ಕುಂಬ್ರ: ದೇಶಿ ಹೊಟೇಲ್‌ನಲ್ಲಿ ವಿದೇಶಿ ಕರೆನ್ಸಿಗಳ ಮೋಡಿ
Team Udayavani, Oct 17, 2019, 5:01 AM IST
ರಫೀಕ್ ಬಳಿ ಇದೆ 27 ದೇಶಗಳ ನೋಟು ಸಂಗ್ರಹ; ಕ್ಯಾಶ್ ಕೌಂಟರ್‌ನಲ್ಲಿ ಜೋಡಣೆ
ಬಡಗನ್ನೂರು: ಕೆಲವರು ವಿಶಿಷ್ಟ ಹವ್ಯಾಸದಿಂದಲೇ ಗುರುತಿಸಿಕೊಳ್ಳುತ್ತಾರೆ. ಅಂಥವರಲ್ಲಿ ಕುಂಬ್ರದ ಅಲ್ರಾಯ ಹೊಟೇಲ್ ಮಾಲಕ ರಫೀಕ್ ಉಜಿರೋಡಿ ಪ್ರಮುಖರು.
ರಫೀಕ್ ವಿದೇಶಿ ಕರೆನ್ಸಿಗಳನ್ನು ಸಂಗ್ರಹಿಸುವ ಹವ್ಯಾಸ ಹೊಂದಿದ್ದು, ಅವರ ಹೊಟೇಲ್‌ನಲ್ಲಿ 27 ದೇಶಗಳ ನೋಟುಗಳು ಕಾಣಸಿಗುತ್ತವೆ. 8 ವರ್ಷಗಳಿಂದ ನೋಟುಗಳನ್ನು ಸಂಗ್ರಹಿ ಸುತ್ತಿರುವ ಅವರು, ಕ್ಯಾಶ್ ಕೌಂಟರ್‌ನಲ್ಲಿ ಅಚ್ಚುಕಟ್ಟಾಗಿ ಜೋಡಿಸಿದ್ದಾರೆ.
ವೈವಿಧ್ಯಮಯ ಸಂಗ್ರಹ
ರಫೀಕ್ ಅವರ ಬಳಿ ನಮ್ಮ ದೇಶ ಮಾತ್ರವಲ್ಲದೆ, ಸೌದಿ ಅರೇಬಿಯಾ, ಕತಾರ್, ಒಮಾನ್, ಕುವೈಟ್, ಲಿಬಿಯಾ, ಬಹರೈನ್, ಭೂತಾನ್, ಇರಾನ್, ಇರಾಕ್, ಸಿರಿಯಾ, ಅಫ್ಘಾನಿಸ್ಥಾನ, ಪಾಕಿಸ್ಥಾನ, ದಕ್ಷಿಣ ಆಫ್ರಿಕಾ, ಚೀನ, ಇಂಡೋನೇಷ್ಯಾ, ಮಲೇಷ್ಯಾ, ಅಮೆರಿಕ, ನೇಪಾಲ, ಬಾಂಗ್ಲಾದೇಶ, ಇಥಿಯೋಪಿಯಾ, ಶ್ರೀಲಂಕಾ, ಫಿಲಿಪ್ಪೀನ್ಸ್, ಬ್ರಿಟನ್ ಇತ್ಯಾದಿ ದೇಶಗಳ ನೋಟುಗಳಿವೆ.
8 ವರ್ಷಗಳ ಹವ್ಯಾಸ
ರಫೀಕ್ ಕುಂಬ್ರದಲ್ಲಿ ಹೊಟೇಲ್ ಉದ್ಯಮ ಪ್ರಾರಂಭಿಸಿ 8 ವರ್ಷಗಳು ಕಳೆದಿವೆ. ಉದ್ಯಮಕ್ಕೆ ಕಾಲಿಡುವಾಗಲೇ ನೋಟುಗಳ ಸಂಗ್ರಹದಲ್ಲಿ ತೊಡಗಿದ್ದಾರೆ. ವಿದೇಶದಲ್ಲಿ ಕೆಲಸ ಮಾಡಿಕೊಂಡಿದ್ದ ಸಂದರ್ಭದಲ್ಲಿ ಅಲ್ಲಿನ ಕೆಲವು ನೋಟುಗಳನ್ನು ಅವರು ಸಂಗ್ರಹಿಸಿದ್ದರು.
ಗ್ರಾಹಕರಿಂದ ಸಂಗ್ರಹ
ಕೆಲವು ದೇಶಗಳ ನೋಟುಗಳನ್ನು ಹೊಟೇಲ್‌ಗೆ ಬರುವ ಗ್ರಾಹಕರಿಂದ ಸಂಗ್ರಹಿಸಿದ್ದಾರೆ. ಇತ್ತೀಚೆಗೆ ಚೀನದ ಪ್ರಜೆಯೊಬ್ಬರು ಹೊಟೇಲ್‌ಗೆ ಭೇಟಿ ನೀಡಿದ್ದರು.
ಚೀನ ನೋಟುಗಳಿವೆ
ಸೌದಿ ಅರೇಬಿಯಾ, ಇರಾಕ್, ಕುವೈಟ್ ಇತ್ಯಾದಿ ದೇಶಗಳ ಕರೆನ್ಸಿಗಳನ್ನು ಸುಲಭದಲ್ಲಿ ಸಂಗ್ರಹಿಸಬಹುದು. ಆದರೆ ಚೀನ, ಇಂಗ್ಲೆಂಡ್, ಭೂತಾನ್, ಅಫ್ಘಾನಿಸ್ಥಾನ ಇತ್ಯಾದಿ ದೇಶಗಳ ನೋಟುಗಳನ್ನು ಸಂಗ್ರಹಿಸುವುದು ಸುಲಭವಲ್ಲ. ಆದರೆ ರಫೀಕ್ ಅವರು ಅದರಲ್ಲಿ ಯಶಸ್ವಿಯಾಗಿದ್ದಾರೆ. ಇನ್ನಷ್ಟು ದೇಶಗಳ ನೋಟುಗಳನ್ನು ಸಂಗ್ರಹಿಸಬೇಕು ಎಂಬ ಆಸೆ ಇದ್ದು, ಪ್ರಯತ್ನಿಸುತ್ತಿದ್ದೇನೆ ಎನ್ನುತ್ತಾರೆ. ನೋಟು ಸಂಗ್ರಹವನ್ನು ನೋಡಿದ ಅವರು ತನ್ನ ದೇಶದ ನೋಟೊಂದನ್ನು ಕೊಟ್ಟು ಹೋಗಿದ್ದಾರೆ.
ರಫೀಕ್ ಅವರ ನೋಟು ಸಂಗ್ರಹದ ಹವ್ಯಾಸವನ್ನು ಬಹಳಷ್ಟು ಮಂದಿ ಮೆಚ್ಚಿಕೊಂಡಿದ್ದಾರೆ. ಹೊಟೇಲ್‌ಗೆ ಭೇಟಿ ನೀಡಿದ ಬೇರೆ ಬೇರೆ ರಾಜ್ಯದ, ದೇಶದ ಜನರು ನೋಟುಗಳನ್ನು ಕಂಡು ಖುಷಿಪಟ್ಟಿದ್ದಾರೆ. ತಮ್ಮ ದೇಶದ ನೋಟು ಕಾಣುತ್ತಿಲ್ಲ ಎಂದು ಭಾವಿಸಿದವರು ಅವುಗಳನ್ನು ರಫೀಕ್ ಅವರಿಗೆ ಕೊಟ್ಟು ಹೋಗಿದ್ದಾರೆ ಎನ್ನುತ್ತಾರೆ ರಫೀಕ್. ಇತ್ತೀಚೆಗೆ ಇವರ ಹೊಟೇಲ್ ಕ್ಯಾಶ್ ಕೌಂಟರ್ ಮೇಲೆ ರಾತ್ರಿ ವೇಳೆ ನವಿಲೊಂದು ಕುಳಿತು ಅಚ್ಚರಿ ಮೂಡಿಸಿತ್ತು. ಆ ದೃಶ್ಯವನ್ನು ಸೆರೆ ಹಿಡಿದು ಸಂಗ್ರಹಿಸಿಟ್ಟುಕೊಂಡಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Manipur; ಪೊಲೀಸ್ ಇಲಾಖೆಯಲ್ಲಿ ಮೈತೇಯಿ ಮತ್ತು ಕುಕಿಗಳು ಒಟ್ಟಾಗಿ ಕೆಲಸ ಮಾಡಬೇಕು
Team India; ಅಶ್ವಿನ್ ಬದಲಿಯಾಗಿ ಟೀಂ ಇಂಡಿಯಾ ಸೇರಿದ ಕರ್ನಾಟಕ ಕರಾವಳಿ ಮೂಲದ ಸ್ಪಿನ್ನರ್
Kerala; ಸರಕಾರಿ ಶಾಲೆಯಲ್ಲಿ ಕ್ರಿಸ್ಮಸ್ ಆಚರಣೆಗೆ ಅಡ್ಡಿ,ಗೋದಲಿ ಧ್ವಂಸ: ವ್ಯಾಪಕ ಆಕ್ರೋಶ
Kambli Health: ಮಾಜಿ ಕ್ರಿಕೆಟಿಗ ವಿನೋದ್ ಕಾಂಬ್ಳಿ ಆರೋಗ್ಯ ಸ್ಥಿತಿ ಗಂಭೀರ!
Unlock Raghava Movie: ರಾಘವನ ಮೇಲೆ ಕಣ್ಣಿಟ್ಟ ರಚೆಲ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.