ಮಿನಿ ವಿಧಾನಸೌಧ: ವಿದ್ಯುತ್ ಕೈಕೊಟ್ಟು ಲಿಫ್ಟ್ ನಲ್ಲಿ ಸಿಕ್ಕಿಹಾಕಿಕೊಂಡ ಮಹಿಳಾ ಸಿಬ್ಬಂದಿ
Team Udayavani, Jun 16, 2020, 4:36 PM IST
ಬಂಟ್ವಾಳ: ಬಿ.ಸಿ.ರೋಡಿನಲ್ಲಿರುವ ಮಿನಿ ವಿಧಾನಸೌಧದ ಲಿಫ್ಟ್ ಸಂಚರಿಸುತ್ತಿದ್ದಾಗ ವಿದ್ಯುತ್ ಕೈಕೊಟ್ಟು ಬಂಟ್ವಾಳ ತಾಲೂಕು ಕಚೇರಿಯ ಸರ್ವೇ ಇಲಾಖೆಯ ಮಹಿಳಾ ಸಿಬಂದಿಯೊಬ್ಬರು ಸುಮಾರು ಅರ್ಧ ತಾಸುಗಳ ಕಾಲ ಲಿಫ್ಟ್ ನಲ್ಲೇ ಬಾಕಿಯಾದ ಘಟನೆ ಮಂಗಳವಾರ ನಡೆದಿದೆ.
ಮಿನಿ ವಿಧಾನಸೌಧದ ಎರಡನೇ ಮಹಡಿಯಲ್ಲಿ ಸರ್ವೇ ಇಲಾಖೆ ಕಾರ್ಯಾಚರಿಸುತ್ತಿದ್ದು, ಸಿಬ್ಬಂದಿ ಎಂದಿನಂತೆ ಬೆಳಗ್ಗೆ ಕಚೇರಿಗೆ ತೆರಳುವ ಸಂದರ್ಭದಲ್ಲಿ ಲಿಫ್ಟ್ ಬಳಸಿದ್ದಾರೆ. ಆದರೆ ಪ್ರತಿ ಮಂಗಳವಾರ ಬಂಟ್ವಾಳ ವ್ಯಾಪ್ತಿಯಲ್ಲಿ ವಿದ್ಯುತ್ ದುರಸ್ತಿಯ ದಿನವಾಗಿದ್ದು, ಹೀಗಾಗಿ ಎಂದಿನಂತೆ ವಿದ್ಯುತ್ ಕಡಿತಗೊಂಡಿದೆ.
ಸಾಮಾನ್ಯವಾಗಿ ವಿದ್ಯುತ್ ಕೈಕೊಟ್ಟ ಸ್ವಲ್ಪ ಸಮಯದ ಬಳಿಕ ಜನರೇಟರ್ ಆನ್ ಮಾಡಿದಾಗ ಲಿಫ್ಟ್ ಕಾರ್ಯಾಚರಿಸುತ್ತದೆ. ಆದರೆ ಅದಕ್ಕಿಂತ ಮೊದಲೇ ಲಿಫ್ಟ್ ನೊಳಗಿದ್ದ ಸಿಬಂದಿ ಬೇರೊಬ್ಬರಿಗೆ ಫೋನ್ ಮಾಡಿದ್ದು, ಆಗ ಅಲ್ಲಿದ್ದ ಸಾರ್ವಜನಿಕರು ಲಿಫ್ಟ್ ನ ಬಾಗಿಲನ್ನು ಬಲಪ್ರಯೋಗ ಮಾಡಿ ತೆಗೆಯಲು ಯತ್ನಿಸಿದಾಗ ಲಿಫ್ಟ್ ಕೆಟ್ಟು ಹೋಗಿದೆ.
ಹೀಗಾಗಿ ಸಿಬ್ಬಂದಿ ಸುಮಾರು ಅರ್ಧ ತಾಸುವರೆಗೆ ಲಿಫ್ಟ್ ನಲ್ಲೇ ಬಾಕಿಯಾಗಬೇಕಾಯಿತು. ಬಳಿಕ ಲಿಫ್ಟ್ ದುರಸ್ತಿ ಪಡಿಸುವ ನುರಿತ ಸಿಬ್ಬಂದಿ ಆಗಮಿಸಿ ದುರಸ್ತಿ ಮಾಡಿದ ಬಳಿಕ ಮಹಿಳಾ ಸಿಬ್ಬಂದಿ ಹೊರಬಂದರು. ಈ ಹಿಂದೆಯೂ ಲಿಫ್ಟ್ ಕೈಕೊಟ್ಟಿದ್ದ ಹಿನ್ನೆಲೆಯಲ್ಲಿ ತನಗೆ ಯಾವುದೇ ಹೆದರಿಕೆಯಾಗಿಲ್ಲ ಎಂದು ಸಿಬಂದಿ ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Puttur: ವಿದ್ಯುತ್ ಕಂಬ ಏರುವ ತರಬೇತಿ!; ಪವರ್‌ಮನ್ ಉದ್ಯೋಗಕ್ಕೆ ಸ್ಥಳೀಯರಿಗೆ ಪ್ರೋತ್ಸಾಹ
Belthangady: ಗ್ರಾಮೀಣ ರಸ್ತೆಗಳಲ್ಲೂ ಗುಂಡಿ
Bantwal: ತುಂಬೆ ಶ್ರೀಮಹಾಲಿಂಗೇಶ್ವರ ದೇವಸ್ಥಾನಕ್ಕೆ ಕನ್ನ; ಲಕ್ಷಾಂತರ ಮೌಲ್ಯದ ನಗನಗದು ಲೂಟಿ
Puttur: ಮಾದಕ ವಸ್ತು ಎಂಡಿಎಂಎ ಸಾಗಾಟ ಪ್ರಕರಣ; ಆರೋಪಿಗೆ ಜಾಮೀನು
Rain: ಸುಬ್ರಹ್ಮಣ್ಯದಲ್ಲಿ ಭಾರೀ ಮಳೆ; ರಸ್ತೆಗೆ ಬಿದ್ದ ಮರ; ತಪ್ಪಿದ ಭಾರೀ ಅನಾಹುತ
MUST WATCH
ಹೊಸ ಸೇರ್ಪಡೆ
Kanguva: 10 ಸಾವಿರಕ್ಕೂ ಹೆಚ್ಚಿನ ಸ್ಕ್ರೀನ್‌ನಲ್ಲಿ ಅದ್ಧೂರಿಯಾಗಿ ರಿಲೀಸ್ ಆಗಲಿದೆ ʼಕಂಗುವʼ
Urwa: ಬಾಯ್ದೆರೆದ ಕಾಂಕ್ರೀಟ್ ಚೇಂಬರ್‌ಗಳಿಗೆ ಬಿತ್ತು ಮುಚ್ಚಳ
Bypolls: ಯಡಿಯೂರಪ್ಪರನ್ನು ರಾಜಕೀಯವಾಗಿ ಮುಗಿಸಲು ಬೊಮ್ಮಾಯಿ ಪ್ಲ್ಯಾನ್: ಸಿದ್ದರಾಮಯ್ಯ
Shirola: ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಸಿಬ್ಬಂದಿ ಕೊರತೆ… ರೋಗಿಗಳ ಪರದಾಟ
Karkala: ದುರ್ಗಾ ಗ್ರಾಮ ಪಂಚಾಯತ್; ರಸ್ತೆ ಸಂಪೂರ್ಣ ದುರವಸ್ಥೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.