ಜಾನುವಾರುಗಳಿಗೆ ಮೇವು ಅಭಾವ ಭೀತಿ

ಲಾಕ್‌ಡೌನ್‌: ಘಟ್ಟ ಪ್ರದೇಶದಿಂದ ಉಭಯ ಜಿಲ್ಲೆಗಳಿಗೆ ಬೈ-ಹುಲ್ಲು ಪೂರೈಕೆ ಸ್ಥಗಿತ

Team Udayavani, Apr 15, 2020, 8:46 AM IST

ಜಾನುವಾರುಗಳಿಗೆ ಮೇವು ಅಭಾವ ಭೀತಿ

ಸುಳ್ಯ: ಕೋವಿಡ್-19 ಲೌಕ್‌ಡೌನ್‌ ಕಾರಣ ಘಟ್ಟ ಪ್ರದೇಶದಿಂದ ಒಣ ಹುಲ್ಲು (ಬೈಹುಲ್ಲು) ಪೂರೈಕೆ ಆಗದ ಕಾರಣ ಬೇಸಗೆಯಲ್ಲಿ ಅವಿಭಜಿತ ಜಿಲ್ಲೆಯಲ್ಲಿ ಜಾನುವಾರುಗಳಿಗೆ ಮೇವಿನ ಅಭಾವದ ಭೀತಿ ಎದುರಾಗಿದೆ. ಪ್ರತಿ ವರ್ಷ ಘಟ್ಟ ಪ್ರದೇಶದಿಂದ ಒಣ ಹುಲ್ಲು ಸಂಗ್ರಹಿಸಿ ಅಗತ್ಯಕ್ಕೆ ತಕ್ಕಂತೆ ಬಳಸುವ ಕರಾವಳಿ ಜಿಲ್ಲೆಯ ಹೈನುಗಾರರಿಗೆ ಪ್ರಸ್ತುತ ಪೂರೈಕೆ ವ್ಯವಸ್ಥೆ ಇಲ್ಲದ ಕಾರಣ ಬಳಕೆಯ ಮೇಲೆ ಪರಿಣಾಮ ಬೀರಿದೆ. ಹೀಗಾಗಿ ಬೈ ಹುಲ್ಲು ಸಾಗಾಟಕ್ಕೆ ಅನುಮತಿ ನೀಡುವಂತೆ ಕೃಷಿಕರು ಆಗ್ರಹಿಸಿದ್ದಾರೆ.

ಒಣ ಹುಲ್ಲು ಆಧಾರ
ಕರಾವಳಿಯಲ್ಲಿ ಬಿಸಿಲಿನ ತಾಪ ಹೆಚ್ಚು. ಬೇಸಗೆಯಲ್ಲಿ ಕೃಷಿ ತೋಟಕ್ಕೆ ನೀರಿನ ಅಭಾವ ಉಂಟಾಗಿ ಹಸಿ ಹುಲ್ಲಿನ ಕೊರತೆ ಕಾಡುತ್ತದೆ. ಹೈನುಗಾರರು ಬೈಹುಲ್ಲನ್ನು ಸಂಗ್ರಹಿಸಿ ಜಾನುವಾರುಗಳಿಗೆ ಆಹಾರವಾಗಿ ಬಳಸುತ್ತಾರೆ. ಅವಿಭಜಿತ ಜಿಲ್ಲೆಯಲ್ಲಿ ಭತ್ತದ ಗದ್ದೆಗಳ ಪ್ರಮಾಣ ಇಳಿಮುಖವಾಗುತ್ತಿದ್ದು, ಒಣ ಹುಲ್ಲನ್ನು ಘಟ್ಟ ಪ್ರದೇಶದಿಂದ ತರಿಸುತ್ತಾರೆ. ಬೇಸಗೆಯಲ್ಲಿ ಮೇವಿನ ಕೊರತೆಯನ್ನು ಈ ಮೂಲಕ ನೀಗಿಸಲಾಗುತ್ತದೆ.

ಘಟ್ಟದಿಂದ ಆಮದು
ಕರಾವಳಿಗೆ ಘಟ್ಟದ ಪ್ರದೇಶಗಳಾದ ಹಾಸನ, ಶಿವಮೊಗ್ಗ, ಸಾಗರ, ಹೊಸನಗರ, ಬನವಾಸಿ, ಆನಂದಪುರ, ಚಿಕ್ಕಮಗಳೂರು, ಮೂಡಿಗೆರೆ ಪ್ರದೇಶಗಳಿಂದ ಬೈಹುಲ್ಲು ಪೂರೈಕೆಯಾಗುತ್ತಿದೆ. ಬೈಹುಲ್ಲು ಹೊತ್ತ ಲಾರಿ, ಟೆಂಪೋಗಳು ಮನೆ ಮನೆಗೆ ಬರುತ್ತವೆ. ಆದರೆ ಲಾಕ್‌ಡೌನ್‌ ಕಾರಣ ಈ ಬೇಸಗೆಯಲ್ಲಿ ಬೈಹುಲ್ಲು ಸಾಗಾಟ ಸ್ಥಗಿತವಾಗಿದೆ. ಇದರ ಬಿಸಿ ಹೈನುಗಾರಿಕೆಯ ಮೇಲೆ ಉಂಟಾಗಿದೆ. ಹೈನುಗಾರಿಕೆಗೆ ಒಣ ಹುಲ್ಲು ಅಗತ್ಯ ಎಂದು ಪರಿಗಣಿಸಿ ಸಾಗಾಟಕ್ಕೆ ಅನುಮತಿ ನೀಡಬೇಕು ಎಂದು ಕೃಷಿಕರು ಆಗ್ರಹಿಸಿದ್ದಾರೆ.

ಬೈ ಹುಲ್ಲು ಏಕೆ ಬೇಕು?
ಹಸಿ ಹುಲ್ಲಿನ ಅಭಾವವಿರುವ ಬೇಸಗೆಯಲ್ಲಿ ಹಸುವಿನ ಧಾತು ಹಾಗೂ ಹಾಲು ಸಂಗ್ರಹದ ಪ್ರಮಾಣ ಹೆಚ್ಚಿಸಲು ಬೈಹುಲ್ಲೇ ಆಧಾರ. ಪಶುಸಂಗೋಪನೆ ಇಲಾಖೆ ನೀಡುವ ಆಹಾರಕ್ಕಿಂತಲೂ ಒಣ ಹುಲ್ಲಿನ ಅಗತ್ಯ ಹೆಚ್ಚು ಎನ್ನುತ್ತಾರೆ ಹೈನುಗಾರರು. ದ.ಕ. ಜಿಲ್ಲೆಯಲ್ಲಿ ಮೇವು ಅವಲಂಬಿತ 3.82 ಲಕ್ಷ ಹಾಗೂ ಉಡುಪಿ ಜಿಲ್ಲೆಯಲ್ಲಿ 1.95 ಲಕ್ಷಕ್ಕೂ ಅಧಿಕ ಜಾನುವಾರುಗಳಿವೆ.

ಕೆಎಂಎಫ್ ಜತೆ ಚರ್ಚೆ
ಬೈಹುಲ್ಲು ಕೊರತೆಗೆ ಸಂಬಂಧಿಸಿ ಕೆಲವು ಹೈನುಗಾರರು ನನ್ನನ್ನು ಸಂಪರ್ಕಿಸಿದ್ದಾರೆ. ಈ ಕುರಿತು ಕೆಎಂಎಫ್ ಅಧ್ಯಕ್ಷರೊಂದಿಗೆ ಚರ್ಚಿಸಿದ್ದೇನೆ. ಕೆಎಂಎಫ್ ವತಿಯಿಂದಲೇ ನಿಗದಿತ ದರದಲ್ಲಿ ನೇರವಾಗಿ ಹೈನುಗಾರರಿಗೆ ಬೈಹುಲ್ಲು ಪೂರೈಸಲು ಕ್ರಮ ಕೈಗೊಳ್ಳುವಂತೆ ತಿಳಿಸಿದ್ದೇನೆ.
– ಸಂಜೀವ ಮಠಂದೂರು, ಶಾಸಕರು, ಪುತ್ತೂರು

ಜಿಲ್ಲಾಡಳಿತ ಕ್ರಮ ಕೈಗೊಳ್ಳಬೇಕು
ಪ್ರತಿ ಬಾರಿ ಸುಳ್ಯ ತಾಲೂಕಿಗೆ ಹಾಸನದಿಂದ ಬೈಹುಲ್ಲು ಪೂರೈಕೆ ಮಾಡಲಾಗುತ್ತಿತ್ತು.  ಲಾಕ್‌ಡೌನ್‌ ಕಾರಣ ಈ ಬಾರಿ ಪೂರೈಕೆ ಆಗಿಲ್ಲ. ಇದರಿಂದ ಮೇವಿನ ಅಭಾವ ಉಂಟಾಗಿದೆ. ಜಾನುವಾರಿನ ಮೇಲೂ ಅದರ ಪರಿಣಾಮ ಬೀರುತ್ತಿದೆ. ಜಿಲ್ಲಾಡಳಿತ ಒಣ ಹುಲ್ಲು ಸಾಗಾಟಕ್ಕೆ ವ್ಯವಸ್ಥೆ ಕಲ್ಪಿಸಬೇಕು. ಜಿಲ್ಲೆಯ ಬೇರೆ ಭಾಗಗಳಲ್ಲಿ ಬೈಹುಲ್ಲು ಸಂಗ್ರಹವಿದ್ದರೆ ಅಗತ್ಯವಿರುವ ಕಡೆಗೆ ಪೂರೈಸಬೇಕು.
– ಭಾಸ್ಕರ ಗೌಡ ಹೊಸಗದ್ದೆ ಸೋಣಂಗೇರಿ, ಕೃಷಿಕ

ಟಾಪ್ ನ್ಯೂಸ್

Christmas: ಕರಾವಳಿಯಲ್ಲಿ ಸಂಭ್ರಮದ ಕ್ರಿಸ್ಮಸ್‌ ಆಚರಣೆ

Christmas: ಕರಾವಳಿಯಲ್ಲಿ ಸಂಭ್ರಮದ ಕ್ರಿಸ್ಮಸ್‌ ಆಚರಣೆ

Udupi-D.K: ಕರಾವಳಿಯ ದೇಗುಲ, ಬೀಚ್‌ಗಳಲ್ಲಿ ಭಾರೀ ಜನಸಂದಣಿ

Udupi-D.K: ಕರಾವಳಿಯ ದೇಗುಲ, ಬೀಚ್‌ಗಳಲ್ಲಿ ಭಾರೀ ಜನಸಂದಣಿ

Uppinangady ಹಿರೇಬಂಡಾಡಿಯಲ್ಲಿ ಕಾಡಾನೆ ಪ್ರತ್ಯಕ್ಷ: ಸ್ಥಳೀಯರಲ್ಲಿ ಆತಂಕ

Uppinangady ಹಿರೇಬಂಡಾಡಿಯಲ್ಲಿ ಕಾಡಾನೆ ಪ್ರತ್ಯಕ್ಷ: ಸ್ಥಳೀಯರಲ್ಲಿ ಆತಂಕ

Sullia: ಕಾರಿಗೆ ಡೀಸೆಲ್‌ ತುಂಬಿಸಿ ಹಣ ನೀಡದೆ ಪರಾರಿ

Sullia: ಕಾರಿಗೆ ಡೀಸೆಲ್‌ ತುಂಬಿಸಿ ಹಣ ನೀಡದೆ ಪರಾರಿ

Uppinangady: ಚಿನ್ನ, ನಗದು ಕಳ್ಳತನ: ದೂರು ದಾಖಲು

Uppinangady: ಚಿನ್ನ, ನಗದು ಕಳ್ಳತನ: ದೂರು ದಾಖಲು

Manipur: 2 ಗುಂಪುಗಳ ನಡುವೆ ಗುಂಡಿನ ಚಕಮಕಿ

Manipur: 2 ಗುಂಪುಗಳ ನಡುವೆ ಗುಂಡಿನ ಚಕಮಕಿ

Fake News: ಕೇಂದ್ರ ಸಚಿವ ಅಮಿತ್‌ ಶಾ ನಿಧನ ಎಂದು ಸುಳ್ಳು ಸುದ್ದಿ: ವ್ಯಕ್ತಿ ಸೆರೆ

Fake News: ಕೇಂದ್ರ ಸಚಿವ ಅಮಿತ್‌ ಶಾ ನಿಧನ ಎಂದು ಸುಳ್ಳು ಸುದ್ದಿ: ವ್ಯಕ್ತಿ ಸೆರೆ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Uppinangady ಹಿರೇಬಂಡಾಡಿಯಲ್ಲಿ ಕಾಡಾನೆ ಪ್ರತ್ಯಕ್ಷ: ಸ್ಥಳೀಯರಲ್ಲಿ ಆತಂಕ

Uppinangady ಹಿರೇಬಂಡಾಡಿಯಲ್ಲಿ ಕಾಡಾನೆ ಪ್ರತ್ಯಕ್ಷ: ಸ್ಥಳೀಯರಲ್ಲಿ ಆತಂಕ

Sullia: ಕಾರಿಗೆ ಡೀಸೆಲ್‌ ತುಂಬಿಸಿ ಹಣ ನೀಡದೆ ಪರಾರಿ

Sullia: ಕಾರಿಗೆ ಡೀಸೆಲ್‌ ತುಂಬಿಸಿ ಹಣ ನೀಡದೆ ಪರಾರಿ

Uppinangady: ಚಿನ್ನ, ನಗದು ಕಳ್ಳತನ: ದೂರು ದಾಖಲು

Uppinangady: ಚಿನ್ನ, ನಗದು ಕಳ್ಳತನ: ದೂರು ದಾಖಲು

POlice

Sullia: ಬೆಳ್ಳಾರೆ ಸೊಸೈಟಿ ಚುನಾವಣೆ; ಎರಡು ಪಕ್ಷಗಳ ನಡುವೆ ಮಾತಿನ ಚಕಮಕಿ

5

Kadaba: ಮೇಯಲು ಬಿಟ್ಟ ದನದ ಕಾಲು ಕಡಿದ ವ್ಯಕ್ತಿ; ದೂರು

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

Christmas: ಕರಾವಳಿಯಲ್ಲಿ ಸಂಭ್ರಮದ ಕ್ರಿಸ್ಮಸ್‌ ಆಚರಣೆ

Christmas: ಕರಾವಳಿಯಲ್ಲಿ ಸಂಭ್ರಮದ ಕ್ರಿಸ್ಮಸ್‌ ಆಚರಣೆ

Udupi-D.K: ಕರಾವಳಿಯ ದೇಗುಲ, ಬೀಚ್‌ಗಳಲ್ಲಿ ಭಾರೀ ಜನಸಂದಣಿ

Udupi-D.K: ಕರಾವಳಿಯ ದೇಗುಲ, ಬೀಚ್‌ಗಳಲ್ಲಿ ಭಾರೀ ಜನಸಂದಣಿ

Udupi: ಸಂತೆಕಟ್ಟೆಯಲ್ಲಿ ಲಾರಿ ಪಲ್ಟಿ: ಸಂಚಾರ ದಟ್ಟಣೆ

Udupi: ಸಂತೆಕಟ್ಟೆಯಲ್ಲಿ ಲಾರಿ ಪಲ್ಟಿ: ಸಂಚಾರ ದಟ್ಟಣೆ

Uppinangady ಹಿರೇಬಂಡಾಡಿಯಲ್ಲಿ ಕಾಡಾನೆ ಪ್ರತ್ಯಕ್ಷ: ಸ್ಥಳೀಯರಲ್ಲಿ ಆತಂಕ

Uppinangady ಹಿರೇಬಂಡಾಡಿಯಲ್ಲಿ ಕಾಡಾನೆ ಪ್ರತ್ಯಕ್ಷ: ಸ್ಥಳೀಯರಲ್ಲಿ ಆತಂಕ

Sullia: ಕಾರಿಗೆ ಡೀಸೆಲ್‌ ತುಂಬಿಸಿ ಹಣ ನೀಡದೆ ಪರಾರಿ

Sullia: ಕಾರಿಗೆ ಡೀಸೆಲ್‌ ತುಂಬಿಸಿ ಹಣ ನೀಡದೆ ಪರಾರಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.