Bantwala: ತುಂಬೆ ವೆಂಟೆಡ್ ಡ್ಯಾಂಗೆ ರೈತರ ಮುತ್ತಿಗೆ
ಮಂಗಳೂರು ಪಾಲಿಕೆ ಕಮಿಷನರ್, ಜಿಲ್ಲಾಧಿಕಾರಿ ವಿರುದ್ದ ರೈತರು ಆಕ್ರೋಶ
Team Udayavani, Dec 26, 2023, 11:38 AM IST
ಬಂಟ್ವಾಳ: ತುಂಬೆ ವೆಂಟೆಡ್ ಡ್ಯಾಮ್ ನೀರಿನಿಂದ ಕೃಷಿ ಭೂಮಿ ನದಿ ಪಾಲು ಹಿನ್ನೆಲೆ ಬಂಟ್ವಾಳದ ತುಂಬೆ ವೆಂಟೆಡ್ ಡ್ಯಾಂಗೆ ಮುತ್ತಿಗೆ ಹಾಕಿದ ರೈತರು ಕಚೇರಿಗೆ ಬೀಗ ಹಾಕಲು ಮುಂದಾಗಿ ಇಲಾಖೆ ಹಾಗೂ ರೈತರ ನಡುವೆ ಮಾತಿನ ಚಕಮಕಿ ಹಾಗೂ ತಳ್ಳಾಟ ಕೂಡ ನಡೆಯಿತು.
ಡ್ಯಾಂನ ಗೇಟ್ ಗೆ ಬೀಗ ಹಾಕಿ ಗೇಟ್ ಬಳಿಯೇ ರೈತರನ್ನು ಪೊಲೀಸರು ತಡೆದ ಸಂದರ್ಭದಲ್ಲಿ ಪೊಲೀಸ್ ಹಾಗೂ ರೈತರ ನಡುವೆ ತಳ್ಳಾಟ ನಡೆಯಿತು.
ಡ್ಯಾಂ ಗೇಟ್ ಬಳಿ ರೈತರನ್ನು ತಡೆದಿದ್ದಕ್ಕೆ ಪೊಲೀಸರ ವಿರುದ್ದ ಆಕ್ರೋಶ ವ್ಯಕ್ತಪಡಿಸಿದರು. ಪೊಲೀಸರು ಮತ್ತು ಡ್ಯಾಂ ಸಿಬ್ಬಂದಿ ಜೊತೆ ರೈತರ ವಾಗ್ವಾದ ಕೂಡ ಈ ಸಂದರ್ಭದಲ್ಲಿ ನಡೆಯಿತು.
ಈ ಸಂದರ್ಭದಲ್ಲಿ ಮಂಗಳೂರು ಪಾಲಿಕೆ ಕಮಿಷನರ್ ಹಾಗೂ ಜಿಲ್ಲಾಧಿಕಾರಿ ವಿರುದ್ದ ರೈತರು ಆಕ್ರೋಶ ವ್ಯಕ್ತಪಡಿಸಿದರು. ಗೇಟ್ ಎದುರೇ ಕುಳಿತು ಪಾಲಿಕೆ ವಿರುದ್ದ ದಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ನದಿ ಕೊರೆತದಿಂದ ನಾಶವಾದ ಕೃಷಿ ಭೂಮಿಗೆ ಪರಿಹಾರ ಸಿಗದ ಹಿನ್ನೆಲೆ ಅನೇಕ ಬಾರಿ ಅಧಿಕಾರಿಗಳಿಗೆ ಲಿಖಿತ ದೂರು ನೀಡಿದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಅಕ್ರೋಶ ವ್ಯಕ್ತಪಡಿಸಿದರು.
ಹಾಗಾಗಿ ಇನ್ನು ಮುಂದಿನ ದಿನಗಳಲ್ಲಿ ಡ್ಯಾಂ ನಿಂದ ಮುಳುಗಡೆಯಾದ ಹಾಗೂ ನೀರಿನಿಂದ ಕೊಚ್ಚಿಹೋದ ಕೃಷಿ ಜಮೀನಿಗೆ ಪರಿಹಾರ ಹಾಗೂ ತಡೆಗೋಡೆ ನಿರ್ಮಾಣಕ್ಕೆ ಅಗ್ರಹಿಸಿ ರೈತ ಸಂಘದಿಂದ ಮುತ್ತಿಗೆ ಹಾಕಿದರು.
ರೈತರು ಮುತ್ತಿಗೆ ಹಾಕುತ್ತಾರೆ ಎಂಬ ಮಾಹಿತಿ ಮೇರೆಗೆ ಡ್ಯಾಮ್ ಸುತ್ತಮುತ್ತ ಬಂಟ್ವಾಳ ಗ್ರಾಮಾಂತರ ಪೋಲೀಸ್ ಇನ್ಸ್ ಪೆಕ್ಟರ್ ಶಿವಕುಮಾರ್ ನೇತೃತ್ವದಲ್ಲಿ ಬಿಗಿ ಪೊಲೀಸ್ ಭದ್ರತೆ ಒದಗಿಸಿದ್ದರು. ಹೆಚ್ಚುವರಿಯಾಗಿ ಕೆ.ಎಸ್.ಆರ್.ಪಿ ತುಕಡಿಯನ್ನು ಸ್ಥಳದಲ್ಲಿ ನಿಯೋಜನೆ ಮಾಡಿದ್ದರು.
ಪ್ರತಿಭಟನಕಾರರು ಆಗಮಿಸುವ ಮುನ್ನವೇ ಡ್ಯಾಮ್ ಗೆ ಬೀಗ ಹಾಕಿದ್ದ ಮಹಾನಗರ ಪಾಲಿಕೆ ಮುನ್ನೆಚ್ಚರಿಕೆ ಕ್ರಮವನ್ನು ವಹಿಸಿತ್ತು. ಎಕರೆ ಗಟ್ಟಲೆ ಕೃಷಿ ಭೂಮಿನಾಶವಾಗಿ ಇಡೀ ಮಂಗಳೂರಿಗೆ ನೀರು ಪೂರೈಕೆ ಮಾಡುವ ತುಂಬೆ ಡ್ಯಾಮ್ ನಿಂದ ಹೊರ ಹುಮ್ಮುವ ನೀರಿನಿಂದ ನದಿಯ ಎರಡು ಭಾಗದಲ್ಲಿ ಎಕರೆಗಟ್ಟೆಲೆ ಕೊರೆತ ಉಂಟಾಗಿ, ಕೃಷಿ ಭೂಮಿ ನೀರುಪಾಲು ಆಗಿದೆ.
ಇದೀಗ ಇದೆ ಡ್ಯಾಮ್ ನಿಂದ ಹೊರ ಬರುವ ನೀರಿನ ರಭಸದಿಂದಾಗಿ ಕೃಷಿಕರು ಕಂಗಾಲಾಗಿದ್ದಾರೆ. ಡ್ಯಾಮ್ ಸುತ್ತಮುತ್ತ ಸಮರ್ಪಕ ತಡೆಗೋಡೆ ನಿರ್ಮಿಸದೇ ನಿರ್ಲಕ್ಷ್ಯ ಮಾಡಿರುವುದೇ ಇದಕ್ಕೆ ಕಾರಣವಾಗಿದೆ.
ವರ್ಷದಿಂದ ವರ್ಷಕ್ಕೆ ನೇತ್ರಾವತಿ ನದಿ ಕೊರೆತ ಉಲ್ಬಣವಾಗಿದ್ದು, ಡ್ಯಾಮ್ ನಿಂದ ನೀರು ಹೊರಬರುವ ರಭಸಕ್ಕೆ ಕೃಷಿ ಭೂಮಿ ನದಿಪಾಲಾಗಿದೆ. ಅಡಿಕೆ, ತೆಂಗು, ಬಾಳೆಗಿಡ, ಕಾಳುಮೆಣಸು ಮುಂತಾದ ಬೆಳೆಗಳು ನಾಶವಾಗಿದೆ. ಕೃಷಿಯನ್ನೇ ನಂಬಿಕೊಂಡ ಸುಮಾರು 9 ಕ್ಕೂ ಅಧಿಕ ಕುಟುಂಬಗಳು ಕಂಗಾಲು ಆಗಿದ್ದಾರೆ. ಹಲವು ವರ್ಷದ ಬೇಡಿಕೆಗೆ ಸಿಗದ ಸ್ಪಂದನೆ ಹಿನ್ನೆಲೆ ಆಕ್ರೋಶ ವ್ಯಕ್ತಪಡಿಸಿದರು.
ರೈತ ಸಂಘದ ರಾಜ್ಯಾಧ್ಯಕ್ಷ ಶ್ರೀಧರ್ ಶೆಟ್ಟಿ, ರಾಜ್ಯ ಕಾರ್ಯದರ್ಶಿ ಮನೋಹರ ಶೆಟ್ಟಿ, ತಾಲೂಕು ಅಧ್ಯಕ್ಷ ಸುಬ್ರಹ್ಮಣ್ಯ ಭಟ್, ಪ್ರಮುಖರಾದ ಇದಿನಬ್ಬ ನಂದಾವರ, ಸುದೇಶ್ ಮಯ್ಯ, ಬಂಟ್ವಾಳ ತಹಶಿಲ್ದಾರ್ ಬಿ.ಎಸ್.ಕೂಡಲಗಿ, ಮಂಗಳೂರು ಮಹಾನಗರ ಪಾಲಿಕೆ ಕಾರ್ಯಪಾಲಕ ಇಂಜಿನಿಯರ್ ನರೇಶ್ ಶೆಣೈ, ಬಂಟ್ವಾಳ ಉಪ ತಹಶೀಲ್ದಾರ್ ದಿವಾಕರ ಮುಗುಳಿಯ, ಕಂದಾಯ ನಿರೀಕ್ಷಕ ವಿಜಯ ಆರ್ ಮತ್ತಿತರರು ಉಪಸ್ಥಿತರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.