ಸೇತುವೆ ನಿರ್ಮಾಣಕ್ಕೆ ಎಂಜಿನಿಯರ್‌ಗಳ ಪರಿಶೀಲನೆ
ಎಪಿಎಂಸಿ ರೈಲ್ವೇ ಲೆವೆಲ್ ಕ್ರಾಸಿಂಗ್ ಸಮಸ್ಯೆಗೆ ಶೀಘ್ರ ಮುಕ್ತಿ?
Team Udayavani, Jun 5, 2019, 6:00 AM IST
ಪುತ್ತೂರು: ಎಪಿಎಂಸಿ ರಸ್ತೆಯ ರೈಲ್ವೇ ಲೆವೆಲ್ ಸಿಂಗ್‌ನಲ್ಲಿ ಮೇಲ್ಸೇತುವೆ ಅಥವಾ ಕೆಳ ಸೇತುವೆ ನಿರ್ಮಿಸುವ ಕುರಿತಂತೆ ಪರಿಶೀಲನೆ ನಡೆಸಲು ಮೈಸೂರು ರೈಲ್ವೇ ವಿಭಾಗದ ಎಂಜಿನಿಯರ್ ಮಂಗಳವಾರ ಭೇಟಿ ನೀಡಿದರು.
ಕಬಕ-ಪುತ್ತೂರು ರೈಲ್ವೇ ನಿಲ್ದಾಣ ಬಳಿಯ ಎಪಿಎಂಸಿ ಲೆವೆಲ್ ಕ್ರಾಸ್ ಗೇಟ್ ಸಂಖ್ಯೆ 105ಕ್ಕೆ ಮೇಲ್ಸೇತುವೆ ಅಥವಾ ಕೆಳ ಸೇತುವೆ ನಿರ್ಮಾಣ ಮಾಡಿ ವಾಹನಗಳ ಸುಗಮ ಸಂಚಾರಕ್ಕೆ ವ್ಯವಸ್ಥೆ ಮಾಡುವಂತೆ ಸಾರ್ವ ಜನಿಕ ವಲಯದ ಹಲವು ವರ್ಷಗಳ ಬೇಡಿಕೆ ಯಾಗಿದೆ. ಈ ಹಿನ್ನೆಲೆಯಲ್ಲಿ ಎಪಿಎಂಸಿ ಆಡಳಿತವು ಸಂಸದರ ಮೂಲಕ ರೈಲ್ವೇ ಇಲಾ ಖೆಗೆ ಮನವಿಯನ್ನೂ ಮಾಡಿತ್ತು.
ರೈಲ್ವೇ ಮೈಸೂರು ವಿಭಾಗೀಯ ಪ್ರಬಂಧಕಿಅಪರ್ಣಾ ಗರ್ಗ್ ಸೂಚನೆಯಂತೆ ರೈಲ್ವೇ ಎಂಜಿನಿಯರ್‌ಗಳು ಮಂಗಳವಾರ ಆಗಮಿಸಿದ್ದರು. ರೈಲ್ವೇ ಕನ್‌ಸ್ಟ್ರಕ್ಷನ್ ವಿಭಾಗದ ಸಹಾಯಕ ಕಾರ್ಯ ಪಾಲಕ ಅಭಿಯಂತರ ನವಾಹತ್ ಸಿಂಗ್ ಹಾಗೂ ಕಿರಿಯ ಅಭಿಯಂತರ ಚೇತನ್ ಪರಿಶೀಲಿಸಿದರು.
ಕಾರ್ಯಸಾಧನ ವರದಿ
ಮೇಲ್ಸೇತುವೆ ಅಥವಾ ಕೆಳ ಸೇತುವೆಯ ನಿರ್ಮಾಣಕ್ಕೆ ಬೇಕಾದ ಜಾಗ ವ್ಯಾಪ್ತಿ, ಪಕ್ಕದಲ್ಲೇ ನೀರು ಹರಿಯುವ ತೋಡು ಇರುವುದರಿಂದ ತೆಗೆದುಕೊಳ್ಳಬೇಕಾದ ಮುನ್ನೆಚ್ಚರಿಕೆ ಕ್ರಮಗಳ ಕುರಿತು ಅಂದಾಜು ನಡೆಸಿದರು. ಮೇಲ್ಸೇತುವೆ ಅಥವಾ ಕೆಳ ಸೇತುವೆ ನಿರ್ಮಾಣಕ್ಕೆ ಸಂಬಂಧಿಸಿದಂತೆ ಕಾರ್ಯಸಾಧನ ವರದಿ ಸಲ್ಲಿಸಲಾಗುವುದು. ಅನಂತರ ಸರ್ವೇ ಕಾರ್ಯ ಸೇರಿದಂತೆ ಮುಂದಿನ ಕೆಲಸಗಳು ನಡೆಯಲಿವೆ ಎಂದು ಎಂಜಿನಿಯರ್ ನವಾಹತ್ ಸಿಂಗ್ ತಿಳಿಸಿದ್ದಾರೆ.
ನಗರಸಭಾ ಪ್ರಭಾರ ಪೌರಾಯುಕ್ತ ಅರುಣ್ ಕುಮಾರ್, ಎಪಿಎಂಸಿ ಕಾರ್ಯದರ್ಶಿ ರಾಮಚಂದ್ರ, ಬಳಕೆದಾರರ ವೇದಿಕೆ ಹಾಗೂ ರೈಲ್ವೇ ಹೋರಾಟ ಸಮಿತಿಯ ಡಿ.ಕೆ. ಭಟ್, ರವೀಂದ್ರ, ಅನಿಲ್ ಕಾಮತ್, ಸಂದೀಪ್ ಲೋಬೊ, ದಾಮೋದರ ಭಂಡಾರ್ಕರ್, ಉದಯ, ನಗರಸಭಾ ಅಧಿಕಾರಿಗಳು ಉಪಸ್ಥಿತರಿದ್ದರು.
ನೈಜ ಸಮಸ್ಯೆಯ ದರ್ಶನ!
ರೈಲ್ವೇ ಕ್ರಾಸಿಂಗ್‌ನಲ್ಲಿ ಆಗಾಗ ವಾಹನಗಳ ಸಂಚಾರಕ್ಕೆ ತಡೆ ಉಂಟಾಗುತ್ತಿರುವ ಹಿನ್ನೆಲೆಯಲ್ಲಿ ಮೇಲ್ಸೇತುವೆ ಅಥವಾ ಕೆಳ ಸೇತುವೆ ನಿರ್ಮಾಣ ಮಾಡಬೇಕೆನ್ನುವ ಸಾರ್ವಜನಿಕ ಒತ್ತಡವಿರುವುದರಿಂದ ಇಲಾಖೆಯ ಕಡೆಯಿಂದ ಈ ಪ್ರಕ್ರಿಯೆ ನಡೆಯುತ್ತಿದ್ದು, ಮಂಗಳವಾರ ಮಧ್ಯಾಹ್ನ ಎಂಜಿನಿಯರ್‌ಗಳು ಪರಿಶೀಲನೆ ನಡೆಸುತ್ತಿದ್ದ ಸಂದರ್ಭದಲ್ಲೇ ಮಂಗಳೂರು- ಸುಬ್ರಹ್ಮಣ್ಯ ಪ್ಯಾಸೆಂಜರ್ ರೈಲು ಬಂದಾಗ ವಾಹನಗಳ ಕ್ಯೂ ನಿಲ್ಲುವ ನೈಜ ಸಮಸ್ಯೆ ಅಧಿಕಾರಿಗಳಿಗೆ ತಿಳಿಯಿತು.
ಸಮರ್ಪಕ ಆಗಲಿ
ಭವಿಷ್ಯದಲ್ಲಿ ಸಮಸ್ಯೆ ಉಂಟಾಗದಂತೆ ಸಮರ್ಪಕವಾಗಿ ಸೇತುವೆ ನಿರ್ಮಾಣ ಆಗಬೇಕು. ಮೇಲ್ಸೇತುವೆಗೆ 30 ಕೋಟಿ ರೂ. ವೆಚ್ಚ ಮತ್ತು ಹೆಚ್ಚು ಅವಧಿ ತೆಗೆದುಕೊಳ್ಳುತ್ತದೆ. ಕೆಳ ಸೇತುವೆ ನಿರ್ಮಾಣ ಮಾಡಿದರೆ 10 ಕೋಟಿ ರೂ. ವೆಚ್ಚದಲ್ಲಿ 1 ವರ್ಷದ ಅವಧಿಯಲ್ಲಿ ನಿರ್ಮಾಣ ಮಾಡಬಹುದು ಎಂದು ರೈಲ್ವೇ ಬಳಕೆದಾರರ ಹೋರಾಟ ಸಮಿತಿಯ ಸುದರ್ಶನ್ ಮುರ ಮನವಿ ಮಾಡಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Gangolli: ಬೈಕ್‌ಗೆ ಕಾರು ಢಿಕ್ಕಿ; ಇಬ್ಬರಿಗೆ ಗಾಯ
Udupi: ಪಿಕಪ್ ವಾಹನ ಢಿಕ್ಕಿ ಹೊಡೆದು ವ್ಯಕ್ತಿ ಗಾಯ
Gift: ಶಿಗ್ಗಾವಿಯಲ್ಲಿ ನಾಮಪತ್ರ ವಾಪಸ್ ಪಡೆದ ಖಾದ್ರಿಗೆ ಹೆಸ್ಕಾಂ ಅಧ್ಯಕ್ಷಗಿರಿ ಹುದ್ದೆ!
Davanagere: ʼಸೋಲಿಲ್ಲದ ಸರದಾರʼ ಎನಿಸಿದ್ದ ʼಬೆಳ್ಳೂಡಿ ಕಾಳಿʼ ಟಗರು ಅನಾರೋಗ್ಯದಿಂದ ನಿಧನ
IFFI 2024; ಫಿಲ್ಮ್ ಬಜಾರ್: ಮತ್ತೊಂದು ಯಶಸ್ವಿ ಮುನ್ನುಡಿಯೊಂದಿಗೆ ಉತ್ಸವ ಸಮಾಪನ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.