ಬೆಳಾಲು ಸಹಿತ ಕೊಯ್ಯೂರು ಅರಣ್ಯದಲ್ಲಿ ಬೆಂಕಿ
Team Udayavani, Apr 4, 2023, 6:38 AM IST
ಬೆಳ್ತಂಗಡಿ: ಬೆಳಾಲು ಗ್ರಾಮದ ಕೊಯ್ಯೂರು ಅರಣ್ಯದ ಪೆರಿಯಡ್ಕ ಪ್ರದೇಶದಲ್ಲಿ ರವಿವಾರ ಬೆಂಕಿ ಪ್ರಕರಣ ಉಂಟಾಗಿದ್ದು, ಸುಮಾರು ಎರಡು ಎಕ್ರೆ ಪ್ರದೇಶದ ವನ್ಯ ಸಂಪತ್ತಿಗೆ ಹಾನಿ ಉಂಟಾಗಿದೆ.
ಅರಣ್ಯ ಇಲಾಖೆಯ ಉಪ್ಪಿನಂಗಡಿ ವಲಯದ ಕಣಿಯೂರು ಉಪ ವಲಯ ವ್ಯಾಪ್ತಿಯ ಈ ಕಾಡಿನಲ್ಲಿ ಯಾವ ಕಾರಣದಿಂದ ಬೆಂಕಿ ಉಂಟಾ ಗಿದೆ ಎಂದು ತಿಳಿದುಬಂದಿಲ್ಲ. ಡಿ.ಆರ್.ಎಫ್.ಒ ಲೋಕೇಶ್, ಗಸ್ತು ಅರಣ್ಯ ಪಾಲಕ ವಿನಯ ಚಂದ್ರ, ಶೌರ್ಯ ವಿಪತ್ತು ತಂಡಗಳ ಸದಸ್ಯರು, ಅಗ್ನಿಶಾಮಕ ದಳ ಹಾಗೂ ಸ್ಥಳೀಯರು ಬೆಂಕಿ ನಂದಿಸಿದರು.
ಮುಂಡಾಜೆ- ಧರ್ಮಸ್ಥಳ ಮೀಸಲು ಅರಣ್ಯದ ನೇರ್ತನೆ, ಎಕ್ಕೆಲ, ಕೋಟಿ ಹಿತ್ತಿಲು ಮೊದಲಾದೆಡೆ ಅರಣ್ಯದಲ್ಲಿ ಬೆಂಕಿ ಉಂಟಾಗಿದ್ದು, ಒಂದಿಷ್ಟು ಹತೋಟಿಗೆ ಬರುತ್ತಿದ್ದಂತೆ ಮುಂಡ್ರುಪಾಡಿ, ಫಿಲತಡ್ಕ ಮೊದಲಾದೆಡೆ ಬೆಂಕಿ ಹರಡುತ್ತಿದೆ. ಅರಣ್ಯ ಇಲಾಖೆ ಸಿಬಂದಿ ಹಾಗೂ ಸ್ಥಳೀಯ ಅನೇಕ ಮಂದಿ ಸೇರಿ ಬೆಂಕಿಯನ್ನು ಹತೋಟಿಗೆ ತರಲು ಪ್ರಯತ್ನ ನಡೆಸುತ್ತಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Sydney; ಮಿಲಿಸೆಕೆಂಡಲ್ಲೇ ವಾಸನೆ ಪತ್ತೆ ಹಚ್ಚುವ ರೋಬೋಟ್ ಸೃಷ್ಟಿ!
Canada-India: ಕಾನ್ಸುಲರ್ ಕ್ಯಾಂಪ್ ರದ್ದು; ಕೆನಡಾಗೆ ಭಾರತ ತಿರುಗೇಟು
Electricity Price: ರಾಜ್ಯದ ಜನತೆಗೆ ಈ ಬಾರಿಯೂ ವಿದ್ಯುತ್ ದರ ಏರಿಕೆ ಶಾಕ್?
Waqf Property: ಜೆಪಿಸಿ ಅಧ್ಯಕ್ಷ ಜಗದಾಂಬಿಕಾ ಪಾಲ್ ರಾಜ್ಯ ಭೇಟಿ: ಕಾಂಗ್ರೆಸ್ ಕೆಂಡ
Injustice: ಮೊಟ್ಟೆ ಕೇಳಿದ ಶಾಲಾ ವಿದ್ಯಾರ್ಥಿಗಳಿಗೆ ಸಿಕ್ಕಿದ್ದು ಚಿಕ್ಕ ಚಿಕ್ಕಿ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.