ಪಿಲಿಗೂಡು ಶಾಲಾ ಆವರಣದಲ್ಲಿ ಕಂಗೊಳಿಸಿದ ಪಚ್ಚೆ ಪೈರು
Team Udayavani, Jul 10, 2019, 5:00 AM IST
ಬೆಳ್ತಂಗಡಿ: ಎಳವೆಯಿಂದಲೇ ಕೃಷಿಯತ್ತ ಒಲವು ಬೆಳೆಸುವ ಉದ್ದೇಶ ದಿಂದ ತಾ|ನ ಕಣಿಯೂರು ಗ್ರಾ.ಪಂ.ನ ಪಿಲಿಗೂಡು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಆವರಣದಲ್ಲೇ ಹೊಲ ಉತ್ತು ಪಚ್ಚೆ ಪೈರು ಹಸನಾಗಿಸಿದ ಯಶೋಗಾಥೆಯಿದು.
ಶಿಕ್ಷಣವನ್ನು ಪ್ರತ್ಯಕ್ಷವಾಗಿ ಅನು ಭವಿಸಿದಾಗ ಜ್ಞಾನ ಸಂಪಾದನೆ ಜತೆಗೆ ಅರಿವು ಮೂಡಿಸಲು ಸಾಧ್ಯ. ಗದ್ದೆ ಎಂದರೆ ಏನು, ಅಕ್ಕಿ ಹೇಗೆ ಸಿದ್ಧವಾಗುತ್ತದೆ ಎಂಬ ಅರಿವಿರದ ಸ್ಥಿತಿ ಮುಂದಿನ ಜನಾಂಗಕ್ಕೆ ಬರಬಾರ ದೆನ್ನುವ ನಿಟ್ಟಿನಲ್ಲಿ ಶಿಕ್ಷಕರು, ಶಾಲಾಭಿ ವೃದ್ಧಿ ಸಮಿತಿ, ಹಳೇ ವಿದ್ಯಾರ್ಥಿಗಳ ಸಲಹೆಯಂತೆ ಶಾಲೆಯಲ್ಲೇ ಗದ್ದೆ ನಿರ್ಮಾಣ ಮಾಡಲಾಗಿದೆ.
ಶಾಲೆಯ 1.54 ಎಕ್ರೆ ಸ್ಥಳಾವಕಾಶ ದಲ್ಲಿ 20 ಸೆಂಟ್ಸ್ ಸ್ಥಳದಲ್ಲಿ ಗದ್ದೆ ನಿರ್ಮಿಸಿ ಹೊಸ ಹೆಜ್ಜೆ ಇರಿಸಿದೆ. ಈಗಾಗಲೇ ಅಕ್ಷರ ಕೈತೋಟ ನಿರ್ಮಿಸುವ ಮೂಲಕ 182 ಅಡಿಕೆ ಗಿಡ, 60 ತೆಂಗು ಬೆಳೆದು ತಾ|ಗೆ ಮಾದರಿ ಶಾಲೆ ಎಂಬ ಹೆಗ್ಗಳಿ ಕೆಗೆ ಪಾತ್ರವಾಗಿತ್ತು ಇದೀಗ ಒಂದು ಹೆಜ್ಜೆ ಮುಂದೆ ಬಂದು ಸರಕಾರಿ ಶಾಲೆ ಉನ್ನತಿಗೆ ಹೊಸ ಆಯಾಮ ಬರೆದಿದೆ.
ದಾನಿಗಳ ನೆರವು
20 ಸೆಂಟ್ಸ್ ಸ್ಥಳಾವಕಾಶದಲ್ಲಿ 10 ದಿನ ಗಳಲ್ಲಿ ಗದ್ದೆ ಸಿದ್ಧವಾಗಿ ಉತ್ತು, ನೇಜಿ ನೆಡ ಲಾಗಿತ್ತು. ಸ್ಥಳೀಯ ರಾಜಕಮಲ್ ಕನ್‌ಸ್ಟ್ರಕ್ಷನ್ ಮಾಲಕರು ಜೆಸಿಬಿಯಿಂದ ಮಣ್ಣು ಹದಾಗೊಳಿಸಿ, ಅಬ್ದುಲ್ ಖಾದರ್ ಕೋಡಿ ಯೇಲು ಒದಗಿಸಿದ 100 ಬಟ್ಟಿ ಸೆಗಣಿ, ಚಂದ್ರಾಯ ಆಚಾರ್ ನೀಡಿದ 10 ಬ್ಯಾಗ್ ಬೂದಿ, ಕೊರಗಪ್ಪ ಪೂಜಾರಿ ನೀಡಿದ ನೇಜಿ ಗದ್ದೆ ಹಚ್ಚ ಹಸುರಾಗುವಲ್ಲಿ ಸಾಕ್ಷಿಯಾಗಿದೆ.
ಪಾಡ್ದನ ಹಾಡು
ಹಿಂದಿನ ಮಾದರಿಯಲ್ಲಿ ಮಹಿಳೆಯ ರಿಂದ ಪಾಡ್ದನ ಹಾಡಿಸಿ, ಗ್ರಾಮ ಪಂಚಾಯತ್ ಅಧ್ಯಕ್ಷ ಸುನಿಲ್ ಸಾಲ್ಯಾನ್ ಬೇಂಗಾಯಿ ನೇಜಿ ಗದ್ದೆಯಲ್ಲಿ ದೀಪ ಬೆಳಗಿಸಿ ಕೆಲಸಕ್ಕೆ ಚಾಲನೆ ನೀಡಲಾಗಿತ್ತು ಹಳೇ ವಿದ್ಯಾರ್ಥಿಗಳು, ಮಕ್ಕಳು, ಶಿಕ್ಷಕರು, ವಿದ್ಯಾಭಿಮಾನಿಗಳು ಜತೆಗೂಡಿ ನೇಜಿ ನೆಟ್ಟು ಖುಷಿ ಪಟ್ಟರು.
ಗದ್ದೆ ಕಲ್ಪನೆ ಸಾಕಾರ
ಸರಕಾರಿ ಶಾಲೆಯಲ್ಲಿ ಅಧ್ಯಾಪಕರು ತಮ್ಮನ್ನು ತಾವು ತೊಡಗಿಸುವ ಜತೆಗೆ ಸ್ಥಳೀಯರು ಶಾಲೆ ಬೆಳವಣಿಗೆಗೆ ಸಹಕಾರ ನೀಡುತ್ತಾರೆ. ಇವುಗಳು ಶಾಲೆಯ ಕೀರ್ತಿಗೆ ಮಕ್ಕಳು ತಮ್ಮನ್ನು ತಾವು ತೊಡಗಿಸಿಕೊಳ್ಳಲು ಸಹಕಾರಿ. ಮಕ್ಕಳು ಗದ್ದೆ ಬೇಸಾಯ ಅನುಭವ ಸಿಗುವ ಸಲುವಾಗಿ, ಭತ್ತ ಹೇಗೆ ಬೆಳೆಯುತ್ತೇವೆ ಎಂಬ ಕಲ್ಪನೆ ಮಕ್ಕಳಿಗೆ ನೀಡುವ ದೃಷ್ಟಿಯಿಂದ ಗದ್ದೆ ಕಲ್ಪನೆ ಸಾಕಾರಗೊಂಡಿದೆ.
– ಲೀಲಾವತಿ ಕೆ., ಪ್ರಭಾರ ಮುಖ್ಯೋಪಾಧ್ಯಾಯಿನಿ
ಊರಿನವರಿಂದ ಕೊಡುಗೆ
•ಚೈತ್ರೇಶ್ ಇಳಂತಿಲ
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.