ಅಭಿವೃದ್ಧಿಗೆ ದೂರದೃಷ್ಟಿಯ ಚಿಂತನೆ ಅತ್ಯಗತ್ಯ: ಅಂಗಾರ
Team Udayavani, Jun 1, 2020, 5:02 AM IST
ಕಡಬ: ಜನಪ್ರತಿನಿಧಿಗಳು ಜನಪರ ಕಾಳಜಿಯಿಂದ ಕೆಲಸ ಮಾಡಿದರೆ ಮಾತ್ರ ಅಭಿವೃದ್ಧಿ ಸಾಧ್ಯ. ಅಭಿವೃದ್ಧಿ ಕಾಮಗಾರಿಗಳ ವಿಚಾರದಲ್ಲಿ ದೂರದೃಷ್ಟಿಯ ಚಿಂತನೆ ಅತ್ಯಗತ್ಯ ಎಂದು ಸುಳ್ಯ ಶಾಸಕ ಎಸ್.ಅಂಗಾರ ಅವರು ಹೇಳಿದರು.ಅವರು ಶನಿವಾರ ಕಡಬ ಅಂಬೇಡ್ಕರ್ ಭವನದಲ್ಲಿ ಜರಗಿದ ನೂತನ ಕಡಬ ತಾ.ಪಂ.ನ ಪ್ರಥಮ ವಿಶೇಷ ಸಭೆಯನ್ನು ಉದ್ಘಾಟಿಸಿ ಮಾತನಾಡಿದರು.
ಬಹುತೇಕ ಸಂದರ್ಭಗಳಲ್ಲಿ ರಾಜ ಕೀಯ ಕಾರಣಗಳಿಗಾಗಿ ಆಡಳಿತಾತ್ಮಕ ವಿಚಾರದಲ್ಲಿ ಅನಗತ್ಯ ಚರ್ಚೆಗಳು ನಡೆದು ಅದು ವೈಷಮ್ಯಕ್ಕೆ ಕಾರಣವಾಗುತ್ತಿವೆ. ಸಭೆಗಳಲ್ಲಿ ಗಲಾಟೆ ಎಬ್ಬಿಸುವುದೇ ಸಾಧನೆಯಲ್ಲ. ಕೇವಲ ಟೀಕೆ ಮತ್ತು ವಿರೋಧ ಮಾಡುವುದರಿಂದ ಅಭಿವೃದ್ಧಿಯಾಗುವು ದಿಲ್ಲ. ಸದಸ್ಯರು ಆರೋಗ್ಯಕರ ಚರ್ಚೆಗಳೊಂದಿಗೆ ಸೌಹಾರ್ದದಿಂದ ವರ್ತಿಸಿ ತಾಲೂಕಿನ ಅಭಿವೃದ್ಧಿಯನ್ನೇ ಧ್ಯೇಯ ವನ್ನಾಗಿಸಬೇಕು ಎಂದರು.
ಬಳಿಕ ಕಡಬ ತಾ.ಪಂ.ಗೆ ನೀಡಲಾದ 15 ಹಣಕಾಸು ಅನುದಾನದ ಕ್ರಿಯಾಯೋಜನೆ ಬಗ್ಗೆ ಚರ್ಚಿಸಲಾಯಿತು. ಕಾರ್ಯನಿರ್ವಹಣಾಧಿಕಾರಿ, ದ.ಕ.ಜಿ.ಪಂ. ಉಪ ಕಾರ್ಯದರ್ಶಿ ಆನಂದ ಕುಮಾರ್ ಅಧ್ಯಕ್ಷತೆ ವಹಿಸಿದ್ದರು. ತಾ.ಪಂ. ಸದಸ್ಯರಾದ ಫಝಲ್ ಕೋಡಿಂಬಾಳ, ಉಷಾ ಅಂಚನ್, ಅಶೋಕ್ ನೆಕ್ರಾಜೆ, ಕೆ.ಟಿ. ವಲ್ಸಮ್ಮ, ಆಶಾ ಲಕ್ಷ್ಮಣ, ಗಣೇಶ್ ಕೈಕುರೆ, ತೇಜಸ್ವಿನಿ ಕಟ್ಟಪುಣಿ, ಪಿ.ವೈ. ಕುಸುಮಾ, ಜಯಂತಿ ಆರ್. ಗೌಡ, ಶುಭದಾ ಎಸ್. ರೈ ಮತ್ತಿತರರು ಚರ್ಚೆಯಲ್ಲಿ ಪಾಲ್ಗೊಂಡರು. ಸದಸ್ಯರಾದ ತಾರಾ ಕೇಪುಳು, ಲಲಿತಾ ಈಶ್ವರ, ರಾಜೇಶ್ವರಿ ಕನ್ಯಾಮಂಗಲ ಭಾಗವಹಿಸಿದ್ದರು. ಕಡಬ ತಹಶೀಲ್ದಾರ್ ಜಾನ್‌ಪ್ರಕಾಶ್ ರೋಡ್ರಿಗಸ್ ವೇದಿಕೆಯಲ್ಲಿದ್ದರು. ಪ್ರಭಾರ ಕಾರ್ಯನಿರ್ವಹಣಾಧಿಕಾರಿ ನವೀನ್ ಭಂಡಾರಿ ಸ್ವಾಗತಿಸಿ, ವಂದಿಸಿ ದರು. ಶಿವಪ್ರಕಾಶ್ ಅಡ³ಂಗಾಯ ಕಾರ್ಯಕ್ರಮ ನಿರೂಪಿಸಿದರು.
ಜಿ.ಪಂ. ಸದಸ್ಯರ ಅಸಮಾಧಾನ
ತನ್ನನ್ನು ಕಡಬ ತಾ.ಪಂ.ನ ಪ್ರಥಮ ಸಭೆಯ ಉದ್ಘಾಟನಾ ಕಾರ್ಯಕ್ರಮಕ್ಕೆ ಆಹ್ವಾನಿಸದೆ ಅಧಿಕಾರಿಗಳು ಅವಗಣಿಸಿ ದ್ದಾರೆ ಎಂದು ಕಡಬ ಕ್ಷೇತ್ರದ ಸದಸ್ಯ ಪಿ.ಪಿ.ವರ್ಗೀಸ್ ಅಸಮಾಧಾನ ವ್ಯಕ್ತಪಡಿಸಿದರು.
50 ಮಂದಿಗೆ
ಕೋವಿಡ್ ಪರೀಕ್ಷೆ
ಕಡಬ ತಾಲೂಕಿನಲ್ಲಿ ಹೊರಗಿನಿಂದ ಬಂದ ಒಟ್ಟು 50 ಜನರನ್ನು ಪರೀಕ್ಷೆಗೆ ಒಳಪಡಿಸಲಾಗಿದ್ದು, ಅವರಲ್ಲಿ ಯಾರಿಗೂ ಸೋಂಕು ಪತ್ತೆಯಾಗಿಲ್ಲ ಎಂದು ತಾಲೂಕು ಆರೋಗ್ಯಾಧಿಕಾರಿ ಡಾ| ಅಶೋಕ್ ರೈ ಅವರು ತಿಳಿಸಿದರು.
ಕಾಮಗಾರಿ ಪ್ರಾರಂಭಿಸದಿದ್ದರೆ ಕ್ರಮ
ಟೆಂಡರ್ ಖಾಯಂ ಆಗಿ ಕಾಮಗಾರಿ ಪ್ರಾರಂಭಿಸದಿದ್ದರೆ ಗುತ್ತಿಗೆದಾರರ ವಿರುದ್ಧ ಕ್ರಮ ಜರಗಿಸಲಾಗುವುದು . ಚರಂಡಿ ಮುಚ್ಚಿ ಮಳೆನೀರು ಹರಿದು ಹೋಗಲು ತಡೆ ಮಾಡುವವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಶಾಸಕರು ಹೇಳಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kokkada: ಯಾತ್ರಾರ್ಥಿಯಿಂದ ಸೌತಡ್ಕ ಕ್ಷೇತ್ರದ ಸಿಬಂದಿ ಮೇಲೆ ಹಲ್ಲೆ
Puttur: ಸ್ಕೂಲ್ ಬಸ್‌ಗೆ ಢಿಕ್ಕಿಯಾಗುವುದನ್ನು ತಪ್ಪಿಸಿ ಮನೆಗೆ ನುಗ್ಗಿದ ಖಾಸಗಿ ಬಸ್
Puttur: ಕಾರು ಚಾಲಕನಿಗೆ ಮೂರ್ಛೆ ರೋಗ: ಅಪಾಯದಿಂದ ಪಾರು
Shishila:ಮಕ್ಕಳನ್ನು ಶಾಲೆಗೆ ಕಳುಹಿಸುವ ವೇಳೆ ಕಾಡಾನೆ ದಾಳಿ;ಸೊಂಡಿಲಿನಿಂದ ಬೈಕ್ ಕೆಡವಿದ ಆನೆ
Vitla: ಕೊಳೆತ ಸ್ಥಿತಿಯಲ್ಲಿ ಮೃತದೇಹ ಪತ್ತೆ; 2 ದಿನಗಳ ಹಿಂದೆ ಮೃತಪಟ್ಟಿರುವುದಾಗಿ ಶಂಕೆ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.