ಸಂತೆ ವ್ಯವಹಾರ ಹಿಂದೂಗಳಿಗೆ ಸೀಮಿತ: ನಿರ್ಧಾರ
ಪುತ್ತೂರು ಮಹಾಲಿಂಗೇಶ್ವರ ದೇವಸ್ಥಾನದ ಜಾತ್ರೆ ಹಿನ್ನೆಲೆಯಲ್ಲಿ ಭಕ್ತರ ಸಭೆ
Team Udayavani, Mar 28, 2022, 11:02 AM IST
ಪುತ್ತೂರು: ಸಮಾಜದಲ್ಲಿ ಸಾಮರಸ್ಯಕ್ಕೆ ಧಕ್ಕೆ ಆಗದಂತೆ ಕಾರ್ಯಕ್ರಮ ಅನುಷ್ಠಾನಿಸುವ ಅಗತ್ಯ ಇದೆ. ಹಾಗಾಗಿ ಕಾನೂನಿನ ಚೌಕಟ್ಟಿನಲ್ಲಿ ಜಾತ್ರೆ ನಡೆಸಲು ಬೇಕಾದ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಬೇಕು ಎಂದು ಶಾಸಕ ಸಂಜೀವ ಮಠಂದೂರು ಸಲಹೆ ನೀಡಿದ್ದಾರೆ.
ಪುತ್ತೂರು ಮಹಾಲಿಂಗೇಶ್ವರ ದೇವಸ್ಥಾನದ ವರ್ಷಾವಧಿ ಜಾತ್ರೆ ಪೂರ್ವಭಾವಿಯಾಗಿ ದೇವಸ್ಥಾನದ ಸಭಾಭವನದಲ್ಲಿ ನಡೆದ ಭಕ್ತರ ಸಭೆಯಲ್ಲಿ ಅವರು ಮಾತನಾಡಿದರು. ಜಾತ್ರೆಯಲ್ಲಿ ಎಲ್ಲರಿಗೂ ಸೇವೆ ಸಲ್ಲಿಸಲು ಅವಕಾಶ ನೀಡಬೇಕು. ವ್ಯವಸ್ಥಾಪನ ಸಮಿತಿಯವರು ವಿವಿಧ ವಿಭಾಗ ಮಾಡಿ ಜವಾಬ್ದಾರಿ ಹಂಚಿಕೊಂಡಿದ್ದು ಅದಕ್ಕೆ ಎಲ್ಲರೂ ಸಹಕರಿಸಬೇಕು ಎಂದು ಮಠಂದೂರು ತಿಳಿಸಿದರು.
ದೇವಸ್ಥಾನದ ಆವರಣ ಹಾಗೂ ಆಸುಪಾಸಿನಲ್ಲಿ ವ್ಯವಹಾರ ನಡೆಸಲು ಅನ್ಯ ಮತೀಯರಿಗೆ ಏಲಂನಲ್ಲಿ ಪಡೆದುಕೊಳ್ಳದಂತೆ ನಿಯಮವಿದೆ. ಈ ಬಗ್ಗೆ ಸಮಿತಿ ಯಾವ ಕ್ರಮ ಕೈಗೊಳ್ಳಲಿದೆ ಎಂದು ಶಾಸಕರು ಪ್ರಶ್ನಿಸಿದರು.
ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಕೇಶವ ಪ್ರಸಾದ್ ಮುಳಿಯ ಮಾತನಾಡಿ, ಜಾತ್ರಾ ಗದ್ದೆಯ ಏಲಂನಲ್ಲಿ ಭಾಗವಹಿಸಲು ಹಿಂದೂಗಳಿಗೆ ಮಾತ್ರ ಅವಕಾಶ ಎಂದು ಈಗಾಗಲೇ ಪತ್ರಿಕಾ ಪ್ರಕಟನೆ ಮೂಲಕ ತಿಳಿಸಲಾಗಿದೆ. ಅದನ್ನು ಕಟ್ಟುನಿಟ್ಟಾಗಿ ಪಾಲಿಸಲಾಗುವುದು. ಟೆಂಡರ್ ವಹಿಸಿಕೊಳ್ಳುವವರು ಅವರ ಗುರುತಿನ ಚೀಟಿ, ಆಧಾರ ಕಾರ್ಡ್ ಸಲ್ಲಿಸಬೇಕು. ಟೆಂಡರ್ ಪಡೆದುಕೊಂಡವರಿಗೆ ಗುರುತಿನ ಚೀಟಿ ನೀಡಲಾಗುತ್ತಿದ್ದು ಅದನ್ನು ಧರಿಸಿಕೊಂಡೇ ಅವರು ವ್ಯವಹಾರದಲ್ಲಿ ತೊಡಗಿಸಿಕೊಳ್ಳಬೇಕು ಎಂದು ತಿಳಿಸಿದರು.
ಜೈಂಟ್ ವ್ಹೀಲ್ಗಳು ಪ್ರಮುಖವಾಗಿದ್ದು ಅದನ್ನು ಗುತ್ತಿಗೆ ಪಡೆದವರು ಹಿಂದುಗಳಾಗಿದ್ದರೂ ಅದನ್ನು ನಡೆಸುವವರು ಅನ್ಯ ಧರ್ಮೀಯರಾಗಿರುತ್ತಾರೆ. ಜೈಂಟ್ ವ್ಹೀಲ್ ಇಲ್ಲದೆಯೂ ಜಾತ್ರೆ ನಡೆದಿದೆ. ಇದರಿಂದ ಆದಾಯಕ್ಕೆ ಸ್ವಲ್ಪ ಹಿನ್ನಡೆಯಾಗಬಹುದು ಹೊರತು ಬೇರೆ ಸಮಸ್ಯೆ ಇಲ್ಲ ಎಂದರು. ಸಿಡಿಮದ್ದು ಪ್ರದರ್ಶನಕ್ಕೆ ಅನ್ಯ ಧರ್ಮದವರಿಗೆ ಅವಕಾಶ ನೀಡದೆ ಹಿಂದೂಗಳಿಗೆ ನೀಡಲಾಗುವುದು. ಇದಕ್ಕಾಗಿ ಉಪ ಸಮಿತಿ ರಚಿಸಿಕೊಳ್ಳಲಾಗಿದೆ ಎಂದರು.
ಹೂವಿನ ಅಲಂಕಾರ
ದೇವಸ್ಥಾನವನ್ನು ಹೂಗಳಿಂದ ಅಲಂಕಾರ ಮಾಡಲಾಗುವುದು. ವಿಷು ಹಬ್ಬದ ದಿನ ಹಿಂಗಾರದಿಂದ ಅಲಂಕಾರ ಮಾಡುವ ಯೋಜನೆ ಇದೆ ಎಂದು ವ್ಯವ ಸ್ಥಾಪನ ಸಮಿತಿ ಸದಸ್ಯೆ ಸುಧಾ ಎಸ್.ರಾವ್ ತಿಳಿಸಿದರು.
ಮೂರು ದಿನ ವಿಶೇಷ ಕಾರ್ಯಕ್ರಮ
ಸಾಂಸ್ಕೃತಿಕ ಕಾರ್ಯಕ್ರಮಗಳು ಸೇವಾ ರೂಪದಲ್ಲಿ ನಡೆಯಲಿದೆ. ಎ. 11ರಂದು ಸಂಸ್ಕಾರ ಭಾರತಿಯಿಂದ ಜಾಗೋ ಭಾರತ್, ಎ.14ರಂದು ಪಟ್ಲ ಪೌಂಡೇಶನ್ನ ಪ್ರಾಯೋಜಕತ್ವದಲ್ಲಿ ವಿಶೇಷ ಕಾರ್ಯಕ್ರಮ ಹಾಗೂ ಎ. 16ರಂದು ಶಾಸಕರ ನೇತೃತ್ವದಲ್ಲಿ ಸ್ವರ-ಸಂಗಮ ನಡೆಯಲಿದೆ ಎಂದು ಕೇಶವ ಪ್ರಸಾದ್ ತಿಳಿಸಿದರು.
ನಗರಸಭೆ ಅಧ್ಯಕ್ಷ ಜೀವಂಧರ್ ಜೈನ್ ಮಾತನಾಡಿ, ಸ್ವತ್ಛತೆ, ಕುದ್ರೋಳಿ ಮಾದರಿಯಲ್ಲಿ ದೀಪಾಲಂಕಾರ ಮಾಡುವ ಬಗ್ಗೆ ವರ್ತಕರ ಸಭೆ ನಡೆಸಲಾಗುವುದು ಎಂದರು. ಕಿಟ್ಟಣ್ಣ ಗೌಡ ಬಪ್ಪಳಿಗೆ, ರಾಧಾಕೃಷ್ಣ ನಂದಿಲ, ಮಾಜಿ ಮೊಕ್ತೇಸರ ನ್ಯಾಯವಾದಿ ಚಿದಾನಂದ ಬೈಲಾಡಿ, ಕಾರ್ಪಾಡಿ ಶ್ರೀ ಸುಬ್ರಹ್ಮಣ್ಯ ದೇಗುಲದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಸುಧಾಕರ್ ರಾವ್ ಆರ್ಯಾಪು, ಆರ್.ಸಿ.ನಾರಾಯಣ, ಕಿಶೋರ್ ಕುಮಾರ್ ನೆಲ್ಲಿಕಟ್ಟೆ, ಗೋಪಾಲ್ ಎಂ.ಯು., ಡಾ|ರಾಜೇಶ್ ಬೆಜ್ಜಂಗಳ, ಸುದರ್ಶನ್, ಅಣ್ಣಪ್ಪ ಕಾರೆಕ್ಕಾಡು, ಶ್ಯಾಮಸುದರ್ಶನ, ನಯನಾ ರೈ, ಎ.ಜೆ.ರೈ, ಪ್ರಮೀತಾ ಸಿ.ಹಾಸ್ ಮೊದಲಾದವರು ವಿವಿಧ ಸಲಹೆ ನೀಡಿದರು.
ಜಿಲ್ಲಾ ಧಾರ್ಮಿಕ ಪರಿಷತ್ ಸದಸ್ಯ ಮುರಳೀಕೃಷ್ಣ ಹಸಂತಡ್ಕ, ವ್ಯವಸ್ಥಾಪನ ಸಮಿತಿ ಸದಸ್ಯೆ ವೀಣಾ ಬಿ.ಕೆ. ಉಪಸ್ಥಿತರಿದ್ದರು. ಪುರಸಭೆ ಮಾಜಿ ಅಧ್ಯಕ್ಷ ರಾಜೇಶ್ ಬನ್ನೂರು, ಉದ್ಯಮಿಗಳಾದ ದೇವಪ್ಪ ನೋಂಡ, ಸೀತಾರಾಮ ರೈ ಕೆದಂಬಾಡಿಗುತ್ತು, ಸುರೇಶ್ ಶೆಟ್ಟಿ, ರೋಹಿಣಿ ರಾಘವ ಆಚಾರ್ಯ, ರಾಧಾಕೃಷ್ಣ ನಾೖಕ್, ಸತೀಶ್ ನಾೖಕ್, ಹರಿಣಿ ಪುತ್ತೂರಾಯ, ಪದ್ಮಾ ಆಚಾರ್ಯ ಮತ್ತಿತರರಿದ್ದರು. ದೇವಸ್ಥಾನದ ಇಒ ನವೀನ್ ಭಂಡಾರಿ ಸ್ವಾಗತಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Dharmasthala: ನ.26-30: ಶ್ರೀ ಕ್ಷೇತ್ರ ಧರ್ಮಸ್ಥಳದ ಲಕ್ಷದೀಪೋತ್ಸವ
ಹೊಸ ಟ್ರೆಂಡ್ ನ ಪ್ಯಾಂಟ್ ಧರಿಸಿದ ಯುವಕ;ಸ್ನೇಹಿತರಿಂದ ಅವಮಾನ, ನೊಂದ ಯುವಕ ಆತ್ಮಹತ್ಯೆಗೆ ಯತ್ನ
Fraud Case: ಗೂಗಲ್ ಪೇ ಮಾಡಿದೆ ಎಂದು ಹೇಳಿ ಮೋಸ
Kokkada: ಯಾತ್ರಾರ್ಥಿಯಿಂದ ಸೌತಡ್ಕ ಕ್ಷೇತ್ರದ ಸಿಬಂದಿ ಮೇಲೆ ಹಲ್ಲೆ
Puttur: ಸ್ಕೂಲ್ ಬಸ್ಗೆ ಢಿಕ್ಕಿಯಾಗುವುದನ್ನು ತಪ್ಪಿಸಿ ಮನೆಗೆ ನುಗ್ಗಿದ ಖಾಸಗಿ ಬಸ್
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.