ಪುತ್ತೂರಿನ ವಿದ್ಯಾರ್ಥಿಯ ಆಂಗ್ಲ ಕವನ 8ನೇ ತರಗತಿ ಪಠ್ಯದಲ್ಲಿ
Team Udayavani, Oct 30, 2022, 8:45 AM IST
ಪುತ್ತೂರು: ತಾಲೂಕಿನ ಬನ್ನೂರು ನಿವಾಸಿ, ಮಂಗಳೂರಿನ ಸಹ್ಯಾದ್ರಿ ಎಂಜಿನಿಯರಿಂಗ್ ಕಾಲೇಜ್ ವಿದ್ಯಾರ್ಥಿ ಬಿ. ದಿವಿತ್ ಯು. ರೈ ಅವರು ರಚಿಸಿದ ಆಂಗ್ಲ ಕವನವೊಂದು 8ನೇ ತರಗತಿಗೆ ಪಠ್ಯವಾಗಿದೆ.
ದಿವಿತ್ ಅವರು ಪುತ್ತೂರಿನ ಶ್ರೀ ರಾಮಕೃಷ್ಣ ಪ್ರೌಢಶಾಲೆ ಯಲ್ಲಿ 10ನೇ ತರಗತಿಯಲ್ಲಿ ಕಲಿಯುತ್ತಿದ್ದಾಗ ಪ್ರಕಟಿಸಿದ್ದ “ಸಿಂಪಲ್ ಲೈಫ್’ ಎಂಬ ಆಂಗ್ಲ ಕವನ ಸಂಕಲನದ “ಮದರ್ ಅರ್ಥ್’ ಕವನವನ್ನು ಸರಕಾರ 8ನೇ ತರಗತಿಯ ಕಲಿಕಾ ಚೇತರಿಕೆ ಪಠ್ಯದಲ್ಲಿ ಮುದ್ರಿಸಿದೆ.
ದಿವಿತ್ ಹಾರಾಡಿ ಸರಕಾರಿ ಶಾಲೆಯಲ್ಲಿ 6ನೇ ತರಗತಿಯಲ್ಲಿರುವಾಗಲೇ “ಡ್ನೂ ಡ್ರಾಪ್ಸ್’ ಎಂಬ ಆಂಗ್ಲ ಕವನ ಸಂಕಲನ ಹೊರತಂದಿದ್ದರು. ಹಾರಾಡಿ ಸರಕಾರಿ ಶಾಲೆಯ ಐವರು ಶಿಕ್ಷಕಿಯರನ್ನು ಹೆಚ್ಚುವರಿ ಕಾರಣದಲ್ಲಿ ವರ್ಗಾಯಿ ಸಿದ ಸಂದರ್ಭ ಪ್ರತಿಭಟಿಸಿ ಅಂದಿನ ಗೃಹಸಚಿವ ಡಾ| ಜಿ. ಪರಮೇಶ್ವರ್ ಅವರ ಗಮನ ಸೆಳೆದಿದ್ದರು. ಬಳಿಕ ದಿವಿತ್ ಮನವಿ ಮೇರೆಗೆ ಶಾಲೆಯ ವಾರ್ಷಿ ಕೋತ್ಸವದಲ್ಲಿ ಭಾಗಿಯಾಗಿದ್ದ ಡಾ| ಪರಮೇಶ್ವರ್ ಶಾಲಾ ಕೊಠಡಿಗಾಗಿ 10 ಲಕ್ಷ ರೂ. ಅನುದಾನ ನೀಡಿದ್ದರು. ಅಲ್ಲದೆ ದಿವಿತ್ ಶಿಕ್ಷಣದ ಖರ್ಚನ್ನು ಭರಿಸುವ ಭರವಸೆ ನೀಡಿದ್ದರು. ಈತ ಸ್ಕೌಟ್ ಗೈಡ್ ಜಾಂಬೂರಿಯಲ್ಲಿ ಭಾಗವಹಿಸಲು ಜಪಾನ್‌ಗೆ ತೆರಳುವ ಖರ್ಚನ್ನೂ ಪರಮೇಶ್ವರ್ ಭರಿಸಿದ್ದರು. ಇವರು ಉದಯ ಕುಮಾರ್ ರೈ ನೀಲಂಪಾಡಿ ಮತ್ತು ಪ್ರತಿಮಾ ಯು. ರೈ ಅವರ ಪುತ್ರ.
ಇದನ್ನೂ ಓದಿ : ಜಮ್ಮು – ಕಾಶ್ಮೀರದ ಕಿಶ್ತ್ವಾರ್ ಸುರಂಗದಲ್ಲಿ ಭೂಕುಸಿತ : 4 ಸಾವು, 6 ಮಂದಿಗೆ ಗಾಯ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.