ಉಪನೋಂದಣಿ ಕಚೇರಿಯಲ್ಲಿ ಹೆಚ್ಚುವರಿ ಹಣ ವಸೂಲು
ಡಿಸಿಗೆ ವರದಿ ಸಲ್ಲಿಸಲು ನಿರ್ಧಾರ, ಲೋಕಾಯುಕ್ತಕ್ಕೆ ದೂರು
Team Udayavani, Dec 26, 2019, 11:31 PM IST
ಸುಳ್ಯ: ಉಪನೋಂದಣಾಧಿಕಾರಿ ಕಚೇರಿಯಲ್ಲಿ ವಿಭಾಗ ಪತ್ರದ ನಕಲು ಮತ್ತು ಋಣಭಾರ ಅರ್ಜಿ ಸಲ್ಲಿಸಿದ ಅರ್ಜಿದಾರರಿಂದ ನಿಗದಿತ ಮೊತ್ತಕ್ಕಿಂತ ಹೆಚ್ಚುವರಿ ಹಣ ಪಡೆದುಕೊಂಡ ಪ್ರಕರಣಕ್ಕೆ ಸಂಬಂಧಿಸಿ ತಹಶೀಲ್ದಾರ್ ಅವರು ಜಿಲ್ಲಾಧಿಕಾರಿಗೆ ವರದಿ ಸಲ್ಲಿಸಲು ನಿರ್ಧರಿಸಿದ್ದಾರೆ.
ಅರ್ಜಿದಾರರು ತಹಶೀಲ್ದಾರ್ ಅವರಿಗೆ ದೂರು ನೀಡಿದ ಪರಿಣಾಮ ಉಪನೋಂದಣಿ ಇಲಾಖಾಧಿಕಾರಿ ಅವರು ಕರ್ತವ್ಯ ನಿರತ ಸಿಬಂದಿ ಪರವಾಗಿ ಅರ್ಜಿದಾರರ ಕ್ಷಮೆ ಕೋರಿ ಹೆಚ್ಚುವರಿ ಪಡೆದುಕೊಂಡ 480 ರೂ.ಗಳನ್ನು ಹಿಂತಿರುಗಿಸಲು ಒಪ್ಪಿಕೊಂಡಿದ್ದರು. ಘಟನೆಯ ಪೂರ್ಣ ವಿವರವನ್ನು ದಾಖಲಿಸಿ ಡಿಸಿ ಅವರಿಗೆ ಸಲ್ಲಿಸಲು ತಹಶೀಲ್ದಾರ್ ಮುಂದಾಗಿದ್ದಾರೆ.
ಸಿಬಂದಿ ಬದಲಿಗೆ ಸೂಚನೆ
ಪ್ರಕರಣದ ಬಗ್ಗೆ ಎಲ್ಲ ಮಾಹಿತಿ ಯನ್ನು ಜಿಲ್ಲಾಧಿಕಾರಿಗೆ ಸಲ್ಲಿಸಲಿ ದ್ದೇನೆ. ಹೆಚ್ಚುವರಿ ಹಣ ಪಡೆದು ಕೊಂಡ ಸಂದರ್ಭ ಕರ್ತವ್ಯ ನಿರತರಾಗಿದ್ದ ಸಿಬಂದಿಯನ್ನು ತತ್‌ಕ್ಷಣ ಕೈ ಬಿಟ್ಟು, ಬೇರೆ ಸಿಬಂದಿ ನಿಯೋಜಿಸುವಂತೆ ಉಪನೋಂದಣಿ ಅಧಿಕಾರಿಗೆ ಸೂಚನೆ ನೀಡಿದ್ದೇನೆ ಎಂದು ತಹಶೀಲ್ದಾರ್ ಎನ್.ಎ. ಕುಂಞಿ ಅಹ್ಮದ್ “ಉದಯವಾಣಿ’ಗೆ ತಿಳಿಸಿದ್ದಾರೆ.
ಲೋಕಾಯುಕ್ತಕ್ಕೆ ದೂರು
ಐವರ್ನಾಡು ಗ್ರಾಮದ ಎಡಮಲೆ ನಿವಾಸಿ ಅಶೋಕ್ ಅವರು ತನ್ನ ಆಸ್ತಿ ಹಕ್ಕು ವಿಭಾಗ ಪತ್ರದ ನಕಲು ಮತ್ತು ಋಣಭಾರ ಪತ್ರಕ್ಕೆ ಡಿ.2ರಂದು ಸುಳ್ಯ ಉಪ ನೋಂದಣಿ ಕಚೇರಿಯಲ್ಲಿ ಅರ್ಜಿ ನೀಡಿದ್ದರು. ಈ ಸಂದರ್ಭ ನಿಯಾಮನುಸಾರ ಪಡೆಯಬೇಕಿದ್ದ ಮೊತ್ತಕ್ಕಿಂತ ಹೆಚ್ಚಿನ ಮೊತ್ತ ಪಡೆದು ಕೊಂಡ ಕಾರಣ ಅಶೋಕ್ ರಶೀದಿ ಸಹಿತ ತಹಶೀಲ್ದಾರ್‌ಗೆ ದೂರು ಸಲ್ಲಿಸಿ ದ್ದರು. ಈಗ ಡಿ.26ರಂದು ತಾಲೂಕು ಕಚೇರಿಯಲ್ಲಿ ಲೋಕಾಯುಕ್ತ ಪೊಲೀಸರ ಸಾರ್ವಜನಿಕ ಅಹವಾಲು ಸ್ವೀಕಾರ ಸಂದರ್ಭ ದೂರು ಸಲ್ಲಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Kundapura ದೊಡ್ಡಾಸ್ಪತ್ರೆಗೆ ವೈದ್ಯರ ಕೊರತೆ
Nelamangala: ಐಷಾರಾಮಿ ಕಾರಿನ ಮೇಲೆ ಬಿದ್ದ ಕಂಟೈನರ್… ಒಂದೇ ಕುಟುಂಬದ 6 ಮಂದಿ ಸಾ*ವು
Google Layoffs: ಉನ್ನತ ಹುದ್ದೆಯ ಉದ್ಯೋಗಿಗಳ ವಜಾ: ಗೂಗಲ್ ಸಿಇಒ ಸುಂದರ್ ಪಿಚೈ
Arrest Warrant: ರಾಬಿನ್ ಉತ್ತಪ್ಪ ವಿರುದ್ದ ಬಂಧನ ವಾರೆಂಟ್; ಜೈಲು ಪಾಲಾಗ್ತಾರಾ ಕ್ರಿಕೆಟಿಗ
Mangaluru: ಕರಾವಳಿ ಉತ್ಸವದಲ್ಲಿ ಹೆಲಿಕಾಪ್ಟರ್ ಮೂಲಕ ನಗರದ ದರ್ಶನಕ್ಕೆ ಅವಕಾಶ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.