ಫ‌ುಟ್ಬಾಲ್‌: ರಾಷ್ಟ್ರಮಟ್ಟದಲ್ಲಿ ಮಿಂಚುತ್ತಿರುವ ಲಾಲ್‌ ಬಹದೂರ್‌


Team Udayavani, Sep 28, 2019, 4:00 AM IST

w-26

ಸೋಲೆ-ಗೆಲುವಿನ ಸೋಪನ ಎನ್ನುವ ಮಾತು ಎಲ್ಲರಿಗೂ ತಿಳಿದಿದೆ. ಒಬ್ಬ ವ್ಯಕ್ತಿಯ ಜೀವನದಲ್ಲಿ ಕಷ್ಟ, ನೋವು, ನಲಿವು ಸರ್ವೆ ಸಾಮಾನ್ಯ. ಕಷ್ಟ ಬಂದಾಗ ಇಟ್ಟ ಹೆಜ್ಜೆ ಹಿಂದಿಡದೆ ಮುನ್ನುಗ್ಗುವ ಛಲವಿದ್ದರೆ ಯಶಸ್ಸಿನ ಮೆಟ್ಟಿಲೇರಬಹುದು ಎನ್ನುವ ಮಾತಿಗೆ ನಿದರ್ಶನವಾಗಿ ತಮ್ಮ ಸೋಲುಗಳನ್ನೇ ಮೆಟ್ಟಿಲಾಗಿ ಮಾಡಿ ರಾಷ್ಟ್ರಮಟ್ಟದಲ್ಲಿ ಆಡಿ ಎಲ್ಲ ಗಮನ ಸೆಳೆದಿರುವ ಆಟಗಾರ ಲಾಲ್‌ ಬಹದೂರ್‌.

ಮೂಲತಃ ನೇಪಾಲದವರಾದ ಚಂದ್ರ ಬಹದೂರ್‌ ಹಾಗೂ ಲಕ್ಷ್ಮೀ ದಂಪತಿ ಪುತ್ರನಾಗಿ ದುಬಾರೆ ಕಲ್ಲುಕೋರೆ, ಪಾಲಿಬೆಟ್ಟ ಎನ್ನುವ ಪುಟ್ಟ ಗ್ರಾಮದಲ್ಲಿ ಹುಟ್ಟಿ ಬೆಳೆದರು. ಪ್ರಾಥಮಿಕ ಶಿಕ್ಷಣ ಪಡೆಯುತ್ತಿದ್ದಾಗಲೇ ಚಾಮರಾಜನಗರದಲ್ಲಿ ನಡೆದ ರಾಜ್ಯ ಮಟ್ಟದ ಫ‌ುಟ್ಬಾಲ್‌ ಪಂದ್ಯಾವಳಿಯಲ್ಲಿ ಆಡಿ ಜಯ ಗಳಿಸಿದರು. ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣವನ್ನು ಹುಟ್ಟೂರಿನಲ್ಲಿ ಪೂರ್ಣಗೊಳಿಸಿ, ಪಾಲಿಬೆಟ್ಟದಲ್ಲಿಯೇ ತನ್ನ ಪದವಿ ಶಿಕ್ಷಣವನ್ನು ಮುಗಿಸಿ, ಪ್ರಸ್ತುತ ಪುತ್ತೂರಿನ ಸಂತ ಫಿಲೋಮಿನಾ ಕಾಲೇಜಿನಲ್ಲಿ ಪದವಿ ಶಿಕ್ಷಣವನ್ನು ಪಡೆಯುತ್ತಲಿದ್ದಾರೆ.

ಗರಿಷ್ಠ ಗೋಲು ಹೊಡೆದಿದ್ದರು
ಬಾಲ್ಯದಿಂದಲೂ ಫ‌ುಟ್ಬಾಲ್‌ ಆಟದಲ್ಲಿನ ಒಲವು ಅವರನ್ನು ಅಂಗಣದಲ್ಲಿ ಆಡಲು ಪ್ರೇರೆಪಿಸಿತ್ತು. ಅರ್ಜೆಂಟಿನಾ ತಂಡದ ಆಟಗಾರ ಲಿಯೋನೆಲ್‌ ಮೆಸ್ಸಿ ಮತ್ತು ಕೊಡಗು ಮಿಲಾನ್ಸ್‌ ಕ್ಲಬ್‌ನ ಆಟಗಾರ ಸಿರಾಜ್‌ ಮೆಸ್ಸಿ ಲಾಲ್‌ ಅವರು ಬಹದೂರ್‌ ಅವರ ಮೆಚ್ಚಿನ ಆಟಗಾರರು. 2017ರಲ್ಲಿ ವಿರಾಜಪೇಟೆಯಲ್ಲಿ ನಡೆದ ರಾಜ್ಯಮಟ್ಟದ ಫ‌ುಟ್ಬಾಲ್‌ ಟೂರ್ನಿಯಲ್ಲಿ ಗೆದ್ದಿದ್ದಾರೆ. 2018ರಲ್ಲಿ ಮಂಗಳೂರಿನಲ್ಲಿ ನಡೆದ ಫ‌ುುಟ್ಬಾಲ್‌ ಪಂದ್ಯಾವಳಿಯಲ್ಲಿ ಗೆಲುವು ದಾಖಲಿಸಿದ್ದು, ಅಲ್ಲದೆ ಆ ಟೂರ್ನಿಯಲ್ಲಿ ಲಾಲ್‌ ಬಹದೂರ್‌ ಗರಿಷ್ಠ ಗೋಲು ಹೊಡೆದು ತಂಡದ ಗೆಲುವಿನ ರೂವರಿಯಾಗಿದ್ದರು.

ರಾಜ್ಯದೆಲ್ಲೆಡೆ ಗೆಲುವು
ಸೋಮವಾರಪೇಟೆಯ ಗೌಡ್ರಳ್ಳಿಯಲ್ಲಿ ನಡೆದ ರಾಜ್ಯಮಟ್ಟದ ಫ‌ುಟ್ಬಾಲ್‌ ಪಂದ್ಯಾವಳಿಯಲ್ಲಿ ಇವರ ತಂಡವು ಪ್ರಶಸ್ತಿ ಮುಡಿಗೇರಿಸಿಕೊಂಡಿತ್ತು. ರಾಜೀವ್‌ ಗಾಂಧಿ ಖೇಲ್‌ ಅಭಿಯಾನದ ವತಿಯಿಂದ ರಾಷ್ಟ್ರಮಟ್ಟದ ಫ‌ುಟ್ಬಾಲ್‌ ಪಂದ್ಯಾವಳಿಯಲ್ಲಿ ಕರ್ನಾಟಕ ತಂಡವನ್ನು ಪ್ರತಿನಿಧಿಸಿ ಗೆಲುವು ತಮ್ಮದಾಗಿಸಿಕೊಂಡಿದ್ದರು. ಅಲ್ಲದೆ ಕೊಡಗು ಲೀಗ್‌ ಪರ ರಾಜ್ಯ ಮಟ್ಟದ ಫ‌ುಟ್ಬಾಲ್‌ ಟೂರ್ನಿಯಲ್ಲಿ ಗೆಲುವಿನ ನಗೆ ಬೀರಿದ್ದರು.

ಜಾಣ್ಮೆಯ ಆಟ
ದೇವರು ಎಲ್ಲರಿಗೂ ಪ್ರತಿಭೆಯನ್ನು ಕೊಟ್ಟಿರುತ್ತಾನೆ. ಅದು ನಮ್ಮ ಶಿಸ್ತು, ಪರಿಶ್ರಮ, ಸಾರ್ಮಥ್ಯ ಅದನ್ನು ಸಾಧನೆಯಾಗಿ ರೂಪಿಸುತ್ತದೆ. ಫ‌ುಟ್ಬಾಲ್‌ ಆಟದಲ್ಲಿ ಎದುರಾಳಿ ತಂಡದ ಆಟಗಾರನ ಕಣ್ಣು ತಪ್ಪಿಸಿ ಚೆಂಡನ್ನು ಗುರಿಯ ಕಡೆಗೆ ಕೊಂಡು ಹೋಗುವ ಜಾಣ್ಮೆ ಇರಬೇಕು. ಪ್ರಸ್ತುತ ಇವರು ಕೊಡಿಗಿನ ರೋಜ್‌ ಕ್ಲಬ್‌ನಲ್ಲಿ ಆಡುತ್ತಿದ್ದಾರೆ. ಡಿಫೆಂಡರ್‌ ವಿಂಗ್‌ ಬ್ಯಾಕ್‌ ಆಟಗಾರರಾಗಿರುವ ಲಾಲ್‌ ಕೊಡಗು, ಮಂಡ್ಯ, ಮಂಗಳೂರು, ಮೈಸೂರು, ಬಿಜಾಪುರ ಮುಂತಾದ ಕಡೆಗಳಲ್ಲಿ ಆಟವಾಡಿ ನೀಡಿ ಗಮನ ಸೆಳೆದಿದ್ದಾರೆ.

ಜೀವನ ಎನ್ನುವುದು ಹರಿಯುವ ನೀರಿನ ಹಾಗೆ ಕೊನೆ ಇಲ್ಲದ ಪಯಣ. ಆ ಪಯಣದಲ್ಲಿ ನಮ್ಮ ಜತೆ ಶಾಶ್ವತವಾಗಿ ಯಾವುದೂ ಇರುವುದಿಲ್ಲ. ನಾವು ಮಾಡಿದ ಸಾಧನೆ ಮಾತ್ರ ಅಜರಾಮರ. ಹೀಗೆ ಕಷ್ಟ, ನೋವು, ಸೋಲುಗಳನ್ನು ತಮ್ಮ ಪ್ರತಿಭೆಯಿಂದ ಸರಿದೂಗಿಸಿದ ಲಾಲ್‌ ಬಹದೂರ್‌ ಅಂತಾರಾಷ್ಟ್ರೀಯ ಮಟ್ಟದಲ್ಲಿಯೂ ತಮ್ಮ ಪ್ರತಿಭೆಯನ್ನು ಬೆಳಗಲಿ.

ಅಕಾಡೆಮಿ ಸ್ಥಾಪನೆಯ ಒಲವು
ಗುರುಗಳ, ಪೋಷಕರ ಪ್ರೋತ್ಸಾಹ, ಸಲಹೆ, ಸೂಚನೆ, ಮಾರ್ಗದರ್ಶನ ಈ ಸಾಧನೆಗೆ ಕಾರಣವಾಗಿದೆ. ಇವರು ಫ‌ುಟ್ಬಾಲ್‌ ಕ್ಷೇತ್ರಕ್ಕೆ ಮಾತ್ರ ಸೀಮಿತವಾಗಿಲ್ಲ. ಬದಲಾಗಿ ತ್ರೋಬಾಲ್‌ನಲ್ಲಿಯೂ ಜಿಲ್ಲಾಮಟ್ಟದಲ್ಲಿ ಆಡಿ ಗೆಲುವು ಗಳಿಸಿದ್ದರು. ಲಾಂಗ್‌ ಡ್ರೆçವ್‌, ಸಂಗೀತವು ಅವರಿಗೆ ಇಷ್ಟವಿದೆ. ತನ್ನ ಹುಟ್ಟೂರಾದ ನೇಪಾಳದಲ್ಲಿ ಫ‌ುಟ್ಬಾಲ್‌ ಅಕಾಡೆಮಿ ಪ್ರಾರಂಭಿಸಬೇಕೆನ್ನುವ ಇಂಗಿತ ಅವರದ್ದು.

ಕೀರ್ತಿ ಪುರ
ಪತ್ರಿಕೋದ್ಯಮ ವಿದ್ಯಾರ್ಥಿನಿ, ಸಂತ ಫಿಲೊಮಿನಾ ಕಾಲೇಜು, ಪುತ್ತೂರು

ಟಾಪ್ ನ್ಯೂಸ್

DK–BJP-Protest

Mangaluru: ತುಳುನಾಡಿನ ದೈವ-ದೇವರ ಜಾಗ ಉಳಿಸಲು ಹೋರಾಟ: ಸಂಸದ ಚೌಟ

Kharge

Adani ಕುಟುಂಬ ವಶಕ್ಕೆ ಪಡೆದು ತನಿಖೆ ನಡೆಸಲಿ : ಖರ್ಗೆ

Udupi: ಗೀತಾರ್ಥ ಚಿಂತನೆ 102: ಆತ್ಮವಿಕಾಸ- ಆತ್ಮಸಂಕೋಚUdupi: ಗೀತಾರ್ಥ ಚಿಂತನೆ 102: ಆತ್ಮವಿಕಾಸ- ಆತ್ಮಸಂಕೋಚ

Udupi: ಗೀತಾರ್ಥ ಚಿಂತನೆ 102: ಆತ್ಮವಿಕಾಸ- ಆತ್ಮಸಂಕೋಚ

Pro-Kabaddi League: ಯುಪಿ ಯೋಧಾಸ್‌ಗೆ ಶರಣಾದ ತಮಿಳ್‌ ತಲೈವಾಸ್‌

Pro-Kabaddi League: ಯುಪಿ ಯೋಧಾಸ್‌ಗೆ ಶರಣಾದ ತಮಿಳ್‌ ತಲೈವಾಸ್‌

Adelaide Test: ಫಿಲಿಪ್‌ ಹ್ಯೂಸ್‌ ಸ್ಮರಣೆ

Adelaide Test: ಫಿಲಿಪ್‌ ಹ್ಯೂಸ್‌ ಸ್ಮರಣೆ

China Badminton: ಚಿರಾಗ್‌- ಸಾತ್ವಿಕ್‌ ಸೆಮಿಫೈನಲ್‌ಗೆ

China Badminton: ಚಿರಾಗ್‌- ಸಾತ್ವಿಕ್‌ ಸೆಮಿಫೈನಲ್‌ಗೆ

ಬೈಡೆನ್‌ “ಮರೆಗುಳಿ’ತನ ಕುರಿತ ಹೇಳಿಕೆ: ರಾಹುಲ್‌ ಕ್ಷಮೆಗೆ ವೈದ್ಯರ ಪಟ್ಟು

Joe Biden “ಮರೆಗುಳಿ’ತನ ಕುರಿತ ಹೇಳಿಕೆ: ರಾಹುಲ್‌ ಕ್ಷಮೆಗೆ ವೈದ್ಯರ ಪಟ್ಟು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Suside-Boy

Belthangady: ಕಲ್ಮಂಜ: ರಿಕ್ಷಾ ಚಾಲಕ ಆತ್ಮಹತ್ಯೆ

Suside-Boy

Punjalakatte: ಕೊಯಿಲದ ವ್ಯಕ್ತಿ ಹಾಸನದಲ್ಲಿ ನಿಗೂಢ ಸಾವು

Police

Subhramanya: ಹೆದ್ದಾರಿ ತಡೆದು ಪ್ರತಿಭಟನೆ: 13 ಮಂದಿಗೆ ಜಾಮೀನು

ನವೆಂಬರ್‌ 26-30: ಧರ್ಮಸ್ಥಳ ಲಕ್ಷದೀಪೋತ್ಸವ ಸಂಭ್ರಮ

ನವೆಂಬರ್‌ 26-30: ಧರ್ಮಸ್ಥಳ ಲಕ್ಷದೀಪೋತ್ಸವ ಸಂಭ್ರಮ

12-

Belthangady: ನ. 21- ಮೇ 23: ಧರ್ಮಸ್ಥಳ ಮೇಳದಿಂದ ಯಕ್ಷ ಗಾನ ಸೇವೆ

MUST WATCH

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

udayavani youtube

ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|

udayavani youtube

ಲಾಭದಾಯಕ ಗುಲಾಬಿ ಕೃಷಿ ಮಾಡುವ ವಿಧಾನ

udayavani youtube

ಗೀತೋತ್ಸವ ತ್ರಿಪಕ್ಷ ಶತವೈಭವ ಕಾರ್ಯಕ್ರಮಕ್ಕೆ ಆಮಂತ್ರಿಸಿದ ಪರ್ಯಾಯ ಪುತ್ತಿಗೆ ಶ್ರೀಗಳು

ಹೊಸ ಸೇರ್ಪಡೆ

Suside-Boy

Karkala: ಬೋಳ ಗ್ರಾಮದ ವ್ಯಕ್ತಿ ಆತ್ಮಹತ್ಯೆ

Suside-Boy

Mudubidre: ಅಂತಿಮ ಬಿಬಿಎಂ ವಿದ್ಯಾರ್ಥಿ ಆತ್ಮಹತ್ಯೆ

Suside-Boy

Belthangady: ಕಲ್ಮಂಜ: ರಿಕ್ಷಾ ಚಾಲಕ ಆತ್ಮಹತ್ಯೆ

DK–BJP-Protest

Mangaluru: ತುಳುನಾಡಿನ ದೈವ-ದೇವರ ಜಾಗ ಉಳಿಸಲು ಹೋರಾಟ: ಸಂಸದ ಚೌಟ

Suside-Boy

Punjalakatte: ಕೊಯಿಲದ ವ್ಯಕ್ತಿ ಹಾಸನದಲ್ಲಿ ನಿಗೂಢ ಸಾವು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.