆಯಲ್ಲಿ ದೀಪಾವಳಿ ಆಚರಿಸುವುದಿಲ್ಲ ಎಂಬ ಮಾತು ನಿಜವೋ ಸುಳ್ಳೋ

udayavani youtube

ಗಣಪತಿ ಸಹಕಾರಿ ವ್ಯವಸಾಯಕ ಸಂಘ ‘ನಿ.’ ಕೆಮ್ಮಣ್ಣು ಶತಾಭಿವಂದನಂ ಸಮಾರೋಪ ಸಂಭ್ರಮ ಸಂಪನ್ನ

udayavani youtube

ಉದಯವಾಣಿ’ಚಿಣ್ಣರ ಬಣ್ಣ -2024

udayavani youtube

ಹಬ್ಬದ ಊಟವೇ ಈ ಹೋಟೆಲ್ ನ ಸ್ಪೆಷಾಲಿಟಿ

ಹೊಸ ಸೇರ್ಪಡೆ

7(1)

Baikampady: ಇಲ್ಲಿ ಅಜ್ಜಿಯರೂ ರೈಲಿನಡಿ ನುಸುಳಿಯೇ ಹಳಿ ದಾಟಬೇಕು!

21-bng

Bengaluru: ಬೀದಿ ನಾಯಿಗೆ ಊಟ ಹಾಕಿದ ಮಹಿಳೆ ಮೇಲೆ ಹಲ್ಲೆ ಯತ್ನ

Rakesh Adiga in Maryade Prashne movie

Rakesh Adiga: ನಾನು ಮಿಡಲ್‌ ಕ್ಲಾಸ್‌ ಹುಡುಗ ಮರ್ಯಾದೆ ಉಳಿಸಿ!

6

Thekkatte: ಗ್ರಾಮೀಣ ಭಾಗದಲ್ಲಿ ಹೆಚ್ಚುತ್ತಿದೆ ಗೋ ಕಳವು ಪ್ರಕರಣ

20-flipama

Bengaluru: 19 ಕಡೆ ಫ್ಲಿಪ್‌ ಕಾರ್ಟ್‌, ಅಮೆಜಾನ್‌ ವ್ಯಾಪಾರಸ್ಥರಿಗೆ ಇ.ಡಿ. ದಾಳಿ ಬಿಸಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.