ಗೋಣಿ ಚೀಲದಲ್ಲಿ ತುಂಬಿಸಿ ಅಕ್ರಮ ಮರಳು ದಂಧೆ
Team Udayavani, May 14, 2019, 5:42 AM IST
ಉಪ್ಪಿನಂಗಡಿ: ನೇತ್ರಾವರಿ ನದಿ ಕಿನಾರೆಯಲ್ಲಿ ಗೋಣಿ ಚೀಲಗಳಲ್ಲಿ ಮರಳು ತುಂಬಿಸಿ ಮಾರಾಟ ಮಾಡುವ ಅಕ್ರಮ ದಂಧೆ ನಿರಂತರವಾಗಿ ನಡೆಯುತ್ತಿರುವ ದೂರುಗಳು ಕೇಳಿ ಬರುತ್ತಿವೆ.
ರಾಷ್ಟ್ರೀಯ ಹೆದ್ದಾರಿ 75ರ ಸನಿಹದಲ್ಲಿರುವ ಮುಗೇರಡ್ಕಕ್ಕೆ ತೆರಳುವ ಹಾದಿಯಲ್ಲಿ ನದಿ ಪಾತ್ರದಿಂದ ದಿನನಿತ್ಯ ಜೀಪು ಹಾಗೂ ಪಿಕಪ್‌ಗ್ಳಲ್ಲಿ ಈ ಮರಳು ಸಾಗಾಟವಾಗುತ್ತಿದೆ. ದಿನನಿತ್ಯ ಹಗಲು-ರಾತ್ರಿ ಎನ್ನದೆ ಕೂಲಿ ಕಾರ್ಮಿಕರನ್ನು ಬಳಸಿಕೊಂಡು ಗೋಣಿ ಚೀಲಕ್ಕೆ ಮರಳು ತುಂಬಿಸಿ ಸಾಗಾಟ ಮಾಡಲಾಗುತ್ತಿದೆ.
ಈ ದಂಧೆಯ ಮೂಲಕ ನಿತ್ಯ 50ಕ್ಕೂ ಅಧಿಕ ವಾಹನಗಳಲ್ಲಿ ಮರಳು ಸಾಗಾಟವಾಗುತ್ತಿದೆ. ಈ ಗೋಣಿ ಚೀಲಗಳಲ್ಲಿ ತುಂಬಿಸಿದ ಮರಳನ್ನು ಬದಲಿ ಜಾಗದಲ್ಲಿ ಸಂಗ್ರಹಿಸಿ ಬಳಿಕ ಘನ ವಾಹನಗಳಲ್ಲಿ ಸಾಗಿಸಲಾಗುತ್ತಿದೆ. ಇಂತಹ ದಂಧೆಯನ್ನು ಬಜತ್ತೂರು ಗ್ರಾಮದ ವಳಾಲು ಮೂಲದ ವ್ಯಕ್ತಿಯೋರ್ವರು ನಡೆಸುತ್ತಿದ್ದಾರೆ ಎನ್ನುವ ಆರೋಪ ಸಾರ್ವಜನಿಕ ವಲಯದಿಂದ ಕೇಳಿ ಬರುತ್ತಿದೆ.
ಚೀಲಗಳಿಗೆ ಮರಳು ತುಂಬಿಸುವ ದೃಶ್ಯ ಕಂಡರೆ ಬಡವರು ಸಣ್ಣಪುಟ್ಟ ಮನೆ ಕಟ್ಟಲು ಮರಳು ಒಯ್ಯುತ್ತಿದ್ದಾರಾ ಎನ್ನುವ ಕನಿಕರ ಹುಟ್ಟಿಕೊಳ್ಳುವಂತೆ ಮಾಡುತ್ತದೆ. ಆದರೆ ಇಲ್ಲಿ ನಡೆಯುತ್ತಿರುವುದು ಅಕ್ರಮ ದಂಧೆ ಎಂಬುದು ಹೆಚ್ಚಿನವರ ಗಮನಕ್ಕೆ ಬಂದಿಲ್ಲ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Our beautiful blessing..; ಚೊಚ್ಚಲ ಮಗುವಿನ ಖುಷಿ ಹಂಚಿಕೊಂಡ ರಾಹುಲ್ – ಅಥಿಯಾ ಶೆಟ್ಟಿ
ಬೆಳಗಾವಿಯ ಶ್ರೀನಿವಾಸ ಠಾಣೇದಾರ ಅಮೆರಿಕ ಸಂಸತ್‌ಗೆ ಆಯ್ಕೆ
Supreme Court; ಆದಾಯ ಮೀರಿದ ಆಸ್ತಿ ಪ್ರಕರಣ: ರಾಜ್ಯ ಸರಕಾರ, ಡಿ.ಕೆ.ಶಿವಕುಮಾರ್ ಗೆ ನೋಟಿಸ್
Sirsi: ಗವಿನಗುಡ್ಡ ಸುತ್ತ ಕಬ್ಬು, ಭತ್ತದ ಗದ್ದೆಗಳಿಗೆ ಕಾಡಾನೆ ದಾಳಿ… ಬೆಳೆ ನಾಶ
Waqf Property: ಸಚಿವ ಜಮೀರ್ ಅಶ್ವಮೇಧ ಕುದುರೆ ತಡೆದಿದ್ದೇನೆ: ಶಾಸಕ ಯತ್ನಾಳ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.