ಇಲಾಖೆ ಸ್ಪಂದಿಸದಿದ್ದರೂ ಅಪಾಯಕಾರಿ ಮರ ತೆರವು
Team Udayavani, Jun 17, 2018, 4:25 PM IST
ಉಪ್ಪಿನಂಗಡಿ : ಇಲ್ಲಿನ ಅರಣ್ಯ ಇಲಾಖೆಯ ವಸತಿ ಗೃಹದ ಆವರಣ ಗೋಡೆಯ ಬದಿಯಲ್ಲಿದ್ದ ಮರದ ಗೆಲ್ಲುಗಳು ರಸ್ತೆಯ ಬದಿಗೆ ಬಾಗಿ ಅಪಾಯಕಾರಿಯಾಗಿ ಪರಿಣಮಿಸಿದ್ದು, ಅರಣ್ಯ ಇಲಾಖೆ ಇದರ ತೆರವಿಗೆ ಗಮನ ನೀಡದ ಹಿನ್ನೆಲೆಯಲ್ಲಿ ಗ್ರಾ.ಪಂ. ಸದಸ್ಯರೇ ಸ್ವತಃ ಮುತುವರ್ಜಿ ವಹಿಸಿ ಮರವನ್ನು ಕತ್ತರಿಸಿದ್ದಲ್ಲದೆ, ರಸ್ತೆಗೆ ವಾಲಿಕೊಂಡಿದ್ದ ಗೆಲ್ಲುಗಳನ್ನು ತೆರವುಗೊಳಿಸಿದ್ದಾರೆ.
ಉಪ್ಪಿನಂಗಡಿ- ಹಿರೇಬಂಡಾಡಿ ರಸ್ತೆಯ ಬದಿ ಅರಣ್ಯ ಇಲಾಖೆಯ ವಸತಿ ಗೃಹವಿದ್ದು, ಇದರ ಬದಿಯಲ್ಲಿಯೇ ರಸ್ತೆಗೆ ಮರವೊಂದು ಬಾಗಿ ಅಪಾಯಕಾರಿಯಾಗಿ ನಿಂತಿತ್ತು. ಇದೊಂದು ವೇಳೆ ಧರೆಗುರುಳಿದ್ದರೆ, ವಿದ್ಯುತ್ ಕಂಬಗಳು ತುಂಡಾಗುವ ಸಾಧ್ಯತೆಯಿತ್ತಲ್ಲದೆ, ರಸ್ತೆಯಲ್ಲಿ ಹೋಗುವವರಿಗೂ ಅಪಾಯವುಂಟಾಗುವ ಸಾಧ್ಯತೆ ಎದುರಾಗಿತ್ತು. ಈ ಬಗ್ಗೆ ಪತ್ರಿಕೆಗಳು ವರದಿ ಮಾಡಿ ಎಚ್ಚರಿಸಿದ್ದವು. ಆದರೆ ಅರಣ್ಯ ಇಲಾಖೆಯಾಗಲೀ, ಮೆಸ್ಕಾಂ ಆಗಲೀ ಇದಕ್ಕೆ ಯಾವುದೇ ಸ್ಪಂದನೆ ನೀಡಿರಲಿಲ್ಲ. ಇದನ್ನು ಮನಗಂಡ ಉಪ್ಪಿನಂಗಡಿ ಗ್ರಾ.ಪಂ. ಸದಸ್ಯ ಚಂದ್ರಶೇಖರ ಮಡಿವಾಳ ಸ್ವತಃ ಮುತುವರ್ಜಿ ವಹಿಸಿ, ಕೂಲಿ ಕಾರ್ಮಿಕರೊಂದಿಗೆ ಸ್ಥಳಕ್ಕೆ ತೆರಳಿ ಮರವನ್ನು ತೆರೆವುಗೊಳಿಸಿದ್ದಲ್ಲದೆ, ಅಲ್ಲಿ ರಸ್ತೆ ಕಡೆ ಬಾಗಿ ನಿಂತಿದ್ದ ಮರದ ಗೆಲ್ಲುಗಳನ್ನು ಕತ್ತರಿಸುವ ಮೂಲಕ ಸಾರ್ವಜನಿಕರ ಶ್ಲಾಘನೆಗೆ ಪಾತ್ರರಾಗಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Malpe ಫಿಶರೀಸ್ ಕಾಲೇಜು: ದುರ್ವಾಸನೆಯಲ್ಲೇ ಪಾಠ
Kaup: ಎರ್ಮಾಳು-ಉಚ್ಚಿಲ-ಮೂಳೂರು ರಾಷ್ಟ್ರೀಯ ಹೆದ್ದಾರಿ 66ರಲ್ಲಿನ ಕತ್ತಲೆಗೆ ಮುಕ್ತಿ!
County Championship: ಶಕಿಬ್ ಹಸನ್ ಬೌಲಿಂಗ್ ಶೈಲಿ ಬಗ್ಗೆ ಅಂಪೈರ್ ಗಳ ಆಕ್ಷೇಪ
Vyasanagar: ಮಣ್ಣಿನ ಒಳ ರಸ್ತೆಗಳಿಗೆ ಬೇಕು ಬೀದಿದೀಪ
Mangalore: ಅಡ್ಯಾರ್ ಕಣ್ಣೂರಿನಲ್ಲಿ ತ್ಯಾಜ್ಯ ಸುಡುವಿಕೆಯಿಂದ ಪರಿಸರ ಮಾಲಿನ್ಯ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.