ಆಂಗ್ಲ ಭಾಷೆ ಅಗತ್ಯ, ಕನ್ನಡಕ್ಕೆ ಆದ್ಯತೆ
ಆಂಗ್ಲ ಭಾಷಾ ತರಗತಿ, ಸ್ಮಾರ್ಟ್ ಕ್ಲಾಸ್ ಉದ್ಘಾಟಿಸಿದ ಶಾಸಕ ಅಂಗಾರ
Team Udayavani, Jul 3, 2019, 5:00 AM IST
ಆಲಂಕಾರು: ಪ್ರಸಕ್ತ ಕಾಲ ಘಟ್ಟದಲ್ಲಿ ಆಂಗ್ಲಭಾಷೆಯನ್ನು ವ್ಯವಹಾರಕ್ಕಾಗಿ ಅಭ್ಯಸಿಸುವ ಅಗತ್ಯವಿದೆ. ಆದರೆ ಆಂಗ್ಲಭಾಷಾ ವ್ಯಾಮೋಹದ ಧಾವಂತದಲ್ಲಿ ಕನ್ನಡಭಾಷೆಗೆ ಆದ್ಯತೆ ಕಡಿಮೆ ಆಗಬಾರದು ಎಂದು ಸುಳ್ಯ ಶಾಸಕ ಎಸ್. ಅಂಗಾರ ಹೇಳಿದರು.
ಕಡಬ ತಾಲೂಕು ಆಲಂಕಾರು ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಯಲ್ಲಿ ಒಂದನೇ ತರಗತಿಯ ಆಂಗ್ಲ ಮಾಧ್ಯಮ ವಿಭಾಗ ಮತ್ತು ಸ್ಮಾಟ್ ಕ್ಲಾಸ್ ಉದ್ಘಾಟಿಸಿ ಅವರು ಮಾತನಾಡಿದರು.
ತಮ್ಮ ಮಕ್ಕಳು ಆಂಗ್ಲ ಭಾಷಾ ಶಿಕ್ಷಣ ಪಡೆಯಬೇಕೆನ್ನುವ ಹಂಬಲ ಹೆತ್ತವರಲ್ಲಿ ರುತ್ತದೆ. ಸರಕಾರಿ ಶಾಲೆಯಲ್ಲಿ ಆಂಗ್ಲ ಭಾಷಾ ಶಿಕ್ಷಣ ದೊರೆಯುವುದರಿಂದ ಬಡ ಮಕ್ಕಳು ಭಾಷೆಯನ್ನು ಕಲಿಯುವಂತಾಗಿದೆ. ಆಂಗ್ಲ ಭಾಷೆಗೆ ನೀಡುವ ಪ್ರಾಮುಖ್ಯದ ನಡುವೆ ವಿಶಿಷ್ಟ ಸಂಸ್ಕೃತಿ ಹೊಂದಿರುವ ಮಾತೃಭಾಷೆಗೂ ಆದ್ಯತೆ ನೀಡಬೇಕು. ನಮ್ಮ ಆಡಳಿತ ಸರಕಾರಗಳು ಬದಲಾದಂತೆ ತಮಗಿಷ್ಟದಂತೆ ಶಿಕ್ಷಣ ವ್ಯವಸ್ಥೆಗಳನ್ನು ರೂಪಿಸಿದ್ದರಿಂದ ಶಿಕ್ಷಣ ನೀತಿ ಗೊಂದಲಮಯವಾಗಿದೆ. ಸರಕಾರಗಳ ಧೋರಣೆಯಿಂದ ಸರಕಾರಿ ಶಾಲೆಗಳು ಮುಚ್ಚುವಂತಾಗಿದೆ. ಆ ಶಾಲೆಗಳನ್ನು ಪುನಶ್ಚೇತನಗೊಳಿಸಲು ಆಂಗ್ಲ ಮಾಧ್ಯಮ ತರಗತಿಗಳು ಆರಂಭದ ಜತೆಗೆ ಅಗತ್ಯ ಸೌಲಭ್ಯಗಳನ್ನು ಕಲ್ಪಿಸುವ ಹೊಣೆಗಾರಿಗೆ ಸರಕಾರದ ಮೇಲಿದೆ ಎಂದರು.
ಅಧಿಕಾರಿಗಳೇ ಕಾರಣ
ಸರಕಾರಿ ಯೋಜನೆಗಳನ್ನು ಅನು ಷ್ಠಾನ ಮಾಡುವಲ್ಲಿ ಅಧಿಕಾರಿಗಳ ಪ್ರಮುಖ ಪಾತ್ರವಿರುತ್ತದೆ. ಅವರು ಜವಾಬ್ದಾರಿ ಮರೆತರೆ ಯೋಜನೆಗಳು ಅಪೂರ್ಣವಾಗುತ್ತವೆ. ಇದಕ್ಕೆ ಉದಾಹಣೆ ಎಂಬಂತೆ, ಸರಕಾರಿ ಶಾಲೆಯಲ್ಲಿ ಆಂಗ್ಲ ಭಾಷಾ ಕಲಿಕಾ ಯೋಜನೆಯಲ್ಲಿ ಕಡಬ ಸರಕಾರಿ ಮಾದರಿ ಶಾಲೆ ಸೇರ್ಪಡೆ ಗೊಂಡಿತ್ತು. ಯೋಜನೆಯನ್ನು ಅನುಷ್ಠಾನ ಗೊಳಿಸುವಲ್ಲಿ ಶಿಕ್ಷಕರು, ಮೇಲಧಿಕಾರಿಗಳು ಆಸಕ್ತಿ ತೋರದ ಕಾರಣ ಆಂಗ್ಲ ಭಾಷೆ ಶಿಕ್ಷಣ ವ್ಯವಸ್ಥೆ ಕೈತಪ್ಪಿದೆ.
ಆಲಂಕಾರು ಶಾಲೆಯಲ್ಲಿ ಐದು ಕೊಠಡಿಗಳ ಕೊರತೆಯಿದೆ. 248 ವಿದ್ಯಾರ್ಥಿಗಳು ಇದ್ದರೂ ಇಲ್ಲಿ ವಿಷಯ ತಜ್ಞ ಶಿಕ್ಷಕರಿಲ್ಲದೆ ಮೌಲ್ಯಾಧಾರಿತ ಶಿಕ್ಷಣ ನೀಡಲು ಅಸಾಧ್ಯವಾಗಿದೆ. ಇದೀಗ ಕರ್ತವ್ಯ ನಿರ್ವಹಿಸುತ್ತಿರುವರೆಲ್ಲ ಕನ್ನಡ ಭಾಷಾ ಶಿಕ್ಷಕರಾಗಿದ್ದಾರೆ. ಈ ಬಗ್ಗೆ ಶಿಕ್ಷಣ ಇಲಾಖೆಯ ಆಡಳಿತ ಉಪ ನಿರ್ದೇಶಕರಿಗೆ ಬರೆಯಲು ವಿದ್ಯಾರ್ಥಿಗಳ ಹೆತ್ತವರು ಆಗ್ರಹಿಸಿದರು. ಶಾಸಕರು ಅಧಿಕಾರಿಗಳೊಂದಿಗೆ ಚರ್ಚಿಸಿ ಕ್ರಮ ಕೈಗೊಳ್ಳುವಂತೆ ಮುಖ್ಯ ಶಿಕ್ಷಕ ಕೆ.ಪಿ. ನಿಂಗರಾಜು ಮನವಿ ಮಾಡಿದರು. ಶಾಲೆ ಈ ವರ್ಷ ಶತಮಾನೋತ್ಸವ ಸಂಭ್ರದಲ್ಲಿದ್ದು, 1.45 ಕೋಟಿ ರೂ. ವೆಚ್ಚದ ಯೋಜನೆಯಲ್ಲಿ ಆಚರಿಸಲು ಉದ್ದೇಶಿಸಲಾಗಿದೆ. ಇದಕ್ಕೆ ಅನುದಾನ ಬಿಡುಗಡೆ ಮಾಡಬೇಕು ಎಂದು ಮನವಿ ಸಲ್ಲಿಸಿದರು.
ಶಾಲೆಗೆ ಸೌಲಭ್ಯ ಒದಗಿಸಿ

ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Aranthodu: ವಿದ್ಯುತ್ ಕಂಬಕ್ಕೆ ಕಾರು ಡಿಕ್ಕಿ; ಪ್ರಯಾಣಿಕರಿಗೆ ಗಾಯ
Bantwal: ಬಿ.ಸಿ.ರೋಡ್‌ನ ರೈಲ್ವೇ ಇಲಾಖೆಯ ಜಾಗದಲ್ಲಿ ಕೊಳೆತ ತ್ಯಾಜ್ಯ
Puttur: ಸಂಚಾರ ದಟ್ಟಣೆ ತಡೆಗೆ ಮಾಸ್ಟರ್ ಪ್ಲ್ಯಾನ್
Bettampady: ಶಾಲಾ ಮಕ್ಕಳಿಂದ ಮನೆಯಲ್ಲಿ ಭತ್ತದ ಕೃಷಿ ಅಭಿಯಾನ ಯಶಸ್ವಿ
ಉಲಾಯಿ-ಪಿದಾಯಿ ಜುಗಾರಿ ಆಟ ಆಡುತ್ತಿದ್ದ 33 ಆರೋಪಿಗಳ ಸಹಿತ ಲಕ್ಷಾಂತರ ರೂ. ಪೊಲೀಸ್ ವಶಕ್ಕೆ
MUST WATCH
ಹೊಸ ಸೇರ್ಪಡೆ
Thirthahalli: ನದಿಗೆ ಹಾರಿ ಕಾಲೇಜು ವಿದ್ಯಾರ್ಥಿ ಮೃತ್ಯು
Aranthodu: ವಿದ್ಯುತ್ ಕಂಬಕ್ಕೆ ಕಾರು ಡಿಕ್ಕಿ; ಪ್ರಯಾಣಿಕರಿಗೆ ಗಾಯ
Umar Khalid: ದೆಹಲಿ ಗಲಭೆ ಪ್ರಕರಣದ ಆರೋಪಿ ಉಮರ್ ಖಾಲಿದ್‌ಗೆ 7 ದಿನಗಳ ಮಧ್ಯಂತರ ಜಾಮೀನು
Actress: 31ರ ನಟಿಗೆ 71 ವರ್ಷದ ಹಿರಿಯ ನಟನ ಜತೆ ಪ್ರೀತಿ..? ಫೋಟೋ ವೈರಲ್
ಹಾವೇರಿ: 8 ಕೋಟಿ ರೂ. ವೆಚ್ಚದ ಹೈಟೆಕ್ ರಂಗಮಂದಿರ ನಿರುಪಯುಕ್ತ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.